Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಪೋಟ್ : ತನಿಖೆ ಚುರುಕುಗೊಳಿಸಿದ ಪೋಲಿಸ ಅಧಿಕಾರಿಗಳು

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಪೋಟ್ : ತನಿಖೆ ಚುರುಕುಗೊಳಿಸಿದ ಪೋಲಿಸ ಅಧಿಕಾರಿಗಳು

ಹುಬ್ಬಳ್ಳಿ,,ಅ,೨೩- ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ ಬಾಂಬ್ ಸ್ಪೋಟ್ ಕುರಿತಂತೆ ತನಿಖೆ ತೀವ್ರಗೊಂಡಿದ್ದು, ಒರ್ವನನ್ನು ವಶಕ್ಕೆ ಪಡೆದಿದ್ದು ಆರ್ ಪಿಎಫ್ ಇಬ್ಬರು ಸಿಬ್ಬಂದಿಯನ್ನು ಇಲಾಖಾ ತನಿಖೆಗೆ ಒಳಪಡಿಸಿದ್ದು, ರೇಲ್ವೆ ಇಲಾಖೆಯ ಎಸ್ ಪಿ ಬೋರಲಿಂಗಯ್ಯಾ ಅವರಿಂದ ಇಂದು ನೈರುತ್ಯ ರೇಲ್ವೆ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಯುತಿದೆ. ಇನ್ನೊಂದು ಕಡೆ ಬಿಡಿಡಿಎಸ್ ತಂಡ ಇಡೀ ರೇಲ್ವೆ ನಿಲ್ದಾಣವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತಿದ್ದಾರೆ. ಒಂದು ಆಯಾಮದಲ್ಲಿ
ಮಹಾರಾಷ್ಟ್ರ ಚುನಾವಣೆ ವೇಳೆ ಸ್ಪೋಟಕ್ಕೆ ಸಂಚು ನಡೆದಿತ್ತಾ. ಇಂತದೊಂದು ಅನುಮಾನಕ್ಕೆ ಕಾರಣಯಿತಾ ಅಥವಾ ಪಾಕ್ ಉಗ್ರರ ಕೈವಾಡ ಇದರಲ್ಲಿ ಇದೇನಾ ಎಂಬ ಅನುಮಾನ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಪೋಟ ತನಿಖೆ ಪ್ರಮುಖ ಆಯಾಮಗಳಾಗಿವೆ. ಇನ್ನು ಚುರುಕುಗೊಳಿಸಿರುವ ಪೋಲಿಸರಿಗೆ ಬಾಕ್ಸ್ ಮೇಲಿದ್ದ ಬರಹಗಳು ಮಹತ್ವದ ಸುಳಿವು ನೀಡಿದ್ದು ಇಂದು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆದ ಹಿನ್ನೆಲೆಯಲ್ಲಿ ಮತದಾನದ ವೇಳೆ ಸ್ಪೋಟಕ್ಕೆ ಸಂಚು ರೂಪಿಸಲಾಗಿತ್ತಾ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ರೈಲ್ವೆ ನಿಲ್ದಾಣದಕ್ಕೆ ಬಂದಿದ್ದ ಪಾರ್ಸಲ್ ಬಾಕ್ಸನ್ನ , ರೈಲ್ವೆ ಪೋಲಿಸರು ಅನುಮಾನಗೊಂಡು, ಅಲ್ಲಿ ಕೇಲಸ ಮಾಡುತ್ತಿದ್ದ ಹುಸೇನ ನಾಯಕವಾಲೆ ಎನ್ನುವ ಯುವಕನಿಂದ ಓಪನ್ ಮಾಡಿಸಿದ್ದರು. ಬಾಕ್ಸ್ ಓಪನ್ ಮಾಡಲು ಮುಂದಾಗುತ್ತಿದ್ದಂತೆ, ಬಾಕ್ಸ್ ಸ್ಪೋಟಗೊಂಡಿತ್ತು. ಆ ಸ್ಪೋಟದ ತೀವ್ರತೆ ಇಡೀ ರೈಲ್ವೆ ನಿಲ್ದಾಣವನ್ನು ತಲ್ಲಣಗೊಳಿಸಿತ್ತು. ಹುಸೇನ್ ನಾಯಕವಾಲೆ ಕೈಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗ ಸ್ವಲ್ಪ ಮಟ್ಟಿಗೆ ಚೇತಕರಿಕೆ ಕಾಣುತಿದ್ದಾನೆ.
ವಿಜಯವಾಡ-ಹುಬ್ಬಳ್ಳಿ-ಅಮರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು 10 ಕ್ಕು ಹೆಚ್ಚು ಬಾಕ್ಸ್ ಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದವು. ಬಾಕ್ಸಿನ ಮೇಲೆ ನೋ ಬಿಜೆಪಿ, ನೋ ಕಾಂಗ್ರೇಸ್ , ಓನ್ಲಿ ಶಿವಸೇನಾ ಎಂದು ಬರೆದಿತ್ತು. ಅಷ್ಟೆ ಅಲ್ಲದೇ ಕೊಲ್ಲಾಪುರದ ಶಾಸಕ ಗರಗಟ್ಟಿಯವರ ಹೆಸರು ಬಾಕ್ಸ್ ಮೇಲೆ ಬರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ತೀವ್ರಗೊಳಿಸಿರುವ ಪೋಲಿಸರಿಗೆ ಈ ಬರಹಗಳು ಹಲವು ಸುಳಿವನ್ನ ನೀಡಿವೆ. ಒಂದು ಕಡೆ ತನಿಖೆ ಚುರುಕುಗೊಂಡಿದ್ದರೆ, ಮತ್ತೊಂದೆಡೆ ಬಾಂಬ್ ನಿಷ್ಕ್ರೀಯದಳದವರು, ಇನ್ನುಳಿದ ಹತ್ತು ಸ್ಪೋಟಕಗಳಿದ್ದ ಬಾಕ್ಸಗಳನ್ನ ರೈಲ್ವೆ ಆವರಣದ ಹೊರವಲಯದಲ್ಲಿರುವ ಬಯಲು ಪ್ರದೇಶದಲ್ಲಿಟ್ಟು ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ. ಮರಳಿನ ಚೀಲಗಳ ರಾಶಿಯಲ್ಲಿ ಇನ್ನುಳಿದ ಬಾಕ್ಸ್ ಗಳನ್ನ ಈಡಲಾಗಿದ್ದು
ಸದಾ ಜನರಿಂದ ತುಂಬಿ ತುಳುಕುವ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಇಂದು ನಡೆದ ಸ್ಪೋಟದಿಂದ ಬೆಚ್ಚಿ ಬಿದ್ದಿದೆ. ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದೆ.‌

Share

About Shaikh BIG TV NEWS, Hubballi

Check Also

ವ್ಯಕ್ತಿಯ ಬರ್ಭರ ಹತ್ಯೆ.

ಮುಜಫರ್​ನಗರ (ಉತ್ತರ ಪ್ರದೇಶ): ಮುಜಫರ್​ನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ 35 ವರ್ಷದ ವ್ಯಕ್ತಿವೋರ್ವ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು …

Leave a Reply

Your email address will not be published. Required fields are marked *

error: Content is protected !!