Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ

ಮಕ್ಕಳ ಮುಗುಳು ನಗೆ ಮಾಸ ಪತ್ರಿಕೆ ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವ ಆಚರಣೆ.

ಆನೇಕಲ್: ಈ ಬಾರಿ ಕೆಲವು ಗೊಂದಲಗಳ ಮಧ್ಯೆಯು ರಾಜ್ಯದಲ್ಲಿ ಕನ್ನಡಿಗರ ಹಬ್ಬವಾದ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದು ಅದರಲ್ಲೂ ಈ ಬಾರಿ ಆನೇಕಲ್ ನಲ್ಲಿ ಕನ್ನಡ ರಾಜ್ಯೋತ್ಸವ ಸಾಕಷ್ಟು ವಿಶೇಷವಾಗಿತ್ತು , ಮಕ್ಕಳೆ ರೂಪಿಸಿರುವ ಮಾಸ ಪತ್ರಿಕೆಯೊಂದು ಕನ್ನಡ ರಾಜ್ಯೋತ್ಸವದಲ್ಲಿ ಬಿಡುಗಡೆಯಾಗಿದ್ದು ವಿಶೇಷ, “ಮಕ್ಕಳ ಮುಗುಳು ನಗೆ” ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಆನೇಕಲ್ನ ಶಾಸಕರಾದ ಬಿ. ಶಿವಣ್ಣ ರವರು “ಸರ್ಕಾರಿ ಶಾಲೆ ಮಕ್ಕಳು ಪತ್ರಿಕೆ ತರ್ತಾ …

Read More »

ಆನೇಕಲ್ ಪೋಲಿಸ್ ಠಾಣಾ ವತಿಯಿಂದ ಜನಸಂಪರ್ಕ ಸಭೆ

ಆನೇಕಲ್: ಜನರ ಸಮಸ್ಯೆಯನ್ನು ನೇರವಾಗಿ ಅವರ ಬಳಿಯೇ ಒಂದು ಕಾರ್ಯಕ್ರಮ ಮಾಡುವ ಮೂಲಕ ಸಮಸ್ಯೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಪೋಲಿಸ್ ಠಾಣೆಗಳ ವತಿಯಿಂದ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರಂತೆಯೇ ಇಂದು ಬೆಂಗಳೂರು ಹೊರವಲಯ ಆನೇಕಲ್ ಪೋಲಿಸ್ ಠಾಣಾ ವತಿಯಿಂದ ಜನ ಸಂಪರ್ಕ ಸಭೆ ಏರ್ಪಡಿಸಲಾಗಿತ್ತು.ಹೌದು ಇಂದು ಆನೇಕಲ್ ಪೋಲಿಸ್ ಠಾಣಾ ವತಿಯಿಂದ ಲಕ್ಷ್ಮೀ ವೆಂಕಟೇಶ್ವರ ಸಭಾಂಗಣದಲ್ಲಿ ಏರ್ಪಡಿಸಿದ್ದ ಆನೇಕಲ್ ಪಟ್ಟಣದ ಹಳೆಯ ವಾರ್ಡ್ ನಂಬರ್ 1 ರಿಂದ 9 …

Read More »

ರಸ್ತೆ ತುಂಬೆಲ್ಲಾ ಗುಂಡಿ ವಾಹನ ಸವಾರರು ಹಾಗು ಪಾದಚಾರಿಗಳ ಪರದಾಟ

ಬೆಂಗಳೂರು: ಆ ರಸ್ತೆಯಲ್ಲಿ ಓಡಾಡಬೇಕು ಅಂದ್ರೆನೇ ಅಲ್ಲಿನ ನಿವಾಸಿಗಳು ಸ್ವಲ್ಪ ಹೆದರುತ್ತಾರೆ ಇನ್ನು ದೊಡ್ಡ ಮನಸ್ಸು ಮಾಡಿ ಹೋದ್ರೆ ಕೈಕಾಲು ಮುರಿದು ಕೊಂಡು ಆಸ್ಪತ್ರೆ ಸೆರೋದು ಗ್ಯಾರಂಟಿ,ಮಳೆ ಬಂತು ಅಂದ್ರೆ ಕೇಳೋದೆ ಬೇಡ ಇಲ್ಲಿನ ನಿವಾಸಿಗಳ ಹಾಗು ವಾಹನ ಸವಾರರು ಪಾಡು ಎಂಬಾತಾಗಿದ್ದು ಈ ಬಗ್ಗೆ ಜನ ಪ್ರತಿನಿಧಿಗಳಿಗೆ ಹಾಗು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಸಹ ಕ್ಯಾರೆ ಅನ್ನದೆ ಇರೋದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಕಾರ್ಪೊರೇಟರ್ …

Read More »

ವೈದ್ಯರಿಲ್ಲದೆ ರೋಗಿಗಳ ಪರದಾಟ, ಮಾಹಿತಿ ಸಿಕ್ಕರೂ ಸ್ಥಳಕ್ಕೆ ಬಾರದ ಆರೋಗ್ಯಾಧಿಕಾರಿ

ವೈದ್ಯರಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರದಲ್ಲಿ ನಡೆದಿದೆ. ಸಿಂಗಸಂದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರವಿದ್ದು ವೈದ್ಯರುಯಾವುದೇಮಾಹಿತಿ ನೀಡದೆ ಏಕಾಏಕಿ ರಜೆ ಹಾಕಿದ್ದು ಮಾಹಿತಿ ತಿಳಿಯದ ನೂರಾರು ರೋಗಿಗಳು ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯರಿಗಾಗಿ ಕಾದು ಕುಳಿತಿದ್ದರು. 12 ಗಂಟೆಯಾದರೂ ವೈದ್ಯರು ಬಾರದ ಹಿನ್ನೆಲೆ ಹಲವು ರೋಗಿಗಳು ಅಸ್ವಸ್ಥರಾಗಿ ಆಸ್ಪತ್ರೆಯ ಮುಂಭಾಗದಲ್ಲೇ ಮಲಗಿದ್ದರು . ಇನ್ನು …

Read More »

ನೂರಾರು ಜನರಿಂದ ಅಂತಾರಾಷ್ಟ್ರೀಯ ಯೋಗದಿನ ಆಚರಣೆ

ಇಂದು 5 ನೇ ಅಂತಾರಾಷ್ಟ್ರೀಯ ಯೋಗದಿನವಾಗಿದ್ದು ಈ ಹಿನ್ನೆಲೆ ದೇಶಾದ್ಯಂತ ಬೃಹತ್ ಯೋಗ ಶಿಬಿರಗಳನ್ನ ಆಯೋಜಿಸುವ ಮೂಲಕ ಯೋಗ ದಿನವನ್ನು ಆಚರಿಸಲಾಗುತ್ತಿದೆ, ಅಂತೆಯೇ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಸಾರ್ವಜನಿಕವಾಗಿ ಯೋಗದಿನವನ್ನು ಅಂತಾರಾಷ್ಟ್ರೀಯ ಯೋಗದಿನ ಆಚರಣಾ ಸಮಿತಿಯಿಂದ ಆಚರಿಸಲಾಯಿತು. ಆನೇಕಲ್ ಪಟ್ಟಣದ ಶ್ರೀರಾಮ ಕುಟೀರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನಾಚಾರಣೆಯಲ್ಲಿ ಪಟ್ಟಣದ ನೂರಾರು ಜನ ಯೋಗಪಟುಗಳು ಹಾಗು ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿ ಯೋಗದ ಆಸನಗಳನ್ನು ಪ್ರದರ್ಶಿಸಿವ ಮೂಲಕ 5 ನೇ ಅಂತಾರಾಷ್ಟ್ರೀಯ …

Read More »

ಅಹಿಂಸೆ ಪ್ರತಿಪಾದನೆಗಾಗಿ 19 ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿರುವ ಜೈನ ಮುನಿ.

ಪ್ರಪಂಚದಲ್ಲಿ ಅಹಿಂಸೆ ಸಮರತೆ ನೈತಿಕತೆ ವ್ಯಸನಮುಕ್ತಿಗಾಗಿ ಜೈನ ಮುನಿಯೊಬ್ಬರು ಮೂರು ದೇಶ 19 ರಾಜ್ಯಗಳಲ್ಲಿ ಉಪದೇಶ ಮಾಡುತ್ತ ಸುಮಾರು19 ಸಾವಿರ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಆ ಜೈನ ಮುನಿ ಕರ್ನಾಟಕ ಗಡಿಭಾಗ ಅತ್ತಿಬೆಲೆಗೆ ಪ್ರವೇಶಿಸಿದ್ದಾರೆ.ಇನ್ನು ಜೈನ ಮುನಿ ಆಚಾರ್ಯ ಮಾಹಾಶ್ರಮಣ್ ಸ್ವಾಮಿಜಿಯವರನ್ನು ಇಲ್ಲಿನ ಜೈನ ಧರ್ಮದ ಸುಮಾರು 10,000 ಜನರು ಬರಮಾಡಿಕೊಂಡಿದ್ದು ಮಹಾಶ್ರಮಣ್ ಜೈನ ಮುನಿ 2014 ರ ನವಂಬರ್ 14 ರಂದು ದೆಹಲಿಯ ಕೆಂಪುಕೋಟೆಯಿಂದ ಪ್ರಪಂಚದಲ್ಲಿ ಸಮರಸತೇ …

Read More »

ಟಿಕ್ ಟಾಕ್ ಹುಚ್ಚೇರಿದ್ದ ಯುವಕನ ಸ್ಪೈನಲ್ ಕಾರ್ಡ್ ಮುರಿತ.

ಟಿಕ್ ಟಾಕ್ ಹುಚ್ಚೇರಿದ್ದ ಯುವಕ ತನ್ನ ಸ್ಪೈನಲ್ ಕಾರ್ಡ್ ಮುರಿದುಕೊಂಡ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಗೆರೆ ಗ್ರಾಮದಲ್ಲಿ ನಡೆದಿದೆ. ಸ್ನೇಹಿತನ ಜೊತೆ ಟಿಕ್ ಟಾಕ್ ವಿಡಿಯೋ ಮಾಡುತ್ತಾ ಸಾಹಸ ಮಾಡಲು ಹೋಗಿ ಸ್ಪೈನಲ್ ಕಾರ್ಡ್ ಮುರಿದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆಸ್ಪತ್ರೆಯ ಚಿಕಿತ್ಸೆಗೆ 10 ಲಕ್ಷ ರೂ ಖರ್ಚಾಗಲಿದ್ದು ಆಸ್ಪತ್ರೆಯ ಚಿಕಿತ್ಸೆಗೆ 10 ಲಕ್ಷ ರೂ ಖರ್ಚಾಗಲಿದ್ದು ಸಹಾಯ ಆಸ್ತ ಚಾಚೂತ್ತಿರುವ ಬಡ …

Read More »

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ, ನವಜಾತ ಶಿಶು ಸಾವು

ವೈದ್ಯರ‌ ನಿರ್ಲಕ್ಷ್ಯ ದಿಂದ ನವಜಾತ ಶಿಶು ಸಾವಾನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿಗಳಾದ ಶಶಿಧರ್ ಮತ್ತು ರಂಜಿತಾ ಎಂಬುವರಿಗೆ ಸೇರಿದ ಮಗುವಾಗಿದೆ. ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.ಆದ್ರೇ ವೈದ್ಯರಿಲ್ಲದೆನೆ ನರ್ಸ್ ಕಡೆಯಿಂದ ಹೆರಿಗೆ ಮಾಡಿಸಿದ್ದರು. ಮಗು ಉಸಿರಾಟದ ತೊಂದರೆ ಇದೇ ಎಂದು ನರ್ಸ್ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಆದ್ರೇ ಖಾಸಗಿ …

Read More »

ಶಶಿಕಲಾ ಭೇಟಿಗೆ ಆಗಮಿಸಿದ ಟಿಟಿವಿ ದಿನಕರನ್

ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಶಶಿಕಲಾ ಭೇಟಿಗೆ ಇಂದು ಟಿಟಿವಿ ದಿನಕರನ್ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಾತನಾಡಲು ವಿಷೇಶ ಅನುಮತಿ ಪಡೆದಿರುವ ಟಿಟಿವಿ ದಿನಕರನ್ ತಮ್ಮ ಪಕ್ಷದ ಮುಖಂಡರುಗಳು ಜೊತೆ ಶಶಿಕಲಾರ ಭೇಟಿ ಮಾಡಿ ಶಶಿಕಲಾ ಆರೋಗ್ಯದ ಬಗ್ಗೆ ಮುಂದಿನ ತಮಿಳುನಾಡಿನ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. Share

Read More »

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಪ್ರತಿಭಟನೆ

ವೈಧ್ಯರ ಮೇಲಿನ ಹಲ್ಲೆ ಖಂಡಿಸಿ ಇಂದು ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಆನೇಕಲ್ನ ಚಂದಾಪುರದಲ್ಲಿರುವ ನಾರಾಯಣ ಹೃದಯಾಲಯ, ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಪ್ರತಿಭಟನೆಗೆ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಸುಮಾರು ೩೦೦ ಕ್ಕು ನಾರಾಯಣ ಹೃದಯಲಯದ ವೈದ್ಯರು ಬೆಂಬಲ ನೀಡಿದ್ದಾರೆ, ಇನ್ನೂ ತುರ್ತು ಪರಿಸ್ಥಿಯಲ್ಲಿ ಹೃದಯಾಘಾತ, ಅಪಘಾತದಂತಹ ಪ್ರಕರಣಗಳಿಗೆ ಕೂಡಲೆ ಚಿಕಿತ್ಸೆ ನೀಡುವುದಾಗಿ ನಾರಾಯಣ ಹೃದಯಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದಾರೆ. Share

Read More »

ಕ್ರೈನ್ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು.

ಪಾದಚಾರಿಗೆ ಕ್ರೈನ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದಲ್ಲಿ ಸಂಭವಿಸಿದೆ. ಅತ್ತಿಬೆಲೆಯ ಚಾಮರಾಜನಗರದ ನಿವಾಸಿ ಕೆ.ಎಂ.ಮಹೇಂದ್ರ(29) ಸಾವನಪ್ಪಿದ ದುರ್ದೈವಿ. ಕ್ರೈನ್ ಚಾಲಕ ಎತ್ತರದಲ್ಲಿದ್ದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹೇಂದ್ರ ಕಾಣದೆ ಅವಘಡ ಸಂಭವಿಸಿದೆ. ಅಪಘಾತದ ನಂತರ ಕ್ರೈನ್ ಚಾಲಕ ಪರಾರಿಯಾಗಿದ್ದಾನೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಪೋಲಿಸರು …

Read More »

ಗೋರಿಗಳನ್ನು ಒಡೆದು ಹಾಕಿದ ದುಷ್ಕರ್ಮಿಗಳನ್ನು ಬಂದಿಸುವಂತೆ ಪೊಲೀಸ್ ಠಾಣೆಗೆ ಮುತ್ತಿಗೆ.

ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರ ಖಬರ್ ಸ್ಥಾನದಲ್ಲಿನ ಗೋರಿಗಳನ್ನು ಒಡೆದು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದನ್ನು ಖಂಡಿಸಿ ಇಂದು ಮುಸ್ಲಿಂಮರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ. ಸರ್ಜಾಪುರ ಗ್ರಾಮದಲ್ಲಿರುವ ಖಬರ್ ಸ್ಥಾನದಲ್ಲಿದ್ದ ಸುಮಾರು 50 ಗೋರಿಗಳನ್ನು ಒಡೆದು ಹಾಕಿ ಕೋಮುಗಲಭೆ ಸೃಷ್ಟಿಸಲಿ ಯತ್ನಿಸಿದ್ದರು ಈ ಸಂದರ್ಭದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದು ಅಂದು ಸ್ಥಳಕ್ಕೆ …

Read More »

ದಲಿತ ಯುವಕನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ

ದಲಿತ ಯುವಕನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಇಂದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಾಪ್ ಎಂಬ ದಲಿತ ಯುವನನ್ನು ಬೆತ್ತಲೆಗೊಳಿಸಿ ಗುಂಡ್ಲುಪೇಟೆಯಲ್ಲಿ ಪೈಶಾಚಿಕ ಕೃತ್ಯ ವೆಸಗಿದ್ದರು. ಇದರ ಹಿನ್ನೆಲೆಯಲ್ಲಿ ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮೂಲಕ ಆರೋಪಿಗಳನ್ನು ಬಂದಿಸುವಂತೆ ಆಗ್ರಹಿಸಿದರು. ಚಾಮರಾಜನಗರ ಲೋಕಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಹಾಗೂ …

Read More »

ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು.

ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಕೆರೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕೆರೆಯಲ್ಲಿ ಈಜಲು ಹೋಗಿ ರೋಷನ್ 14 ವರ್ಷವಿದ್ಯಾರ್ಥಿ ನೀರು ಪಾಲಾಗಿದ್ದಾನೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನುರಿತ ಈಜುಗಾರರು ಶವ ಹೊರತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಅಭಿವೃದ್ಧಿ ಹೆಸರಲ್ಲಿ ಪುಟ್ಬಾತ್ ವ್ಯಾಪಾರಿಗಳ ತೆರವು

ಕೈಗಾರಿಕಾ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪುಟ್ಬಾತ್ ವ್ಯಾಪಾರಿಗಳನ್ನು ತೆರವು ಗೊಳಿಸಿದ ಹಿನ್ನೆಲೆ ನೂರಾರು ಬೀದಿ ಬದಿ ವ್ಯಾಪಾರಿಗಳು ಪೋಲಿಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದಂತಹ ಘಟನೆ ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 300 ರಕ್ಕೂ ಹೆಚ್ಚು ಜನ ಹೊಟ್ಟೆ ಪಡಿಗಾಗಿ ಬೀದಿ ಬದಿಯಲ್ಲಿ ಅಂಗಡಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದು ಇಂದು …

Read More »
error: Content is protected !!