Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಐಪಿಎಲ್ ಗೆ ಐತಿಹಾಸಿಕ ಬದಲಾವಣೆ ತರಲು ಮುಂದಾದ ಬಿಸಿಸಿಐ.‌

ಐಪಿಎಲ್ ಗೆ ಐತಿಹಾಸಿಕ ಬದಲಾವಣೆ ತರಲು ಮುಂದಾದ ಬಿಸಿಸಿಐ.‌

ಹೊಸದಿಲ್ಲಿ: ವಿಶ್ವ ಕ್ರಿಕೆಟ್‌ನಲ್ಲಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟ ಪರಿಚಯಿಸಿ ಕ್ರಾಂತಿ ಮಾಡಿದ ಬಿಸಿಸಿಐ ಇನ್ನೊಂದು ಐತಿಹಾಸಿಕ ಬದಲಾವಣೆ ತರಲು ಮುಂದಾಗಿದೆ. 2020ರ ಐಪಿಎಲ್‌ನಿಂದ ಪಂದ್ಯದ ಯಾವುದೇ ಹಂತದಲ್ಲಿ ಬದಲಿ ಆಟಗಾರರನ್ನು ಕಣಕ್ಕಿಳಿಸುವುದೇ ಆ ವಿನೂತನ ಯೋಜನೆ. “ಪವರ್‌ ಪ್ಲೇಯರ್‌’ ಹೆಸರಿನ ಇದಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಆದರೂ ಅದರ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಬಿಸಿಸಿಐ ಬಯಸಿದೆ. ಸದ್ಯಕ್ಕೆ ಅದನ್ನು ನ.8ರಿಂದ ಆರಂಭವಾಗುವ ಸೈಯದ್‌ ಮುಷ್ತಾಕ್‌ ಅಲಿ ಟಿ20 ಲೀಗ್‌ನಲ್ಲಿ ಅಳವಡಿಸಿ, ಪರೀಕ್ಷಿಸಲಾಗುವುದೆಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಒಂದು ವೇಳೆ ಈ ಬದಲಾವಣೆ ಜಾರಿಯಾದರೆ ಐಪಿಎಲ್‌ನಲ್ಲೂ ಫ‌ುಟ್‌ಬಾಲ್‌, ಹಾಕಿ, ಕಬಡ್ಡಿ ಮಾದರಿ ಬರುತ್ತದೆ.

ಬದಲಿ ಆಟಗಾರ ಹೇಗೆ?
ಇದುವರೆಗಿನ ಐಪಿಎಲ್‌ ಪಂದ್ಯಗಳಲ್ಲಿ ಒಮ್ಮೆ 11ರ ಬಳಗವನ್ನು ಅಂತಿಮಪಡಿಸಿದರೆ ಮುಗಿಯಿತು. ಮತ್ತೆ ಬದಲಾವಣೆಗೆ ಅವಕಾಶವಿಲ್ಲ. ನೂತನ ನಿಯಮದ ಪ್ರಕಾರ, ಇಡೀ ಪಂದ್ಯದ ಯಾವುದೇ ಹಂತದಲ್ಲಿ 15ರ ಬಳಗದಲ್ಲಿರುವ ಒಬ್ಬ ಆಟಗಾರನನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸಬಹುದು. ಒಂದು ವಿಕೆಟ್‌ ಬಿದ್ದಾಗ, ಒಂದು ಓವರ್‌ ಮುಗಿದಾಗ ಮಾತ್ರ ಈ ಬದಲಾವಣೆ ಮಾಡಲು ಅವಕಾಶವಿದೆ.

Share

About ramu BIG TV NEWS, Kolar

Check Also

ನಾಳೆಯಿಂದ ಭಾರತ – ಇಂಗ್ಲೆಂಡ್ ಟೆಸ್ಟ್.

ಬೆಂಗಳೂರು (ಫೆ. 04): ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ಫೆಬ್ರವರಿ …

Leave a Reply

Your email address will not be published. Required fields are marked *

error: Content is protected !!