Breaking News
Hiring Reporter’s For more Information Contact Above Number 876 225 4007 . Program producer
Home / Breaking News / ದಲಿತ ಮುಖಂಡರು ಹಾಗೂ ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಈಗ ಪ್ರೀತಿ ಹುಟ್ಟಿದೆ: ತಿಮ್ಮಾಪೂರ ವ್ಯಂಗ್ಯ.

ದಲಿತ ಮುಖಂಡರು ಹಾಗೂ ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಈಗ ಪ್ರೀತಿ ಹುಟ್ಟಿದೆ: ತಿಮ್ಮಾಪೂರ ವ್ಯಂಗ್ಯ.

ಚಿಕ್ಕೋಡಿ: ದಲಿತ ಮುಖಂಡರ ಬಗ್ಗೆ ಹಾಗೂ  ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಈಗ ಪ್ರೀತಿ ಹುಟ್ಟಿದೆ ಎಂದು ಆರ್. ಬಿ. ತಿಮ್ಮಾಪೂರ ಬಿಜೆಪಿ ವಿರುದ್ಧ ಹರಿಹಾಯ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ತೇಜಸ್ವಿ ಸೂರ್ಯ ಸಂವಿಧಾನ ಸುಟ್ಟು ಹಾಕುವ ಮಾತನಾಡಿದ್ದಾರೆ ,ಪ್ರಜ್ಞಾ ಠಾಕೂರ್ ಗಾಂಧಿಯನ್ನ ದೇಶದ್ರೋಹಿ ಅಂತ ಇದ್ದಾರೆ, ಇಂತಹ ಅಯೊಗ್ಯರು ಅಂಬೇಡ್ಕರ್ ಬಗ್ಗೆ ಮಾತನಾಡಬಾರದು ಎಂದರು.
ದಲಿತರ ತಲೆಯಲ್ಲಿ ಅನವಶ್ಯಕ ವಿಷಯ ಹೇಳುವ ಗೋವಿಂದ ಕಾರಜೋಳ  ಯೋಚಿಸಬೇಕಿದೆ ಎಂದರು. ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ಕೊಟ್ಟಿಲ್ಲ ಅನ್ನುವ ಹಸಿ ಸುಳ್ಳನ್ನು ಬಿಜೆಪಿಯವರು ಹೇಳುತ್ತಿದ್ದಾರೆ. ಮನುವಾದಿಗಳ ವಿಚಾರ ಒಪ್ಪಿಕೊಂಡ ಕಾರಜೋಳ ಅದನ್ನು ಒಪ್ಪಿಕೊಳ್ಳದಿದ್ದರೆ ಪಕ್ಷ ಬಿಟ್ಟು ಹೊರಬರಲಿ.
ಮತದಾನದ ಮೇಲೆ ವ್ಯಭಿಚಾರ ಮಾಡಿದವರು ಈಗ ನೋಟು ಹಂಚುತ್ತಿದ್ದಾರೆ,ಪಾಪಾ ಬ್ಯಾಕ್ ವರ್ಡ ಮನುಷ್ಯ ರಾಮುಲು ಅವರನ್ನು ಡಿಸಿಎಮ್ ಮಾಡ್ತೀನಿ ಅಂದಿದ್ದ ರಾಷ್ಟ್ರೀಯ ಅದ್ಯಕ್ಷರು ಮಾತು ತಪ್ಪಿದ್ದಾರೆ. ಇದನ್ನೆಲ್ಲ ನೋಡಿದರೆ
ಕೆಲವೆ ದಿನಗಳಲ್ಲಿ ಯಡ್ಯೂರಪ್ಪಗೆ ಬಿಜೆಪಿಯಿಂದ ಕಿತ್ತು ಹಾಕುತ್ತಾರೆ. ಅನರ್ಹರಿಗೆ ಪ್ರವೇಶ ಇಲ್ಲ ಅಂತ ಜನ ಬೊರ್ಡ್ ಹಾಕುತ್ತಿದ್ದಾರೆ ಇದನ್ನ ನೋಡಿದರೆ
ಜನತಾ ನ್ಯಾಯಾಲಯದ ಲ್ಲಿ ಬಿಜೆಪಿ ಸೊಲನ್ನು ಅನುಭವಿಸುತ್ತಿದೆ ಎಂದು ತಿಳಿಸಿದರು.ಗೊವಿಂದ ಕಾರಜೋಳ ಒಬ್ಬ ದಲಿತ ಡಿಸಿಎಮ್ ಆಗಿದ್ದಾರೆ ಅಂತ ನಾವು ಖುಷಿಪಟ್ಟರೆ ದಲಿತರಿಗೆ ಸೋಸಿಯಲ್ ವೆಲಪೆರ್ಸ ಚೀವರಾಗಿ ನಾಲ್ಕು ತಿಂಗಳಲ್ಲಿ  ದಲಿತರಿಗೆ ಕೊಟ್ಟ ಕೊಡುಗೆ ಏನು ಅಂತ ಮಾತಾಡಲಿ. ಮಾತು ಎತ್ತಿದರೆ
ಸರ್ಜಿಕಲ್ ಸ್ಟ್ರೈಕ್  ರಾಮಮಂದಿರ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಮೋದಿಯವರೇ ದೇಶದ ಯುವಕರು ನಿರುದ್ಯೋಗದ ಬಗ್ಗೆ ಏನು ಹೇಳುತ್ತೀರಿ.
ಒಂಭತ್ತನೆ ತಾರೀಖು ಫಲಿತಾಂಶ ಬಂದ ಬಳಿಕ ಅನರ್ಹರು ಧೋಬಿಕಾ ಕುತ್ತಾ ನ ಘರಕಾ ನಾ ಘಟಕ ಆಗಲಿದ್ದಾರೆ. ಬಿಜೆಪಿ ಮುಖಂಡರು
ಮತದಾನದ ಮೇಲೆ ವ್ಯಭಿಚಾರ ಮಾಡಿದವರ ಬಗ್ಗೆ ನಾವು ಪ್ರಚಾರ ಮಾಡುವದಿಲ್ಲ ಅಂತ ಈಗಲಾದರು ಹೇಳಿ. ಇಂದು ಅಥಣಿಯಲ್ಲಿ ಮತದಾನ ವ್ಯಭಿಚಾರ ಮಾಡಿದ
ಅನರ್ಹರ ಕುರಿತು,ಪ್ರಚಾರಕ್ಕೆ ಬರುವ ಬಿಎಸ್ ವೈ ಹಿಂದಕ್ಕೆ ಹೋಗಲಿ,
ಇದು ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಿಗೆ ಶೋಭೆ ತರುವದಿಲ್ಲ ಎಂಬುದಾಗಿ ತಿಳಿಸಿದರು .

*ಮಹೇಶ ಕುಮಠಳ್ಳಿ ಮತ್ತೊಬ್ಬರ ಕೈಯ ಬಡಿಗೆ*
ಮಹೇಶ ಕುಮಠಳ್ಳಿಗೆ ನಾಯಕತ್ವ ಗೊತ್ತಿಲ್ಲ ಅವರು ಮತ್ತೊಬ್ಬರ ಕೈಯ್ಯ ಬಡಿಗೆ ಆಗಿದ್ದಾರೆ ಅದು ನಮಗೆ ಗೊತ್ತಿರಲಿಲ್ಲ.ಅಥಣಿ ಜನ ಇಂತಹವರನ್ನು ಗೆಲ್ಲಿಸುತ್ತಾರೆ ಅಂತನು ಗೊತ್ತಿರಲಿಲ್ಲ..
ಕುಮಠಳ್ಳಿಗೆ ನಾಯಕತ್ವ ಗುಣ ಇಲ್ಲ ಜಾರಕಿಹೊಳಿ ಅವರ ಕೈಯಲ್ಲಿ ಪೂರ್ತಿ ಸರೆಂಡರ್ ಆಗಿದ್ದಾರೆ ಅಂತ ಗೊತ್ತಿರಲಿಲ್ಲ.

Share

About Prakash s kamble BIG TV NEWS, Athani

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!