Hiring Reporter’s For more Information Contact Above Number 876 225 4007 . Program producer
Home / Breaking News / ವರವಾದ ಭೂಗತ ಕೇಬಲ್! ಹೆಸ್ಕಾಂನಲ್ಲಿ ವಿದ್ಯುತ್ ಕಡಿತಕ್ಕೆ ಬ್ರೇಕ್

ವರವಾದ ಭೂಗತ ಕೇಬಲ್! ಹೆಸ್ಕಾಂನಲ್ಲಿ ವಿದ್ಯುತ್ ಕಡಿತಕ್ಕೆ ಬ್ರೇಕ್

Spread the love

ಹುಬ್ಬಳ್ಳಿ :ಮಳೆಗಾಲ ಬಂದ್ರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗುತ್ತದೆ. ವಿದ್ಯುತ್ ಟ್ರಿಪಿಂಗ್, ಲೋಶೆಡ್ಡಿಂಗ್ ಕಾಮನ್ ಆಗಿರುತ್ತದೆ. ಆದ್ರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ. ಅಷ್ಟಕ್ಕೂ ಅಂತಹ ವ್ಯವಸ್ಥೆ ಏನ ಅಂತಿರಾ ಹಾಗಿದ್ದರೆ ಈ ಸ್ಟೋರಿ ನೋಡಿ……..

ನಗರ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಹಾಕಿರುವದರಿಂದ ವಿದ್ಯುತ್ ಕಡಿತಕ್ಕೆ ಶೇ. 90 ರಷ್ಟು ಬ್ರೇಕ್ ಹಾಕಿದಂತಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿದ್ಯುತ್ ಸಮಸ್ಯೆ ಅಷ್ಟೊಂದು ತಲೆದೋರಿಲ್ಲ. ಹೆಸ್ಕಾಂನ ಮುನ್ನಚ್ಚರಿಕಾ ಕ್ರಮಗಳಿಂದ ವಿದ್ಯುತ್ ವ್ಯತ್ಯಯವಾಗುವದು ವಿರಳವಾಗಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ತನ್ನ ಗ್ರಾಹಕರಿಗಾಗಿ ನಗರ ವ್ಯಾಪ್ತಿಯಲ್ಲಿ ಉಪವಿಭಾಗಳನ್ನು ಮಾಡಿಕೊಂಡು 12 ಜನರನ್ನು ಒಳಗೊಂಡಿರುವ ಕಂಟ್ರಾಕ್ಟರ್ ಗ್ಯಾಂಗ್ ಕಾರ್ಯನಿರ್ವಹಿಸುತ್ತವೆ. ಯಾವುದೇ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳು ಎದುರಾದಾಗ ಹೆಸ್ಕಾಂ ಸಿಬ್ಬಂದಿಗಳೊಂದಿಗೆ ಇವರು ಕಾರ್ಯನಿರ್ವಹಿಸುತ್ತಾರೆ. ಆದರೆ ಮಳೆಗಾಲದ ಸಂದರ್ಭ ಗಾಳಿ-ಮಳೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಹೆಚ್ಚು ಹಾನಿ ಉಂಟಾಗುತ್ತವೆ. ಇದಕ್ಕಾಗಿ ಹೆಚ್ಚುವರಿಯಾಗಿ ಪ್ರತಿ ಉಪವಿಭಾಗಕ್ಕೆ ತಲಾ 15ಮಂದಿಯ ಮಾನ್ಸೂನ್ ಗ್ಯಾಂಗ್‌ನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.‌..

ಮಳೆಗಾಲದಲ್ಲಿ ‌ಮರಗಳು ತಂತಿಗಳ ಮೇಲೆ ಬಿದ್ದು ಕಂಬಕ್ಕೆ ಹಾನಿಯಾಗುವದರ ಜೊತೆಗೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವದರಿಂದ, ಮಳೆಗಾಲ ಆರಂಭಕ್ಕೂ‌ ಮುನ್ನ ಪ್ರತಿ ವರ್ಷ ಗಿಡಗಳ ರಂಬೆ, ಕೊಂಬೆಗಳನ್ನು ಕತ್ತರಿಸಲಾಗುತ್ತದೆ. ಈ ಮೂಲಕ‌ ವಿದ್ಯುತ್ ವ್ಯತ್ಯಯ ಪ್ರಮಾಣ ಕಡಿಮೆಯಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಹೆಸ್ಕಾಂ ಮುಂದಾಗಿದೆ.

ವಿದ್ಯುತ್‌ಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಸಲ್ಲಿಸಿದರೆ ಸಾಕು, ಸಂಬಂಧಪಟ್ಟ ವಿಭಾಗದ ಸಿಬ್ಬಂದಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ…..!

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!