Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೀದರ್

ಬೀದರ್

ನೀತಿ ಸಂಹಿತೆ ಹಿನ್ನೆಲೆ ಸಚಿವ ಪ್ರಭು ಚೌವ್ಹಾಣ್​ ಕಾರ್ಯಕ್ರಮಗಳು ರದ್ದು.

ಬೀದರ್: ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್​, ಕಳೆದ ನಾಲ್ಕು ದಿನಗಳಿಂದ 100 ಕೋಟಿ ರೂ.ಗಳಿಗೂ ಅಧಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಗ್ರಾಮ ಪಂಚಾಯತ್​​ ಚುನಾವಣೆ ಕಾರಣ ತಕ್ಷಣವೇ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಇನ್ನೂ 100 ಕೋಟಿ ರೂ. ವೆಚ್ಚದ ಕಾಮಗಾರಿಗಳ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಅವರು ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಹಾಕಿಕೊಂಡಿದ್ದ ಗ್ರಾಮ ಸಂಚಾರ ಕಾರ್ಯಕ್ರಮ ಸಹ ರದ್ದಾಗಿದೆ. ಔರಾದ್ ತಾಲೂಕಿನ ವಡಗಾಂವ್, …

Read More »

ಬಿಎಸ್ ವೈಗೆ ಸಿದ್ದು ಖಡಕ್ ಎಚ್ಚರಿಕೆ

ಬೀದರ್‌: ಬಡವರ ಹಸಿವು ನಿವಾರಣೆ ಮಾಡಲು ನಾವು ಆರಂಭಿಸಿದ್ದ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ವಿತರಣೆ ಕಡಿಮೆ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡ್ತೇವೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಭಾನುವಾರ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಸಿಎಎ ವಿರುದ್ಧದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳು ಪ್ರತಿಯೊಬ್ಬರಿಗೆ 7ಕೆಜಿ ಅಕ್ಕಿ …

Read More »

ಕೌಟುಂಬಿಕ ಕಲಹ : ಮಹಿಳಾ ಪಿಎಸ್ ಐ ನೇಣಿಗೆ ಶರಣು

ಬೀದರ್: ನೇಣು ಬಿಗಿದುಕೊಂಡು ಅಬಕಾರಿ ಇಲಾಖೆಯ ಪ್ರೊಬೆಷನರಿ ಮಹಿಳಾ ಪಿಎಸ್‌ಐ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವಕಲ್ಯಾಣ ನಗರದಲ್ಲಿ ರವಿವಾರ ನಡೆದಿದೆ. ರೇಖಾ ಕರಣಕುಮಾರ ಕೋರಿ (29) ಆತ್ಮಹತ್ಯೆಗೆ ಮಾಡಿಕೊಂಡ‌ ಮಹಿಳಾ ಪಿಎಸ್‌ಐ. ಮೂಲತಃ ಆಳಂದ ತಾಲೂಕಿನ ಕಡಗಂಚಿ ಮೂಲದವರಾಗಿರುವ ರೇಖಾ ಅವರು, ಬಸವಕಲ್ಯಾಣದ ಶಿವಪೂರ ರಸ್ತೆಯಲ್ಲಿರುವ ಸಂಜುಕುಮಾರ ನಾಗರಾಳೆ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಎಂಟು ತಿಂಗಳಿನಿಂಡ ಬಸವಕಲ್ಯಾಣದಲ್ಲಿ ಪ್ರೊಬೆಷನರಿ ಅಬಕಾರಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ರೇಖಾ …

Read More »

‘ಕುರಿ ಕಾಯೋ ತೋಳ ಅಂದ್ರೆ, ತೋಳವು ನನಗೆ ಸಂಬಳವೇ ಬೇಡ ಎಂದಿತ್ತಂತೆ’ : ಆನಂದ್ ಸಿಂಗ್ ಗೆ ಸಿದ್ದು ವ್ಯಂಗ್ಯ

ಬೀದರ್: ‘ಕುರಿ ಕಾಯೋ ತೋಳ ಅಂದರೆ, ತೋಳವು ನನಗೆ ಸಂಬಳವೇ ಬೇಡ ಎಂದಿತ್ತಂತೆ’ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ವ್ಯಂಗ್ಯವಾಡಿದರು. ಅರಣ್ಯವನ್ನು ಒತ್ತುವರಿ ಮಾಡಿರುವವರಿಗೆ ಅರಣ್ಯ ಇಲಾಖೆ ನೀಡಲಾಗಿದೆ. ಈ ಕುರಿತ ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿದೆ. ಹೀಗಾಗಿ, ಇಂತಹವರಿಗೆ ಈ ಖಾತೆಯನ್ನೇ ನೀಡಬಾರದಿತ್ತು. ಹೀಗಾಗಿ, ಆನಂದ್‌ಸಿಂಗ್ ಅವರೇ …

Read More »

ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಧರಣಿ.

ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿಯ ನಗರ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು. ಸಂಘದ ಪದಾಧಿಕಾರಿಗಳು ನಿಯೋಗದೊಂದಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ …

Read More »

ರಾಜಕಾರಣಿಗಳನ್ನು ಕುಣಿಸಿದ ಹಾವೇರಿ ಹನುಮಂತಪ್ಪನ ಗಾನಸುಧೆ

ಬೀದರ್: ಗಾನ ಕೋಗಿಲೆ ಕುರಿಗಾಹಿ ಹನುಮಂತ ಅಂದರೆ ಇಡೀ ಕರ್ನಾಟಕದ ಜನ ಪ್ರೀತಿಸುತ್ತಾರೆ. ಮೈಕ್ ಹಿಡಿದು ತನ್ನ ಧ್ವನಿ ಪಟ್ಟಿಗೆಯಿಂದ ಗಾನ ಲಹರಿಯನ್ನು ಹರಿಬಿಟ್ಟರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಹನುಮಂತ ಇದ್ದಲ್ಲಿ ಜನ ಸಾಗರವೇ ಹರಿದು ಬರುತ್ತದೆ. ಇದು ಅವನ ಕಂಠಕ್ಕಿರುವ ತಾಕತ್ತು. ಆದರೆ ಈಗ ಬೀದರ್ ನಲ್ಲಿ ಹನುಮನ ಹಾಡಿಗೆ ಸಚಿವ ಪ್ರಭು ಚವ್ಹಾಣ್ ಹಾಗೂ ಸಂಸದರಾದ ಭಗವಂತ ಖೂಬಾ ಹೆಜ್ಜೆ ಹಾಕಿದ್ದಾರೆ. ಬೀದರ್ ನ ಪಶುಪಾಲನೆ ಮತ್ತು …

Read More »

ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಶಾಲೆಗೆ ಕೆ‌ಪಿಸಿಸಿ ಕಾರ್ಯಾಧ್ಯಕ್ಷ ಭೇಟಿ.

ಬೀದರ್: ಮೋದಿ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿರುವ ಬೀದರ್​​ನ ಶಾಹಿನ್ ಶಿಕ್ಷಣ ಸಂಸ್ಥೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ನೀಡಿದ್ದಾರೆ. ನಾಟಕದಲ್ಲಿ ಪಾತ್ರ ಮಾಡಿದ್ದ ಬಾಲಕಿಯನ್ನು ಭೇಟಿಯಾದ ಖಂಡ್ರೆ, ಹೆದರುವ ಅಗತ್ಯವಿಲ್ಲ, ನಾವು ನಿನ್ನ ಜೊತೆಗಿದ್ದೇವೆ ಎಂದು ಅಭಯ ನೀಡಿದರು. ಈ ವೇಳೆ ಬಾಲಕಿಯ ವಿದ್ಯಾಭ್ಯಾಸದ ಬಗ್ಗೆ ಕೇಳಿದ ಖಂಡ್ರೆ ಬಾಲಕಿಗೆ ಕನ್ನಡವನ್ನು ಕಲಿಯುವಂತೆ ತಿಳಿಸಿದರು. ಖಂಡ್ರೆಗೆ ಬೀದರ್ ಶಾಸಕ ರಹೀಂ ಖಾನ್, ಎಂಎಲ್​ಸಿ ಅರವಿಂದ …

Read More »

ಬಿಸಿಯೂಟ ನೀಡದಿರುವದನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ.

ಬಳ್ಳಾರಿ, ಫೆಬ್ರವರಿ 05: ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಊಟ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಮಕ್ಕಳು ಪ್ರತಿಭಟನೆ ಮಾಡಿದ್ದಾರೆ. ಹೌದು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸರಿಯಾದ ಊಟ ಕೊಡದ ಕಾರಣ, ಮಕ್ಕಳು ರೋಡಿಗೆ ಇಳಿದು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ. ಕಳೆದ ಮೂರು …

Read More »

ಶಾಲಾ ನಾಟಕದಲ್ಲಿ ಮೋದಿಗೆ ಅವಮಾನ; ಬಂಧಿತರ ಭೇಟಿಯಾದ ರಿಜ್ವಾನ್ ಅರ್ಷದ್.

ಬೀದರ್ : ಪ್ರಧಾನಿ ಮೋದಿ ಅವರನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಬೀದರ್ ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಾಹೀನ್ ನ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯ ತಾಯಿಯ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿದ್ದು, ಇಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಪ್ರಕರಣದಲ್ಲಿ ಬಂಧಿಯಾದವರನ್ನು ಬೀದರ್ ನ ಜೈಲಿನಲ್ಲಿ ಭೇಟಿಯಾದರು. ನಿನ್ನೆಯಷ್ಟೇ ಅಸಾದುದ್ದೀನ್ ಓವೈಸಿ ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಮತ್ತು ಶಾಲೆಯ ವಿದ್ಯಾರ್ಥಿನಿ ತಾಯಿ ಭೇಟಿ ಮಾಡಿ ಅಗತ್ಯ …

Read More »

ಜವರಾಯನ ಅಟ್ಟಹಾಸ: ಪಂಕ್ಚರ್​ ಹಾಕುತ್ತಿದ್ದವರ ಮೇಲೆ ಲಾರಿ ಹರಿದು ಮೂವರು ಸಾವು

ಬೀದರ್: ಲಾರಿ ಹರಿದು ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೀದರ್ ತಾಲೂಕಿನ ರಾಷ್ಟೀಯ ಹೆದ್ದಾರಿ 09ರ ಮಿನಕೇರಾ ಕ್ರಾಸ್ ಬಳಿ ಬುಧವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ. ಮೃತ ದುರ್ದೈವಿಗಳನ್ನು ಅನ್ಸರ್ ಬಸಂತಪೂರ್, ವಿಜಯ ಕುಮಾರ್ ಬಸಂತಪೂರ್ ಮತ್ತು ಇಸ್ಮೈಲ್​ ಎಂದು ಗುರುತಿಸಲಾಗಿದೆ. ಗೂಡ್ಸ್ ಕ್ಯಾರಿಯರ್​ ವಾಹನದಲ್ಲಿ ಈರುಳ್ಳಿ ತುಂಬಿಕೊಂಡು ಹೈದರಾಬಾದ್​ಗೆ ಹೊರಟ್ಟಿದ್ದರು. ವಾಹನ ಪಂಕ್ಚರ್ ಆಗಿದ್ದಕ್ಕೆ ಮಿನಕೇರಾ ಕ್ರಾಸ್ ಬಳಿಯ ಫ್ಲೈಓವರ್ ಮೇಲೆ ವಾಹನ ನಿಲ್ಲಿಸಿ ಪಂಕ್ಚರ್ …

Read More »

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಪೋಲೀಸ್ ಮೆರವಣಿಗೆ.

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ರಾಷ್ಟ್ರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಧ್ಯಾಹ್ನ 12 ಗಂಟೆಗೆ ಬೃಹತ್‌ ರ್‍ಯಾಲಿ ನಡೆಸಲಿರುವ ಪ್ರಯುಕ್ತ ನಗರದಲ್ಲಿ ಪೊಲೀಸರು ಪಥ ಸಂಚಲನ ಆರಂಭಿಸಿದರು.ರೋಟರಿ ವೃತ್ತ ಸಮೀಪದ ಸಾಯಿ ಆದರ್ಶ ಶಾಲೆಯಿಂದ ಆರಂಭವಾದ ಪಥಸಂಚಲನ, ಜನರಲ್‌ ಕಾರ್ಯಪ್ಪ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್‌ ವೃತ್ತ, ಹರಳ್ಳ ವೃತ್ತದ ಮಾರ್ಗವಾಗಿ ಗಣೇಶ ಮೈದಾನಕ್ಕೆ ಬರಲಿದೆ.ರಾಷ್ಟ್ರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಧನ್ನೂರ, …

Read More »

ಬಿಮ್ಸ್ ನಲ್ಲಿ ಸಿಗ್ತಿಲ್ಲ ಬಾಣಂತಿಯರಿಗೆ ಬಿಸಿ ನೀರು..

ಬೀದರ್ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಬಾನಂತಿಯರಿಗೆ ಸಿಗುತ್ತಿಲ್ಲ ಬಿಸಿ ನೀರು ಬಿಸಿ ನೀರುಸಿಗದೆ ಚಳಿಯಲ್ಲಿ ಬಿಸಿ ನೀರು ತರಲು ಬಾನಂತಿಯರ ಪೋಷಕರು ಪರದಾಟ 150 ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡದಲ್ಲಿಲ್ಲ ಬಾನಂತಿಯರಿಗೆ ಬೇಕಾದ ಸೌಲಭ್ಯ ಸೋಲಾರ್ ವಾಟರ್ ಹೀಟರ್, ಗೀಜರ್ ಇಲ್ಲದೇ ಬಿಸಿ ನೀರು ಸಿಗದೆ ಪರದಾಟ ನಡೆಸಬೇಕಾಗಿದೆ ರೋಗಿಗಳು 10 ರೂಪಾಯಿಗೆ ಒಂದು ಬಾಟಲ್ ಬಿಸಿ ನೀರು ತಂದು ಬಾನಂತಿಯರಿಗೆ ಕೊಡುತ್ತಿರುವ ಪೋಷಕರು ಬಾನಂತಿಯರ ನೋವು ಆಲಿಸಬೇಕಾದ …

Read More »
error: Content is protected !!