Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಹಾಸನ

ಹಾಸನ

ಎಚ್. ಡಿ. ರೇವಣ್ಣಗೆ ಟಾಂಗ್ ನೀಡಿದ ಸೋಮಶೇಖರ್.

ಹಾಸನ: ನಿಂಬೆಹಣ್ಣು ಇಡ್ಕೊಂಡು ಓಡಾಡುವವರ ಆಟ ಇನ್ನು ಮುಂದೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಮಾಜಿ ಸಚಿವ ಹೆಚ್.​​ಡಿ.ರೇವಣ್ಣನಿಗೆ ಟಾಂಗ್ ನೀಡಿದರು. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿಯ ಗ್ರಾಮ ಸ್ವರಾಜ್​ ಸಮಾವೇಶದಲ್ಲಿ ಅವರು ಮಾತನಾಡಿದರು. ಕೆಲವರು ನಿಂಬೆಹಣ್ಣು ಇಟ್ಟುಕೊಂಡು ಹಾಸನ ಜನರನ್ನು ಮರುಳು ಮಾಡಿ ಓಡಾಡುತ್ತಾರೆ. ಆದರೆ ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ನಡೆಯೋದಿಲ್ಲ. ಅವರ ಪ್ರಭಾವ ಬೇರೆಯವರಿಗಿಂತ ನನಗೆ …

Read More »

ಪಕ್ಷದ ಜೊತೆ ದೇಶವನ್ನೂ ಕಟ್ಟುವ ಪಣ ತೊಡೋಣ.

ಹಾಸನ: ಪಕ್ಷವನ್ನು ಕಟ್ಟುವುದರ ಜೊತೆ ಜೊತೆಯಲ್ಲಿ ಉತ್ತಮ ದೇಶವನ್ನು ನಿರ್ಮಿಸುವ ಕೆಲಸ ಮಾಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ಕರೆ ನೀಡಿದರು. ನಗರದ ಶ್ರೀರಾಮ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ನಗರ ಮಂಡಲದ ಪ್ರಶಿಕ್ಷಣ ಹತ್ತು ಅಂಶಗಳ ವಿಷಯ ಚರ್ಚೆ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಕಟ್ಟುವುದರ ಜೊತೆಯಲ್ಲಿ ಸಮಾಜವನ್ನು ಕಟ್ಟುವ ವಿದ್ಯೆಯೇ ನಮ್ಮ ಸಿದ್ಧಾಂತ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದನ್ನು …

Read More »

ಚಿರತೆಗಳ ಅನುಮಾನಾಸ್ಪದ ಸಾವು.

ಹಾಸನ: ಎರಡು ಚಿರತೆಗಳು ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ. ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಕಲ್ಗುಂಡಿ ಗ್ರಾಮದ ಬಳಿ ಒಂದು ವರ್ಷದ ಎರಡು ಗಂಡು ಚಿರತೆಗಳು ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿದೆ. ಈಗಾಗಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಗಳ ಕಳೆಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪಶುವೈದ್ಯಾಧಿಕಾರಿಗಳಾದ ಹರೀಶ್ ಮತ್ತು ವರದರಾಜ್ ಚಿರತೆಗಳ ಕಳೆಬರದ ಮರಣೋತ್ತರ ಪರೀಕ್ಷೆ ಮಾಡಿದ್ದು, ವರದಿ ಬಂದ ಬಳಿಕ ಸಾವಿನ …

Read More »

ಹಾಸನಾಂಬೆ ಅರ್ಚಕರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ.

ಹಾಸನ: ಹಾಸನಾಂಬೆ‌ಗೆ ಪೂಜೆ ಸಲ್ಲಿಸುವ ಅರ್ಚಕರಿಗೆ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿ ಪ್ರವೇಶ ದ್ವಾರಕ್ಕೆ ಕಂದಾಯ ಇಲಾಖೆ‌ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಬೆಳಗ್ಗೆ 5.30 ರಿಂದ ಊಟ, ನೀರಿಲ್ಲದೆ ದೇಗುಲದಲ್ಲಿ ಅರ್ಚಕರ ತಂಡ ಪೂಜೆ ಸಲ್ಲಿಸುತ್ತಿದೆ. ಅವರನ್ನು ಹೊರಗೆ ಕಳಿಸಿ ಮತ್ತೊಂದು ತಂಡ ಪೂಜೆ ಸಲ್ಲಿಸುವುದಕ್ಕೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಂದಿದೆ. ಆದರೆ, ಅಧಿಕಾರಿಗಳು ದೇಗುಲದ ಒಳಗೆ ಬಿಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಂಟೆ ಗಟ್ಟಲೆ ಕಾಯ್ದರೂ ಒಳ ಬಿಡುತ್ತಿಲ್ಲ. …

Read More »

ಹಾಸನಾಂಬೆ ದರ್ಶನಕ್ಕೆ ಬೇಧ ಭಾವ ಸಲ್ಲದು : ಕರವೇ

ಹಾಸನ: ಕೋವಿಡ್ ಬಿಕ್ಕಟ್ಟು ಹಿನ್ನೆಲೆ ಈ ಬಾರಿ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿದೆ. ಆದರೆ ಗಣ್ಯವ್ಯಕ್ತಿಗಳಿಗೆ ಅವರ ಕುಟುಂಬದವರಿಗೆ ಅವಕಾಶ ನೀಡಿರುವುದರಿಂದ ಭಕ್ತರು ಅಸಮಾಧಾನಗೊಂಡಿದ್ದಾರೆ. ಈಗಾಗಲೇ ಎರಡು ಮೂರು ಬಾರಿ ಮಾಜಿ ಸಚಿವ ರೇವಣ್ಣ ಜಿಲ್ಲಾಡಳಿತದ ವಿರುದ್ಧ ಗುಡುಗಿದರು. ಬಳಿಕ ಜನಪ್ರತಿನಿಧಿಗಳಿಗೆ ನಿತ್ಯ 100 ಮಂದಿಯಂತೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಬೇಸರವಾಗಿತ್ತು. ಹೀಗಾಗಿ ಇದೀಗ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೇವಲ ಜನಪ್ರತಿನಿಧಿಗೆ …

Read More »

ಹಾಸನದಲ್ಲಿ 129 ಕೊರೊನಾ ಪತ್ತೆ, ಇಬ್ಬರು ಮೃತ.

ಹಾಸನ: ಜಿಲ್ಲೆಯಲ್ಲಿ‌ ಇಂದು 129 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಗುರುವಾರ ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-1, ಅರಕಲಗೂಡು-21, ಅರಸೀಕೆರೆ-17, ಬೇಲೂರು-16, ಚನ್ನರಾಯಪಟ್ಟಣ-18, ಹಾಸನ-45, ಹೊಳೆನರಸೀಪುರ-8, ಸಕಲೇಶಪುರ-0, ಇತರೆ- 3 ಒಟ್ಟು 129 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 4115 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 502 ಜನರು ಗುಣಮುಖರಾಗಿ …

Read More »

ಕಾರು ಆಟೋ ಮುಖಾಮುಖಿ: ಪಾದಯಾತ್ರೆ ಹೊರಟಿದ್ದ ಭಕ್ತ ಸಾವು.

ಹಾಸನ(ಫೆ.14): ಹಾಸನದಲ್ಲಿ ಕಾರು ಹಾಗೂ ಆಟೋ ಮುಖಾಮುಖಿಯಾಗಿ ಭೀಕರ ಅಪಘಾತವಾಗಿದ್ದು, ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಆಟೋ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಪಾದಚಾರಿ ಮೇಲೆ‌ ಉರುಳಿಬಿದ್ದಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತ ನಾಗರಾಜ್(55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಿ.ಎಂ ರಸ್ತೆಯಲ್ಲಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ …

Read More »

ಜೀವದ‌ ಹಂಗು ತೊರೆದು ಲಾರಿಯನ್ನು ಕೆರೆಗೆ ಇಳಿಸಿದ ಚಾಲಕ

ಹಾಸನ: ಹುಲ್ಲು ತುಂಬಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸಮಯಪ್ರಜ್ಞೆ ಮೆರೆದ ಚಾಲಕ ಜೀವದ‌ ಹಂಗು ತೊರೆದು ಧಗಧಗಿಸಿ ಉರಿಯುತ್ತಿದ್ದ ಲಾರಿಯನ್ನ ಕೆರೆಗೆ ಇಳಿಸಿದ್ದಾನೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಚೌರಗಲ್ಲು ಗ್ರಾಮದಲ್ಲಿ ಘಟನೆ ನಡೆದಿದ್ದು. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೇ ತಪ್ಪಿದೆ. ರೈತರಿಂದ ಹುಲ್ಲು ಖರೀದಿಸಿ ಕೊಂಡೊಯ್ಯುತ್ತಿದ್ದ ಸೀಗೆಗೌಡನಕೊಪ್ಪಲು ಗ್ರಾಮದ ಆದರ್ಶ ಎಂಬವರ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದ್ದು, …

Read More »

ಹುಲ್ಲಿನ ಲಾರಿಗೆ ಬೆಂಕಿ: ಸಮಯಪ್ರಜ್ಞೆ ಮೆರೆದ ಚಾಲಕ!

ಹಾಸನ: ಹುಲ್ಲು ತುಂಬಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸಮಯಪ್ರಜ್ಞೆ ಮೆರೆದ ಚಾಲಕ ಜೀವದ‌ ಹಂಗು ತೊರೆದು ಧಗಧಗಿಸಿ ಉರಿಯುತ್ತಿದ್ದ ಲಾರಿಯನ್ನ ಕೆರೆಗೆ ಇಳಿಸಿದ್ದಾನೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಚೌರಗಲ್ಲು ಗ್ರಾಮದಲ್ಲಿ ಘಟನೆ ನಡೆದಿದ್ದು. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೇ ತಪ್ಪಿದೆ. ರೈತರಿಂದ ಹುಲ್ಲು ಖರೀದಿಸಿ ಕೊಂಡೊಯ್ಯುತ್ತಿದ್ದ ಸೀಗೆಗೌಡನಕೊಪ್ಪಲು ಗ್ರಾಮದ ಆದರ್ಶ ಎಂಬವರ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದ್ದು, ನೋಡ …

Read More »

ಚರ್ಮ ರೋಗಕ್ಕೆ ಹೆದರಿ ಮನೆ ಬಿಟ್ಟು ಹೋದ ಮಹಿಳೆ.

ಹಾಸನ: ಚರ್ಮರೋಗಕ್ಕೆ ಅಂಜಿ ಮಹಿಳೆಯೊಬ್ಬರು ಮನೆ ಬಿಟ್ಟು ಹೋದ ಘಟನೆ ನಡೆದಿದೆ. ಅನುಶ್ರೀ(30) ನಾಪತ್ತೆಯಾಗಿರೋ ಮಹಿಳೆ. ಈಕೆಗಾಗಿ ಇಬ್ಬರು ಮಕ್ಕಳೊಂದಿಗೆ ಪತಿ ಅಂತೋಣಿ ಬೀದಿ ಬೀದಿ ಅಲೆದಾಟ ನಡೆಸುತ್ತಿದ್ದಾರೆ. ಚರ್ಮರೋಗ ತನ್ನ ಮಕ್ಕಳಿಗೂ ವ್ಯಾಪಿಸಲಿದೆ ಎಂದು ರಾತ್ರೋ ರಾತ್ರಿ ಮಹಿಳೆ ಮನೆಬಿಟ್ಟು ಹೋಗಿದ್ದಾಳೆನ್ನಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದಾಸನಾಪುರದಲ್ಲಿ ಘಟನೆ ನಡೆದಿದೆ. 2019 ರ ಅಕ್ಟೋಬರ್ 17 ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಹಾಸನ, ಶಿವಮೊಗ್ಗ, ದಾವಣಗೆರೆ ಸೇರಿ ವಿವಿಧೆಡೆ ಮಡದಿಗಾಗಿ …

Read More »

ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ ಯುವಕ.

ಹಾಸನ : ನಗರದಲ್ಲಿ ಡೈರಿ ವೃತ್ತದ ಬಳಿ ಬೆಳಗ್ಗೆ ಬಸ್‌ಗಾಗಿ ಕಾಯುತ್ತಿದ್ದ ಯುವತಿ ಹೊತ್ತೊಯ್ದು ಕಾರಿನಲ್ಲೇ ಮತ್ತೊಬ್ಬರ ಸಹಾಯದಿಂದ ಬಲವಂತವಾಗಿ ತಾಳಿಕಟ್ಟಿದ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಯುವತಿಯ ಅತ್ತೆ ಮಗನಾದ ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ಮನು ಎಂಬಾತನಿಂದ‌ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ‌ತನ್ನ ಸ್ನೇಹಿತನಿಂದ‌ ಹುಡುಗಿಯನ್ನ ಬಂಧಿಸಿಟ್ಟು ತಾಳಿ ಕಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಮನು ಅತ್ತೆ ಮಗಳನ್ನ ಇಷ್ಟಪಡುತ್ತಿದ್ದ, ಆದರೆ, ಯುವತಿ ಈತನನ್ನು ಮದುವೆಯಾಗಲು ನಿರಾಕರಿಸಿದ್ದಳು. ಯುವತಿಯ ವಿರೋಧವಿದ್ದರೂ …

Read More »

ಅನುಯಾಯಿ ಜೊತೆಗೆ ಚರ್ಚ್ ಫಾದರ್‌ನ ಲವ್ವಿಡವ್ವಿ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್‌

ಹಾಸನ : ಚರ್ಚ್ ಫಾದರ್‌ರೊಬ್ಬರು ತಮ್ಮ ಅನುಯಾಯಿ ಜೊತೆಗೆ ಲವ್ವಡವ್ವಿ ಶುರು ಹಚ್ಚಿಕೊಂಡಿದ್ದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಸನ ಜಿಲ್ಲೆ ಚೆನ್ನಪಟ್ಟಣ ತಾಲೂಕಿನ ದಾಸನಪುರದಲ್ಲಿರುವ ಚರ್ಚ್ ಫಾದರ್‌ ಆಗಿದ್ದ ಕೇರಳ ಮೂಲದ ವರದರಾಜು ಎನ್ನುವವರ ಯುವತಿ ಜೊತೆಗೆ ಆತ್ಮೀಯವಾಗಿ ನಡೆದುಕೊಂಡಿದ್ದ ಫೋಟೋಗಳು ವೈರಲ್‌ ಆಗಿದೆ. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳು ವೈರಲ್‌ ಆಗುತ್ತಿದ್ದ ಹಾಗೇ ವರದರಾಜು ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದು, ತಾನು ಇನ್ಮುಂದೆ ಫಾದರ್‌ ಆಗಿ …

Read More »

ಮೂಲಭೂತ ಸೌಲಭ್ಯವಿದ್ದರಷ್ಟೇ ಹಾಸನದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮತಿ

ಹಾಸನ : ಕಡ್ಡಾಯವಾಗಿ ರಸ್ತೆ, ಒಳಚರಂಡಿ, ಕುಡಿಯುವ ನೀರನ್ನೊಳಗೊಂಡ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರಷ್ಟೇ ಜಿಲ್ಲೆಯಲ್ಲಿ ಲೇಔಟ್‍ಗಳನ್ನು ನಿರ್ಮಿಸಲು ಅನುಮತಿ ನೀಡಬೇಕು ಎಂದು ಹಾಸನ ಬಿಜೆಪಿ ಶಾಸಕರಾದ ಪ್ರೀತಂ ಜೆ ಗೌಡ ತಿಳಿಸಿದ್ದಾರೆ. ನಗರಸಭೆ, ಹಾಸನ ಪುರಸಭೆ, ಹೊಳೆನರಸೀಪುರ ಹಾಗೂ ಬೇಲೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ನದಿಗೆ ಸೇರುತ್ತಿರುವ ಬಗ್ಗೆ ಪರಿಹಾರೋಪಾಯಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ …

Read More »

ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ

ಹಾಸನ : ಸಿಎಂ ಬಿ.ಎಸ್. ಯಡಿಯೂರಪ್ಪ ರಾಜ್ಯದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ರೈತರ ಹಿತ ಕಾಯುವ ನಿಟ್ಟಿನಲ್ಲಿ ಮುಂದಿನ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಮುಂದಿನ ಸಾಲಿನ ಬಜೆಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಬಜೆಟ್ ನಲ್ಲಿ ಹೊಸ ಅಂಶಗಳನ್ನು ಸೇರಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯಗಳನ್ನು ಒಗ್ಗೂಡಿಸಿಕೊಂಡು …

Read More »

ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಿದೆಯೇ ರಾಜ್ಯ ಸರ್ಕಾರ?

ಹಾಸನ : ಸಿಎಂ ಬಿ.ಎಸ್. ಯಡಿಯೂರಪ್ಪ ರಾಜ್ಯದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ರೈತರ ಹಿತ ಕಾಯುವ ನಿಟ್ಟಿನಲ್ಲಿ ಮುಂದಿನ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಮುಂದಿನ ಸಾಲಿನ ಬಜೆಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಬಜೆಟ್ ನಲ್ಲಿ ಹೊಸ ಅಂಶಗಳನ್ನು ಸೇರಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯಗಳನ್ನು ಒಗ್ಗೂಡಿಸಿಕೊಂಡು …

Read More »
error: Content is protected !!