Breaking News
Home / ಕ್ರೀಡೆ

ಕ್ರೀಡೆ

ಭಾರತ ತಂಡಕ್ಕೆ ಬಿಗ್ ಶಾಕ್.

ಬೆಂಗಳೂರು (ಜ. 12): ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ ಹನುಮಾ ವಿಹಾರಿ ಹಾಗೂ ರವೀಂದ್ರ ಜಡೇಜಾ ಸೇವೆಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಕ್ಕೆ ಸದ್ಯ ಮತ್ತೊಂದು ದೊಡ್ಡ ಆಘಾತ ಉಂಟಾಗಿದೆ. ಭಾರತ ತಂಡದ ಬೌಲಿಂಗ್ ರುವಾರಿ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದಾರೆ. ಕಿಬ್ಬೊಟ್ಟೆಯ ಒತ್ತಡದಿಂದ ಬುಮ್ರಾ ಬಳಲುತ್ತಿದ್ದಾರೆ. ಹೀಗಾಗಿ ಇವರು ಮುಂದಿನ ಟೆಸ್ಟ್​ಗೆ ಲಭ್ಯರಿಲ್ಲ ಎಂದು ಪಿಟಿಐಗೆ ಬಿಸಿಸಿಐ ಮೂಲಗಳು …

Read More »

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್.

ಅಬುಧಾಬಿ: ಚೊಚ್ಚಲ ಫೈನಲ್ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್​ ಅಯ್ಯರ್​ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಐಪಿಎಲ್​ನಲ್ಲಿ ಕಳೆದ 13 ಲೀಗ್​ಗಳಲ್ಲಿ ಫೈನಲ್ ಪ್ರವೇಶಿಸದ ಏಕೈಕ ತಂಡವಾಗಿರುವ ಡೆಲ್ಲಿ ಈ ಬಾರಿ ಉತ್ತಮ ಪ್ರದರ್ಶನ ತೋರಿ ಸತತ 2ನೇ ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಆದರೆ ಲೀಗ್​ನಲ್ಲಿ ಎರಡು ಪಂದ್ಯಗಳಲ್ಲಿ ಹೈದರಾಬಾದ್​ ವಿರುದ್ಧ ಸೋಲು ಕಂಡಿರುವುದರಿಂದಶ್ರೇಯಸ್ ಪಡೆಗೆ ಈ ಪಂದ್ಯ ನಿಜಕ್ಕೂ ಸವಾಲಾಗಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ …

Read More »

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ. ಚಿಗುಂಬರ ಜಿಂಬಾಬ್ವೆ ಪರ 14 ಟೆಸ್ಟ್​, 213 ಏಕದಿನ ಹಾಗೂ 54 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 569, 4340 ಹಾಗೂ 844 ರನ್​ಗಳಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 2 ಶತಕ ಕೂಡ ದಾಖಲಿಸಿದ್ದಾರೆ. ಬೌಲಿಂಗ್​ನಲ್ಲಿ ಟೆಸ್ಟ್​ನಲ್ಲಿ 21, ಏಕದಿನ ಕ್ರಿಕೆಟ್​ನಲ್ಲಿ 101 ಹಾಗೂ …

Read More »

ಬಾಂಗ್ಲಾ ಟಿ-20 ನಾಯಕನಿಗೆ ಕೋವಿಡ್ ಪಾಸಿಟಿವ್.

ಡಾಕಾ : ಬಾಂಗ್ಲಾದೇಶದ ಟಿ20 ತಂಡದ ನಾಯಕ ಮಹಮದುಲ್ಲಾ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಇದೇ ತಿಂಗಳು ಪುನಾರಂಭಗೊಳ್ಳುತ್ತಿರುವ ಪಿಎಸ್​ಎಲ್​ನ ನಾಕ್​ಔಟ್​ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. 34 ವರ್ಷದ ಆಲ್​ರೌಂಡರ್ ​ಭಾನುವಾರ ಪಿಎಸ್​ಎಲ್​ಗಾಗಿ ದುಬೈ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ಸಿದ್ಧರಾಗಿದ್ದರು. ಆದರೆ, ಕೋವಿಡ್​ 19 ಸೋಂಕು ತಗುಲಿರುವುದರಿಂದ ಸೆಲ್ಫ್​ ಐಸೊಲೇಸನ್​ಗೆ ಒಳಗಾಗಿದ್ದಾರೆ. ಇನ್ನು, ನವೆಂಬರ್​ 21 ಅಥವಾ 22ರಂದು ಆರಂಭವಾಗಲಿರುವ ಬಂಗಬಂಧು ಟಿ20 ಕಪ್​ಗೂ ಕೂಡ …

Read More »

IPL: ವಾರ್ನರ್ ಪಡೆಗೆ 132 ರನ್ ಗಳ ಟಾರ್ಗೆಟ್ .

ಅಬುಧಾಬಿ: ಐಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ವಿರಾಟ್​​-ವಾರ್ನರ್ ಪಡೆ ಮುಖಾಮುಖಿಯಾಗಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿ ಆರ್​ಸಿಬಿ ಎದುರಾಳಿ ತಂಡಕ್ಕೆ 132 ರನ್​ಗಳ ಗೆಲುವಿನ ಟಾರ್ಗೆಟ್​ ನೀಡಿದೆ. ದೇವದತ್​ ಪಡಿಕ್ಕಲ್​ ಜತೆ ಸೇರಿ ಇನ್ನಿಂಗ್ಸ್ ಆರಂಭಿಸಿದ ವಿರಾಟ್​ ಕೊಹ್ಲಿ ಕೇವಲ 6ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ಕೂಡ ಕೇವಲ 1ರನ್​ಗಳಿಕೆ ಮಾಡಿ ಜೇಸನ್ ಹೋಲ್ಡರ್​ಗೆ ವಿಕೆಟ್​ ಒಪ್ಪಿಸಿದರು. ಹೀಗಾಗಿ ತಂಡ ಪವರ್​ ಫ್ಲೇ ಮುಕ್ತಾಯದ ವೇಳೆಗೆ …

Read More »

ಐಪಿಎಲ್ : ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸನ್​ರೈಸರ್ಸ್ ತಂಡ.

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಹೈದರಾಬಾದ್ ತಂಡ ಬೌಲಿಂಗ್​​ ಆಯ್ದುಕೊಂಡಿದೆ. ಹೈದರಾಬಾದ್​: ಡೇವಿಡ್​ ವಾರ್ನರ್​(ಕ್ಯಾ), ಶ್ರೀವಾಸ್ತವ್​ ಗೋಸ್ವಾಮಿ(ವಿ.ಕೀ), ಮನೀಷ್​ ಪಾಂಡೆ, ಕೇನ್​ ವಿಲಿಯಮ್ಸನ್​, ಪ್ರಿಯಾಂ ಗರ್ಗ್​, ಹೋಲ್ಡರ್​, ಅಬ್ದುಲ್​, ರಾಶೀದ್ ಖಾನ್​, ನದೀಂ, ಸಂದೀಪ್​ ಶರ್ಮಾ, ಟಿ. ನಟರಾಜನ್​

Read More »

ತವರಿಗೆ ಮರಳಿದ ಸಿಎಸ್ ಕೆ ಆಟಗಾರರು.

ದುಬೈ: ಐಪಿಎಲ್ 13 ರಲ್ಲಿ ಯಾಕೋ ಚೆನ್ನೈ ಅದೃಷ್ಟ ಆರಂಭದಿಂದಲೂ ಕೈಕೊಟ್ಟಿತ್ತು. ಕಳಪೆ ಪ್ರದರ್ಶನದೊಂದಿಗೆ ಐಪಿಎಲ್ 13 ರ ಯಾತ್ರೆ ಮುಗಿಸಿರುವ ಸಿಎಸ್ ಕೆ ಹುಡುಗರು ತವರಿಗೆ ಮರಳಿದ್ದಾರೆ. ಐಪಿಎಲ್ 13 ರಲ್ಲಿ ಸಿಎಸ್ ಕೆ ಮೊನ್ನೆ ಪಂಜಾಬ್ ವಿರುದ್ಧ ಕೊನೆಯ ಪಂದ್ಯವಾಡಿತ್ತು. ಇದೀಗ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗದ ಹಿನ್ನಲೆಯಲ್ಲಿ ಕ್ರಿಕೆಟಿಗರು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಮರಳಿದ್ದಾರೆ. ಸಿಎಸ್ ಕೆ ಕ್ರಿಕೆಟಿಗ ಕರಣ್ ಶರ್ಮಾ ತವರಿಗೆ ಮರಳುತ್ತಿರುವ …

Read More »

ಕರ್ನಾಟಕ ಸರ್ಕಾರಕ್ಕೆ ಸದಾ ಆಭಾರಿ ಎಂದ ಕೆ.ಎಲ್. ರಾಹುಲ್.

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ ಮಿರ್ಜಾ, ಈಜುಪಟುಗಳಾದ ಖುಷಿ ದಿನೇಶ್, ಶ್ರೀಹರಿ ನಟರಾಜ್, ಅಥ್ಲೀಟ್ ಜಿ. ವಿಜಯಕುಮಾರಿ ಸೇರಿದಂತೆ 31 ಮಂದಿ ಕ್ರೀಡಾ ಸಾಧಕರು ಪ್ರತಿಷ್ಠಿತ ಏಕಲವ್ಯ ಕ್ರೀಡಾ ಗೌರವಕ್ಕೆ ಭಾಜನರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ಸರ್ಕಾರಕ್ಕೆ ಟೀಮ್‌ ಇಂಡಿಯಾ ಆರಂಭಿಕ ಹಾಗೂ ಕಿಂಗ್ಸ್ ಇಲೆವೆನ್‌ ನಾಯಕ ಕೆ.ಎಲ್‌ ರಾಹುಲ್‌ …

Read More »

ಕೊಹ್ಲಿ, ಎಬಿಡಿ ವಿರುದ್ದ ಕಿಡಿಕಾರಿದ ಕೆ.ಎಲ್ ರಾಹುಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಮುಖ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ನಿಷೇಧಿಸುವಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ ಸಂಘಟಕರಿಗೆ ಸೂಚಿಸಲು ಬಯಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬದಲಾವಣೆ ಮಾಡಲು ಇಚ್ಚಿಸುವ ಒಂದು ನಿಯಮವನ್ನು ಕೊಹ್ಲಿ ಕೇಳಿದ ನಂತರ ಈ ಸಲಹೆಯನ್ನು ರಾಹುಲ್ ತಮಾಷೆಯಾಗಿ ಬಹಿರಂಗಪಡಿಸಿದ್ದಾರೆ. ಮಂಗಳವಾರ ಪೂಮಾ ಇನ್‌ಸ್ಟಾಗ್ರಾಮ್‌ನ ಸಂವಾದದ ವೇಳೆ ರಾಹುಲ್, ಮುಂದಿನ ವರ್ಷ ನಿಮ್ಮನ್ನು ಮತ್ತು ಎಬಿಯನ್ನು …

Read More »

ಟೋಕಿಯೋ ಒಲಂಪಿಕ್ಸ್ ಗೆ ಮುಹೂರ್ತ ಫಿಕ್ಸ್

ಟೋಕಿಯೋ : ವಿಶ್ವಾದ್ಯಂತ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಒಲಂಪಿಕ್ಸ್ ಗೆ ಹೊಸ ದಿನಾಂಕ ನಿಗದಿಪಡಿಸಲಾಗಿದೆ. ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿ ಮತ್ತು ಜಪಾನ್ ಆಯೋಜಕರು ಇಂದು ಸಭೆ ನಡೆಸಿ 2021 ರ ಜುಲೈ 23ರಿಂದ ಆಗಸ್ಟ್ 8ರವರೆಗೆ ಟೋಕಿಯೋ ಒಲಂಪಿಕ್ಸ್ ಗೆ ದಿನಾಂಕ ನಿಗದಿ ಪಡಿಸಿದ್ದಾರೆ. ಈ ಕುರಿತಂತೆ ಒಲಂಪಿಕ್ಸ್ ಸಂಘಟನಾ ಸಮಿತಿ ಅಧ್ಯಕ್ಷ ಯೋಶಿರೋ ಮೋರಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ 2020ರ ಜುಲೈ 23 ರಿಂದ ಆಗಸ್ಟ್ …

Read More »

ದೇಶವಾಸಿಗಳ ನೆರವಿಗೆ ಬಂದ ಕ್ರಿಕೆಟ್ ಆಟಗಾರ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಇದ್ರಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಸರ್ಕಾರದ ನೆರವಿಗೆ ಸೆಲೆಬ್ರಿಟಿಗಳು, ಗಣ್ಯರು ಸೇರಿದಂತೆ ಜನಸಾಮಾನ್ಯರು ಬರ್ತಿದ್ದಾರೆ. ಈಗಾಗಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಹಣ ನೀಡುವ ಘೋಷಣೆ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಕೂಡ ಬಡ ಜನರ ನೆರವಿಗೆ ಬರುವ ಘೋಷಣೆ ಮಾಡಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದಲ್ಲಿ …

Read More »

ಕ್ರಿಕೆಟ್ ಪ್ರೇಮಿಗಳಿಗೆ ಶಾಕಿಂಗ್ ನ್ಯೂಸ್

ಮುಂಬೈ : ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಟೂರ್ನಿ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಸರ್ಕಾರವು ಏಪ್ರಿಲ್ 15 ರ ವರೆಗೆ ಎಲ್ಲಾ ವಿದೇಶಿ ವೀಸಾಗಳನ್ನು ಅಮಾನತುಗೊಳಿಸಿದೆ. ಹೀಗಾಗಿ ಬಿಸಿಸಿಐ ಏಪ್ರಿಲ್ 15 ರ ನಂತರ ಐಪಿಎಲ್ ಪ್ರಾಂಚೈಸಿಗಳ ಜೊತೆ ಚರ್ಚಿಸಲಿದ್ದು, ಈ ಬಾರಿಯ …

Read More »

ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ದೇಶಾದ್ಯಂತ ಜನರಲ್ಲಿ ಭೀತಿ ಮೂಡಿಸಿರುವ ಕರೋನಾ ವೈರಸ್‌ನಿಂದಾಗಿ ಈ ವರ್ಷದ ಐಪಿಎಲ್‌ ಸೀಸನ್‌ ಆರಂಭವನ್ನು ಅದಾಗಲೇ ಎರಡು ವಾರಗಳ ಮಟ್ಟಿಗೆ ಮುಂದೂಡಲಾಗಿದೆ. ಮಾರ್ಚ್ 29ರಿಂದ ಆರಂಭಗೊಳ್ಳಬೇಕಿದ್ದ ಐಪಿಎಲ್‌ಅನ್ನು ಏಪ್ರಿಲ್ 15ರಿಂದ ಶುರು ಮಾಡಲು ನಿರ್ಧರಿಸಲಾಗಿದೆ. ಜಗತ್ತಿನಾದ್ಯಂತ ಈ ವೈರಾಣುಗಳು ಅಬ್ಬರ ಮುಂದುವರೆದಿದ್ದು, ದೊಡ್ಡ ದೊಡ್ಡ ಕ್ರೀಡಾಕೂಟಗಳ ಆಯೋಜನೆಯನ್ನೇ ರದ್ದು ಮಾಡಲಾಗುತ್ತಿದೆ. ದೇಶಾದ್ಯಂತ ವಿವಿಧ ನಗರಗಳಲ್ಲಿ ನಡೆಯಬೇಕಿದ್ದ ಐಪಿಎಲ್‌ ಮೇಲೂ ಸಹ ಕರೋನಾ ವೈರಸ್‌ನ ಕರಾಳ ಛಾಯೆ ಆವರಿಸಿದ್ದು, ಏಪ್ರಿಲ್‌ 20ರ …

Read More »

ರಣಜಿ ಪ್ರಶಸ್ತಿಗೆ ಸೌರಾಷ್ಟ್ರ, ಬಂಗಾಲ ಪೈಪೋಟಿ

ರಾಜ್‌ಕೋಟ್‌: ಪ್ರತಿಷ್ಠಿತ ದೇಶಿ ಕ್ರಿಕೆಟ್‌ ಕೂಟವಾದ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್‌ ಮುಖಾಮುಖೀ ಸೌರಾಷ್ಟ್ರ ಮತ್ತು ಬಂಗಾಲ ನಡುವೆ ಸೋಮವಾರದಿಂದ ರಾಜ್‌ಕೋಟ್‌ನಲ್ಲಿ ಮೊದಲ್ಗೊಳ್ಳಲಿದೆ. ಸತತ 2ನೇ ಫೈನಲ್‌ ಕಾಣುತ್ತಿರುವ ಸೌರಾಷ್ಟ್ರ ತವರಿನಂಗಳದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಇನ್ನೊಂದೆಡೆ ಬಂಗಾಲ 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಅದು 1989-90ರ ಬಳಿಕ ರಣಜಿ ಚಾಂಪಿಯನ್‌ ಆಗಿಲ್ಲ. ಸೆಮಿಫೈನಲ್‌ನಲ್ಲಿ ಗುಜರಾತ್‌ ವಿರುದ್ಧ ಸೌರಾಷ್ಟ್ರ ಮೇಲುಗೈ ಸಾಧಿಸಿದರೆ, ಬಂಗಾಲ …

Read More »

2023ಕ್ಕೆ ಮುಂಬೈನಲ್ಲಿ ಒಲಂಪಿಕ್ಸ್ ಕ್ರೀಡಾಕೂಟ.

ಮಹಾನಗರಿಯಲ್ಲಿ 2023ರ ಅಂತಾರಾಷ್ಟ್ರೀಯ ಒಲಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಐಒಸಿ ಕಾರ್ಯಕಾರಿಣಿಯಲ್ಲಿ 2023ರ ಒಲಂಪಿಕ್ಸ್ ಆತಿಥ್ಯ ಭಾರತ ವಹಿಸಿಕೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ ಮುಂಬೈ ಮಹಾನಗರಿಯಲ್ಲಿ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ಅಕ್ಟೋಬರ್‍ನಲ್ಲಿ ಮುಂಬೈ ಮಹಾನಗರಿಗೆ ಆಗಮಿಸಿ ಒಲಂಪಿಕ್ಸ್ ನಡೆಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಒಲಂಪಿಕ್ಸ್‍ಗೆ ಮುಂಬೈ ಸೂಕ್ತ ಸ್ಥಳ ಎಂದು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಜುಲೈನಲ್ಲಿ ನಡೆಯಲಿರುವ 136ನೆ ಐಒಸಿ ಮಹಾಸಭೆಯಲ್ಲಿ ಮುಂಬೈನಲ್ಲಿ ಒಲಂಪಿಕ್ಸ್ ನಡೆಸುವ …

Read More »
error: Content is protected !!