Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ವಿಜಯಪುರ

ವಿಜಯಪುರ

ಕರ್ನಾಟಕ ಬಂದ್ ವಿರೋಧಿಸಿ ಪ್ರತಿಭಟನೆ.

ವಿಜಯಪುರ: ಕರ್ನಾಟಕ ಬಂದ್ ವಿರೋಧಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಮಾನಿ ಬಳಗ ಹಾಗೂ ವಿವಿಧ ಪ್ರಗತಿ ಸಂಘಟನೆಗಳು ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ಮಂದಿರ ಮುಂಭಾಗದಲ್ಲಿ ಶಾಸಕ ಯತ್ನಾಳ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕೆಲವು ಸಂಘಟನೆಗಳು ವಿರೋಧಿಸುವುದು ಸರಿಯಲ್ಲ. ಯತ್ನಾಳ ಪ್ರತಿಕೃತಿ ದಹಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿರೋದು ಸರಿಯಲ್ಲ. ಮರಾಠ ಸಮುದಾಯ ಕನ್ನಡ ಪ್ರೇಮಿಗಳಾಗಿದ್ದಾರೆ.‌ ಕನ್ನಡ,ಜಲ …

Read More »

ವಿದ್ಯುತ್ ಹರಿದು ಕಾರ್ಮಿಕ ಸಾವು.

ವಿಜಯಪುರ: ಟ್ರಾನ್ಸ್‌ಫಾರ್ಮರ್ ಅಳವಡಿಸುವ ಸಂದರ್ಭ ವಿದ್ಯುತ್ ಹರಿದು ಕಾರ್ಮಿಕನೋರ್ವ ಸಾವಿಗೀಡಾದ ಘಟನೆ ಇಂಡಿ ತಾಲೂಕಿನ ಚೌಡಿಹಾಳ ಗ್ರಾಮದಲ್ಲಿ ನಡೆದಿದೆ‌. ಗಂಗಾರಾಮ್ ಜೇವೂರು (35) ಮೃತ ವ್ಯಕ್ತಿ. ಸಾವನ್ನಪ್ಪಿದ ವ್ಯಕ್ತಿ ಲೈನ್‌ಮನ್ ಜೊತೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಎಂದು ತಿಳಿದು ಬಂದಿದೆ. ಬಸು ಕೆಂಗನಾಳ್ ಹೆಸ್ಕಾಂ ಇಲಾಖೆಯಿಂದ ನೇಮಕವಾದ ಅಧಿಕೃತ ಲೈನ್‌ಮನ್ ಕೈಕೆಳಗೆ ಮೃತ ಗಂಗಾರಾಮ್ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರಾನ್ಸ್‌ಫಾರ್ಮರ್ ಅಳವಡಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ …

Read More »

ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾರ್ಥಿಗಳ ಸ್ಥಿತಿ ಅತಂತ್ರ.

ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. 6 ವಿಭಾಗದ ಸ್ನಾತಕೋತ್ತರ ಪದವಿ ಆರಂಭವಿದ್ದಾಗ ಒಟ್ಟು 168 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ‌ ಮಾಡಿಕೊಳ್ಳಲಾಗಿತ್ತು. ಅಂದು ವಿಜಯಪುರದಲ್ಲಿ ಮಾತ್ರ ವಿವಿ ಕಾರ್ಯನಿರ್ವಹಿಸುತ್ತಿತ್ತು. ಈಗ ಮಂಡ್ಯ, ಸಿಂಧನೂರು ಹಾಗೂ ಉಡುತಡಿಯಲ್ಲಿ ಕ್ಯಾಂಪಸ್ ಆರಂಭಿಸಲಾಗಿದೆ. ಒಟ್ಟು 31 ವಿವಿಧ …

Read More »

ಭೀಮಾ ತೀರದ ಶೂಟೌಟ್ ಪ್ರಕರಣ: ಸ್ಥಳದಲ್ಲೇ ಮೊಕ್ಕಾಂ ಹೂಡಿದ ಐ.ಜಿ.

ವಿಜಯಪುರ, (ನ. 04): ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಹೈ ಅಲರ್ಟ್ ಆಗಿದ್ದು, ನಿನ್ನೆ ವಿಜಯಪುರಕ್ಕೆ ಆಗಮಿಸಿದ್ದ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ವಿಜಯಪುರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮೊನ್ನೆ ತಡರಾತ್ರಿ ವಿಜಯಪುರಕ್ಕೆ ಆಗಮಿಸಿದ್ದ ಐಜಿ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಅಲ್ಲದೇ, ಎಷ್ಟು ಬೇಕೋ ಅಷ್ಟು …

Read More »

ತಳವಾರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಚಳುವಳಿ.

ವಿಜಯಪುರ: ರಾಜ್ಯದಲ್ಲಿರುವ ತಳವಾರ, ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನೀಡಬೇಕೆಂದು ಒತ್ತಾಯಿಸಿ ಆ.15 ರಿಂದ ವಿವಿಧ ರೂಪದಲ್ಲಿ ಚಳವಳಿ ನಡೆಸಿ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ ಎಂದು ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 12 ತಾಲೂಕಿನಲ್ಲಿ 15ರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಪತ್ರ ಬರೆಯುವ ಚಳವಳಿ ಹಾಗೂ ಕಾನೂನು ಹೋರಾಟದ ರೀತಿಯ ಮೂರು ಪ್ರಕಾರದ ಹೋರಾಟ ನಡೆಸಲಾಗುವುದು. …

Read More »

ಹಾಡಹಗಲೇ ಕೈ ಚಳಕ ತೋರಿದ ಖದೀಮರು.

ವಿಜಯಪುರ: ಹಾಡಹಗಲೇ ಮನೆಯ ಹಿಂಬದಿ ಬಾಗಿಲು ಮುರಿದಿರುವ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಬ್ರಾಹಿಂಪುರದ ಲಕ್ಷ್ಮೀ ನಗರದಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಸ್ಥ ಮಲ್ಲಿಕಾರ್ಜುನ ಪಾಟೀಲ ಎಂಬುವರ ಮನೆಗೆ ನುಗ್ಗಿರುವ ಕಳ್ಳರು, ಮನೆಯಲ್ಲಿನ ಅಲ್ಮೇರಾ ಹಾಗೂ ಮಂಚದ ಕೆಳಭಾಗದ ಲಾಕರ್ ಮುರಿದು 105 ಗ್ರಾಂ ಚಿನ್ನಾಭರಣ, 29 ಸಾವಿರ ನಗದು ಹಾಗೂ 800 ಗ್ರಾಂ ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ. ಮನೆ ಮಾಲೀಕ ಮಲ್ಲಿಕಾರ್ಜುನ ಪಾಟೀಲ ಕೆಲಸಕ್ಕೆ …

Read More »

ಮಾ.4ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ

ವಿಜಯಪುರ : ದ್ವಿತೀಯ ಪಿ.ಯು.ಸಿ ಪರೀಕ್ಷೆ ದಿನಾಂಕ 04-03-2020 ರಿಂದ 23-03-2020ರವೆರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 41 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ಬೆಳಿಗ್ಗೆ 9.00 ಗಂಟೆಯಿಂದ ಪರೀಕ್ಷೆಯ ಅಂತ್ಯದವೆರೆಗೆ ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ಕೇಂದ್ರದ ನಿಷೇದಿತ ಪ್ರದೇಶದಲ್ಲಿ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‍ಗಳು, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ …

Read More »

ಮದುವೆ ಕರೆಯೋಲೆಯಲ್ಲಿ ಸಿಎಎ ಪರ ಜಾಗೃತಿ.

ವಿಜಯಪುರ: ಇಲ್ಲೊಂದು ಜೋಡಿ ವಿಭಿನ್ನವಾಗಿ ಆಮಂತ್ರಣ ಪತ್ರಿಕೆ ಮುದ್ರಿಸುವ ಮೂಲಕ ದೇಶದ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಂಜೀವಿನಿ ಹಾಗೂ ಈರಯ್ಯ ಇವರ ಮದುವೆ ಇಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಪೌರತ್ವ ಕಾಯ್ದೆಯ ಪರ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಪತ್ರಿಕೆಯಲ್ಲಿ ನಾವು ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತೇವೆ ಎಂದು ಬರೆಸುವ ಮೂಲಕ ಜಾಗೃತಿಗೆ ಮುಂದಾಗಿದ್ದಾರೆ ಯುವತಿಯ ಅಣ್ಣ ವಿಜಯಮಹಾಂತೇಶ ಅಣ್ಣಯ್ಯ ಹಿರೇಮಠ. ಈ ಮೂಲಕ ಮದುವೆ …

Read More »

2 ಬೈಕ್​ಗಳ ನಡುವೆ ಅಪಘಾತ, ವ್ಯಕ್ತಿ ಸಾವು

ವಿಜಯಪುರ: ಎರಡು ಬೈಕ್ ಗಳ‌ ನಡುವೆ ಅಪಘಾತ ಸಂಭವಿಸಿ, ಸವಾರನೊಬ್ಬ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ಡಿಸೆಂಬರ್ 18 ರಂದು ಜಮಖಂಡಿಯಿಂದ ಬಬಲೇಶ್ವರಕ್ಕೆ ಹೋಗುವ ರಸ್ತೆಯಲ್ಲಿ ಬೈಕ್​ಗೆ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ಬೈಕ್​ಗಳ ಸವಾರರು ಕೆಳಗೆ ಬಿದ್ದಿದ್ದಾರೆ.  ಒಬ್ಬ ಸವಾರ ರಸ್ತೆ ಮೇಲೆಯೇ ಬಿದ್ದರೆ, ಮತ್ತೊಬ್ಬ ಸವಾರ ರಸ್ತೆ ಪಕ್ಕಕ್ಕೆ ಬಹುದೂರ ಹಾರಿ ಬಿದ್ದಿದ್ದಾನೆ. ಕೂಡಲೇ ಆತನನ್ನು …

Read More »

ಮುಸ್ಲಿಮರಿಂದ ಪೇಜಾವರ ಶ್ರೀ ಆರೋಗ್ಯಕ್ಕೆ ವಿಶೇಷ ಪ್ರಾರ್ಥನೆ

ವಿಜಯಪುರ: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ವಿಜಯಪುರ ನಗರದಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸೋಮವಾರ ನಗರದ ಮನಗೂಳಿ ಅಗಸಿ ಬಳಿ ಇರುವ ಹಜರತ್‌ ಮರ್ತೂಜಾ ಖಾದ್ರಿ ದರ್ಗಾದಲ್ಲಿ ಪವಿತ್ರ ಹೂಗಳ ಚಾದರ ಸಮರ್ಪಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಶ್ರೀಗಳ ಸಾಮಾಜಿಕ ಸೇವೆ ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಸ್ಮರಿಸಿದ ಮುಸ್ಲಿಂ ಸಮುದಾಯದವರು, ಧಾರ್ಮಿಕ ಕಾರ್ಯಗಳ ಜತೆ …

Read More »

ಮೂವರು ನಕಲಿ ಪತ್ರಕರ್ತರ ಬಂಧನ

ವಿಜಯಪುರ: ಬ್ಲ್ಯಾಕ್‌ಮೇಲ್ ಮಾಡಿ ಜನರಿಂದ ದುಡ್ಡು ಪೀಕುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಹೊರ್ತಿಯ ಪ್ರಕಾಶ ದಶರಥ ಕೋಳಿ(33), ವಿಜಯಪುರ ನಗರದ ಝಾಕೀರ ಹುಸೇನ್ ಮೆಹಬೂಬಸಾಬ ಅಮೀನಗಡ(36), ದಶರಥ ನಿಂಗಪ್ಪ ಸೊನ್ನ(27) ಎಂದು ಬಂಧಿತ ನಕಲಿ ಪತ್ರಕರ್ತರಾಗಿದ್ದಾರೆ. ಶನಿವಾರ ಈ ಸಂಬಂಧ ಎಸ್‌ಪಿ ಎಸ್ಪಿ ಪ್ರಕಾಶ ನಿಕ್ಕಮ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಕಲಿ ಪತ್ರಕರ್ತರು ಎಂದು ಹೇಳಿಕೊಂಡು ನಾಲ್ವರ ತಂಡ ಜನರಿಗೆ ಹೆದರಿಸಿ …

Read More »

ಈರುಳ್ಳಿ ಬೆಲೆ ಕುಸಿತ

ವಿಜಯಪುರ: ಮೂರು ದಿನಗಳ ಹಿಂದೆ ವಿಜಯಪುರ ಎಪಿಎಂಸಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಈರುಳ್ಳಿ ದರ ಭಾನುವಾರ ದಿಢೀರ್ ಇಳಿಕೆ ಕಂಡಿದೆ. ಈರುಳ್ಳಿ ಬೆಳೆಗಾರರು ಉತ್ತಮ ಬೆಲೆ ನಿರೀಕ್ಷೆಯೊಂದಿಗೆ ತಮ್ಮ ಉತ್ಪನ್ನವನ್ನು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಸಾಗಿಸುತ್ತಿದ್ದಾರೆ. ಡಿ.5ರಂದು ಕ್ವಿಂಟಾಲ್‌ಗೆ 20 ಸಾವಿರ ರೂ.ಇದ್ದ ದರ ಇದೀಗ 7 ಸಾವಿರ ರೂ.ಗೆ ಇಳಿದಿದೆ. 13 ಸಾವಿರ ರೂ. ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಆವಕ ಹೆಚ್ಚಾಗಿದ್ದರಿಂದ ಖರೀದಿದಾರರು ಏಕಾಏಕಿ ಕಡಿಮೆ ದರ ಘೋಷಣೆ ಮಾಡಿದರು. …

Read More »

ಕೈ ನಾಯಕನ ಕಾಲಿಗೆರಗಿದ ಬಿಜೆಪಿ ಉಪಮೇಯರ್

ವಿಜಯಪುರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಮೀದ್ ಮುಶ್ರಿಫ್ ಗೆ ಕಾಲು ಮುಗಿದು ನಮಸ್ಕರಿಸಿದ ವಿಜಯಪುರ ಉಪಮೇಯರ್ ಗೋಪಾಲ ಘಟಕಾಂಬಳೆ ಬಿಜೆಪಿ ಉಪಮೇಯರ್ ಗೋಪಾಲ ಘಟಕಾಂಬಳೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಲು ಮುಟ್ಟಿ ನಮಸ್ಕರಿಸಿದ ಗೋಪಾಲ ಘಟಕಾಂಬಳೆ ಹಮೀದ ಮುಶ್ರಿಫ್ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ. Share

Read More »
error: Content is protected !!