Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಹಾವೇರಿ

ಹಾವೇರಿ

ತಡರಾತ್ರಿ ಜವರಾಯನ ಅಟ್ಟಹಾಸ: ಓರ್ವ ದುರ್ಮರಣ.

ಹಾವೇರಿ: ಬೈಕ್ ಮತ್ತು ಟಾಟಾ ಎಸ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಡ್ಡಿರುವ ಘಟನೆ ನಗರದ ಹಳೇ ಪಿ.ಬಿ. ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿಗ್ಗಾಂವಿಯ ರವಿ ಅಂಗಡಿ (15) ಎಂದು ಗುರುತಿಸಲಾಗಿದೆ. ನಾಗರಾಜ ತಳವಾರ ಮತ್ತು ಸುಭಾಷ್ ಕುರುಬರ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಯುವಕರು ಬೈಕ್ ನಲ್ಲಿ ಹಾವೇರಿಯಿಂದ ಶಿಗ್ಗಾಂವಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ …

Read More »

ಬ್ಯಾಡಗಿ ಮೆಣಸಿನಕಾಯಿಗೆ ಭಾರೀ ಡಿಮ್ಯಾಂಡ್ .

ಬ್ಯಾಡಗಿ (ಹಾವೇರಿ): ಪಟ್ಟಣದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಟೆಂಡರ್‌ಗಿಟ್ಟ ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿಗೆ ₹50,111 ಹಾಗೂ ಕಡ್ಡಿ ಮೆಣಸಿನಕಾಯಿಗೆ ₹38,009 ದಾಖಲೆಯ ಬೆಲೆ ದೊರೆತಿದೆ. ಗದಗ ಜಿಲ್ಲೆ ಬೆಟಗೇರಿಯ ರೈತ ಮಲ್ಲಿಕಾರ್ಜುನ ಕರೆಮಸ್ಟಿ ಅವರು ಬೆಳೆದ ಡಬ್ಬಿ ಮೆಣಸಿನಕಾಯಿಗೆ ವರ್ತಕ ಆರ್‌.ಆರ್‌.ಆಲದಗೇರಿ ದಾಖಲೆಯ ಬೆಲೆ ನೀಡಿ ಖರೀದಿಸಿದ್ದಾರೆ. ಮಾರುಕಟ್ಟೆ ಇತಿಹಾಸದಲ್ಲಿಯೇ ಡಬ್ಬಿ ಮೆಣಸಿನಕಾಯಿಗೆ ದೊರೆತ ಅತಿ ಹೆಚ್ಚಿನ ಬೆಲೆ ಇದು ಎನ್ನಲಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್‌ ಡಬ್ಬಿ …

Read More »

ಸರ್ವಕಾಲಿಕ ದಾಖಲೆ ನಿರ್ಮಿಸಿದ ಬ್ಯಾಡಗಿ ಮೆಣಸಿನಕಾಯಿ.

ಬ್ಯಾಡಗಿ: ಒಣಮೆಣಸಿನಕಾಯಿ ನಾಡು ಎಂತಲೇ ವಿಶ್ವ ಖ್ಯಾತಿಯನ್ನು ಗಳಿಸಿರುವ ಬ್ಯಾಡಗಿ ಮರಣಸಿನಕಾಯಿ ಮಾರುಕಟ್ಟೆ ಮತ್ತೊಂದು ದಾಖಲೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೌದು… ಪ್ರಪ್ರಥಮ ಬಾರಿಗೆ ಸರ್ವಕಾಲಿಕ ದರ ದಾಖಲಿಸುವ ಮೂಲಕ ಬ್ಯಾಡಗಿ ಮೆಣಸಿನಕಾಯಿ ದಾಖಲೆ ಬರೆದಿದೆ. ಬ್ಯಾಡಗಿಯ ಪ್ರಸಿದ್ಧ ಬಿ.ಡಿ.ಪಾಟೀಲ ಆ್ಯಂಡ್ ಸನ್ಸ್ ಅವರ ಅ೦ಗಡಿಯಲ್ಲಿ ಇಂದು ಡಬ್ಬಿ ತಳಿಯು ಕ್ವಿಂಟಾಲ್ ಗೆ 45,111 ರೂ ಗೆ ಖರೀದಿ ಆಗಿದೆ. ಈ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿ …

Read More »

ಕರ್ನಾಟಕ ಬಯಲು ಅಕಾಡೆಮಿ ಅಧ್ಯಕ್ಷ ಇನ್ನಿಲ್ಲ.

ಹಾವೇರಿ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಶಿಗ್ಗಾಂವಿಯ ಉತ್ಸವ ರಾಕ್ ಗಾರ್ಡನ್ ರೂವಾರಿ ಡಾ.ಟಿ.ಬಿ.ಸೊಲಬಕ್ಕನವರ(73) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.   ಕಳೆದ ಕೆಲವು ದಿನಗಳಿಂದ ಸೊಲಬಕ್ಕನವರ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತಾರಾಷ್ಟ್ರೀಯ ಕಲಾವಿದರಾಗಿ ಖ್ಯಾತರಾಗಿದ್ದ ಸೊಲಬಕ್ಕನವರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.   ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದ ಬಳಿ ಇರೋ ಜಮೀನಿನಲ್ಲಿ ಮಧ್ಯಾಹ್ನ 12 ಗಂಟೆಗೆ ಸೊಲಬಕ್ಕನವರ ಅಂತ್ಯಕ್ರಿಯೆ ನಡೆಯಲಿದೆ.  …

Read More »

ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಪೋಲಿಸ್ ತೆಕ್ಕೆಗೆ.

ಹಾನಗಲ್: 48 ವರ್ಷದ ಮಹಿಳೆಯ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿನಲ್ಲಿ ನಡೆದಿದೆ. ಮೃತ ಮಹಿಳೆ ದಾವಣೆಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದವರಾಗಿದ್ದಾರೆ. ನವೆಂಬರ್​​ 1ರಂದು ಮಹಿಳೆಯನ್ನ ಬೈಕ್ ಮೇಲೆ ಕರೆದುಕೊಂಡು ಬಂದಿದ್ದ ಆರೋಪಿ ಯಲ್ಲಪ್ಪ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆಡೂರು ಠಾಣೆ ಪೊಲೀಸರು ಘಟನೆ ಬಳಿಕ ಪರಾರಿಯಾಗಿದ್ದ …

Read More »

ಬಿ.ಸಿ.ಪಾಟೀಲ ಕೋರೋನಾ ದಿಂದ ಗುಣಮುಖ.

ಹಾವೇರಿ : ಕೃಷಿ ಸಚಿವ ಬಿ.ಸಿ.ಪಾಟೀಲ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. ಆತ್ಮೀಯ ಬಂಧುಗಳೇ, ನಿಮ್ಮೆಲ್ಲರ ಶುಭ ಹಾರೈಕೆ, ಸಕಲ ಮಠಾಧೀಶರ ಆಶೀರ್ವಾದದಿಂದ ನಾನು & ನನ್ನ ಕುಟುಂಬಸ್ಥರು ಕೊರೊನಾದಿಂದ ಗುಣಮುಖರಾಗಿದ್ದೇವೆ. ವೈದ್ಯರ ಸಲಹೆ ಮೇರೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ‌. ಕೊರೊನಾಗೆ ಭಯ ಪಡುವ ಅವಶ್ಯಕತೆ ಇಲ್ಲ, ಜಾಗೃತರಾಗಿರಿ. ನಿಮ್ಮೆಲ್ಲರ ಪ್ರೀತಿ, ಹಾರೈಕೆ & ಆಶೀರ್ವಾದಗಳಿಗೆ ಹೃತ್ಪೂರ್ವಕ ಧನ್ಯವಾದಗಳು! ಎಂದು ಟ್ವೀಟ್​​ ಮಾಡಿದ್ದಾರೆ. Share

Read More »

ಪ್ರತಿ ವ್ಯಕ್ತಿಯನ್ನು ಕಡ್ಡಾಯವಾಗಿ ತಪಾಸಣೆ: ಸಿಇಒ

ಹಾವೇರಿ: ಸಮುದಾಯ ಜನರ ಆರೋಗ್ಯದ ಸ್ಥಿತಿಗತಿಗಳನ್ನು ವೈಜ್ಞಾನಿಕ ತಪಾಸಣೆಯ ಮೂಲಕ ಮಾಹಿತಿ ಸಂಗ್ರಹಿಸಲು ಏ. 15ರಿಂದ ಜಿಲ್ಲೆಯಲ್ಲಿ ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲೆಯ ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಸಭೆ ನಡೆಸಿ ‘ಕಮ್ಯುನಿಟಿ ಹೆಲ್ತ್ ಚೆಕಪ್’ ಕುರಿತು ಚರ್ಚಿಸಿದರು. ಜಿಲ್ಲೆಯಲ್ಲಿ ಕೋವಿಡ್‌-19 ಪಾಸಿಟಿವ್ ಪ್ರಕರಣಗಳು …

Read More »

ಪೊಲೀಸ್ ರಿಗೆ ಖಡಕ್ ಸೂಚನೆ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ್

ಹಾವೇರಿ : ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿನಿಂದ ಏಪ್ರಿಲ್ 11ರವರೆಗೆ ಲಾಕ್‌ಡೌನ್ ನಿಂದ ರೈತರ ಹಾಗೂ ಕೃಷಿ ಸ್ಥಿತಿಗತಿ ಅವಲೋಕನಕ್ಕೆ ಖುದ್ದು ಪರಿಶೀಲನೆಗೆ ಮುಂದಾಗಿದ್ದಾರೆ. ಇಂದು ಮೊದಲ ದಿನದ ಪ್ರವಾಸದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮತಕ್ಷೇತ್ರ ಹಿರೇಕೆರೂರು ನಿವಾಸದಿಂದ ಶಿಗ್ಗಾಂ ಮಾರ್ಗವಾಗಿ ಇಂದು ಬೆಳಿಗ್ಗೆನೆ ಸಚಿವರು ಪ್ರವಾಸ ಕೈಗೊಂಡಿದ್ದು, ಮಾರ್ಗಮಧ್ಯೆ ಕಂಡುಬಂದ ಸಮಸ್ಯೆಗಳತ್ತವೂ ಸಚಿವರು ಗಮನ ಹರಿಸಿದರು. ಈ ವೇಳೆ ಕೆಲವೆಡೆ ಪೊಲೀಸರಿಂದ ಅನಾವಶ್ಯಕ ತೊಂದರೆ …

Read More »

ಲೈಂಗಿಕ ದೌರ್ಜನ್ಯ; ಆರೋಪಿಗೆ ಜೀವಾವಧಿ ಶಿಕ್ಷೆ.

ಹಾವೇರಿ, ಮಾರ್ಚ್ 5: ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ 20 ವರ್ಷದ ಆರೋಪಿ ಮಹಾರುದ್ರಗೌಡ ವೀರಭದ್ರಗೌಡ ಸಿದ್ಧನಗೌಡ್ರ ಎಂಬವನಿಗೆ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ. ನ್ಯಾಯಾಧೀಶರಾದ ಕಿರಣ ಕಿಣಿ ಅವರು ತೀರ್ಪು ನೀಡಿದ್ದಾರೆ. ಆರೋಪಿಯು ಎಸಗಿದ ಕೃತ್ಯದ ಕುರಿತು ಯಾರಿಗಾದರೂ ಹೇಳಿದರೆ ಪ್ರಾಣ …

Read More »

ಸಾಲಬಾಧೆಗೆ ರೈತ ನೇಣಿಗೆ ಶರಣು.

ಹಾವೇರಿ : ರೈತನೋರ್ವ ಸಾಲಬಾಧೆ ತಾಳಲಾರದೇ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ. ರೈತ ಕೊಟ್ರೇಶಪ್ಪ ಬಸಪ್ಪ ಅಣ್ಣಿಗೇರಿ (೩೫) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಪ್ರಸಕ್ತ ವರ್ಷದ ಹಿಂಗಾರು-ಮುಂಗಾರು ವಿಪರೀತ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿತ್ತು, ಅಲ್ಲದೇ ಕೆನರಾ ಬ್ಯಾಂಕಿನಲ್ಲಿ ೨ ಲಕ್ಷ ೨೦ ಸಾವಿರ ರೂ ಸಾಲವಿದ್ದು, ಯಾವುದೇ ಪರಿಹಾರ ಲಭ್ಯವಾಗದ ಕಾರಣ ರೈತ ಕೊಟ್ರೇಶಪ್ಪ ಮನೆಯಲ್ಲಿ ಯಾರು ಇಲ್ಲದ …

Read More »

ಸರ್ಕಾರ ಮೆಕ್ಕೇಜೋಳಕ್ಕೆ ಶೀಘ್ರ ಬೆಂಬಲ ಬೆಲೆ ಕೊಡಬೇಕು

ಹಾವೇರಿ : ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ರೈತರ ಬೇಡಿಕೆಯಂತ ಮಾರ್ಚ್ ತಿಂಗಳು ಸರ್ಕಾರದಿಂದ ಮೆಕ್ಕೇಜೋಳವನ್ನ ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ ಹೇಳಿದರು. ತಾಲ್ಲೂಕಿನ ಬುರುಡಿಕಟ್ಟಿ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಾಮಸ್ಥರ ವಂತಿಯಿಂದ ನಿರ್ಮಿಸಿದ 3 ಸ್ಮಾರ್ಟ್ ಕ್ಲಾಸ್ ಮತ್ತು ವಾರ್ಷಿಕೋತ್ಸವನ್ನ ಉದ್ಘಾಟಿಸಿ ಅವರು ಮಾತನಾಡಿದರು. ಖರೀದಿ ಕೇಂದ್ರ ಕುರಿತು ಕಮೀಟಿ ರಚಿಸಲು ಸಿಎಂ ತಿಳಿಸಿದ್ದಾರ. ಕಮೀಟಿಯಲ್ಲಿ ನಾನು …

Read More »

ಉದ್ಯೋಗಾಕಾಂಕ್ಷಿಗಳಿಗೆ ಗೂಡ್ ನ್ಯೂಸ್

ಹಾವೇರಿ : ಇಂದಿನ ಜಾಗತೀಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ ತಕ್ಕಂತೆ ವೃತ್ತಿಕೌಶಲ್ಯ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಆವರಣದಲ್ಲಿ ಆಯೋಜಿಸಿದ …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್

ಹಾವೇರಿ : ಇಂದಿನ ಜಾಗತೀಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ ತಕ್ಕಂತೆ ವೃತ್ತಿಕೌಶಲ್ಯ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಆವರಣದಲ್ಲಿ ಆಯೋಜಿಸಿದ …

Read More »

ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ.

ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಏಲಕ್ಕಿ ನಾಡು ಹಾವೇರಿ ಜಿಲ್ಲೆಗೆ ಮರಳು ಮಾಫಿಯಾ ಎನ್ನುವ ಭೂತ ಕಾಡುತ್ತಿದೆ. ಪ್ರಮುಖ ನದಿಗಳಾದ ವರದಾ ಹಾಗೂ ತುಂಗಭದ್ರಾ ನದಿಯ ಒಡಲನ್ನು ಹಗಲು ರಾತ್ರಿ ಎನ್ನದೆ ಬಗೆದು ಅಕ್ರಮವಾಗಿ ಮರಳು ಸಾಗಣಿಗೆ ಮಾಡುತ್ತಿದ್ದಾರೆ. ಜಿಲ್ಲೆಯ ಜೀವನಾಡಿ ಆಗಿರುವ ವರದಾ, ತುಂಗಭದ್ರಾ ನದಿಯ ಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಪ್ರತಿನಿತ್ಯ ಇಲ್ಲಿಂದ ನೂರಾರು ಲಾರಿಗಳಲ್ಲಿ ಮರಳು …

Read More »

ಮೈಲಾರಲಿಂಗೇಶ್ವರ ಹುಂಡಿಯಲ್ಲಿ 36 ಲಕ್ಷ ಸಂಗ್ರಹ.

ಹೂವಿನಹಡಗಲಿ(ಫೆ.16): ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿರುವ 9 ತಾತ್ಕಾಲಿಕ ಹುಂಡಿ ಹಾಗೂ 3 ಮುಖ್ಯ ಹುಂಡಿಗಳಲ್ಲಿ ಒಟ್ಟು 36,86,183 ಕಾಣಿಕೆ ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅ​ಧಿಕಾರಿ ಎಂ.ಎಚ್‌. ಪ್ರಕಾಶ ರಾವ್‌ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಸಂಸದ ವೈ. ದೇವೇಂದ್ರಪ್ಪ, ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌, ಮುಜರಾಯಿ ಇಲಾಖೆಯ ಬಳ್ಳಾರಿ ಅ​ಧೀಕ್ಷಕ ಎಚ್‌.ಕೆ. ಮಲ್ಲಪ್ಪ, ಗ್ರಾಪಂ ಅಧ್ಯಕ್ಷೆ ಸರೋಜಮ್ಮ …

Read More »
error: Content is protected !!