Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟ್ : ಓರ್ವನಿಗೆ ಗಂಭೀರ ಗಾಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟ್ : ಓರ್ವನಿಗೆ ಗಂಭೀರ ಗಾಯ

ಹುಬ್ಬಳ್ಳಿ:- ಅನುಮಾನಾಸ್ಪದ ಬಾಕ್ಸ್ ಇದ್ದಕ್ಕಿದಂತಯೇ ಬ್ಲಾಸ್ಟ್ ಆಗಿ ವ್ಯಕ್ತಿಯೊರ್ವನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರೇಲ್ವೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇತ ಮೂಲತಃ ಆಂದ್ರಪ್ರದೇಶದವನು ಎಂದು‌‌‌ ಪೋಲಿಸರು ತಿಳಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರಿನಲ್ಲಿ ಬಂದಿದ್ದ ಬಾಕ್ಸ್ ನ್ನು ತೆರೆದಾಗ ಈ ಘಟನೆ ನಡೆದಿದ್ದು, ಬಾಕ್ಸ್ ಸ್ಫೋಟದಿಂದ ಕೆಲಕಾಲ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇನ್ನೂ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟ್ ಗೊಂಡ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಪೋಲಿಸರು, ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಸಿದ್ದು ಶ್ವಾನದಳದೊಂದಿಗೆ ಪರಿಶೀಲನೆ ಕಾರ್ಯ ನಡೆಸಿ ಸ್ಪೋಟಗೊಂಡ ವಸ್ತು ಮಗುವಿನ ಆಟವಾಡುತ್ತಿದ್ದ ಸಾಮಗ್ರಿ ಆಗಿದೆ ಎಂದು ಪೋಲಿಸರು ವಿವರಣೆ ನೀಡಿದ್ದಾರೆ. ಇನ್ನೂ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರಿನಲ್ಲಿ ಬಂದಿರುವ ಈ ಬಾಕ್ಸ್ ಯಾರು ಕಳುಹಿಸಿದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Share

About solaragoppa

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!