Hiring Reporter’s For more Information Contact Above Number 876 225 4007 . Program producer
Home / Breaking News / ಕಂಟೈನ್ಮೆಂಟ್ ಝೋನ್ ನ ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ರಿಲೀಫ್

ಕಂಟೈನ್ಮೆಂಟ್ ಝೋನ್ ನ ರಾಜ್ಯದ ಸರ್ಕಾರಿ ನೌಕರರಿಗೆ ಬಿಗ್ ರಿಲೀಫ್

Spread the love

ಬೆಂಗಳೂರು : ಕೊರೋನಾ ಸಂಕಷ್ಟದ ನಡುವೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಖುಷಿ ಸುದ್ದಿ ನೀಡಿದೆ. ಕಂಟೈನ್ಮೆಂಟ್ ಝೋನ್ ನಿಂದ ಕೆಲಸಕ್ಕೆ ತೆರಳುವ ನೌಕರರಿಗೆ ಬಿಗ್ ರಿಲೀಫ್ ನೀಡಿದೆ. ಇಂತಹ ನೌಕರರಿಗಾಗಿ ರಜೆಯಲ್ಲಿ ವಿಶೇಷ ಅನುಮತಿ ನೀಡಿರುವ ಸರ್ಕಾರ, ಸ್ಪೆಷಲ್ ಲೀವ್ ಮೂಲಕ 7, 14 ದಿನಗಳ ರಜೆಯನ್ನು ಮಂಜೂರು ಮಾಡಲು ಅನುಮತಿ ನೀಡಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೊರೋನಾ ಸೋಂಕು ಪ್ರಕರಣಗಳು ಕಂಡುಬಂದಂತ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂಬುದಾಗಿ ಘೋಷಿಸಲಾಗುತ್ತಿದೆ. ಈ ಪ್ರದೇಶಗಳಿಂದ ಕೆಲಸಕ್ಕೆ ಹಾಜರಾಗುವಂತ ಸರ್ಕಾರಿ ನೌಕರರಿಗೆ ಸ್ಪೆಷಲ್ ರಜೆ(Special Casual Leave) ಯನ್ನು ನೀಡಲು ಅನುಮತಿ ನೀಡಿದೆ.

ಕಂಟೈನ್ಮೆಂಟ್ ಝೋನ್ ಎಂಬುದಾಗಿ ಘೋಷಣೆ ಮಾಡಿದಂತ ಪ್ರದೇಶದಿಂದ ಸರ್ಕಾರಿ ನೌಕರರು ಕೆಲಸಕ್ಕೆ ಬರುವುದಾದ್ರೇ ಅವರಿಗೆ 7 ದಿನ ಅನುಮತಿ ನೀಡಬೇಕು. ಸೋಂಕಿತರೊಂದಿಗೆ ಪ್ರಥಮ ಸಂಪರ್ಕ ಹೊಂದಿರುವಂತ ಸರ್ಕಾರಿ ನೌಕರರಾಗಿದ್ದರೇ ಅವರಿಗೆ 14 ದಿನ ಕ್ವಾರಂಟೈನ್ ನಲ್ಲಿ ಇರಲು ಸ್ಪೆಷಲ್ ರಜೆಗಾಗಿ ಅನುಮತಿ ನೀಡಬೇಕು. ಆದ್ರೇ ಅಗತ್ಯ ಸೇವೆಗಳ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೇ ಸಂಬಂಧ ಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ರಜೆ ನೀಡುವಂತೆ ತಿಳಿಸಿದೆ.

Check Also

ರಾಜ್ಯದೆಲ್ಲೆಡೆ ನಾಳೆ ಪೊಲೀಸ್ ಸರ್ಪಗಾವಲು!

Spread the loveಬೆಂಗಳೂರು: ರಾಜ್ಯದೆಲ್ಲೆಡೆ ಬುಧವಾರ (ಆ.5)​ ಪೊಲೀಸ್​ ಸರ್ಪಗಾವಲು ಇರಲಿದೆ. ಕಮಿಷನರೇಟ್ ಹಾಗೂ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಯಾಗಲಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!