Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ರಾಮನಗರ

ರಾಮನಗರ

ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಇಬ್ಬರು ಯುವಕರು ಸಾವು.

ರಾಮನಗರ (ಮಾ.2): ಚನ್ನಪಟ್ಟಣಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಚಲಾಯಿಸುತ್ತಿದ್ದ ಬೈಕ್​ ನಜ್ಜುಗುಜ್ಜಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಂಗಳವಾರಪೇಟೆ ಬಳಿ ಹಾದು ಹೋದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮುಖ್ಯರಸ್ತೆಗೆ ಆಗಮಿಸುತ್ತಿದ್ದ ಬುಲೆಟ್​ ಬೈಕ್​ಗೆ ಖಾಸಗಿ ಬಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ಸಚಿನ್ (22), ಪ್ರತಾಪ್ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಚಿನ್​ ಹಾಗೂ ಪ್ರತಾಪ್​ ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದರು. ಮುಖ್ಯ …

Read More »

ಯಂತ್ರೋಪಕರಣ ಖರೀದಿಗೆ ಸಹಾಯಧನ.

ರಾಮನಗರ : ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯು ಕೇಂದ್ರ ಅನುದಾನಿತ ಯೋಜನೆಯಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಬಳಸುವ ಯಂತ್ರೋಪಕರಣಗಳ ಖರೀದಿಗೆ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಶೇ 90 ರಷ್ಟು ಸಹಾಯ ಧನ ನೀಡಲಾಗುವುದು. ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ದಿನಾಂಕ 06-11-2019 ರವರೆಗೆ ಜಿಲ್ಲೆಗೆ ನಿಗಧಿಯಾಗಿರುವ 95 ಭೌತಿಕ ಹಾಗೂ 34.40 ಆರ್ಥಿಕ ಗುರಿಯಲ್ಲಿ 69 ಭೌತಿಕ ಹಾಗೂ 30.78 ಲಕ್ಷ ರೂ ಆರ್ಥಿಕ ಗುರಿ ಸಾಧಿಸಿ 48 ಫಲಾನುಭವಿಗಳು …

Read More »

ಯುವರಾಜನ ಮದುವೆಗೆ ಜಾಗ ಪರಿಶೀಲಿಸಿದ ಮಾಜಿ ಸಿಎಂ.

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ನಿಖಿಲ್ ಮದುವೆಗಾಗಿ ಜಾನಪದ ಲೋಕದ ಬಳಿ ಗುರುತಿಸಿರುವ ಜಾಗವನ್ನು ಎರಡನೇ ಬಾರಿ ವೀಕ್ಷಣೆ ಮಾಡಿ ಪರಿಶೀಲಿಸಿದರು. ನಿಖಿಲ್-ರೇವತಿ ವಿವಾಹ ಏ17ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೀಗರಾದ ಮಂಜುನಾಥ್ ಜತೆ ಆಗಮಿಸಿ, 54 ಎಕರೆ ಜಾಗ ವೀಕ್ಷಿಸಿದರು. ಈ ಸ್ಥಳ ರಾಮನಗರದಿಂದ 5 ಕಿ.ಮೀ, ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಸಮಾರಂಭಕ್ಕೆ ಸೂಕ್ತ ಸ್ಥಳ ಎಂದು ಕುಮಾರಸ್ವಾಮಿ ಹೇಳಿದರು. …

Read More »

ಕರ್ನಾಟಕ ಬಂದ್ ಗೆ ಸಹಕರಿಸಲು ಮನವಿ.

ರಾಮನಗರ: ಕನ್ನಡಿಗರ ಉದ್ಯೋಗಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಇದೇ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘ ಸಂಸ್ಥೆಗಳು ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ಸೇವಾದಳ ಸಂಸ್ಥಾಪಕ ಅಧ್ಯಕ್ಷೆ ಆಶಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಡೆಸುತ್ತಿರುವ ಮುಷ್ಕರ ನೂರು ದಿನಗಳತ್ತ ದಾಪುಗಾಲು ಹಾಕುತ್ತಿದೆ. ಹೋರಾಟಕ್ಕೆ ಮಣಿಯದ ಸರ್ಕಾರವನ್ನು …

Read More »

ರಾಮನಗರಕ್ಕೆ ನವ ಬೆಂಗಳೂರು ಎಂದು ಮರುನಾಮಕರಣ: ಸರ್ಕಾರ ಚಿಂತನೆ. ‌

ರಾಮನಗರ : ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿ ಬಿಜೆಪಿ ನಾಯಕರು ಮರುನಾಮಕರಣ ವಿಚಾರವಾಗಿ ಪ್ರಸ್ತಾಪವಿಟ್ಟಿದ್ದಾರೆ ಎನ್ನಲಾಗಿದ್ದು, ರಾಮನಗರದ ಸಮಗ್ರ ಅಭಿವೃದ್ಧಿಯ ಜೊತೆಗೆ ಐಟಿ-ಬಿಟಿ ಹಾಗೂ ಹೂಡಿಕೆದಾರರನ್ನು ಜಿಲ್ಲೆಯತ್ತ ಸೆಳೆಯುವುದರ ಮೂಲಕ ಇಂಡಸ್ಟ್ರೀಯಲ್ ಹಬ್ ಸೃಷ್ಟಿಸುವುದು ಮರುನಾಮಕರಣದ ಉದ್ದೇಶವಾಗಿದೆ ಎನ್ನಲಾಗಿದೆ. ಇನ್ನು ರಾಮನಗರ ಸೇರಿದಂತೆ ಐದು ತಾಲೂಕುಗಳನ್ನು ನವ ಬೆಂಗಳೂರಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ. ಬೆಂಗಳೂರು …

Read More »

ರಕ್ತದಾ‌ನ ಶ್ರೇಷ್ಠದಾನ ಎಲ್ಲರೂ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿ

ಆನೇಕಲ್:- ದಾನದಲ್ಲಿ ಶ್ರೇಷ್ಠವಾದದ್ದು ರಕ್ತದಾನ, ಈ ಹಿನ್ನಲೆಯಲ್ಲಿ ನಾವು ಇನ್ನೊಬ್ಬರ ಜೀವನದಲ್ಲಿ ಸಹಾಯವನ್ನು ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಸಮಂದೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಿ.ವಿ.ರೆಡ್ಡಿ ತಿಳಿಸಿದರು. ಚಿರಂಜೀವಿ ಸಂಘ 25 ವರ್ಷ ಪೊರೈಸಿದ ಅಂಗವಾಗಿ ಕರ್ನಾಟಕ ರಾಜ್ಯ ಚಿರಂಜೀವಿ ಸಂಘದ ವೆಲ್ ಪೇರ್ ಅಸೋಸಿಯೇಶನ್ ವತಿಯಿಂದ ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಭ್ ಮಂಗಲ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸಂಘದ ಕಾರ್ಯಕ್ರಮಗಳು ಸಮಾಜಕ್ಕೆ …

Read More »

ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ ಅಡ್ಡಿ

ರಾಮನಗರ :- ನಗರದಾದ್ಯಂತ ಸುರಿದ ದಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.ಇಂದು ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ‌ ರಸ್ತೆಯಲ್ಲಿಯೇ ನೀರು ಹರಿಯಲಾರಂಬಿಸಿದ್ದಿರಂದ ಕೆಲಕಾಲ ಬಸ್ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು. ನಗರ ಪ್ರದೇಶದಲ್ಲಿಯೇ ಬಿರುಗಾಳಿಗೆ ಎರಡು ಮರಗಳು ನೆಲಕ್ಕುರುಳಿದವು. ಇನ್ನೂ ಕೆಂಗಲ್ ಬಳಿ ಬಿದ್ದ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ವಾಹನ ದಟ್ಟಣೆ ಹೆಚ್ಚಾಗಿದ್ದು ಮಳೆಯ ಆರ್ಭಟಕ್ಕೆ ವಾಹನ ಸಂಚಾರಕ್ಕೂ …

Read More »

ಬೆಂಕಿಗೆ ಬಿದ್ದ ದೇವರು

ಕೊಂಡ ಆಯುವಾಗ ಆಯತಪ್ಪಿ ದೇವರ ಮೂರ್ತಿ ಕೆಳಗೆ ಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ತೈಲೂರಮ್ಮ ದೇವಿಯ ಜಾತ್ರಾ ಮಹೋತ್ಸವ ದ ಅಂಗವಾಗಿ ಕೊಂಡ ಆಯುವ ವೇಳೆ ಪೂಜೆ ಕುಣಿತ ಹೊತ್ತ ಗೋಪಿಸ್ವಾಮಿಯವರಿಗೆ ಆಯತಪ್ಪಿ ದೇವರ ವಿಗ್ರಹ ಕೇಳಗೆ ಬಿದಿದ್ದು, ಅದೃಷ್ಟವಶ ಯಾವುದೆ ಗಾಯಗಳಾಗದೆ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಇನ್ನೂ ದೇವರ ಮೂರ್ತಿ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಶಾಂತಿಯ …

Read More »

5ಎಕರೆ ಪ್ರದೇಶವನ್ನು ಪ್ತವಾಸೋದ್ಯಮಕ್ಕೆ ಮೀಸಲಿಡಲಾಗಿದೆ-ಸಾರಾ ಮಹೇಶ್

ಚನ್ನಪಟ್ಟಣ ತಾಲ್ಲೂಕಿನ ಕಣ್ವ ಬಳಿ 5ಎಕರೆ ಪ್ರದೇಶವನ್ನು ಪ್ತವಾಸೋದ್ಯಮಕ್ಕೆ ಮೀಸಲಿಡಲಾಗಿದೆ ಎಂದು ಸಚಿವ ಸಾರಾ ಮಹೇಶ್ ಹೇಳಿಕೆ ನೀಡಿದರು.10 ಕೋಟಿ ಪ್ರಸ್ತಾವನೆಯಲ್ಲಿ 8 ಕೋಟಿ ಬಿಡುಗಡೆ ಮಾಡಲಾಗುವುದು . ಕಣ್ವಾ ಬಳಿ ಚಿಲ್ಡ್ರನ್ಸ್ ಪಾರ್ಕ್ ಗೆ 2 ಕೋಟಿ ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು. ರೇಷ್ಮೆಯನ್ನು ವಿದೇಶಗಳಿಂದ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿದೆ. ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ. ರೇಷ್ಮೆ ಬೆಲೆ ಹೆಚ್ಚಿಸಲು …

Read More »

ಸತ್ತೆಗಾಲದಿಂದ ಇಗ್ಗಲೂರು ಬ್ಯಾರೇಜ್ ಗೆ ಕಾವೇರಿ ನೀರು ಹರಿಸುವ ಕಾಮಗಾರಿಗೆ ಸಿಎಂ ಚಾಲನೆ

ಬಹು ನಿರೀಕ್ಷಿತ ನದಿ ಜೋಡಣೆ ಕಾಮಗಾರಿಗೆ ಸಿಎಮ್ ಕುಮಾರಸ್ವಾಮಿ ಚಾಲನೆ ನೀಡಿದರು. ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಸಿಎಂ ಆಗಮಿಸಿ ಇಗ್ಗಲೂರು ಗ್ರಾಮದಲ್ಲಿನ ಇಗ್ಗಲೂರು ಬ್ಯಾರೇಜ್ ಗೆ ಭೇಟಿ ನೀಡಿದರು. ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ೧ ಸಾವಿರ ಕೋಟಿಗೂ ಹೆಚ್ಚು ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಹಾಗೂ 540 ಕೋಟಿ ವೆಚ್ಚದಲ್ಲಿ ಗುರುತ್ವಾಕರ್ಷಣೆಯ ಬಲದಿಂದಸತ್ತೆಗಾಲದಿಂದ ಇಗ್ಗಲೂರು ಬ್ಯಾರೇಜ್ ಗೆ ಕಾವೇರಿ ನೀರು ಹರಿಸುವ ಕಾಮಗಾರಿಗೆ ಸಿಎಂ ಚಾಲನೆ ನೀಡಿದರು. Share

Read More »

ರಾಮನಗರದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಮನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಕ್ಷ್ಮಣ್ ಸ್ವಾಮಿ ನೇತೃತ್ವದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಲವು ರೈತರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೈಸೂರು- ಬೆಂಗಳೂರು ಹೆದ್ದಾರಿ‌ ತಡೆದು ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಿದ್ದುಪಡಿ ವಾಪಸ್ಸು ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರತಿಭಟಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲ ಗಂಟೆಗಳ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. Share

Read More »

ಸಿಂಹಸ್ವಪ್ನವಾಗಿದ್ದ ಶಾರ್ಕ್ ಅಂಡ್ ಶಾರ್ಪ್ ಫಿಶ್ !

ಸಿಂಹಸ್ವಪ್ನವಾಗಿದ್ದ ಶಾರ್ಕ್ ಅಂಡ್ ಶಾರ್ಪ್ ಫಿಶ್ !ನಾವು ನಿಮಗೆ ಈಗ ತೋರಿಸ್ತಿರೋ ಇಂತಹ ಮೀನುಗಳನ್ನ, ಆಂಗ್ಲ ಸಿನೆಮಾಗಳಲ್ಲಿ ನೋಡಿರ್ತಿರಾ, ಸಿನೆಮಾದಲ್ಲಿ ನೋಡಿದ್ರು, ಕೆಲ ಗಂಟೆಗಳ ಕಾಲ ಆ ದೃಶ್ಯವನ್ನ ಮನಸ್ಸು ಮೆಲುಕು ಆಕ್ತನೇ ಇರುತ್ತೆ. ನೆನೆಸ್ಕೊಂಡ್ರೆ ಭಯ ಕೂಡ ಆಗುತ್ತೆ. ಆದ್ರೆ ನಿಜ ಜೀವನದಲ್ಲಿ ನಿಮ್ಮೆದುರೆ ಬಂದ್ರೆ ಒಂದು ಕ್ಷಣ ಎದೆ ಜಲ್ ಎನ್ನದೆ ಇರೋಕೆ ಸಾದ್ಯನೇ ಇಲ್ಲ ಯಾಕೆ ಅಂತಿರಾ ಅಂತಹದೊಂದು ಫಿಶ್ ಇಲ್ಲಿದೆ ನೋಡಿ.ಸಮುದ್ರದ ಆಳದಲ್ಲಿ ಇಳಿದವರಿಗೆ …

Read More »

ಮಧು ಮಗಳ ಎಡವಟ್ಟೊ, ಪುರೋಹಿತರ ಎಡವಟ್ಟೋ ? !

ಮದುವೆ ಅಂದಾಕ್ಷಣ ಕೆಲವರು ತಾಳಿ ಕಟ್ಟೋಕೆ ಖುಷ್ ಖುಷಿಯಾಗಿ ರೆಡಿ ಆಗ್ಬಿಡ್ತಾರೆ. ಇನ್ನು ಕೆಲವರು ವಲ್ಲದ ಮನಸ್ಸಿನಿಂದ ಒಪ್ಪಿಕೊಳ್ತಾರೆ. ಯಾರಾದ್ರು ಒಪ್ಕೊಳ್ಳಿ ಬಿಡ್ಲಿ , ಹೆಣ್ಣು ಮಕ್ಕಳ ಕುತ್ತಿಗೆಗೆ ತಾಳಿ ಕಟ್ಟೋದು ಮಾತ್ರ ಗಂಡು. ಆದ್ರೆ ಇಲ್ಲಿ ನಡೆದಿದ್ದು ಮಾತ್ರ ಉಲ್ಟಾ ಪಲ್ಟಾ. ಅಂದ್ರೆ ನಾವು ನಿಮ್ಗೆ ಹೇಳ್ತಿರೋದು ಮದುವೆ ಮನೆಯಲ್ಲಿ ತಾಳಿ ಕಟ್ಟೊ ವಿಚಾರ. ಏನಪ್ಪ ಮಾಮೂಲಿ ವಿಷ್ಯನ ಇಷ್ಟೊಂದು ಬಿಲ್ಡಪ್ ಕೊಟ್ಕೊಂಡು ಹೇಳ್ತಿದ್ದಾರೆ ಅನ್ಕೊಬೇಡಿ. ಇಲ್ಲಿ ನಡೆದ …

Read More »

ಡಾ. ರಾಜ್ ಗೆ ಒಲಿದಿದ್ದ ಯೋಗಾ ಯೋಗ !

ಡಾ,ರಾಜ್ ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಿನಿಮಾ ರಂಗದಲ್ಲೆ ಹಾಲಿಹುಡ್,ಟಾಲಿಹುಡ್,ಸ್ಯಾಂಡಲ್ ಹುಡ್ ಕಂಡಂತಹ ಅಭಿನಯ ಚತುರ ಹಿರಿಯ ನಟ. ಅದರಲ್ಲು ಅವರ ಜೀವನದಲ್ಲಿ ಎಂತಹ ಕಷ್ಟಗಳು ಎದುರಾದ್ರು , ಏಳು ಬೀಳುಗಳನ್ನ ಕಂಡರು ಅವರು ಯಾವದಕ್ಕು ತಲೆ ಬಾಗಲೆ ಇಲ್ಲ ತಮ್ಮ ತಾಳ್ಮೆಯನ್ನು ಕಳೆದು ಕೊಂಡಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಡಾ.ರಾಜ್ ಕುಮಾರವರು ತಮ್ಮ ಹುಟ್ಟೂರು ಗಾಜನೂರಿಗೆ ತೆರಳಿದ್ದಾಗ, ಶ್ರೀಗಂಧದ ಕಳ್ಳ ಎಂದೆ ಕುಖ್ಯಾತಿ ಹೊಂದಿದ್ದ ಕಾಡುಗಳ್ಳ …

Read More »

ರೇಷ್ಮೆ ಗೂಡಿನ ಬೆಲೆ ಕುಸಿತ ಹಿನ್ನಲೆಯಲ್ಲಿ ರೈತರು ಹೆದ್ದಾರಿ ತಡೆದು ಆಕ್ರೋಶ

ರೇಷ್ಮೆ ಗೂಡಿನ ಬೆಲೆ ಕುಸಿತ ಹಿನ್ನಲೆಯಲ್ಲಿ ರೈತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ರಾಮನಗರದ ರೇಷ್ಮೆ ಮಾರುಕಟ್ಟೆ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೆಜೆ ರೇಷ್ಮೆ ಗೂಡಿಗೆ 220 ರಿಂದ 240 ಹಿನ್ನಲೆಯಲ್ಲಿ, ಕುಪಿತಗೊಂಡ ರೈತರು ಹರಾಜು ಬಹಿಷ್ಕರಿಸಿದರು.ಇದರಿಂದ ಒಂದು ತಾಸಿನಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಡುವ ಸಂದರ್ಭ ಉದ್ಭವಿಸಿತ್ತು. ನಂತರ ಸ್ಥಳಕ್ಕೆ ಬಂದ ಪೋಲಿಸರು ರೈತರನ್ನು ಮನವಲಿಸುವ ಪ್ರಯತ್ನ …

Read More »
error: Content is protected !!