Hiring Reporter’s For more Information Contact Above Number 876 225 4007 . Program producer
Home / Breaking News / ಬಿಜೆಪಿ ಪದಾಧಿಕಾರಿಗಳ ನೇಮಕ: ವಿಜಯೇಂದ್ರ, ಶೋಭಾಗೆ ಉಪಾಧ್ಯಕ್ಷ ಸ್ಥಾನ

ಬಿಜೆಪಿ ಪದಾಧಿಕಾರಿಗಳ ನೇಮಕ: ವಿಜಯೇಂದ್ರ, ಶೋಭಾಗೆ ಉಪಾಧ್ಯಕ್ಷ ಸ್ಥಾನ

Spread the love

ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಪ್ರಮುಖ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಪದಾಧಿಕಾರಿಗಳು ಹಾಗೂ ಮೋರ್ಚಾಗಳ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬಿಎಸ್ ವೈ ಬಣದಲ್ಲಿ ಗುರುತಿಸಿಕೊಂಡಿದ್ದ ಪುತ್ರ ಬಿ.ವೈ. ವಿಜಯೇಂದ್ರ ಅರವಿಂದ ಲಿಂಬಾವಳಿ, ನಿರ್ಮಲ್ ಕುಮರ್ ಸುರಾನಾ, ಶೋಭಾ ಕರಂದ್ಲಾಜೆ, ಎಂ.ಬಿ. ನಂದೀಶ್, ಎಂ. ಶಂಕರಪ್ಪ, ಎಂ.ರಾಜೇಂದ್ರ, ಮಾಲೀಕಯ್ಯ ಗುತ್ತೇದಾರ್, ತೇಜಸ್ವಿನಿ ಅನಂತಕುಮಾರ್, ಪ್ರತಾಪ್ ಸಿಂಹ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಎನ್. ರವಿಕುಮಾರ್, ಸಿದ್ದರಾಜು, ಅಶ್ವಥ್ ನಾರಾಯಣ, ಮಹೇಶ್ ತೆಂಗಿನಕಾಯಿ ಅವರನ್ನು ನೇಮಿಸಲಾಗಿದೆ.

ರಾಜ್ಯ ಕಾರ್ಯದರ್ಶಿಗಳಾಗಿ ಸತೀಶ್ ರೆಡ್ಡಿ, ತುಳಸಿ ಮುನಿರಾಜು ಗೌಡ, ಎಸ್. ಕೇಶವಪ್ರಸಾದ್, ಜಗದೀಶ್ ಹಿರೇಮನಿ, ಸುಧಾ ಜಯ ರುದ್ರೇಶ್, ಭಾರತಿ ಮಗ್ದುಮ್, ಹೇಮಾವತಿ ನಾಯಕ್, ಉಜ್ವಲಾ ಬಡವಣ್ಣಾಜೆ, ಕೆ.ಎಸ್. ನವೀನ್, ವಿನಯ್ ಬಿದರೆ ಅವರನ್ನು ನೇಮಿಸಲಾಗಿದೆ.

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!