Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬೈ ಎಲೆಕ್ಷನ್ ಗೂ ಮುನ್ನವೇ ಕೈಗೆ ಬಿಗ್ ಶಾಕ್ ನೀಡಲು ಮುಂದಾದ ಕಮಲ.

ಬೈ ಎಲೆಕ್ಷನ್ ಗೂ ಮುನ್ನವೇ ಕೈಗೆ ಬಿಗ್ ಶಾಕ್ ನೀಡಲು ಮುಂದಾದ ಕಮಲ.

ಉಪ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. ಹಳೆ ಮೈಸೂರು ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈಗಾಗಲೇ ಈ ಕುರಿತು ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಒಕ್ಕಲಿಗ ನಾಯಕರನ್ನು ಬಿಜೆಪಿಗೆ ಸೆಳೆಯುವ ಮೂಲಕ ಆ ಭಾಗದಲ್ಲಿ ಪಕ್ಷ ಭದ್ರ ನೆಲೆ ಕಂಡುಕೊಳ್ಳುವಂತೆ ಮಾಡುವುದು ಬಿಜೆಪಿ ನಾಯಕರ ಉದ್ದೇಶವಾಗಿದ್ದು, ಹೀಗಾಗಿ ಈ ನಾಯಕರುಗಳಿಗೆ ಗಾಳ ಹಾಕಿದ್ದಾರೆನ್ನಲಾಗಿದೆ.
ಆದರೆ ಕೆಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದಿದ್ದು, ಇದೀಗ ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಕೈಜೋಡಿಸುವ ಸೂಚನೆಗಳಿರುವ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆನ್ನಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣ ಹಲವು ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

Share

About Vijayalakshmi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!