Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬೆಂಗಳೂರು ಗ್ರಾಮಾಂತರ / ರಕ್ತದಾ‌ನ ಶ್ರೇಷ್ಠದಾನ ಎಲ್ಲರೂ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿ

ರಕ್ತದಾ‌ನ ಶ್ರೇಷ್ಠದಾನ ಎಲ್ಲರೂ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿ

ಆನೇಕಲ್:- ದಾನದಲ್ಲಿ ಶ್ರೇಷ್ಠವಾದದ್ದು ರಕ್ತದಾನ, ಈ ಹಿನ್ನಲೆಯಲ್ಲಿ ನಾವು ಇನ್ನೊಬ್ಬರ ಜೀವನದಲ್ಲಿ ಸಹಾಯವನ್ನು ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಸಮಂದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ತಿಳಿಸಿದರು.

ಚಿರಂಜೀವಿ ಸಂಘ 25 ವರ್ಷ ಪೊರೈಸಿದ ಅಂಗವಾಗಿ ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್ ಪೇರ್ ಅಸೋಸಿಯೇಶನ್ ವತಿಯಿಂದ ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಭ್ ಮಂಗಲ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸಂಘದ ಕಾರ್ಯಕ್ರಮಗಳು ಸಮಾಜಕ್ಕೆ ತಿಳಿಸಬೇಕು. ನಮ್ಮ ಅಭಿಮಾನ  ಕೇವಲ ಸಂಘಕ್ಕೆ ಸೀಮಿತವಾಗದೇ ಇತರರಿಗೆ ಮಾದರಿಯಾಗಬೇಕು. 25ವರ್ಷ ಸೇವೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸಲಾಗುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಸಂಘದಿಂದ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಅಖಿಲ ಕರ್ನಾಟಕ ಚಿರಂಜೀವಿ ಸಂಘದ ರಾಜ್ಯ ಪ್ರಧಾನ  ಕಾರ್ಯದರ್ಶಿ ದಾಸ ಮಾತನಾಡಿ, ಸಿನಿಮಾ ಬಂದಾಗ ಅಭಿಮಾನಿಗಳು ಅವರ ಸ್ವಂತ ಪ್ರೀತಿಯಿಂದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆನೇಕಲ್ ಸಂಘವು 25 ವರ್ಷಗಳ ನಿರಂತರ ಒಗ್ಗಟ್ಟಿನ ಸೇವೆ ಮುಂದುವರೆದಿದೆ. ನಮ್ಮ ಸಹಕಾರವೂ ಸದಾ ಇರುತ್ತದೆ. ಎಲ್ಲಾ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಗಿಡವೊಂದು ಬೆಳೆದು ಮರವಾದಂತೆ ನಾವು ಬೆಳೆಯಬೇಕು ಎಂದರು.

ಇನ್ನೂ ಸಂಘದ ಗೌರವ ಅದ್ಯಕ್ಷ ಮಂಜುನಾಥ್ ರೆಡ್ದಿ ಚಿರಂಜೀವಿಯವರ ಕನ್ನಡದ ಅಭಿಮಾನಿಯಾಗಿದ್ದು, ಅವರ ಹೆಸರಿನಲ್ಲಿ ಸತತವಾಗಿ ರಕ್ತ ದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಚಿರಂಜೀವಿ ಹೆಸರಿನ ಸಂಸ್ಥೆ ಇನ್ನಷ್ಟು ಬೆಳೆಯಬೇಕು. ಯಾರಿಗೇ ರಕ್ತದ ಬೇಡಿಕೆ ಇದ್ದಾಗ ನಮ್ಮ ಸಂಘವನ್ನು ಸಂಪರ್ಕಿಸಿದರೆ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಾದ್ಯಕ್ಷ ಬಿ.ಜಿ.ನಾಗೇಂದ್ರ, ರಾಮ್ ಚರಣ್ ಯುವಸೇನೆ ರಾಜ್ಯಾದ್ಯಕ್ಷ ಮಾರ್ಟಿನ್, ಮುರುಗ, ಗೋವಿಂದ ಸ್ವಾಮಿ, ಛಲಪತಿ, ಶ್ರೀನಿವಾಸ್, ಲಕ್ಷ್ಮಿ ನರಸಿಂಹ ಚಿತ್ರಮಂದಿರ ಮಾಲೀಕ ಸೀತಣ್ಣ, ಗೌರವಾದ್ಯಕ್ಷ ಟಿ.ಮಂಜುನಾಥ್ ರೆಡ್ಡಿ, ಪ್ರಶಾಂತ ನಾಯ್ಡು, , ಆರ್.ಜಗದೀಶ್, ಆನೇಕಲ್ ತಾಲ್ಲೂಕು ಉಪಾಧ್ಯಕ್ಷ ಎಮ್.ರಾಮು, ಪ್ರಧಾನ ಕಾರ್ಯದರ್ಶಿ ಎಮ್.ವೆಂಕಟೇಶ, ಕುಮಾರ, ನಾರಾಯಣ, ಮಾದೇಶ, ಗುರುಸ್ವಾಮಿ, ವೇಣುಗೋಪಾಲ ಇದ್ದರು.

ತುರ್ತಾಗಿ ರಕ್ತದ ಬೇಡಿಕೆ ಇದ್ದಾಗ ಸಂಪರ್ಕಿಸಬೇಕಾದ ಸಂಖ್ಯೆ-9663776662.

 

Share

About solaragoppa

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!