Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ರಾಯಚೂರು

ರಾಯಚೂರು

ಮೊಸಳೆಗೆ ಆಹಾರವಾದ ಬಾಲಕ.

ರಾಯಚೂರು: ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲಾದ ಘಟನೆ ರಾಯಚೂರು ತಾಲ್ಲೂಕಿನ ಡೊಂಗರಾಂಪುರ ಗ್ರಾಮದ ಬಳಿ ನಡೆದಿದೆ. ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದ 12 ವರ್ಷದ ಮಲ್ಲಿಕಾರ್ಜುನ ಎಂಬ ಬಾಲಕನ ಮೇಲೆ ದಾಳಿ ಮಾಡಿದ ಮೊಸಳೆ ದೇಹದ ಭಾಗವನ್ನು ತಿಂದಿದೆ. ವಿದ್ಯಾಗಮ ಯೋಜನೆ ನಿಲ್ಲಿಸಿದ್ದರಿಂದ ಬಾಲಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆ ದನ ಕಾಯಲು ಹೊಲಕ್ಕೆ ಹೋಗಿ ಮಧ್ಯಾಹ್ನ ಊಟದ ಬಳಿಕ ನೀರು ಕುಡಿಯಲು ನದಿಗೆ ಇಳಿದಾಗ …

Read More »

ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ.

ರಾಯಚೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ಎಸಗಿರುವ ಕೇಂದ್ರ ಸರ್ಕಾರ ರೈತರಲ್ಲಿ ಕ್ಷಮೆಯಾಚಿಸಬೇಕು, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಮನ್ವಯ ಸಮಿತಿ ಹಾಗೂ ಸೆ‍ಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್​ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯಕ್ಕೆ ಪ್ರಧಾನ ಮಂತ್ರಿಗಳು ಕ್ಷಮೆಯಾಚಿಸಬೇಕು, ಯಾವುದೇ ಷರತ್ತುಗಳನ್ನು ಒಡ್ಡದೇ …

Read More »

ಸಂತೋಷ್ ಆತ್ಮಹತ್ಯೆ ಯತ್ನದ ತನಿಖೆ ನಡೆಸಲಾಗುವುದು : ಬೊಮ್ಮಾಯಿ.

ರಾಯಚೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಕುಮಾರ್ ಆತ್ಮಹತ್ಯೆ ಯತ್ನ ಪ್ರಕರಣವನ್ನ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಘಟನೆ ನಡೆದಿದ್ದು ಆಗ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಈ ಬಗ್ಗೆ ಮಾಹಿತಿ ಬಂದಿದೆ. ಆತ್ಮಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದ ತನಿಖೆ ನಡೆಸಲಾಗುವುದು. ಘಟನೆಯ ಕುರಿತಂತೆ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತೋಷ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸಂಜೆಯವರೆಗೆ ವಾರ್ಡ್‌ಗೆ ಶಿಫ್ಟ್ …

Read More »

ಚರಂಡಿ ದುರಸ್ತಿ ಮಾಡಿಸಿದ ನಗರಸಭೆ ಅಧ್ಯಕ್ಷ.

ರಾಯಚೂರು: ನಗರದಲ್ಲಿ ಹಲವು ದಿನಗಳಿಂದ ಚರಂಡಿಯಲ್ಲಿ ನೀರು ಬ್ಲಾಕ್ ಆಗಿದ್ದು, ಇದನ್ನು ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದುರಸ್ತಿ ಮಾಡಿಸಿದರು. ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್ ಶಶಿಮಹಲಗ ಟಾಕೀಸ್​ ಬಳಿಯಿರುವ ಚರಂಡಿ ದುರಸ್ತಿ ಮಾಡಿಸಿದರು. ಶಶಿಮಹಲಗ ಟಾಕೀಸ್​ ಬಳಿಯಿರುವ ಚರಂಡಿ ನೀರು ಬ್ಲಾಕ್ ಆಗಿ ರಸ್ತೆಯ ಮೇಲೆ ಹರಿಯುತ್ತಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆ ಅರಿತ ಈ.ವಿನಯಕುಮಾರ್ ನಗರಸಭೆ ಅಧಿಕಾರಿಗಳು ಹಾಗೂ …

Read More »

ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಆರ್ಥಿಕ ಸಹಾಯಕ್ಕೆ ಮನವಿ.

ರಾಯಚೂರು: ತರಕಾರಿ ಮಾರಾಟಗಾರರೋರ್ವರ ನಾಲ್ಕು ವರ್ಷದ ಹೆಣ್ಣು ಮಗು ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗಾಗಿ ಸುಮಾರು 29 ಲಕ್ಷ ಅವಶ್ಯಕತೆ ಇದೆ. ಹಾಗಾಗಿ ಆರ್ಥಿಕ ಸಹಾಯಧನ ನೀಡಲು ದಾನಿಗಳು ಮುಂದಾಗುವಂತೆ ಮಗುವಿನ ಸಂಬಂಧಿ ಹನುಮೇಶ ಮನವಿ ಮಾಡಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ವೀರೇಶ ಅವರ ನಾಲ್ಕು ವರ್ಷದ ಮಗಳು ಮಾನ್ಯ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಬೆಂಗಳೂರಿನ ನಾರಾಯಣ …

Read More »

ರಾಯಚೂರು ವಿವಿ ಮೊದಲ ಕುಲಪತಿಯಾಗಿ ಡಾ. ಹರೀಶ್ ರಾಮಸ್ವಾಮಿ ನೇಮಕ.

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಧಾರವಾಡ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಗುಲ್ಬರ್ಗ ವಿವಿಯನ್ನು ವಿಭಜನೆ‌ ಮಾಡಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆ ಒಳಗೊಂಡಂತೆ ನೂತನ ರಾಯಚೂರು ವಿವಿಯನ್ನು ಘೋಷಣೆ ಮಾಡಲಾಗಿತ್ತು.‌ ಆದರೆ ತಾಂತ್ರಿಕ ಕಾರಣಗಳಿಂದ ವಿವಿ ಆರಂಭ ವಿಳಂಬವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು …

Read More »

ಹದಗೆಟ್ಟ ರಸ್ತೆ ಕಾಮಗಾರಿಗೆ ಸಾರ್ವಜನಿಕರ ಒತ್ತಾಯ.

ರಾಯಚೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹಾನಿಗೊಳಗಾಗಿವೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಗಮನಹರಿಸದ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ತಾಲೂಕಿನಲ್ಲಿ ಅತಿಯಾಗಿ ಸುರಿದ ಮಳೆಯಿಂದ ಜಂಬಲದಿನ್ನಿ ಗ್ರಾಮ ಪಂಚಾಯತ್​ ವ್ಯಾಪ್ತಿಗೆ ಬರುವ ಮಾಲದೊಡ್ಡಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಗ್ರಾಮಸ್ಥರ ಓಡಾಟಕ್ಕೆ ಕಷ್ಟವಾಗಿದೆ. ಕಳೆದ ಸೆಪ್ಟೆಂಬರ್​​ ತಿಂಗಳಲ್ಲಿ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಇದರ ಪರಿಣಾಮ ರಸ್ತೆಗಳು ಕೊಚ್ಚಿ ಹೋಗಿವೆ. ಮಾಲದೊಡ್ಡಿ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ …

Read More »

ಆ್ಯಂಬುಲೆನ್ಸ್ ಸಿಬ್ಬಂದಿಯಿಂದ ಹೆಣ್ಣು ಮಗು ರಕ್ಷಣೆ.

ರಾಯಚೂರು: ಜಮೀನಲ್ಲಿ ಎಸೆದು ಹೋಗಿದ್ದ ನವಜಾತ ಹೆಣ್ಣು ಶಿಶುವನ್ನು ಆ್ಯಂಬುಲೆನ್ಸ್ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದಾರೆ. ಜಿಲ್ಲೆಯ ಮಸ್ಕಿ ತಾಲೂಕಿನ ಹರವಪುರ ಗ್ರಾಮದಲ್ಲಿ ನವಜಾತ ಹೆಣ್ಣು ಮಗುವನ್ನು ಸಂಗಣ್ಣ ಎನ್ನುವವರ ಹೊಲದಲ್ಲಿ ಯಾರೋ ಎಸೆದು ಹೋಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ 108 ಆ್ಯಂಬುಲೆನ್ಸ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಆರೋಗ್ಯ ಕವಚ ಆ್ಯಂಬುಲೆನ್ಸ್ ಚಾಲಕ ಅಮೀರ್ ಪಾಷಾ ಹಾಗೂ ಸಿಬ್ಬಂದಿ ಗಂಗಣ್ಣ ಮಗುವನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ …

Read More »

ಅಂತ್ಯಕ್ರಿಯೆಯಲ್ಲೂ ಯಜಮಾನನಿಗೆ ನಿಯತ್ತು ತೋರಿದ ಮೇಕೆ.‌

ರಾಯಚೂರು: ಯಜಮಾನನ ಅಂತ್ಯಕ್ರಿಯೆಯಲ್ಲಿ ಮೇಕೆಯೊಂದು ಭಾಗಿಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಅಪರೂಪದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಮರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.‌ ಗ್ರಾಮದ ಅಮರಪ್ಪ ( 48 ) ಎಂಬುವವರು ಹೃದಯಾಘಾತದಿಂದ ಜಮೀನಿನಲ್ಲಿ ನಿಧನ ಹೊಂದಿದ್ದರು. ಅಂತ್ಯಕ್ರಿಯೆ ಕಾರ್ಯಕ್ಕೆ ಅಮರಪ್ಪ ನ ಅಚ್ಚುಮೆಚ್ಚಿನ ಮೇಕೆಯೂ ಸಹ ೧.೦೫ ಕಿ.ಮೀ ದೂರದ ಸ್ಮಶಾನಕ್ಕೆ ಬಂದಿದೆ. ಅಲ್ಲದೇ ಯಜಮಾನನ ಅಂತ್ಯಕ್ರಿಯೆ ಮುಗಿಯುವ ತನಕ ಮೇಕೆ ಸ್ಥಳ ಬಿಟ್ಟು ಕದಲಲಿಲ್ಲ. ಈ ದೃಶ್ಯ …

Read More »

ಮಹಿಳೆ ಹಾಗೂ ಮಕ್ಕಳ ರಕ್ಷಣೆಗೆ ಒತ್ತಾಯಿಸಿ ಧರಣಿ.

ರಾಯಚೂರು: ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ. ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಬಾಲಕಿಯರು ಹಾಗೂ ವಿದ್ಯಾರ್ಥಿನಿಯರು ಇರುವ ಕಡೆಗಳಲ್ಲಿ ಪುರುಷರು ಯಾವುದೇ ಕಾರಣಕ್ಕೂ ವಾರ್ಡ್‌ನಗಳಾಗಿ, ಕಾವಲುಗಾರರನ್ನಾಗಿ, ಅಡುಗೆ ಸಹಾಯಕರ ಹುದ್ದೆಗಳಿಗೆ ನೇಮಕ ಮಾಡಬಾರದು ಎಂದರು. ಈಚೆಗೆ ಸಿಂಧನೂರು ಹಾಗೂ ರಾಯಚೂರು ಪ್ರಕರಣಗಳಿಗೆ ಸಂಬಂಧಿಸಿದಂತೆ …

Read More »

ಎಸ್‌ಪಿ ನೇತೃತ್ವದಲ್ಲಿ ರೈಲ್ವೆ, ಬಸ್‌ನಿಲ್ದಾಣ ಪರಿಶೀಲನೆ.

ರಾಯಚೂರು: ರಾಜ್ಯದ ಮಂಗಳೂರು ಜಿಲ್ಲೆಯಲ್ಲಿ ಬಾಂಬ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರಮುಖ ಜನದಟ್ಟನೆಯ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯದಳದೊಂದಿಗೆ ಆಗಮಿಸಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಮತ್ತು …

Read More »

ಬಾಲಕಿ ಕಣ್ಣಿನಿಂದ ಬರುತ್ತೆ ಕಲ್ಲು: ವೈದ್ಯಲೋಕಕ್ಕೆ ಅಚ್ಚರಿ.‌

ರಾಯಚೂರು: ಇದೊಂದು ವೈದ್ಯ ಲೋಕಕ್ಕೆ ಅಚ್ಚರಿ. 10 ವರ್ಷದ ಮಗುವಿನ ಕಣ್ಣಿನಲ್ಲಿ ಆಗಾಗ ಹರಳು ಉರುಳುತ್ತಿವೆ. ಕಾರಣ ಗೊತ್ತಿಲ್ಲವಾದರೂ ಇದು ಮಾನಸಿಕ ತೊಂದರೆಯೋ ಅಥವಾ ಬೇರೆ ಕಾರಣಕ್ಕೆ ಇರಬಹುದು ಎಂದು ನಿಗಾವಹಿಸಲಾಗುತ್ತಿದೆ. ಹೌದು, ಈ ಮಗುವಿನ ಹೆಸರು ಪಾರ್ವತಿ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ‌ ಸಾಸಲಮರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಈ ಬಾಲಕಿಗೆ ಕಳೆದ ಎರಡು ದಿನಗಳಿಂದ ಪ್ರತಿ 20 ನಿಮಿಷಕ್ಕೊಂದು ಸಣ್ಣಸಣ್ಣ ಹರಳು …

Read More »

ಮತದಾರರ ಮಿಂಚಿನ ನೋಂದಣಿ ಅವಧಿ ವಿಸ್ತರಣೆ

ರಾಯಚೂರು : 2020ರ ಜನವರಿ 1ಕ್ಕೆ ಅನ್ವಯವಾಗುವಂತೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳ 18 ವರ್ಷ ಪೂರೈಸಿದ ಯುವ ಹಾಗೂ ಭವಿಷ್ಯದ ಮತದಾರರು ನಮೂನೆ – 6 ಅನ್ನು ಆನ್‌ಲೈನ್ ಮೂಲಕ ಅಥವಾ ನೇರವಾಗಿ ಭರ್ತಿ ಮಾಡಿ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಓ) ಗಳಿಗೆ ಸಲ್ಲಿಸಲು ಇದೇ ಜನವರಿ 8ರ ವರೆಗೆ ಹಮ್ಮಿಕೊಳ್ಳಲಾಗಿದ್ದ ಮಿಂಚಿನ ನೋಂದಣಿ ಅಭಿಯಾನದ ಅವಧಿಯನ್ನು ವಿಸ್ತರಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗವು ಪ್ರತಿಯೊಬ್ಬ ಅರ್ಹ ಯುವ …

Read More »

ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ.

ರಾಯಚೂರು: ಮನೆಯಲ್ಲಿ ಶಿಕ್ಷಕಿ‌ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾನವಿ ಪಟ್ಟಣದಲ್ಲಿ ನಡೆದಿದೆ. ಶಿಕ್ಷಕಿ ಆತ್ಮಹತ್ಯೆ ಮಾನವಿ ಪಟ್ಟಣದಲ್ಲಿನ 4ನೇ ವಾರ್ಡ್​ನ ನಿವಾಸಿ ಶಾಲಿನಿ ಮೋಹನ್ (33) ಮೃತ ಶಿಕ್ಷಕಿ. ಇವರು ಮೂಲತಃ ತುಮಕೂರು ಮೂಲದವರು ಎಂದು ಹೇಳಲಾಗುತ್ತಿದೆ. ಶಾಲಿನ ಮಾನವಿ ತಾಲೂಕಿನ ನಸಲಾಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಕ್ಷಕಿ ಡೆತ್​ ನೋಟ್ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಲಿನಿ ಅವರ ಪತಿ ಸಹ ಶಿಕ್ಷಕರಾಗಿ …

Read More »

ಹುಡುಗಿ ವಿಚಾರವಾಗಿ ಗಲಾಟೆ: ತಡೆಯಲು ಹೋದ ಉಪನ್ಯಾಸಕನ ಮೇಲೆ ಹಲ್ಲೆ.

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಪ್ರಾಣೇಶ ಕುಲಕರ್ಣಿ ಮೇಲೆ ವಿದ್ಯಾರ್ಥಿ ಗುಂಪು ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಹುಡುಗಿ ವಿಚಾರವಾಗಿ ಘರ್ಷಣೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ಉಪನ್ಯಾಸಕರು ಉಭಯ ಗುಂಪುಗಳ ವಿದ್ಯಾರ್ಥಿಗಳನ್ನು ಕರೆದು ವಿಚಾರಿಸಿದ್ದರು. ಒಂದು ತಂಡದ ವಿದ್ಯಾರ್ಥಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಇದನ್ನು ಮನಸಿಲ್ಲಿಟ್ಟುಕೊಂಡು ಹಗೆ ಸಾಧಿಸಿದ ವಿದ್ಯಾರ್ಥಿಗಳ ತಂಡ ಗುರುವಾರ ಕೃಷಿ …

Read More »
error: Content is protected !!