Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ

ಮಂಡ್ಯ

ಅಂಬರೀಶ್ ಮೇಲಿನ ಪ್ರೀತಿಗೆ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ?

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಭೌತಿಕವಾಗಿ ನಮ್ಮನ್ನು ಅಗಲಿ ಎರಡು ವರ್ಷ ಆಗಿದ್ದರೂ ಜನಮಾನಸದಲ್ಲಿ ಅವರು ಎಂದಿಗೂ ಚಿರಸ್ಥಾಯಿಯಾಗಿದ್ದಾರೆ. ಅವರ ಮೇಲಿನ ಪ್ರೀತಿ, ಅಭಿಮಾನ ಜನರಲ್ಲಿ ಹಾಗೆಯೇ ಇದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಅಂಬರೀಶ್ ಅವರ ಫೋಟೋ ಇಟ್ಟು ಪೂಜೆಸಲಾಗುತ್ತಿದೆ. ಅಲ್ಲದೇ, 8 ಲಕ್ಷ ರೂ. ನಿಧಿ ಸಂಗ್ರಹದ ಮೂಲಕ ‘ಅಂಬಿ ಅಮರ’ ದೇವಾಲಯ ನಿರ್ಮಿಸುವ ಮೂಲಕ ಮೆಚ್ಚಿನ ನಟನಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ರೆಬೆಲ್ …

Read More »

ಕೊರೋನಾದಿಂದ ಮುಕ್ತವಾದ ಯುವಕನಿಗೆ ಚಪ್ಪಾಳೆ ಮೂಲಕ ಸ್ವಾಗತ

ಮಂಡ್ಯ: ಕೋವಿಡ್‌-19ನಿಂದ ಗುಣಮುಖರಾದ ಮಂಡ್ಯದ ಸ್ವರ್ಣಸಂದ್ರದ ನಿವಾಸಿ ವಿನಯ್ ಮಂಗಳವಾರ ಮನೆಗೆ ಮರಳಿದರು. ಬಡಾವಣೆಯ ಜನರು ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದರೆ, ಮನೆಯವರು ಆರತಿ ಬೆಳಗಿ ಬರಮಾಡಿಕೊಂಡರು. ಸೋಂಕಿನ ಸವಾಲು ಗೆದ್ದ ಇವರಿಗೆ ಅಕ್ಷರಶಃ ಯುದ್ಧ ಗೆದ್ದು ಬಂದ ಸಂಭ್ರಮ. ಅದೇ ಸಂಭ್ರಮದಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಮೂಲಕ ಮತ್ತಿಬ್ಬರನ್ನು ಗುಣಪಡಿಸಲು ಅನುಕೂಲವಾಗುವಂತೆ ಅವರು ತಮ್ಮ ರಕ್ತವನ್ನು ದಾನ ಮಾಡಿದ್ದಾರೆ. ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಸೂಕ್ಷ್ಮಜೀವ ವಿಜ್ಞಾನಿಯಾಗಿರುವ ವಿನಯ್, ಸರ್ಕಾರಿ ಆಸ್ಪತ್ರೆಯಲ್ಲಿನ …

Read More »

ಪತ್ರಕರ್ತರ ಕೊರೋನ ಪರೀಕ್ಷೆ ವೇಳೆ ಗಲಾಟೆ: ಐವರ ವಿರುದ್ಧ ಎಫ್‌ಐಆರ್ ದಾಖಲು

ಮಂಡ್ಯ: ಪತ್ರಕರ್ತರಿಗೆ ಕೊರೋನ ತಪಾಸಣೆ ಮಾಡುವ ವೇಳೆ ಗುಂಪು ಕಟ್ಟಿಕೊಂಡು ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಅವರ ಪುತ್ರ ಕೃಷಿಕ್ ಗೌಡ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆ.ಟಿ. ಶ್ರೀಕಂಠೇಗೌಡ ಮೊದಲ ಆರೋಪಿಯಾಗಿದ್ದು, ಕೃಷಿಕ್ ಗೌಡ ಎರಡನೇ ಆರೋಪಿಯಾಗಿದ್ದಾನೆ. ಇನ್ನುಳಿದಂತೆ ಚಂದ್ರ ಕಲಾವತಿ, ಜಗದೀಶ್, ರಾಜು ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಏನಿದು …

Read More »

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗುತ್ತಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರುವಂತೆ ಒತ್ತಡಗಳು ಬರುತ್ತಿದ್ದು, ಮತ್ತೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು. ಸಂಕಷ್ಟದಲ್ಲಿರುವ ಸಹಕಾರ ಕ್ಷೇತ್ರವನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ 18 ಫೆಡರೇಷನ್ ಗಳೊಂದಿಗೆ ಸಭೆ …

Read More »

ಯಶಸ್ವಿನಿ ಯೋಜನೆ ಮರು ಜಾರಿಗೆ ಚಿಂತನೆ?

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗುತ್ತಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರುವಂತೆ ಒತ್ತಡಗಳು ಬರುತ್ತಿದ್ದು, ಮತ್ತೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು. ಸಂಕಷ್ಟದಲ್ಲಿರುವ ಸಹಕಾರ ಕ್ಷೇತ್ರವನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ 18 ಫೆಡರೇಷನ್ ಗಳೊಂದಿಗೆ ಸಭೆ …

Read More »

ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರ್ಯಕ್ಕೆ ಹೆಂಡತಿ ಗೈರು.

ಮಂಡ್ಯ (ಫೆ.14): ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಮದ್ದೂರಿನ ಯೋಧ ಗುರು ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಪುಲ್ವಾಮಾ ಕರಾಳ ದಿನದ ಜೊತೆ ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರಣ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಯೋಧನ ಪತ್ನಿ ಕಲಾವತಿಯ ಗೈರು ಎದ್ದು ಕಾಣುತ್ತಿತ್ತು. ಹುತಾತ್ಮ ಯೋಧ ಗುರುವಿನ ಮೊದಲ ವರ್ಷದ ಸ್ಮರಣೆ ಹುಟ್ಟೂರು ಗುಡಿಗೆರೆ ಗ್ರಾಮದಲ್ಲಿ ನಡೆಯಿತು. ಈ ವೇಳೆ ಯೋಧನ ತ್ಯಾಗವನ್ನು ಸ್ಮರಿಸಲಾಯಿತು. …

Read More »

ಇನ್ನೂ ನಿರ್ಮಾಣವಾಗದ ಸಕ್ಕರೆ ನಾಡಿನ ಹುತಾತ್ಮ ಯೋಧನ ಸ್ಮಾರಕ.

ಮಂಡ್ಯ: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು ಇಂದಿಗೆ ಒಂದು ವರ್ಷ. ಕಳೆದ ವರ್ಷ ಫೆಬ್ರವರಿ 14 ರಂದು ಭಯೋತ್ಪಾದಕರು ನಡೆಸಿದ ಪೈಶಾಚಿಕ ಕೃತ್ಯದಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದರು.ಅವರ ಪೈಕಿ ಮಂಡ್ಯದ ಕೆ.ಎಂ ದೊಡ್ಡಿಯ ಗುಡಿಗೆರೆ ಕಾಲೋನಿಯ ಎಚ್.ಗುರು ಕೂಡ ಒಬ್ಬರು. 2019, ಫೆ.16ರಂದು ಗುರು ಅವರ ಪಾರ್ಥಿವ ಶರೀರವನ್ನ ಮಂಡ್ಯಗೆ ತಂದು ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಹೊರವಲಯದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಹುತಾತ್ಮನ ಕುಟುಂಬಕ್ಕೆ …

Read More »

ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ

ಮಂಡ್ಯ : ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಾಮಫಲಕಕ್ಕೆ ಕಿಡಿಗೇಡಿಗಳು ಅವಮಾನಿಸಿದ್ದಾರೆ. ಗ್ರಾಮದ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ನಾಮಫಲಕಕ್ಕೆ ತಡರಾತ್ರಿ ವೇಳೆ ಹಾನಿ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಫಲಕದ ಮೇಲ್ಛಾವಣಿಯ ಗಾಜನ್ನು ಕಲ್ಲಿನಿಂದ ಹೊಡೆದು ಹಾಕಿ ದುಷ್ಕತ್ಯ ಎಸಗಿದ್ದಾರೆ. ಫಲಕ ಧ್ವಂಸ ಖಂಡಿಸಿ ದಲಿತ ಸಮುದಾಯ ಪ್ರತಿಭಟನೆ ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ …

Read More »

ಸಂಚಾರ ಪೊಲೀಸ್​ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಮಾಡಿದ ಸಿಬ್ಬಂದಿ

ಮಂಡ್ಯ: ಮಹಿಳಾ ಪೇದೆಗೆ ಸೀಮಂತ ಮಾಡಿದ ವಿನೂತನ ಕಾರ್ಯಕ್ರಮಕ್ಕೆ ನಗರ ಸಂಚಾರ ಪೊಲೀಸ್​ ಠಾಣೆ ಸಾಕ್ಷಿಯಾಯಿತು. ಪೇದೆ ಪಲ್ಲವಿಗೆ ಸಂಚಾರ ಪೊಲೀಸ್​ ಠಾಣೆ ಸಿಬ್ಬಂದಿ ಸೀಮಂತ ಮಾಡಿದರು. ಚೊಚ್ಚಲ ಹೆರಿಗೆಗೆ ತೆರಳುತ್ತಿರುವ ಅವರಿಗೆ 6 ತಿಂಗಳು ರಜೆ ನೀಡಿ. ರೇಷ್ಮೆ ಸೀರೆ ತೊಡಿಸಿ, ಉಡುಗೊರೆ ನೀಡಿ ಸಿಬ್ಬಂದಿ ಹರಸಿ ಕಳುಹಿಸಿಕೊಟ್ಟರು. ಪೊಲೀಸ್​ ಠಾಣೆಗಳಲ್ಲಿ ಕೆಲಸದ ಒತ್ತಡ ಅಧಿಕವಾಗಿರುವುದರಿಂದ ಈ ರೀತಿಯ ಕಾರ್ಯಕ್ರಮಗಳು ನಡೆಯುವುದು ವಿರಳ. ಹೀಗಾಗಿ ಮಂಡ್ಯ ಸಂಚಾರ ಪೊಲೀಸ್​ …

Read More »

ಫಾಸ್ಟ್ ಟ್ಯಾಗ್ ವಿಚಾರಕ್ಕೆ ಚಾಲಕನ ಮೇಲೆ ಹಲ್ಲೆ

ಮಂಡ್ಯ: ಫಾಸ್ಟ್ ಟ್ಯಾಗ್ ವಿಚಾರಕ್ಕೆ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ನೆಲ್ಲಿಗೆರೆಯ ಟೋಲ್‌ನಲ್ಲಿ ಘಟನೆ ನೆಡೆದಿದೆ.ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿಯಲ್ಲಿ ಬರುವ ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ಇದ್ದರು ಹಣ ಕಟ್ಟುವಂತೆ ಹೇಳಿದ ಟೋಲ್ ಸಿಬ್ಬಂದಿಗೆ ನಮ್ಮ ಬಳಿ ಫಾಸ್ಟ್ ಟ್ಯಾಗ್ ಇದೆ ಟೋಲ್ ಕಟ್ಟಲ್ಲ ಎಂದ ಚಾಲಕ ನೀಡಿದ ಉತ್ತರಕ್ಕೆ ಫಾಸ್ಟ್ ಟ್ಯಾಗ್ ಇಲ್ಲಿ‌ ನಡೆಯಲ್ಲ …

Read More »

ಕೆ.ಸಿ.ನಾರಾಯಣಗೌಡ ಅವರಿಗೆ ಮೊದಲ ಬಾರಿಗೆ ಸಚಿವ ಪಟ್ಟ

ಮಂಡ್ಯ: ಬಹುಜನ ಸಮಾಜ ಪಕ್ಷದಿಂದ ಚುನಾವಣಾ ರಾಜಕಾರಣ ಆರಂಭಿಸಿದ ಕೆ.ಸಿ.ನಾರಾಯಣಗೌಡ ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ಸಚಿವ ಪಟ್ಟ ಅಲಂಕರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ಖಾತೆ ತೆರೆಯುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಜೆಡಿಎಸ್‌-ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆಯಲ್ಲಿ ಈಗ ಬಿಜೆಪಿ ದರ್ಬಾರ್‌ ಆರಂಭವಾಗಿದೆ. ಟ್ರಸ್ಟ್‌ ಮೂಲಕ ರಾಜಕಾರಣ: ಸಂತೇಬಾಚಹಳ್ಳಿ ಹೋಬಳಿ ಕೈಗೋನಹಳ್ಳಿಯವರಾದ ಕೆ.ಸಿ.ನಾರಾಯಣಗೌಡರು ಚಿಕ್ಕವರಾಗಿದ್ದಾಗಲೇ ಮುಂಬೈನಲ್ಲಿ ಜೀವನ ಕಂಡುಕೊಂಡಿದ್ದರು. ನಂತರ ಅವರು ಯಶಸ್ವಿ ಹೋಟೆಲ್‌ …

Read More »

ಭೀಕರ ರಸ್ತೆ ಅಪಘಾತ: ಮೂವರ ದಾರುಣ ಸಾವು.

ಮಂಡ್ಯ: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮದ್ದೂರು ತಾಲೂಕಿನ ದುಂಡಳ್ಳಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ. ತುಮಕೂರು – ಮದ್ದೂರು ಹೆದ್ದಾರಿಯಲ್ಲಿ ಮದ್ದೂರಿಂದ ಹೋಗುತ್ತಿದ್ದ ಪ್ಯಾಸೆಂಜರ್ ಆಟೋಗೆ ಲಾರಿ ಹಿಂದಿನಿಂದ ಡಿಕ್ಕಿಹೊಡೆದು ಘಟನೆ ನಡೆದಿದ್ದು, ಆಟೋದಲ್ಲಿದ್ದ ದುಂಡಳ್ಳಿ ಗ್ರಾಮದ ಅಭಿ(20) ಮಲ್ಲನಕುಪ್ಪೆ ಕೃಷ್ಣ(23) ಹಾಗೂ ತಿಟ್ಟಮಾರನಹಳ್ಳಿ ಗ್ರಾಮದ ಪ್ರಶಾಂತ್(21) ಸಾವಿಗೀಡಾಗಿದ್ದಾರೆ. ಮೃತ ಯುವಕರ ಶವಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೆಸ್ತೂರು ಪೊಲೀಸರು ಪ್ರಕರಣ ದಾಖಲು …

Read More »

ಮೀನು ಹಿಡಿಯಲು ಹೋದ ವ್ಯಕ್ತಿ ಸಾವು. ‌

ಮಂಡ್ಯ: ಕೆರೆಯಲ್ಲಿ ಮೀನು ಹಿಡಿಯಲೆಂದು ಬಲೆ ಬಿಡಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಗೊಲ್ಲರಕೊಪ್ಪ ಗ್ರಾಮದಲ್ಲಿ ನಡೆದಿದೆ. ಗೊಲ್ಲರ ಕೊಪ್ಪಲು ಗ್ರಾಮದ ನಿವಾಸಿ ನಾರಾಯಣ್ ಮೃತಪಟ್ಟವ್ಯಕ್ತಿ. ಇಂದು ಮಧ್ಯಾಹ್ನ ನಾರಾಯಣ್ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದ ಮೂಲಕ ಕೆರೆ ಮಧ್ಯ ಭಾಗಕ್ಕೆ ಹೋಗಿಬಲೆ ಬೀಸುವಾಗ ಆಯಾತಪ್ಪಿ ಬಿದ್ದು ಸಾವಿನಪ್ಪಿರುವುದಾಗಿ ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಶವವನ್ನು ಹೊರಕ್ಕೆ ತೆಗೆದು …

Read More »

ಅಡುಗೆ ಸಹಾಯಕಿಯರ ಗೌರವ ಧನ ನೀಡುವಂತೆ ಶಾಸಕ ನಾರಾಯಣಗೌಡರಿಗೆ ಮನವಿ.

ಮಂಡ್ಯ: ಸಮಾಜಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಕಳೆದ 9 ತಿಂಗಳುಗಳಿಂದ ವೇತನ ದೊರೆಯದ ಹಿನ್ನೆಲೆಯಲ್ಲಿ ಶಾಸಕ ನಾರಾಯಣಗೌಡರನ್ನು ಭೇಟಿ ಮಾಡಿ ತಮಗೆ ಬಾಕಿ ಬರಬೇಕಾದ ಗೌರವ ಧನ ಹಾಗೂ ಇತರೆ ಸೌಲಭ್ಯಗಳನ್ನು ಕೊಡಿಸಿಕೊಡುವಂತೆ ಮನವಿ ಮಾಡಿದರು. ತಾಲ್ಲೂಕಿನ ವಿವಿಧ ಹಾಸ್ಟೆಲ್ ಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಹಾಯಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ನಾರಾಯಣಗೌಡ ಅಡುಗೆ ಗುತ್ತಿಗೆ ಪಡೆದಿರುವ …

Read More »

ತೆನೆ ಇಳಿಸಿ ಕೈ ನತ್ತ ಮುಖ ಮಾಡುತ್ತಿರುವ ತೆನೆ ಕಾರ್ಯಕರ್ತರು.

ಮಂಡ್ಯ: ಕೃಷಿ ಪತ್ತಿನ ಸಹಕಾರ ಸಂಘಗಳ ಸ್ಥಳೀಯ ಸಂಸ್ಥೆ ಚುನಾವಣೆಗಳ ಹಿನ್ನೆಲೆಯಲ್ಲಿ ಕೆಬಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹಾಗೂ ಅಗ್ರಹಾರಬಾಚಹಳ್ಳಿ ಮತ್ತು ಬೊಮ್ಮನಾಯಕನಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಮಂಡ್ಯ ಅಗ್ರಹಾರಬಾಚಹಳ್ಳಿ ಎಸ್ ಗೋಪಾಲ್ . ಅಶೋಕ್ ಹಾಗೂ ಬೊಮ್ಮನಾಯಕನಹಳ್ಳಿ ಬಿ ವಿ ಶ್ರೀನಿವಾಸ್ ರವರು ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದಲ್ಲಿ ತನ್ನದೇ ಆದ ಹೆಸರುಗಳಿಸಿದ ಜೆಡಿಎಸ್ ಪ್ರಭಾವಿ ನಾಯಕರುಗಳುಕಾಂಗ್ರೆಸ್ ಪಕ್ಷಕ್ಕೆ ಇಂದು ಪ್ರಾಮಾಣಿಕವಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತೇವೆ …

Read More »
error: Content is protected !!