Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಶಿವಮೊಗ್ಗ

ಶಿವಮೊಗ್ಗ

ಮೆಗ್ಗಾನ್ ಆಸ್ಪತ್ರೆಯಲ್ಲಿ ಧರ್ಮೆಗೌಡ ಮರಣೋತ್ತರ ಪರೀಕ್ಷೆ.

ಶಿವಮೊಗ್ಗ, ಡಿ.29: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ಇಂದು ಮುಂಜಾನೆ ರೈಲು ಹಳಿ ಮಧ್ಯೆ ಪತ್ತೆಯಾದ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತರಲಾಗಿದೆ. ಆಯಂಬುಲೆನ್ಸ್ ಮೂಲಕ ಧರ್ಮೇಗೌಡ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ತರಲಾಗಿದ್ದು, ಈ ವೇಳೆ ಅವರ ಕುಟುಂಬದವರು ಉಪಸ್ಥಿತರಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಪೂರ್ಣ ಸಿದ್ಧತೆ ಮಾಡಕೊಳ್ಳಲಾಗಿದೆ. ಶಿವಮೊಗ್ಗ ಜಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, …

Read More »

ಬಾಲಕಿಯ ಮೇಲೆ ಅತ್ಯಾಚಾರ: ಕಾಮುಕ ಅಂದರ್.

ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ 50 ವರ್ಷದ ವ್ಯಕ್ತಿವೋರ್ವ ಅಟ್ಟಹಾಸ ಮೆರೆದಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜಪ್ಪ (50) ಎಂಬಾತ ಎದುರು ಮನೆಯ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ. ಈ ಕುರಿತು ಬಾಲಕಿ ತನ್ನ ತಾಯಿಯ ಬಳಿ ಮಾಹಿತಿ ಹಂಚಿಕೊಂಡಿದ್ದಾಳೆ. ಈ ಸಂಬಂಧ ಮಹಿಳಾ ಪೊಲೀಸ್​ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಿದ್ದು, ಪೊಲೀಸರು ಆರೋಪಿ ಮಂಜಪ್ಪನನ್ನು …

Read More »

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಸ್ತರಣೆ.

ಶಿವಮೊಗ್ಗ: ನಗರದಲ್ಲಿ ಗುರುವಾರ ಬೆಳಗ್ಗೆ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದ ಬಳಿಕ ಉಂಟಾಗಿದ್ದ ಎರಡು ಕೋಮುಗಳ ನಡುವಿನ ಗಲಾಟೆ ನಿಯಂತ್ರಿಸಲು ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ವಿಸ್ತರಿಸಿ ಶಿವಮೊಗ್ಗ ತಹಸೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಕಳೆದ ಗುರುವಾರ ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಿಷೇಧಾಜ್ಞೆ ವಿಸ್ತರಿಸುವಂತೆ ಪೊಲೀಸ್ ಇಲಾಖೆ ತಹಸೀಲ್ದಾರ್​ಗೆ ಪ್ರಸ್ತಾವನೆ ಸಲ್ಲಿಸಿತ್ತು. ಪೊಲೀಸ್ …

Read More »

ಆಟೋ ಕಾರಿನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು.

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಿಂದ ನಗರದ ಗಾಂಧಿ ಬಜಾರ್ ಪ್ರಕ್ಷುಬ್ದವಾಗಿದೆ. ಗಾಂಧಿ ಬಜಾರ್ ಬಟ್ಟೆ ಮಾರ್ಕೆಟ್‌ನಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆದ ನಂತರ, ತಿರುಪಳ್ಳಯ್ಯನ ಕೇರಿಯ ಬಳಿ ಚಲಿಸುತ್ತಿದ್ದ ಆಟೋಗೆ ಕಿಡಿಗೇಡಿಗಳು ಕಲ್ಲು ಎತ್ತಿ ಹಾಕಿದ್ದಾರೆ. ಇದರಿಂದ ಆಟೋ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಗಾಬರಿಯಾದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲದೆ ಕಸ್ತೂರ್ಬಾ ರಸ್ತೆಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ …

Read More »

ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ.

ಶಿವಮೊಗ್ಗ: ಬೆಳಗ್ಗೆ ಲಷ್ಕರ್ ಮೊಹಲ್ಲಾದಲ್ಲಿ ಭಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದ ಹಿನ್ನೆಲೆ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಸುತ್ತಮುತ್ತ ದಿಢೀರ್ ಬಂದ್ ಮಾಡಲಾಗಿದೆ. ಈ ಘಟನೆಯನ್ನು ಖಂಡಿಸಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಎಸ್ಪಿ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ನಂತರ ಗಾಂಧಿ ಜಜಾರ್​​ನ ಬಟ್ಟೆ ಮಾರ್ಕೆಟ್ ಬಳಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಗಾಂಧಿ ಬಜಾರ್​ನ ವ್ಯಾಪಾರಿಗಳು ಏಕಾಏಕಿ …

Read More »

ಖತರ್ನಾಕ್ ಖದೀಮರ ಬಂಧನ.

ಶಿವಮೊಗ್ಗ: ಬಾವಿಯೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 38ಕೆಜಿ ಶ್ರೀಗಂಧವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನಾಲ್ವರನ್ನು ಹೊಸನಗರದಲ್ಲಿ ಬಂಧಿಸಿದ್ದಾರೆ. ಬಾಣಿಗ ನಿವಾಸಿ ಹನಿಫ್ ಸಾಬ್, ದಮ್ಮಾ ಗ್ರಾಮದ ಮಂಜುನಾಥ್,‌ ಹೊಸಕೆರೆ ಹಾಲೇಶ್ ಹಾಗೂ ಸಾಗರದ ಶಿವಪ್ಪ ನಾಯಕ ರಸ್ತೆ ನಿವಾಸಿ ಮಂಜುನಾಥ್ ಬಂಧಿತರು. ಹೊಸನಗರ ತಾಲೂಕಿನ ಬಾಣಿಗೆ ಗ್ರಾಮದ ಬಾವಿಯಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯ ದಳ …

Read More »

ಸಹ್ಯಾದ್ರಿ ಕಾಲೇಜು ಅಭಿವೃದ್ಧಿಗೆ 1 ಕೋಟಿ ರೂ. ಬಿಡುಗಡೆ: ಸಿಎಂ.

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಕೇಂದ್ರವಾದ ಸಹ್ಯಾದ್ರಿ ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು 1 ಕೋಟಿ ರೂ. ಘೋಷಿಸಿದ್ದಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣಾ ಕಟ್ಟಡ, ಪ್ರವೇಶ ದ್ವಾರ ಹಾಗೂ ಪುರುಷರ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳ ಉದ್ಘಾಟನೆಯನ್ನು ಸಿಎಂ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಹ್ಯಾದ್ರಿ ಕಾಲೇಜಿಗೆ ಒಂದು ಇತಿಹಾಸವಿದೆ. ಈ ಕಾಲೇಜಿನಲ್ಲಿ ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಪಿ. ಲಂಕೇಶ್‌ರಂತಹ ದಿಗ್ಗಜರು‌ ಓದಿದ್ದಾರೆ. …

Read More »

ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಸಿಎಂ.

ಶಿವಮೊಗ್ಗ : ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಬಿ‌ ಎಸ್ ಯಡಿಯೂರಪ್ಪ ಅವರು ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡ ಸೇರಿದಂತೆ ಪಕ್ಷದ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ನಗರದ ಸರ್ಕ್ಯೂಟ್ ಹೌಸ್ ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. Share

Read More »

ನಾಳೆ ತವರು ಜಿಲ್ಲೆಯ ಪ್ರವಾಸ ಕೈಗೊಂಡ ಸಿಎಂ.

ಶಿವಮೊಗ್ಗ : ಮುಖ್ಯಮಂತ್ರಿ ಯಡಿಯೂರಪ್ಪನವರು ನಾಳೆ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಚಿತ್ರದುರ್ಗದ ಕಾರ್ಯಕ್ರಮ ಮುಗಿಸಿ ಅಲ್ಲಿಂದ 10.45ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಆ ಬಳಿಕ 11 ಗಂಟೆಗೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ನಿರ್ವಹಣೆ ವಿಜ್ಞಾನ ಕಾಲೇಜ್‌ನಲ್ಲಿ ಆಯೋಜಿಸಿರುವ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣಾ ಕಟ್ಟಡ, ಸಹ್ಯಾದ್ರಿ ಕಲಾ ಕಾಲೇಜಿನ ದ್ವಾರ ಮತ್ತು ಪುರುಷ …

Read More »

ಯೋಗ ಇದ್ದವರಿಗೆ ಮಾತ್ರವೇ ಸಚಿವ ಸ್ಥಾನ : ಈಶ್ವರಪ್ಪ.

ಶಿವಮೊಗ್ಗ: ಮನೆಯಲ್ಲಿ ಹೆಣ್ಣಿದ್ದರೆ ಗಂಡು ಮಕ್ಕಳು ಹೆಣ್ಣನ್ನು ನೋಡಲು ಬರುತ್ತಾರೆ. ಯಾರಿಗೆ ಹೆಣ್ಣಿನ ಯೋಗ ಇರುತ್ತೋ ಅವರಿಗೆ ಮದುವೆ ಆಗುತ್ತೆ. ಹಾಗೆಯೇ ಸರ್ಕಾರದಲ್ಲಿ ಸಚಿವ ಸ್ಥಾನ ಇದ್ದಾಗ ಶಾಸಕರಿಗೆ ಮಂತ್ರಿ ಆಗುವ ಅಪೇಕ್ಷೆ ಇರುತ್ತದೆ. ಅದರಂತೆ ಯಾರಿಗೆ ಯೋಗ ಇರುತ್ತೋ ಅವರು ಮಂತ್ರಿ ಆಗುತ್ತಾರೆ ಎಂದು ಸಚಿವ ಕೆ.‌ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿವಾರು ಅಥವಾ ಜಿಲ್ಲಾವಾರು ಪ್ರಾತಿನಿಧ್ಯ ಕೊಡುವ ಪರಿಸ್ಥಿತಿಯ ರೀತಿಯಲ್ಲಿ ಹೋದರೆ ಬಿಜೆಪಿ ಸರ್ಕಾರಕ್ಕೆ ಕಷ್ಟವಾಗುತ್ತೆ. …

Read More »

ಮೂರು ಮದ್ಯದಂಗಡಿ ಮೇಲೆ ಅಬಕಾರಿ ದಾಳಿ.

ಶಿವಮೊಗ್ಗ: ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದ 3 ಮದ್ಯದಂಗಡಿಗಳ ಮೇಲೆ ಅಬಕಾರಿ ಉಪಆಯುಕ್ತ ಕ್ಯಾಪ್ಟನ್ ಅಜಿತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ತೀರ್ಥಹಳ್ಳಿ ಉಪ ವಿಭಾಗದಲ್ಲಿ ಎಂಆರ್​ಪಿ ದರಕ್ಕಿಂತ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಕುರಿತು ದೂರುಗಳು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ. ಎಂಆರ್​​ಪಿ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿದ ಉಪಆಯುಕ್ತ ಕ್ಯಾಪ್ಟನ್ ಅಜೀತ್ ಹಾಗೂ ಸಿಬ್ಬಂದಿ ದೂರು …

Read More »

ಉಪಚುನಾವಣೆಯಲ್ಲಿ ಗೆಲುವು ನಿಶ್ಚಿತ : ಸಿಎಂ.

ಶಿವಮೊಗ್ಗ: ಶಿರಾ ಹಾಗೂ ಆರ್​ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಯಂತೆ ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ಪುತ್ರ ವಿಜಯೇಂದ್ರ ಅವರ ಕಿಯಾ ಕಾರು ಶೋ ರೂಂ ಉದ್ಘಾಟನೆಗೆ ಆಗಮಿಸಿದ ವೇಳೆ ಮಾತನಾಡಿದ ಸಿಎಂ, ಈ ಮೊದಲು ಹೇಳಿದಂತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಹಾಗು ಇತರೆ ಪಕ್ಷದವರು ಏನೇ ಟೀಕೆ-ಟಿಪ್ಪಣಿ ಮಾಡಿದರೂ‌ ಕೂಡ ಜನ ನಮ್ಮ ಪರವಾಗಿ …

Read More »

ಈಶ್ವರಪ್ಪ ಅವರನ್ನು ನಂಬಿದರೆ ಮೂರು ನಾಮವೇ ಗತಿ.

ಶಿವಮೊಗ್ಗ : ಈಶ್ವರಪ್ಪನವರನ್ನು ನಂಬಿ ಹೋದರೆ ಚೆಂಬು, ಮೂರು ನಾಮವೇ ಗತಿ, ಅದಕ್ಕೆ ನಾನೇ ಉದಾಹರಣೆ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಮತ್ತು ಅವರ ನಡುವಿನ ವೈಮನಸ್ಸಿಗೆ ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರನ್ನು ಯಾವ ಕುರುಬರು ಏಕೆ ನಂಬೋದಿಲ್ಲಾ ಎಂದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​​ ಕಟ್ಟಿದವರಿಗೆಲ್ಲ ನಾಮ ಇಟ್ಟು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಈಶ್ವರಪ್ಪನವರು ಹಿಂದುಳಿದ ವರ್ಗದ ನಾಯಕರೆಂದು ಹೇಳಿಕೊಳ್ಳಲು ನಾಚಿಕೆ …

Read More »

ಮಹಾಮಾರಿಗೆ ಬಲಿಯಾದ ರಂಗಕರ್ಮಿ ಮೈ.ನಾ. ಸುಬ್ರಮಣ್ಯ.

ಶಿವಮೊಗ್ಗ: ರಂಗಕರ್ಮಿ, ಚಿತ್ರನಟ, ಪತ್ರಕರ್ತ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ಮೈ.ನಾ. ಸುಬ್ರಮಣ್ಯ ಅವರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. 63 ವರ್ಷದ ಮೈ.ನಾ. ಸುಬ್ರಮಣ್ಯ ಅವರಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಗರದ ಹೊರವಲಯದ‌ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳು ಟಿವಿ ಸೀರಿಯಲ್ ನಟರಾಗಿದ್ದಾರೆ. …

Read More »

ಕೊರೊನಾ ವಿರುದ್ಧ ವಿಶೇಷ ಜಾಗೃತಿ ಮೂಡಿಸಿದ ಯುವಕರು

ಶಿವಮೊಗ್ಗ: ಕೊರೊನಾ ನಿರ್ಬಂಧಗಳ ಮಧ್ಯೆಯೂ ಬೀದಿಗಿಳಿದು ಓಡಾಡುವ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ನಾನಾ ತಂತ್ರಗಳ ಮೊರೆ ಹೋಗಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ದೊಡ್ಡದಾಗಿ ‘ಬೀದಿಗೆ ಬಂದರೆ ನೀನು, ನಿಮ್ಮ ಮನೆಗೆ ಬರುವೆ ನಾನು’ ಎಂಬ ಬರಹ, ಮಾಸ್ಕ್‌ ಧರಿಸಿ, ಅಗತ್ಯ ವಸ್ತು ಖರೀದಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಬರಹಗಳು ಎಲ್ಲೆಡೆ ಕಾಣುತ್ತಿವೆ. ಜಿಲ್ಲಾ ಪೊಲೀಸರ ಸಹಯೋಗದಲ್ಲಿ ಕುಂಚ ಕಲಾವಿದರು ನಗರದ ಪ್ರಮುಖ ವೃತ್ತ, ರಸ್ತೆಗಲ್ಲಿ ಇಂತಹ ಚಿತ್ರ ಬರಹದ …

Read More »
error: Content is protected !!