Breaking News
Home / ಕ್ರೀಡೆ / ಕಬ್ಬಡ್ಡಿ

ಕಬ್ಬಡ್ಡಿ

ಶ್ರೀಲಂಕಾ ವಿರುದ್ದ ಗೆಲುವಿನ ನಗೆ ಬೀರಿದ ಆಸ್ಟ್ರೇಲಿಯಾ ಪಡೆ.

  ಮೆಲ್ಬೋರ್ನ್​​​: ಪಾಕಿಸ್ತಾನಕ್ಕೆ ಟಿ-20 ಕ್ರಿಕೆಟ್​​ನಲ್ಲಿ ಸೋಲಿನ ರುಚಿ ತೋರಿಸಿದ್ದ ಶ್ರೀಲಂಕಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ​ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ. ಶ್ರೀಲಂಕಾ ವಿರುದ್ಧ ಮೆಲ್ಬರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 142 ರನ್​ ಗಳಿಸಿತ್ತು. ತಂಡದ ಪರ ವಿಕೆಟ್​ ಕೀಪರ್​ …

Read More »

ಪ್ರೋ ಕಬಡ್ಡಿ: ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್.

ಅಹಮದಾಬಾದ್​​: 7ನೇ ಆವೃತ್ತಿ ಪ್ರೊ ಕಬಡ್ಡಿಯ ಮೊದಲ ಎಲಿಮಿನೇಟರ್​ ಹೋರಾಟದಲ್ಲಿ ಬೆಂಗಳೂರು ಬುಲ್ಸ್​ ಗೆಲುವು ದಾಖಲು ಮಾಡಿದೆ. ಬಲಿಷ್ಠ ಯುಪಿ ಯೋಧಾ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ. ಅಹಮದಾಬಾದ್​​ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ರೋಚಕ ಹೋರಾಟ ಕಂಡು ಬಂದಿತು. ಆರಂಭದಲ್ಲಿ ಬೆಂಗಳೂರು ಬುಲ್ಸ್​ ಮೇಲೆ ಸವಾರಿ ಮಾಡಿದ ಯೋಧಾ ತಂಡ ಸುಲಭವಾಗಿ ಗೆಲುವು ಕಾಣುವ ವಿಶ್ವಾಸದಲ್ಲಿತ್ತು. ಆದರೆ ಕ್ಯಾಪ್ಟನ್​ ಪವನ್​ ಶೆರಾವತ್​ …

Read More »

ಪ್ರಶಸ್ತಿ ಗೆಲ್ಲುವ ತವಕದಲ್ಲಿ ಬೆಂಗಳೂರು ಬುಲ್ಸ್.

ಪಂಚಕುಲ: ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಬೆಂಗಳೂರು ಬುಲ್ಸ್​ ಸತತ ಎರಡನೇ ಬಾರಿಗೆ ಪ್ಲೇ ಆಫ್​ಗೆ ಲಗ್ಗೆ ಹಾಕುವ ಮೂಲಕ ಮತ್ತೊಂದು ಆವೃತ್ತಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಇಂದು ಹರಿಯಾಣ ಸ್ಟೀಲರ್ಸ್​​ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 59-36 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದು, ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದೆ.ಆರಂಭದಿಂದಲೂ ಹರಿಯಾಣ ತಂಡ ಪ್ರಬಲ ಪೈಪೋಟಿ ನೀಡಿದ್ದರಿಂದ ಉಭಯ ತಂಡ 5-5 ಅಂಕಗಳಿಸಿದ್ದವು. ತದನಂತರದಲ್ಲಿ ಹರಿಯಾಣ …

Read More »

50 – 21 ಅಂಕಗಳ ಭರ್ಜರಿ ಅಂತರದಿಂದ ಗೆಲುವಿನ ನಗೆ ಬೀರಿದ ಗುಜರಾತ್​ ಫಾರ್ಚೂನ್​ ಜೈಂಟ್ಸ್​ .

ಪಂಚಕುಲ: ಪ್ರೋ ಕಬಡ್ಡಿ ಲೀಗ್​ನಲ್ಲಿ ಅತ್ಯಂತ ಕಳೆಪೆ ಪ್ರದರ್ಶನ ತೋರಿದ ತಮಿಳ್​ ತಲೈವಾಸ್​ ವಿರುದ್ಧ ಗುಜರಾತ್​ ಫಾರ್ಚೂನ್​ ಜೈಂಟ್ಸ್​ 50-21 ಅಂಕಗಳ ಅಂತರದಿಂದ ಮಣಸಿದೆ.ಪಂದ್ಯಾರಂಭದಿಂದಲೂ ಕಳಪೆ ಆಟ ಪ್ರದರ್ಶಸಿದ ತಮಿಳ್​ ತಲೈವಾಸ್​ ರೈಡಿಂಗ್​ ಹಾಗೂ ಡಿಫೆಂಡಿಂಗ್​ ಎರಡೂ ವಿಭಾಗದಲ್ಲೂ ಗುಜರಾತ್​ ಮುಂದೆ ನಿಲ್ಲದಂತಾಯಿತು. ಮೊದಲಾರ್ಧದಲ್ಲೇ 20-9 ರಲ್ಲಿ ಮುನ್ನಡೆ ಕಾಯ್ದುಕೊಂಡ ಗುಜರಾತ್​ ಒಟ್ಟಾರೆ 40 ನಿಮಿಷಗಳ ಆಟದಲ್ಲಿ ಎದುರಾಳಿಯನ್ನು 3 ಬಾರಿ ಆಲೌಟ್​ ಮಾಡಿತು.ರೈಡಿಂಗ್​ನಲ್ಲಿ ಮಿಂಚಿದ ಸೋನು 15 ಅಂಕ …

Read More »

ಬೆಂಗಳೂರು ಬುಲ್ಸ್ ಗೆ ಮಣಿದ ಯು ಮುಂಬಾ.‌

ಜೈಪುರ: ರೇಡಿಂಗ್‌ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬೆಂಗಳೂರು ಬುಲ್ಸ್‌ನ ಪವನ್‌ ಶೆರಾವತ್‌, ವಿವೊ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶುಕ್ರವಾರ ತಮ್ಮ ತಂಡ, 35-33 ರಲ್ಲಿ ‌ಎರಡು ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಮಣಿಸಲು ನೆರವಾದರು.ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಪವನ್‌ 11 ಪಾಯಿಂಟ್ಸ್‌ ಗಳಿಸಿದರು. 19 ಪಂದ್ಯಗಳನ್ನಾಡಿರುವ ಬೆಂಗಳೂರಿನ ತಂಡ ಈಗ 58 ಪಾಯಿಂಟ್ಸ್‌ ಸಂಗ್ರಹಿಸಿದ್ದು ನಾಲ್ಕನೇ ಸ್ಥಾನದಲ್ಲಿದೆ. ಮುಂಬಾ 18 ಪಂದ್ಯಗಳಿಂದ 54 ಪಾಯಿಂಟ್ಸ್‌ ಕಲೆಹಾಕಿ ಐದನೇ ಸ್ಥಾನದಲ್ಲಿದೆ. …

Read More »

ದಬಾಂಗ್​ ಡೆಲ್ಲಿ ವಿರುದ್ಧ ಬೆಂಗಳೂರು ಬುಲ್ಸ್​ ಟೈ .

ಜೈಪುರ: ಪ್ರೋ ಕಬಡ್ಡಿ ಲೀಗ್​ನಲ್ಲಿ ಮುಂಚೂಣಿ ತಂಡ​ ದಬಾಂಗ್​ ಡೆಲ್ಲಿ ವಿರುದ್ಧ ಪವನ್​ ಶೆರಾವತ್​ ಭರ್ಜರಿ ರೈಡಿಂಗ್​ ನೆರವಿನಿಂದ ಬೆಂಗಳೂರು ಬುಲ್ಸ್​ ಪಂದ್ಯ ಟೈ ಮಾಡಿಕೊಂಡಿದೆ.ಈ ಪಂದ್ಯವನ್ನು ಪವನ್​ ಶೆರಾವತ್​ ಹಾಗೂ ನವೀನ್​ ಕುಮಾರ್​ ನಡುವಿನ ಯುದ್ದ ಎಂದೇ ಪರಿಗಣಿಸಲಾಗಿದ್ದು ಮೊದಲಾರ್ಧದಲ್ಲಿ ಬುಲ್ಸ್​ 19-22 ಅಂಕಗಳ ಹಿನ್ನಡೆ ಅನುಭವಿಸಿತ್ತು. ಪಂದ್ಯದ ದ್ವಿತೀಯಾರ್ಧದಲ್ಲಿ ಮತ್ತೆ ಆರ್ಭಟಿಸಿದ ಡೆಲ್ಲಿ ಕೇವಲ 12 ನಿಮಿಷದಲ್ಲಿ ಬುಲ್ಸ್​ ತಂಡವನ್ನು ಆಲೌಟ್​ ಮಾಡಿ 34-23 ರಲ್ಲಿ ಮುನ್ನಡೆ …

Read More »

ಭರ್ಜರಿ ರೈಡಿಂಗ್​ ನಿಂದ ಗೆಲುವು ಸಾಧಿಸಿದ ಬೆಂಗಾಲ್ ವಾರಿಯರ್ಸ್.

ಪುಣೆ: ಪ್ರೊ ಕಬಡ್ಡಿ ಲೀಗ್​ನ 7 ನೇ ಆವೃತ್ತಿಯ 97 ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ಮಣೀಂದರ್​ ಸಿಂಗ್​ ಅವರ ಭರ್ಜರಿ ರೈಡಿಂಗ್​ ನೆರವಿನಿಂದ ಹರಿಯಾಣ ಸ್ಟೀಲರ್ಸ್​ ವಿರುದ್ಧ 48-36 ಅಂಕಗಳ ಅಂತರದಿಂದ ಬಗ್ಗು ಬಡಿದಿದೆ. ಪುಣೆಯ ಶ್ರೀ ಛತ್ರಪತಿ ಕುಸ್ತಿ ಅಂಗಳದಲ್ಲಿ ನಡೆದ ಲೀಗ್​ 97ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಹರಿಯಾಣ ವಿರುದ್ಧ ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾಯಿತು. ಇದರ ಫಲ ಮೊದಲಾರ್ಧದಲ್ಲೇ 30-14 ರ ಮುನ್ನಡೆ …

Read More »

ಪುಣೇರಿ ಪಲ್ಟನ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಪಾಟ್ಟಾ ಪೈರೇಟ್ಸ್​.

ಪುಣೆ: ಪ್ರೋ ಕಬಡ್ಡಿ ಲೀಗ್​ನ 7ನೇ ಸೀಸನ್​ನಲ್ಲಿ ಪಾಟ್ಟಾ ಪೈರೇಟ್ಸ್​ ಅತಿಥೇಯ ಪುಣೇರಿ ಪಲ್ಟನ್ಸ್​ ವಿರುದ್ಧ 55-33 ಅಂತರದಿಂದ ಭರ್ಜರಿ ಜಯ ಸಾಧಿಸಿದೆ.ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಪುಣೆ ತಂಡ ಪಾಟ್ನಾ ತಂಡಕ್ಕೆ ಸುಲಭ ತುತ್ತಾಯಿತು. ಮೊದಲಾರ್ಧದಲ್ಲೇ 27-17ರಲ್ಲಿ ಮುನ್ನಡೆ ಕಾಯ್ದುಕೊಂಡ ಪಾಟ್ನಾ ಕೊನೆಯವರೆಗೂ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ತನ್ನ ಅಂಕವನ್ನು 55 ಕ್ಕೇರಿಸಿಕೊಂಡಿತು.ಭರ್ಜರಿ ಆಟ ಪ್ರದರ್ಶಸಿದ ಪರ್​ದೀಪ್​ ನರ್ವಾಲ್​ 18 ಅಂಕ ಪಡೆದು ಗೆಲುವಿನ ರೂವಾರಿಯಾದರು. …

Read More »

ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು ಬುಲ್ಸ್​​ ತಂಡ.

ಬೆಂಗಳೂರು: ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್​​ನ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಪಾಟ್ನಾ ಪೈರೇಟ್ಸ್​ ವಿರುದ್ಧ ರೋಚಕ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ ಪಾಟ್ನಾ ವಿರುದ್ಧ 40-39 ಅಂಕಗಳ ಅಂತರದ ರೋಚಕ ಗೆಲುವು ದಾಖಲು ಮಾಡುವ ಮೂಕಲ ಅಂಕಪಟ್ಟಿಯಲ್ಲಿ 43 ಪಾಯಿಂಟ್​ಗಳೊಂದಿಗೆ 2ನೇ ಸ್ಥಾನವನ್ನ ಅಲಂಕಾರ ಮಾಡಿದ್ದು, 54 ಅಂಕಗಳಿಂದ ದಬಾಂಗ್ ದಿಲ್ಲಿ …

Read More »

ಗೆಲುವಿನ ನಗೆ ಬೀರುವಲ್ಲಿ ಯಡವಿದ ಬುಲ್ಸ್​

ಅಹಮದಾಬಾದ್‌:ಬೆಂಗಳೂರು ಬುಲ್ಸ್​ನ ಪವನ್​ ಶೆರಾವತ್​ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ ಸೋಮವಾರ ನಡೆದ ಯುಪಿ ಯೋಧ ವಿರುದ್ಧ 35-33 ಅಂಕಳಿಂದ ಸೋಲು ಕಂಡಿದೆ.ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್​ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್​ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.ಬೆಂಗಳೂರು ತಂಡದ ಪರ ನಾಯಕ ರೋಹಿತ್‌ ಕುಮಾರ್‌ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. …

Read More »

ಯುಪಿ ಯೋಧ ಹಾಗೂ ತಮಿಳ್​ ತಲೈವಾಸ್​ ನಡುವಿನ ಪಂದ್ಯ ಟೈನಲ್ಲಿ , ಪಾಟ್ನಾ ವಿರುದ್ಧ ಹರಿಯಾಣ ಜಯ

ಪಾಟ್ನಾ: ಭರ್ಜರಿ ಪೈಪೋಟಿ ಕಂಡುಬಂದ ಯುಪಿ ಯೋಧ ಹಾಗೂ ತಮಿಳ್​ ತಲೈವಾಸ್​ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ಬಲಿಷ್ಠ ಪಾಟ್ನಾ ಪೈರೇಟ್ಸ್​ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.ಯೋಧ ತಂಡ ಮೊದಲಾರ್ಧದಲ್ಲಿ 16-11 ರಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಲೈವಾಸ್ ರೈಡರ್​ಗಳು ಉತ್ತಮ ಪ್ರದರ್ಶನ ತೋರಿ 28-28 ರಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ಬಲಿಷ್ಠ ಪಾಟ್ನಾ …

Read More »

ಗೆದ್ದು ಬೀಗಿದ ದಬಾಂಗ್ ಡೆಲ್ಲಿ ತಂಡ

ಹೈದರಾಬಾದ್​:ಬುಧವಾರ ತೆಲುಗು ಟೈಟನ್ಸ್​ ವಿರುದ್ಧ ಕೇವಲ ಒಂದು ಅಂಕದಿಂದ ಗೆಲುವು ಸಾಧಿಸಿದ್ದ ದಬಾಂಗ್​ ಡೆಲ್ಲಿ ಇಂದು ನಡೆದ ತಮಿಳ್​ ತಲೈವಾಸ್​ ವಿರುದ್ಧವೂ ಒಂದು ಅಂಕ ಅಂತರದ ರೋಚಕ ಜಯ ಸಾಧಿಸಿದೆ.ಮೊದಲಾರ್ಧದಲ್ಲಿ ಆರ್ಭಟಿಸಿದ ತಮಿಳ್​ ತಲೈವಾಸ್​ ದಬಾಂಗ್ ವಿರುದ್ಧ 18-11ರ ಮುನ್ನಡೆ ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ದಬಾಂಗ್​ ಡೆಲ್ಲಿ ಕೊನೆಯ ರೈಡ್​ನಲ್ಲಿ ತಲೈವಾಸ್​ ತಂಡದ ಮಂಜಿತ್​ ಚಿಲ್ಲರ್ ಕೋರ್ಟ್​ನ ಕೊನೆಯ ಗೆರೆಯನ್ನು ತುಳಿದರು. ಪರಿಣಾಮ ಎದುರಾಳಿಯನ್ನು ಹಿಡಿದರೂ ಅಂಕ …

Read More »

ವಾರಿಯರ್ಸ್ ಗೆ ಮಣಿದ ಯುಪಿ ಯೋಧರು

ಹೈದರಾಬಾದ್​: ಪ್ರೋ ಕಬಡ್ಡಿ ಟೂರ್ನಿಯ 6 ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್ ವಿರುದ್ಧ​ ಯುಪಿ ಯೋಧರಿಗೆ ಹೀನಾಯ ಸೋಲಾಗಿದೆ. ರೈಡಿಂಗ್‌ ಹಾಗು ಡಿಫೆಂಡಿಂಗ್ ಎರಡಲ್ಲೂ ಮಿಂಚಿದ ಬೆಂಗಾಲ್‌ ತಂಡ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.ವಾರಿಯರ್ಸ್ ತಂಡ​ ಯುಪಿ ಯೋಧ ತಂಡವನ್ನು 4 ಬಾರಿ ಆಲೌಟ್​ ಮಾಡುವ ಮೂಲಕ ಅದ್ಭುತ ಆಟ ಪ್ರದರ್ಶಿಸಿತು.ವಾರಿಯರ್​ ತಂಡದ ರೈಡರ್​ ಇಸ್ಮಾಯಿಲ್​ ನಬಿಬಕ್ಷ್​ 10 ಅಂಕಗಳಿಸಿ ಸೂಪರ್​ ರೈಡರ್​​ ಎನಿಸಿಕೊಂಡರು. ಇವರಿಗೆ ಸಾಥ್​ …

Read More »

ದಬಾಂಗ್​ ಡೆಲ್ಲಿ ವಿರುದ್ಧ ಟೈಟನ್ಸ್ ಪರಾಭವ

ಹೈದರಾಬಾದ್​: ಪ್ರೋ ಕಬಡ್ಡಿ ಲೀಗ್​ನ 7ನೇ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ತೆಲುಗು ಟೈಟನ್ಸ್​ ಕೇವಲ ಒಂದು ಅಂಕ ಅಂತರದ ರೋಚಕ ಸೋಲು ಕಂಡಿದೆ.ಸೂರಜ್​ ದೇಸಾಯಿ(18) ಏಕಾಂಗಿ ಹೋರಾಟದ ನಡುವೆಯೂ ತೆಲುಗು ಟೈಟನ್ಸ್​ ಗೆಲುವಿನ ಹತ್ತಿರ ಬಂದು ಕೇವಲ ಒಂದು ಅಂಕದಿಂದ ಪಂದ್ಯ ಕಳೆದುಕೊಂಡಿತು. ದಬಾಂಗ್​ ಹಲವಾರು ಬಾರಿ ಹಿನ್ನಡೆಯನುಭವಿಸಿದರೂ ತಿರುಗಿ ಬಿದ್ದು, ಕೊನೆಯಲ್ಲಿ ಒಂದು ಅಂಕದಿಂದ ಗೆಲುವು ತನ್ನದಾಗಿಸಿಕೊಂಡಿತುದಬಾಂಗ್​ ಡೆಲ್ಲಿ ಪರ ರೈಡರ್​ ನವೀನ್​ ಕುಮಾರ್​ 14 ಅಂಕಗಳಿಸಿ …

Read More »
error: Content is protected !!