Hiring Reporter’s For more Information Contact Above Number 876 225 4007 . Program producer
Home / ರಾಜಕೀಯ

ರಾಜಕೀಯ

ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಸಿಎಂ.

ಬೆಂಗಳೂರು: ನೇರ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಸರಳೀಕರಣಗೊಳಿಸುವತ್ತ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ತೆರಿಗೆದಾರರು ದೇಶದ ಪ್ರಗತಿಯ ಪೋಷಕರು. ಆಚಾರ್ಯ …

Read More »

ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ: ಮೋದಿ ಚಾಲನೆ.

ನವದೆಹಲಿ: ದೇಶದಲ್ಲಿ ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ’ ವೇದಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪಾರದರ್ಶಕ …

Read More »

ಬೆಂಗಳೂರು ಗಲಭೆಯಲ್ಲಿ ಕಾಂಗ್ರೆಸ್ ಕೈವಾಡ !

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ದುಷ್ಕರ್ಮಿಗಳಿಗೆ ಕಾಂಗ್ರೆಸ್ ಬೆಂಬಲ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ, …

Read More »

ಕಟೀಲ್ ಗೆ ತಿರುಗೇಟು ನೀಡಿದ ಸಿದ್ದು.

ಬೆಂಗಳೂರು: ತಮ್ಮನ್ನು ಲೇವಡಿ ಮಾಡಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ದಲಿತರ ಪರವೋ ಅಥವಾ ಭಯೋತ್ಪಾದಕರ ಪರವೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ …

Read More »

ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ: ದೇವೇಗೌಡ

ಬೆಂಗಳೂರು: ರಾಜ್ಯ ಸರ್ಕಾರ ಭೂ ಸುಧಾಕರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕಾ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ನಾವು ನಾಳೆಯಿಂದ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. …

Read More »

ಸಾಮಾಜಿಕ ಅಂತರದೊಂದಿಗೆ ಅಧಿವೇಶನ ನಡೆಸಲು ಚಿಂತನೆ.

ತುಮಕೂರು :ಸೆಪ್ಟೆಂಬರ್ 23 ರೊಳಗೆ ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಅಧಿವೇಶನ ನಡೆಸುವ ಕುರಿತು ಮಾತುಕತೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು. ತುಮಕೂರಿನಲ್ಲಿ …

Read More »

ಜಮೀರ್ ವಿರುದ್ಧ ಕಿಡಿಕಾರಿದ ಸುಧಾಕರ್.

ಬೆಂಗಳೂರು: ಗಲಭೆ ಮಾಡಿದ ಆರೋಪಿಗಳ ಮನೆಗೆ ಒಬ್ಬ ಮಾಜಿ ಸಚಿವ ಹೋಗ್ತಾರೆ ಅಂದ್ರೆ ಇದರ ಹಿಂದೆ ಯಾರಿದ್ದಾರೆ ಅಂತ ಸ್ಪಷ್ಟವಾಗುತ್ತದೆ ಎಂದು ಸಚಿವ ಡಾ. ಕೆ. ಸುಧಾಕರ್ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ …

Read More »

ಟ್ರಬಲ್ ಶೂಟರ್ ಗೆ ಅಶ್ವತ್ ನಾರಾಯಣ ಟಾಂಗ್.

ಬೆಂಗಳೂರು: ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಗಲಭೆಗೆ ಕಾರಣವಾದ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆನ್ನಲಾದ ನವೀನ್ ಕಾಂಗ್ರೆಸ್ ಕಾರ್ಯಕರ್ತ ಎಂಬ ಮಾಹಿತಿ ಕೊರತೆ ಡಿ ಕೆ ಶಿವಕುಮಾರ್ ಅವರಿಗೆ ಇದೆ ಎಂದು ಡಿಸಿಎಂ …

Read More »

ಬಿಜೆಪಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ.

ಬಾಗಲಕೋಟೆ: ನಾಳೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಜರುಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆನ್​ಲೈನ್ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ …

Read More »

ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸಭೆ ಪ್ರಾರಂಭ.

ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ ದಾಳಿಯ ತನಿಖೆಗೆ ರಚನೆಯಾಗಿರುವ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸಭೆ ಆರಂಭವಾಗಿದೆ. ಮಾಜಿ ಡಿಸಿಎಂ ಹಾಗೂ ಮಾಜಿ ಗೃಹ ಸಚಿವರಾಗಿರುವ ಡಾ. ಜಿ.ಪರಮೇಶ್ವರ್ ನೇತೃತ್ವದಲ್ಲಿ …

Read More »

8 ಜಿಲ್ಲೆಗಳಲ್ಲಿ ಬಿಜೆಪಿ‌ ಕಚೇರಿ ನಿರ್ಮಾಣಕ್ಕೆ ಸಿದ್ದತೆ.

ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಜಿಲ್ಲಾ ಮತ್ತು ಮಂಡಲ ಕಾರ್ಯಾಲಯ ಭವನಗಳ ಭೂಮಿಪೂಜೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನಾಳೆ ವರ್ಚುವಲ್ ರ‍್ಯಾಲಿ ಮೂಲಕ …

Read More »

ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್.

3.6 ಲಕ್ಷ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕತವಾಗಿದ್ದು, ಕೇಂದ್ರ ಕಾರ್ಮಿಕ ಇಲಾಖೆ ಸರ್ಕಾರಿ ನೌಕರರ take home salary ಯನ್ನು ಹೆಚ್ಚಿಸುವ ಸಿದ್ಧತೆ ಮಾಡಿಕೊಂಡಿದೆ. ಇದರ ಅಡಿ ಸುಮಾರು 15 ಸಾವಿರವರೆಗೆ ಮಾಸಿಕ …

Read More »

ನೌಕರರಿಗೆ ಆಘಾತಕಾರಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ.

ನವದೆಹಲಿ, ಮಾರ್ಚ್ 5: ನೌಕರರ ಭವಿಷ್ಯ ನಿಧಿಯ (ಇಪಿಎಫ್) ಮೇಲಿನ ಬಡ್ಡಿದರವನ್ನು ತಗ್ಗಿಸಲಾಗಿದೆ. ಈ ಮೂಲಕ ಸುಮಾರು 6 ಕೋಟಿ ನೌಕರರಿಗೆ ಆಘಾತ ಉಂಟಾಗುವ ಸುದ್ದಿ ನೀಡಲಾಗಿದೆ. ನೌಕರರ ಭವಿಷ್ಯ ನಿಧಿಯ (ಇಪಿಎಫ್) ಮೇಲಿನ …

Read More »

ಅನಾರೋಗ್ಯ ಪೀಡಿತ ವಿದ್ಯಾರ್ಥಿಗಳಿಗಾಗಿ ಸುತ್ತೋಲೆ ಹೊರಡಿಸಿದ ಸರ್ಕಾರ. ‌

ಬೆಂಗಳೂರು: ರಾಜ್ಯದಲ್ಲಿ ಕೊರೋನ ವೈರಸ್ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಹೊರದೇಶದಿಂದ …

Read More »

ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭ. ‌

ಬೆಂಗಳೂರು : ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಅನುಷ್ಠಾನಗೊಳ್ಳದ 2019 – 20 ನೇ ಸಾಲಿನ ಆಯವ್ಯಯ ಕಾರ್ಯಕ್ರಮಗಳು, ರೈತರ ಸಾಲ …

Read More »

ಮೃತ ಪತ್ರಕರ್ತರ ಕುಟುಂಬಗಳಿಗೆ ಸಿಎಂ ಬಂಪರ್ ಸುದ್ದಿ.

ಬೆಂಗಳೂರು, ಫೆ.29: ಅಕಾಲಿಕ ಸಾವನ್ನಪ್ಪಿರುವ ನಾಲ್ವರು ಪತ್ರಕರ್ತರಿಗೆ ತಲಾ 5 ಲಕ್ಷ ರೂ. ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಶನಿವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ನಿಯೋಗದ ಮನವಿಯಂತೆ ತಲಾ 5 ಲಕ್ಷ ರೂ.ಪರಿಹಾರ …

Read More »

ಮೊಮ್ಮಗನ ಕಾರು ಅಪಘಾತ: ಶಾಸಕ ರವೀಂದ್ರನಾಥ ಸ್ಪಷ್ಟನೆ.

ದಾವಣಗೆರೆ, ಫೆಬ್ರವರಿ 24: ದಾವಣಗೆರೆ ಹೊರವಲಯದ ಶಾಮನೂರಿನಲ್ಲಿ ನಿನ್ನೆ ತಡ ರಾತ್ರಿ ಶಾಸಕ ಎಸ್.ಎ. ರವೀಂದ್ರನಾಥ ಅವರ ಮೊಮ್ಮಗನ ಕಾರು ಅಪಘಾತವಾಗಿದ್ದು, ಈ ಕುರಿತು ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಅವರ ಮೊಮ್ಮಗ ಅರುಣ್ ಕುಮಾರ್ …

Read More »

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೃಷಿ, ನೀರಾವರಿಗೆ ಹೆಚ್ಚಿನ ಆದ್ಯತೆ .

ಶಿವಮೊಗ್ಗ : ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೃಷಿ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 5ರಂದು ಬಜೆಟ್‌ ಮಂಡನೆ ಮಾಡಲಿದ್ದು, ಅದಕ್ಕೆ …

Read More »

ಪ್ರಾಧ್ಯಾಪಕರ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರ ಮೀಸಲಾತಿಗೆ ಆಗ್ರಹ.

ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2020ರ ಅಧಿಸೂಚನೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳ ನೇಮಕಾತಿ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಸಹಾಯಕ ಪ್ರಾಧ್ಯಾಪಕ ನಿರುದ್ಯೋಗಿ ಅರ್ಹ ದೈಹಿಕ ಶಿಕ್ಷಣ ಅಭ್ಯರ್ಥಿಗಳು ವಿಧಾನ ಪರಿಷತ್ ಸದಸ್ಯರ …

Read More »

ವರಸೆ ಬದಲಿಸಿದ ಮಹಾರಾಷ್ಟ್ರ ಸಿಎಂ?

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಸಿಎಎ ಮತ್ತು ಎನ್ ಆರ್ ಸಿ ಕುರಿತು ನನ್ನ ನಿಲುವು ಏನು ಎಂಬುದನ್ನು ಈಗಾಗಲೇ …

Read More »

ಸಿಎಎ ಪರ ಪ್ರಚಾರದಲ್ಲಿ ಪವನ್ ಕಲ್ಯಾಣ್.

ಹೈದ್ರಾಬಾದ್ : ತೆಲಂಗಾಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೃಹತ್ ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ. ಈ ಸಾರ್ವಜನಿಕ ಮೆರವಣಿಗೆ ಮತ್ತು ಸಮಾವೇಶದಲ್ಲಿ ತೆಲುಗು ನಟ ಹಾಗೂ ಜನಸೇನಾ …

Read More »

ಕೇಂದ್ರದಿಂದ ರಾಜ್ಯಕ್ಕೆ ಬಿಗ್ ಶಾಕ್ !

ತೆರಿಗೆ ವರಮಾನವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಿದೆ. ಆದರೆ ಈ ಬಾರಿ ರಾಜ್ಯಕ್ಕೆ ಬರುವ ಅನುದಾನದಲ್ಲಿ ಕಡಿತವಾಗಲಿದೆ ಎಂದು ಹೇಳಲಾಗುತ್ತಿದೆ. 15 ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದೆಯಂತೆ. ಕರ್ನಾಟಕ …

Read More »

ಮೀಸಲಾತಿಗಾಗಿ ಬೀದಿಗಿಳಿದ ಕೈ.

ಬೆಂಗಳೂರು: ಮೀಸಲಾತಿ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ರಾಜ್ಯ ಕಾಂಗ್ರೆಸ್‌ ‘ಮೀಸಲಾತಿ ಮೂಲಭೂತ ಹಕ್ಕು ಅಲ್ಲ’ ಎಂದು ಇತ್ತಿಚಿಗೆ ಸುಪ್ರೀಂಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದೆ. ಕೆಪಿಸಿಸಿಯ …

Read More »

ಇಂದಿನಿಂದ ಜಂಟಿ ಅಧಿವೇಶನ ಆರಂಭ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊಟ್ಟ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದೆ. ಇನ್ನೂ ಬಗೆಹರಿಯದ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯವೆಂಬ ಕೆಂಡವನ್ನು ಮಡಿಲಿನಲ್ಲಿ ಇಟ್ಟುಕೊಂಡೇ ಮಂಗಳೂರು, …

Read More »

R. S. S ಕನಸು ಕನಸಾಗಿಯೇ ಉಳಿಯಲಿದೆ: ದೇವೇಗೌಡ.

ರಾಯಚೂರು : ಕೇಂದ್ರ ಸರ್ಕಾರ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಮುಂದಾಗಿದ್ದು, ಆರ್ ಎಸ್ ಎಸ್ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ …

Read More »

ಆದಿತ್ಯನಾಥ್ ಮೇಲೆ ದಾಳಿಗೆ ಪಾಕ್ ಉಗ್ರರ ಸ್ಕೆಚ್?

ಲಕ್ನೋ, ಫೆ 14: ಪ್ರಬಲ ಹಿಂದುತ್ವ ಪ್ರತಿಪಾದಕ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸ್ಕೆಚ್ ಹಾಕಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. …

Read More »

ರೈತರಿಗೆ ಗುಡ್ ನ್ಯೂಸ್ ನೀಡಿದ ಕೃಷಿ ಸಚಿವ.

ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೂ ಹಣ ಪಾವತಿಯಾಗದ ರೈತರಿಗೆ ಎರಡು ವಾರಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು. ಸಚಿವರಾದ ಬಳಿಕ ಇಲಾಖೆ ಹಿರಿಯ ಅಧಿಕಾರಿಗಳ ಸಭೆ …

Read More »

ನಿಖಿಲ್- ರೇವತಿ ವಿವಾಹ: ಕೈ – ದಳ ರಾಜಕೀಯ ಸಂಬಂಧ ಗಟ್ಟಿಯಾಗಲು ಬುನಾದಿ.‌

ಬೆಂಗಳೂರು: ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ ಇರಲಿ, ಇಲ್ಲದಿರಲಿ, ಆದರೆ ನಿಖಿಲ್ ರೇವತಿ ವಿವಾಹ …

Read More »

ಫೆ.15ರಂದು CAA ಪರಿಣಾಮಗಳ ಕುರಿತು ಸಾರ್ವಜನಿಕ ಸಭೆ

ಬೆಂಗಳೂರು: ನಾಗರಿಕ ಅಥವಾ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ದುಡಿಯುವ ವರ್ಗದ ಮೇಲಾಗುವ ಪರಿಣಾಮಗಳ ಕುರಿತು, ನಾವು ಭಾರತೀಯರು ತಂಡವು ಫೆ.15ರಂದು ಮಧ್ಯಾಹ್ನ 2ಕ್ಕೆ ಸಾರ್ವಜನಿಕ ಸಭೆಯನ್ನು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …

Read More »

ಅಧಿಕಾರದ ಚುಕ್ಕಾಣಿ ಹಿಡಿದರೂ ಮತ ಕಳೆದುಕೊಂಡ ಕ್ರೇಜಿವಾಲ್!

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಭರ್ಜರಿ ಗೆಲುವು ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಒಂದು ಕುತೂಹಲಕಾರಿ ಲೆಕ್ಕಾಚಾರ ಕೂಡ ಹೊರಬಿದ್ದಿದೆ. ಅರವಿಂದ್ …

Read More »

ದಿಲ್ಲಿ ಜನತೆ ನಮ್ಮನ್ನು ತಿರಸ್ಕರಿಸಿಲ್ಲ ಎಂದ ತಿವಾರಿ.

ನವದೆಹಲಿ : ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಆಮ್ ಆದ್ಮಿ ಪಕ್ಷ ಗೆಲುವಿನ ನಗೆ ಬೀರಿದೆ. ಈ ನಡುವೆಯೇ ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ದೆಹಲಿ ಜನತೆ ನಮ್ಮನ್ನು ತಿರಸ್ಕರಿಸಿಲ್ಲ …

Read More »

ಭರ್ಜರಿ ಜಯಭೇರಿ ಬಾರಿಸಿದ ಕ್ರೇಜಿ ಗೆ ನಮೋ ಅಭಿನಂದನೆ.

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷ ಹಾಗೂ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. भाजपा …

Read More »

ರಾಜಕಾರಣಕ್ಕೆ ಡಿ ಬಾಸ್ ಗ್ರೀನ್ ಸಿಗ್ನಲ್..?!

ಬೆಂಗಳೂರು: ‌ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಚಾಲೆಂಜಿಂಗ್​ ಸ್ಟಾರ್​ ದರ್ಶನ್. ಬರೀ ಸಿನಿಮಾ ಅಷ್ಟೆ ಅಲ್ಲ, ಸಮಾಜಮುಖಿ ಕೆಲಸಗಳಿಂದ್ಲೂ ಡಿ ಬಾಸ್​ ದರ್ಶನ್​​ ಅಭಿಮಾನಿಗಳಿಗೆ ಹತ್ತಿರವಾಗಿ ಬಿಟ್ಟಿದ್ದಾರೆ. ದಚ್ಚು ರಾಜಕಾರಣಕ್ಕೆ ಬರ್ತಾರೆ ಅಂದರೆ ಅಭಿಮಾನಿಗಳಿಗೆ …

Read More »

ದಿಲ್ಲಿ‌ ದಂಗಲ್ ‌ಗೆಲುವಿನತ್ತ ‘ ಕ್ರೇಜಿ ‘ ವಾಲ್.‌

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರ ಬೀಳತೊಡಗಿದ್ದು, ನಿರೀಕ್ಷೆಯಂತೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ 70 ರಲ್ಲಿ 54-55 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 15-16 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ …

Read More »

ಬಸವರಾಜ ಹಿಟ್ನಾಳ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಕೊಪ್ಪಳ: ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ್ ಅವರ ಕಾರು ಶನಿವಾರ ತಡರಾತ್ರಿ ಅಪಘಾತಕ್ಕೀಡಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಸ್ವಗ್ರಾಮ ಹಿಟ್ನಾಳಕ್ಕೆ ಬರುವಾಗ …

Read More »

ಮೀಸಲಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿದ್ದು.

ಬೆಂಗಳೂರು: ಉದ್ಯೋಗದಲ್ಲಿ ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದ ಜನರಿಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ವಿಧಾನಸೌಧದಲ್ಲಿ …

Read More »

ಬಂಪರ್ ಗಿಫ್ಟ್ ನೀಡಿದ ದೀದಿ.‌

ಕೋಲ್ಕತ್ತಾ: 2021 ಕ್ಕೆ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಜೆಟ್ ಮಂಡಿಸಿದ್ದಾರೆ. ಬಡವರಿಗೆ ಉಚಿತ ವಿದ್ಯುತ್, ಚಹಾ ತೋಟದ ಕೆಲಸಗಾರರಿಗೆ ವಸತಿ ಸೌಲಭ್ಯ, ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ಸೇರಿದಂತೆ …

Read More »

ಕೈ , ದಳ ರಾಜಕೀಯ ಚದುರಂಗದಾಟ ಆಡಿದ್ರೆ ಬಿಜೆಪಿಗೆ 10 ಸೀಟು ಬರ್ತಿರಲಿಲ್ಲ.

ಬೆಂಗಳೂರು: ನಾವು ಜೆಡಿಎಸ್ ಸೇರಿ ರಾಜಕೀಯ ಚದುರಂಗ ಆಟವನ್ನು ಚೆನ್ನಾಗಿ ಆಡಿದ್ರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 10 ಸೀಟು ಸಹ ಬರ್ತಾ ಇರಲಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ …

Read More »

ವಿಶ್ವನಾಥ್ , ನಾಗರಾಜ್ ಪರ ಚೆಲುವರಾಯಸ್ವಾಮಿ ಬ್ಯಾಟಿಂಗ್.

ಮೈಸೂರು, ಫೆಬ್ರವರಿ 10: ಉಪ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಪರವಾಗಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚೆಲುವರಾಯಸ್ವಾಮಿ ಬ್ಯಾಟ್ ಬೀಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಚ್.ವಿಶ್ವನಾಥ್ …

Read More »

ಶೀಘ್ರದಲ್ಲಿಯೇ ಚುನಾವಣೆ ಬಂದರು ಆಶ್ಚರ್ಯವಿಲ್ಲ:ಪರಮೇಶ್ವರ ಹೊಸ ಬಾಂಬ್

ಹುಬ್ಬಳ್ಳಿ:ಶ್ರೀಘ್ರದಲ್ಲೆ ವಿಧಾನಸಭೆ ಚುನಾವಣೆ ಬಂದ್ರೂ ಆಶ್ಚರ್ಯವಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಇರೋದು ಸ್ಥಿರವಾದ ಸರ್ಕಾರವಲ್ಲ.ಸರ್ಕಾರದಲ್ಲಿ ಸಾಕಷ್ಟು …

Read More »

ರಾಜ್ಯದಲ್ಲಿ ಸ್ಥಿರ ಸರ್ಕಾರವಿಲ್ಲ : ಡಾ.ಜಿ.ಪರಮೇಶ್ವರ್

ಹುಬ್ಬಳ್ಳಿ : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ‌ ಡಿಸಿಎಂ ಡಾ.ಜಿ.ಪರಮೇಶ್ವರ್,ಸಂಪುಟ ವಿಸ್ತರಣೆ ಜಗಳ ಆರಂಭವಾಗಲಿದೆ.ಯಾಕಂದ್ರೆ ಮಂತ್ರಿ ಆಗದೇ ಇರೋ ಅನೇಕ ಮೂಲ ಹಿರಿಯ ಬಿಜೆಪಿಗರು ಅಸಮಧಾನ ಹೊಂದಿದ್ದಾರೆ. ಈಗ ಅಸಲಿ ಜಗಳ ಶುರುವಾಗಲಿದೆ.ಕೆಲವೇ ದಿನಗಳಲ್ಲಿ …

Read More »

ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ:ಶೆಟ್ಟರ್ ಸ್ಪಷ್ಟನೆ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ. ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಅನ್ನುವ ಗೊಂದಲ ಇಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಹೈಕಮಾಂಡ್ ಯಾರಾರಿಗೆ …

Read More »

ಸಚಿವ ಸಂಪುಟ ಅಸಮತೋಲನದಿಂದ ಕೂಡಿದೆ :ಸಿದ್ದರಾಮಯ್ಯ

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸ್ವಾತಂತ್ರ್ಯವಿಲ್ಲ. ರಾಜ್ಯದ ಸಚಿವ ಸಂಪುಟ ಅಸಮತೋಲನದಿಂದ ಕೂಡಿದೆ. ಇದು ಸರ್ಕಾರದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, …

Read More »

ಸಿಎಂ ಖಾತೆ ಹಂಚಲಾರದಷ್ಟು ಅಸಮರ್ಥರಾಗಿದ್ದಾರೆ: ಸಿದ್ದರಾಮಯ್ಯ ಟೀಕೆ

ಕಲಬುರಗಿ : ಮುಖ್ಯಮಂತ್ರಿ ಯಡಿಯೂರಪ್ಪ ಖಾತೆ ಹಂಚಲಾರದಷ್ಟು ಅಸಮರ್ಥರಾಗಿದ್ದಾರೆ. ಪ್ರತಿಯೊಂದಕ್ಕೂ ಹೈಕಮಾಂಡ್ ಎಂದು ಹೇಳುತ್ತಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಒಂದೇ …

Read More »

ಕಮಲ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ಹಲ್ಲೆ.

ಮಂಗಳೂರು: ರಾಜಕೀಯ ವೈಷಮ್ಯದ ಪ್ರಕರಣವೊಂದರಲ್ಲಿ, 28 ವರ್ಷದ ಬಿಜೆಪಿ ಕಾರ್ಯಕರ್ತನ ಮೇಲೆ ಮುಂಚೂರಿನಲ್ಲಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಬಿಜೆಪಿ ಕಾರ್ಯಕರ್ತನನ್ನು ಯಶೋಧರ್ ಎಂದು ಗುರುತಿಸಲಾಗಿದ್ದು, ಇಲ್ಲಿನ ಪದ್ಮಾವತಿ …

Read More »

ಕೆ.ಸಿ.ನಾರಾಯಣಗೌಡ ಅವರಿಗೆ ಮೊದಲ ಬಾರಿಗೆ ಸಚಿವ ಪಟ್ಟ

ಮಂಡ್ಯ: ಬಹುಜನ ಸಮಾಜ ಪಕ್ಷದಿಂದ ಚುನಾವಣಾ ರಾಜಕಾರಣ ಆರಂಭಿಸಿದ ಕೆ.ಸಿ.ನಾರಾಯಣಗೌಡ ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ಸಚಿವ ಪಟ್ಟ ಅಲಂಕರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ಖಾತೆ ತೆರೆಯುವ ಮೂಲಕ ಬಿಜೆಪಿ ಇತಿಹಾಸ …

Read More »

ಶಿವರಾಮ ಹೆಬ್ಬಾರ ಪ್ರಮಾಣ ವಚನ ಸ್ವೀಕಾರ: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಹುಬ್ಬಳ್ಳಿ: ಯಲ್ಲಾಪುರ ವಿಧಾನಸಭಾ ಮತಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಇಂದು ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿಂದು ಬಿಜೆಪಿ ಕಾರ್ಯಕರ್ತರು ಹಾಗೂ ಹೆಬ್ಬಾರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಕಳೆದ …

Read More »

25 ಲಕ್ಷ ರೂ.‌ಸಿ.ಸಿ.‌ ರಸ್ತೆ ಕಾಮಗಾರಿಗೆ ಶಾಸಕಿ ಕುಸುಮಾ ಶಿವಳ್ಳಿ ಭೂಮಿ ಪೂಜೆ.

ಕುಂದಗೋಳ: ಬೆಟದೂರ್ ಗ್ರಾಮದಲ್ಲಿ ಇಂದು ಎಸ್.ಸಿ.ಪಿ.ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಎಸ್.ಸಿ ಕಾಲೊನಿಯಲ್ಲಿ ಅಂದಾಜು ಮೊತ್ತ 25 ಲಕ್ಷ ರೂ. ಗಳ ಸಿ.ಸಿ ರಸ್ತೆಯ ಕಾಮಗಾರಿಯ ಭೂಮಿಯ ಪೂಜೆಯನ್ನು ಮಾನ್ಯ ಶಾಸಕಿಯರಾದ ಕುಸುಮಾವತಿ ಸಿ ಶಿವಳ್ಳಿಯವರು …

Read More »

ಬಿಎಸ್ ವೈ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

ಹುಬ್ಬಳ್ಳಿ: “ರಾಜ್ಯದ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತದೆ. ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಿರಲಿದೆ” ಎಂದು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ …

Read More »

ನೂತನ ಸಚಿವರ ಪ್ರಮಾಣವಚನ: ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ.‌

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ವೇಳೆ ರಾಜಭವನ ಒಳ ಪ್ರವೇಶಕ್ಕೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹರಸಾಹಸ ಪಟ್ಟರು. ಹೊರಭಾಗ ಹೈಡ್ರಾಮಾ: ನೂತನ ಸಚಿವರ ಪದಗ್ರಹಣ ಸಮಾರಂಭ ವೀಕ್ಷಿಸಲು ರಾಜಭವನದ ಒಳಗೆ ತೆರಳುವ ಆಹ್ವಾನ ಪತ್ರ …

Read More »

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ಶಾಸಕರು.

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ನೂತನ ಸಂಪುಟ ವಿಸ್ತರಣೆ ಆಗಿದೆ. ಉಪ ಚುನಾವಣೆಯಲ್ಲಿ ಗೆದ್ದಂತ 10 ಶಾಸಕರು  ಸಚಿವರಾಗಿ ಪ್ರಮಾಮವಚನ ಸ್ವೀಕರಿಸಿದ್ದಾರೆ. ಇಂದು ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಬಹುತೇಕ ಸಚಿವರು ದೇವರ …

Read More »

ಸಿದ್ದರಾಮಯ್ಯ ಭೇಟಿಯಾದ ಬಿಎಸ್ ವೈ ಪುತ್ರ

ಬೆಂಗಳೂರು: ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಗುರುವಾರ (ಫೆ 6) ಬೆಳಗ್ಗೆ 10.30ಕ್ಕೆ, ರಾಜಭವನದಲ್ಲಿ ಮಹೂರ್ತ ನಿಗದಿಯಾಗಿದೆ. ಎಷ್ಟು ಜನ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ, ಸಿಎಂ ಯಡಿಯೂರಪ್ಪನವರಿಗೂ ಇದುವರೆಗೂ ಇಲ್ಲ ಎಂದು ಹೇಳಲಾಗುತ್ತಿದೆ. …

Read More »

ಮಂತ್ರಿಗಿರಿ ನಿರೀಕ್ಷೆಯಲ್ಲಿದ ಬಿಜೆಪಿಗರಿಗೆ ಬಿಗ್ ಶಾಕ್

ಬೆಂಗಳೂರು : ನಾಳೆ ಕ್ಯಾಬಿನೆಟ್ ವಿಸ್ತರಣೆ ವೇಳೆ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಮೂಲ ಬಿಜೆಪಿಗರಿಗೆ ಕಮಲ ಪಕ್ಷದ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ನಾಳೆ ಉಪಚುನಾವಣೆಯಲ್ಲಿ ಗೆದ್ದ 10 ಮಂದಿಗಷ್ಟೇ ಸಚಿವಸ್ಥಾನ ನೀಡುವಂತೆ ಕೇಂದ್ರ …

Read More »

ಅಧ್ಯಕ್ಷರಾಗಿ ನರೇಂದ್ರ ಜಾಧವ್ ಆಯ್ಕೆ

ಹುಬ್ಬಳ್ಳಿ: ನಗರದ ನೈರುತ್ಯ ರೈಲ್ವೆ ಮದ್ದೂರು ಸಂಘದ ಕೇಂದ್ರ ಕಚೇರಿಯಲ್ಲಿ ಸಂಘದ ಯುವ ರಚನೆ ಮಾಡಲಾಗಿತ್ತು. ಈ ಸಂಘದ ಅಧ್ಯಕ್ಷರನ್ನಾಗಿ ನರೇಂದ್ರ ಜಾಧವ್ ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ವರ ಕೊರವಿ, ಮತ್ತು ಹುಬ್ಬಳ್ಳಿ …

Read More »

ರಾಜ್ಯದ ಜನತೆಗೆ ಸಿಹಿ ಸುದ್ದಿ

ಬೆಂಗಳೂರು : ರಾಜ್ಯದ ಜನತೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಂಧ್ಯಾ ಸುರಕ್ಷಾ ಯೋಜನೆ, ಹಿರಿಯ ನಾಗರಿಕರ ಚೀಟಿ, ಆದಾಯ ದೃಢೀಕರಣ, ಜಾತಿ ಪ್ರಮಾಣಪತ್ರ ಒಳಗೊಂಡಂತೆ 53 ಸರ್ಕಾರಿ …

Read More »

NRC ಕುರಿತು ಕೇಂದ್ರದ ಮಹತ್ವದ ನಿರ್ಧಾರ.

ನವದೆಹಲಿ, ಫೆಬ್ರವರಿ 04: ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್​ಆರ್​ಸಿ) ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ ಹೊರಡಿಸಲಾಗಿದೆ. ರಾಷ್ಟ್ರವ್ಯಾಪಿ ಎನ್ ಆರ್ ಸಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ …

Read More »

ಕಾಂಗ್ರೆಸ್ ಮುಖಂಡನ ಮನೆ ಮೇಲೆ I.T. ದಾಳಿ.

ತುಮಕೂರು, ಫೆಬ್ರವರಿ 04: ಕಾಂಗ್ರೆಸ್ ಮುಖಂಡನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳ ತಂಡ ವಿವಿಧ ದಾಖಲೆಗಳ ಪರಿಶೀಲನೆಯನ್ನು ನಡೆಸಿ ವಾಪಸ್ ಆಗಿದೆ. ತುಮಕೂರಿನ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಮನೆ …

Read More »

ರಾಜ್ಯ ಬಜೆಟ್ ಸಿದ್ಧತೆಗೆ ಪೂರ್ವಭಾವಿ ಸಭೆ ನಡೆಸಿದ ಬಿಎಸ್ ವೈ

ಬೆಂಗಳೂರು : 2020-21ನೇ ಸಾಲಿನ ರಾಜ್ಯ ಬಜೆಟ್ ಸಿದ್ಧತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ, ಸಾರಿಗೆ, ವೈದ್ಯಕೀಯ ಶಿಕ್ಷಣ, ಕೃಷಿ ಸೇರಿದಂತೆ 9 ಇಲಾಖೆಗಳ ಜೊತೆ ಸೋಮವಾರ ಪೂರ್ವಭಾವಿ ಸಭೆ ನಡೆಸಿದರು. ನಗರದ …

Read More »

ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್

ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಫೆಬ್ರವರಿ 6 ರ ಗುರುವಾರ ಬೆಳಗ್ಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. …

Read More »

ಗಾಂಧಿಯನ್ನು ಅವಮಾನಿಸುವ ಏಕೈಕ ಸಂಘಟನೆ ಬಿಜೆಪಿ : ಕಾಂಗ್ರೆಸ್ ಕಿಡಿ

ಬೆಂಗಳೂರು : ಭಯೋತ್ಪಾದಕನ ಗುಂಡಿಗೆ ಬಲಿಯಾದ ಮಹಾತ್ಮ ಗಾಂಧಿ ಹೇರಾಮ್ ಎಂದು ಸತ್ತರು. ಆದ್ರೇ ಬಿಜೆಪಿಗರು ಗಾಂಧಿಯನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ. ವಿಶ್ವದಲ್ಲಿ ಗಾಂಧಿಯನ್ನು ಅವಮಾನಿಸುವ ಏಕೈಕ ಸಂಘಟನೆ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟ್ವಿಟರ್ …

Read More »

ಕಮಲಕ್ಕೆ ಜೈ ಎಂದ ರಾಜ್ಯಸಭೆ ಸದಸ್ಯೆ ಶಶಿಕಲಾ

ಡಿಎಂಕೆ ಪಕ್ಷದ ಸಂಸದರೊಬ್ಬರ ಜೊತೆ ಜಗಳ ಮಾಡಿಕೊಂಡಿದ್ದ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪರನ್ನು ಎಐಎಡಿಎಂಕೆ ಪಕ್ಷದಿಂದ ಜಯಲಲಿತ ಹೊರ ಹಾಕಿದ್ದರು. ಇದೀಗ ಈ ರಾಜ್ಯಸಭಾ ಸದಸ್ಯೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಿನ್ನೆ ದೆಹಲಿಯಲ್ಲಿ ನಡೆದ …

Read More »

ಸಂಪುಟ ವಿಸ್ತರಣೆ ಹಿನ್ನೆಲೆ: ಬಾಂಬ್ ಸಿಡಿಸಿದ ತಿಪ್ಪಾರೆಡ್ಡಿ ಬೆಂಬಲಿಗರು.

ಚಿತ್ರದುರ್ಗ : ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ, ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಂಪುಟ ವಿಸ್ತರಣೆಗೆ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಫೆಬ್ರವರಿ 6 ಎಂಬುದಾಗಿ ಘೋಷಣೆ ಮಾಡಿದ್ದರು. ಇದರ …

Read More »

10+3 ಸೂತ್ರದ ಅನ್ವಯ ವಿಸ್ತರಣೆ ಆಗುತ್ತೆ: ಗೋವಿಂದ ಕಾರಜೋಳ

ಹುಬ್ಬಳ್ಳಿ : ಸಂಪುಟ ವಿಸ್ತರಣೆಯನ್ನು ಸಿಎಂ‌ ಈಗಾಗಲೆ‌ ಘೋಷಣೆ ಮಾಡಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 10+3 ಸೂತ್ರದ ಅನ್ವಯ ವಿಸ್ತರಣೆ ಆಗುತ್ತೆ.ಯಾರ್ಯಾರನ್ನ ಮಂತ್ರಿ ಮಾಡಬೇಕು ಎನ್ನೋದನ್ನ …

Read More »

ಎಂಎಲ್ ಸಿ ಸ್ಥಾನಕ್ಕೆ ನನ್ನ ಹೆಸರು ಅಂತಿಮ ಮಾಡಿದ್ದಾರೆ: ಲಕ್ಷ್ಮಣ ಸವದಿ

ಹುಬ್ಬಳ್ಳಿ : ರಾಷ್ಟ್ರೀಯ ನಾಯಕರು ಎಂಎಲ್ ಸಿ ಸ್ಥಾನಕ್ಕೆ ನನ್ನ ಹೆಸರು ಅಂತಿಮ ಮಾಡಿದ್ದಾರೆ.ಪಕ್ಷದ ಅಧ್ಯಕ್ಷರು‌ ಹಾಗೂ ಸಿಎಂ ಭೇಟಿಯಾಗಿ ನಾಮಪತ್ರ ಸಲ್ಲಿಕೆ ಬಗ್ಗೆ ಚರ್ಚೆ ಮಾಡುವದಾಗಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.ನಗರದ ವಿಮಾನ …

Read More »

ಯುವಕರು ದೇಶ ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು:ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಹುಬ್ಬಳ್ಳಿ: ಭಾರತ ಯುವ ರಾಷ್ಟ್ರವಾಗಿದ್ದು, ಯುವಕರು ಶಿಕ್ಷಣದ ಜೊತೆಗೆ ಉತ್ತಮ ಕೌಶಲ್ಯ ಪಡೆದು ದೇಶದ ಭವಿಷ್ಯವನ್ನು ರೂಪಿಸುವ ಕೆಲಸ ಮಾಡಬೇಕೆಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.ನಗರದ ಗೋಕುಲರಸ್ತೆಯಲ್ಲಿನ ದೇಶಪಾಂಡೆ ಸ್ಕಿಲ್ಲಿಂಗ್ ಕೇಂದ್ರದ ಉದ್ಘಾಟಿಸಿ …

Read More »

ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಉಪರಾಷ್ಟ್ರಪತಿ

ಹುಬ್ಬಳ್ಳಿ : ದೇಶಪಾಂಡೆ ಫೌಂಡೇಶನ್ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟಿಸಿದ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಅವರು ತಮ್ಮ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿದರು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಹೆಸರಿಸಿದ ಅವರು, ವಿದೇಶದಿಂದ ತಾಯ್ನಾಡಿಗ ಮರಳಿ ಬಂದ ಡಾ.ಗುರುರಾಜ ದೇಶಪಾಂಡೆ …

Read More »

ದೇಶಪಾಂಡೆ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟಸಿದ ಉಪರಾಷ್ಟ್ರಪತಿ

ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್ ಆವರಣದಲ್ಲಿ ನಿರ್ಮಾಣಗೊಂಡ ದೇಶಪಾಂಡೆ ಕೌಶಲ್ಯ ಕೇಂದ್ರವನ್ನು ಭಾರತದ ಉಪರಾಷ್ಟ್ರಪತಿ ಸನ್ಮಾನ್ಯ ಎಂ. ವೆಂಕಯ್ಯನಾಯ್ಡು ಅವರಿಂದು ಉದ್ಘಾಟಿಸಿದರು. ಏಕ ಕಾಲಕ್ಕೆ 1500 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ …

Read More »

ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ ಉಪ ರಾಷ್ಟ್ರಪತಿ

ಹುಬ್ಬಳ್ಳಿ: ನಮಸ್ಕಾರ ಎಂಬುವುದು ನಮ್ಮ ಭಾರತೀಯ ಸಂಸ್ಕಾರ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.ನಗರದಲ್ಲಿಂದು ಆಯೋಜಿಸಲಾಗಿದ್ದ ದೇಶಪಾಂಡೆ ಸ್ಕಿಲ್ಲಿಂಗ್ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ನಾವು ಯಾರ ಜೊತೆಯಾದರೂ …

Read More »

ಯೋಗವು ದೇಶಭಕ್ತಿ ಆಗಿದೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಹುಬ್ಬಳ್ಳಿ : ಯೋಗಾಭ್ಯಾಸವು ಕಲೆಯೂ ಹೌದು , ವಿಜ್ಞಾನವೂ ಹೌದು, ನಿತ್ಯ ಯೋಗಾಸನ ಮಾಡುವುದರ ಮೂಲಕ ದೇಶಭಕ್ತಿ ತೋರುವ ಜೊತೆಗೆ ಅಮೂಲ್ಯ ಮಾನವ ಸಂಪತ್ತು ನಿರ್ಮಿಸಬಹುದು ಎಂದು ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದರು. …

Read More »

ಪ್ರಸಕ್ತ ಸಾಲಿನ ಬಜೆಟ್ ನಿರಾಸೆ ಮೂಡಿಸಿದೆ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಕೇಂದ್ರ ಸರ್ಕಾರದ ಬಜೆಟ್ ಟಿಂಕರಿಂಗ್ ಹಾಗೂ ನಿರಾಶಾದಾಯಕ ಬಜೆಟ್ ಆಗಿದ್ದು, ರೈತರು, ಯುವಕರು ಸೇರಿದಂತೆ ಎಲ್ಲ ವಲಯದ ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ …

Read More »

ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಮೂಲ ಬಿಜೆಪಿ ಶಾಸಕರಿಗೆ ಶಾಕ್.

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿ ಶಾಸಕರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಬಿಜೆಪಿಯಲ್ಲಿ ಮಂತ್ರಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗತೊಡಗಿದೆ. ಬಿಜೆಪಿಯಿಂದ ಚುನಾಯಿತರಾದ ನೂತನ ಶಾಸಕರಿಗೆ ಸಚಿವ ಸ್ಥಾನ ಕನ್ಫರ್ಮ್ ಆಗಿದೆ. ಇದೇ ವೇಳೆ …

Read More »

ಉಪಚುನಾವಣೆ ಸೋಲಿನ ಹಿನ್ನೆಲೆ: ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ.

ಬೆಂಗಳೂರು :ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಟಿ …

Read More »

ಗೆಲುವಿನ ನಗೆ ಬೀರಿದ ಶ್ರೀಮಂತ ಪಾಟೀಲ.

ಕಾಗವಾಡ: ಕರ್ನಾಟಕ ಬೈ ಎಲೆಕ್ಷನ್ ಫಲಿತಾಂಶಕ್ಕೆ ಇಂದು ತೆರೆ ಬಿದ್ದಿದ್ದು, ಕಾಗವಾಡದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ 18,020 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ‌. ಕಾಗವಾಡ ಕ್ಷೇತ್ರದಲ್ಲಿ ಒಟ್ಟು 76:27% ರಷ್ಟು ಮತದಾನವಾಗಿದ್ದು, …

Read More »

ರಮೇಶ್ ಜಾರಕಿಹೊಳಿ ಅಭಿಮಾನಿಗಳಿಂದ ವಿಜಯೋತ್ಸವ ಆಚರಣೆ.‌

ಬಹು ಕುತೂಹಲ ಕೆರಳಿಸಿದ್ದ ಕರ್ನಾಟಕ  ಉಪಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ 27,892 ಸಾವಿರ ಮತಗಳ ಅಂತರದಿಂದ ‌ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಕಾಕನ ರಮೇಶ …

Read More »

ಉಪಚುನಾವಣೆ ಫಲಿತಾಂಶ: ಗೆಲುವಿನ ನಗೆ ಬೀರಿದ ಬಿ.ಸಿ. ಪಾಟೀಲ ಹಾಗೂ ಹೆಬ್ಬಾರ್.

ಗೆಲುವಿನತ್ತ ಸಾಗುತ್ತಿರುವ ಬಿಜೆಪಿ. ಹಿರೋಕೆರೂರು – ಶಿರಸಿ : ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದು, ಗೆಲುವಿನ ಅಂತರಕ್ಕೆ ತಲುಪಿದ್ದಾರೆ. ಇತ್ತ ಶಿರಸಿಯ ಯಲ್ಲಾಪುರ ಕ್ಷೇತ್ರದ ಬಿಜೆಪಿ …

Read More »

15 ಕ್ಷೇತ್ರಗಳ ಉಪಚುನಾವಣೆ ಮತದಾನ: ಕೌಂಟ್ ಡೌನ್ ಶುರು.

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ರಾಜ್ಯದ 15ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು …

Read More »

15 ಕ್ಷೇತ್ರಗಳ ಉಪಚಾನಾವಣೆ ಮತದಾನ: ಕೌಂಟ್ ಡೌನ್ ಶುರು.

  ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ರಾಜ್ಯದ 15ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಘಟಾನುಘಟಿ …

Read More »

ಕೈ ಸಮೀಕ್ಷೆ: ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಪೂರಕ.‌

  ಬೆಂಗಳೂರು: ಉಪ ಚುನಾವಣೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತಿದ್ದು, ಮೂರೂ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ 15 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಗೆಲ್ಲುವ …

Read More »

ಬಿಜೆಪಿಗೆ ಮತ ಹಾಕುವಂತೆ ಮಡಿವಾಳ ಸಮಾಜದ ಮುಖಂಡರಿಂದ ಕರೆ

ಮಂಡ್ಯ:- ಕೆ.ಆರ್ ಪೇಟೆ ಅಭಿವೃದ್ಧಿಗೆ ಬದ್ದವಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮ್ಮ ಬೆಂಬಲವಿದ್ದು, ಈ ಹಿನ್ನಲೆಯಲ್ಲಿ ಸಮಾಜದ ಎಲ್ಲ ಜನರು ಬಿಜೆಪಿಗೆ ಮತ ಚಲಾಯಿಸಬೇಕೆಂದು ಮಡಿಳಾಳ ಸಮಾಜದ ಮುಖಂಡರು ಕರೆ ಕೊಟ್ಟರು. ಮಂಡ್ಯದ ಕೃಷ್ಣರಾಜಪೇಟೆ ಪಟ್ಡಣದ …

Read More »

ಕುಮಠಳ್ಳಿ ಹೋರಿ ಮುಖದವರು : ಎಂ.ಬಿ.ಪಾಟೀಲ ವ್ಯಂಗ್ಯ

ಅಥಣಿ:- ಮಹೇಶ ಕುಮಠಳ್ಳಿ ಗೆ ಈ ಕ್ಷೇತ್ರದ ಜನ ಪಟ್ಟಿ ಹಾಕಿ, ಉರುಳು ಸೇವೆ ಮಾಡಿ ಆಯ್ಕೆ ಮಾಡಿದ್ದರು. ಆದರೆ ಈ ಜನರ ನಂಬಿಕೆಗೆ ಮೋಸ ಮಾಡಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಬೇಕು …

Read More »

ಕುಮಠಳ್ಳಿ ಗೆ ಟಕರ್ ಕೊಡಲು ಸಿದ್ದವಾದ ಟಗರು : ಇಂದು ಅಥಣಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ ಭೇಟೆ

ಚಿಕ್ಕೋಡಿ:-  ಅಥಣಿ ಉಪಚುನಾವಣೆ ಮತಕ್ಷೇತ್ರದಲ್ಲಿ ಇಂದು ಸಿದ್ದರಾಮಯ್ಯ ಪ್ರಚಾರ ಅಥಣಿ ಕಾಂಗ್ರೆಸ್ ಅಬ್ಯರ್ಥಿ ಗಜಾನನ ಮಂಗಸೂಳಿ ಪರ ಮತಬೇಟೆ ನಡೆಸಲಿದ್ದು, ಎಮ್.ಬಿ.ಪಾಟೀಲ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಮುಂತಾದ ಘಟಾನುಘಟಿಗಳು ಸಾಥ್ ನೀಡಲಿದ್ದಾರೆ‌. ಅಥಣಿ ತಾಲೂಕಿನ …

Read More »

ಉಪ ಚುನಾವಣೆ: 71 ಪ್ರಕರಣ ದಾಖಲು; ನಗದು ಹಣ, ಮದ್ಯ ವಶ

ಬೆಳಗಾವಿ:- ಉಪಚುನಾವಣೆ ನಡೆಯುತ್ತಿರುವ ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಮಾದರಿ ನೀತಿ  ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟಾರೆ 71 ಪ್ರಕರಣಗಳನ್ನು ದಾಖಲಾಗಿದ್ದು, 3.23 ಲಕ್ಷ ರೂಪಾಯಿ ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ …

Read More »

ಸಿದ್ದರಾಮಯ್ಯ ಪೋಟೋಗೆ ಡಿಮಾಂಡ್ ಇಲ್ಲಾ ನಳೀನಕುಮಾರ್ ಕಟೀಲ್ ವಾಗ್ದಾಳಿ

ಚಿಕ್ಕೋಡಿ:- ಡಿಸೆಂಬರ್ 5 ಕ್ಕೆ ಕಾಗವಾಡ ಉಪ ಚುನಾವಣೆ ಹಿನ್ನೆಲೆ. ಕಾಗವಾಡ ಮತಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಮಂಗಸೂಳಿ, ಕಾಗವಾಡ,ಶೇಡಬಾಳ ಗ್ರಾಮದಗಳಲ್ಲಿ ಇಂದು ಶ್ರೀಮಂತ ಪಾಟೀಲ ಪರ ಭರ್ಜರಿ ಪ್ರಚಾರ ನಡೆಸಿದ …

Read More »

ಎಚ್ ಡಿಕೆ ಇದ್ದಾಗ ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ: ಶ್ರೀಮಂತ ಪಾಟೀಲ ಆರೋಪ

ಚಿಕ್ಕೋಡಿ:- ಕಾಗವಾಡ ಮತಕ್ಷೇತ್ರದ ಬಿಜೆಪಿ ಅಬ್ಯರ್ಥಿ ಶ್ರೀಮಂತ ಪಾಟೀಲ ಇಂದು ಅಥಣಿ ತಾಲೂಕಿನ ಗುಂಡೇವಾಡಿ ,ಪಾರ್ಥನಳ್ಳಿ,ಚಮಕೇರಿ,ಬಳ್ಳಿಗೇರಿ ಮೊದಲಾದ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.          ಈ ವೇಳೆ ಡಿಸಿಎಮ್ ಲಕ್ಷ್ಮಣ …

Read More »

ಅನರ್ಹ ಶಾಸಕರ ತಲೆ ಸರಿಯಿಲ್ಲಾ: ರಮೇಶಕುಮಾರ

ಅಥಣಿ:- ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ನಲ್ಲೂ ಅನರ್ಹಗೊಂಡ ನಂತರ ಅರ್ಹರು ಅಂತಾ ಹೇಳಿಕೊಳ್ಳುತ್ತಿರುವ ಅನರ್ಹರ ತಲೆ ಸರಿಯಿಲ್ಲ ಎಂದು ಮಾಜಿ ಸ್ವೀಕರ್ ರಮೇಶ ಕುಮಾರ ಹೇಳಿದರು.           …

Read More »

ಕಾಗವಾಡ ವ್ಯಾಪ್ತಿಯಲ್ಲಿ ನಳೀನಕುಮಾರದಿಂದ ರೋಡ್ ಶೋ

ಚಿಕ್ಕೋಡಿ:- ಕಾಗವಾಡ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯಿಂದ ಶಕ್ತಿ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ನೇತೃತ್ವದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ನಳೀನಕುಮಾರ ಕಟೀಲ ಮಂಗಸೂಳಿ, …

Read More »

ಉಪಚುನಾವಣೆ : ಯಾವುದೇ ಸಮಿತಿ ರಚನೆ‌‌ ಇಲ್ಲಾ

ಹುಬ್ಬಳ್ಳಿ:- ಯಾವ ಪಕ್ಷದ ದೊಡ್ಡದಿರುವುದೋ ಅಲ್ಲಿ ಸ್ಪರ್ಧೆ ಹೆಚ್ಚು ಇರುತ್ತದೆ. ಅಲ್ಲದೇ ಆಕಾಂಕ್ಷೆಗಳ ಸಂಖ್ಯೆ ಕೂಡಾ ಸಹಜವಾಗಿಯೇ ಹೆಚ್ಚಾಗಿರುತ್ತಾರೆ ಎಂದು ಗೃಹ ಸಚಿವ ಬಸವರಾಜ  ಬೊಮ್ಮಾಯಿ ಹೇಳಿದರು.           …

Read More »

ಕುಮಠಳ್ಳಿ ಪರ ಪ್ರಚಾರಕ್ಕೆ ಹೋಗಬಾರದೆಂದು ಆಗ್ರಹಿಸಿ ಸವದಿ ಬೆಂಬಲಿಗರಿಂದ ಘೇರಾವ್

ಚಿಕ್ಕೋಡಿ:-  ಮೋದಿಗೆ ಬೈದವರಿಗೆ ಟಿಕೆಟ್ ಹೇಗೆ ನೀಡಿದೀರಿ ಎಂದು ಆಗ್ರಹಿಸಿ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿಗರು ಇಂದು ಶಾಸಕ ಜಗದೀಶ್ ಶೆಟ್ಟರ್, ಮಹೇಶ್ ಕುಮಠಳ್ಳಿ ಅವರಿಗೆ ಘೇರಾವ್ ಹಾಕಿದ ಘಟನೆ ನಡೆಯಿತು.     …

Read More »

ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಮೊದಲ ಆಧ್ಯತೆ: ಕುಮಾರಸ್ವಾಮಿ

ಮಂಡ್ಯ:- ರೈತರ ಸಾಲ ಮನ್ನಾ ಸೇರಿದಂತೆ ಜನಪರ ಕೆಲಸ ಮಾಡಿದ ಮೈತ್ರಿ ಸರ್ಕಾರವನ್ನು ಬೀಳಿಸಿದ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಪಕ್ಷದ ಮೊದಲ ಆಧ್ಯತೆಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.     …

Read More »

ದಾವಣಗೆರೆ ಪಾಲಿಕೆ ಮತ ಎಣಿಕೆ ಮುಕ್ತಾಯ : ಅಭಿನಂದನೆ ಸಲ್ಲಿಸಿದ ಡಿಸಿ

ದಾವಣಗೆರೆ:- ದಾವಣಗೆರೆ ಮಹಾನಗರ ಪಾಲಿಕೆ ಮತದಾನ ಮತ್ತು ಮತ ಎಣಿಕೆ ಯಾವ ಸಮಸ್ಯೆ ಇಲ್ಲದೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.              ಮಹಾನಗರ ಪಾಲಿಕೆ …

Read More »

ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ:-  ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್. 1 ಸ್ಥಾನವಿದ್ದ ಕಲಮ ಈ ಬಾರಿ 17 ವಾರ್ಡ್‍ಗಳಲ್ಲಿ ಅರಳಿ ನಿಂತಿದೆ. ಇನ್ನೂ ಜೆಡಿಎಸ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಗೆದ್ದಿರುವ …

Read More »

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಡ್ಯ:- ಅಪರಿಚಿತ ವ್ಯಕ್ತಿ ಓರ್ವನ ಮೃತಪಟ್ಟ ಶವವು ಮಂಡ್ಯದ ಪಾಂಡವಪುರ ಬೇಬಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದು, ಮೃತರು ಯಾರೆಂದು ಪತ್ತೆಯಾಗಿಲ್ಲ. ಇನ್ನೂ ಮೃತವ್ಯಕ್ತಿ ಅಂದಾಜು ಮೂವತ್ತೈದು ವಯಸ್ಸಿನನಾಗಿದ್ದು, ದೇಹದ ಪಕ್ಕ ವಿಷದ ಬಾಟಲ್ ಪತ್ತೆಯಾಗಿದ್ದು, …

Read More »

ಉಪಚುನಾವಣೆಯಲ್ಲಿ ಶಿವಸೇನಾದ ಅಭ್ಯರ್ಥಿಗಳು ಕಣಕ್ಕೆ : ಹಕಾರೆ

ಹುಬ್ಬಳ್ಳಿ:- ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಶಿವಸೇನಾದ ಅಧ್ಯಕ್ಷ ಕುಮಾರ ಹಕಾರೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ ಪಕ್ಷ ದಿನದಿಂದ …

Read More »

ಪೋಲಿಸ ಅಧಿಕಾರಿಗಳ ಮಧ್ಯೆ ಜಗಳ : ಎಸ್ಪಿ ಬಳಿ ದೂರು ದಾಖಲು

ಮಂಡ್ಯ: ಹಿರಿಯ ಮಹಿಳಾ ಪೋಲಿಸ ಅಧಿಕಾರಿಯೊಬ್ಬರು ಕಿರಿಯ ಪೋಲಿಸ ಅಧಿಕಾರಿ ಮೇಲೆ ಹಲ್ಲೇ ನಡೆಸಿದ ಘಟನೆ ಮಂಡ್ಯದ ಬಸರಾಳು ಪೋಲಿಸ ಠಾಣೆಯಲ್ಲಿ ನಡೆದಿದೆ. ಬಸರಾಳು ಪೋಲಿಸ್ ಠಾಣೆಯ ಪಿ.ಎಸ್.ಐ ಜಯಗೌರಿ ಹಲ್ಲೇ ನಡೆಸಿದ ಅಧಿಕಾರಿಯಾಗಿದ್ದು, …

Read More »

ಸರ್ಕಾರ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಹುಬ್ಬಳ್ಳಿ:- ವಿಶ್ವವಿದ್ಯಾಲಯಗಳಲ್ಲಿ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಮ್ (ಇಡಿಜಿಎಸ್) ತಂತ್ರಾಶ ಬಳಸುವ ವಿದ್ಯಾರ್ಥಿಗಳ ಹಣವನ್ನು ಸರ್ಕಾರ ಲೂಟಿ ಮಾಡಲು ಹೊರಟಿದೆ ಎಂದು ಆರೋಪಿಸಿ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಹಶಿಲ್ದಾರರ ಕಚೇರಿ ಎದುರು …

Read More »

ಶಿವಸೇನೆಯ ಪತನದ ಮೊದಲ ಹಂತ ಪ್ರಾರಂಭ: ಜೋಶಿ

ಹುಬ್ಬಳ್ಳಿ:- ಮಹಾರಾಷ್ಟ್ರದಲ್ಲಿ ಶಿವಸೇನೆ ನಡೆ ಖಂಡನೀಯವಾಗಿದ್ದು, ಇದು ಶಿವಸೇನೆಯ ಪತನದ ಮೊದಲ ಹಂತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಾರವಾಗಿ ಟೀಕೆ ಪ್ರತಿಕ್ರಿಯಿಸಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಾರು …

Read More »

ಚಿಕ್ಕೋಡಿ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ : ಕಾಂಗ್ರೆಸ್ ಪ್ರತಿಭಟನೆಯಲ್ಲಿ ಗೈರಾದ ನಾಯಕರು

ಚಿಕ್ಕೋಡಿ:- ಕಾಗವಾಡ ಶಾಸಕ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ಅಂತಿಮವಾಗುತ್ತಿದ್ದಂತೆಯೇ ಚಿಕ್ಕೋಡಿಯಲ್ಲಿ ಕೈ ಪಾಳಯದಲ್ಲಿ ಅಸಮಧಾನ ಸ್ಫೋಟ್ ಗೊಂಡಿದೆ. ಹೌದು, ರಾಜ್ಯದಲ್ಲಿ ಉಪಚುನಾವಣೆ ರಂಗೇರುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಜೋರಾಗಿದೆ. …

Read More »

ಅಥಣಿ ಕಾಗವಾಡ ಉಪಚುನಾವಣೆ : ಮತದಾರರಲ್ಲಿ ಗೊಂದಲ, ಮುಖಂಡರಲ್ಲಿ ವೈಮನಸ್ಸು

ಚಿಕ್ಕೋಡಿ:- ಕಾಂಗ್ರೆಸ್ ಪಕ್ಷದ ಹದಿನೈದು ಶಾಸಕರ ಅನರ್ಹತೆ ಹಿನ್ನೆಲೆಯಲ್ಲಿ ಉಪಚುನಾವಣೆ ನಿಗದಿಯಾಗಿದ್ದು, ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ಮತಕ್ಷೆತ್ರಗಳಲ್ಲಿ ಚುನಾವಣೆ ರಂಗೇರಿದೆ. ಬಿಜೆಪಿ ಮುಖಂಡ ಹಾಗೂ ಕಾಗವಾಡದ ಮಾಜಿ ಶಾಸಕ ರಾಜು …

Read More »

ಉಪ ಚುನಾವಣೆ, ಬಿಜೆಪಿಯ ಗೆಲುವಿನ ಹಾದಿ ಸುಗಮ : ಡಿವಿಎಸ್

ಮಂಗಳೂರು:- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ಈಗಾಗಲೇ ಬಿಜೆಪಿ ಎಲ್ಲಾ ರೀತಿಯಲ್ಲೂ ಸನ್ನದ್ಧ ಆಗಿದ್ದು, ಹದಿನೈದರಲ್ಲೂ ಬಿಜೆಪಿ ಗೆಲುವು ಸಾಧಿಸುತ್ತೇ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರೊಂದಿಗೆ …

Read More »

Breaking ಉಪಚುನಾವಣೆ: ಅಥಣಿ ಕ್ಷೇತ್ರದಿಂದ ರಾಜು ಕಾಗೆ ಕಾಂಗ್ರೆಸ್ ಅಭ್ಯರ್ಥಿ ಸಾಧ್ಯತೆ

ಚಿಕ್ಕೋಡಿ:- ಉಪಚುನಾವಣೆ ರಂಗು ಇದೀಗ ಮತ್ತೆ ರಂಗು ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಅಥಣಿ ವಿಧಾನಸಭೆ ಕ್ಷೇತ್ರದಿಂದ ಕಾಗವಾಡ ಕಾಗವಾಡದ ಮಾಜಿ ಶಾಸಕ ಬಿಜೆಪಿ‌ ಮುಖಂಡ ರಾಜು ಕಾಗೆ ಕಾಂಗ್ರೆಸ್ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿದ್ದಾರೆ …

Read More »

ಉಪಚುನಾವಣೆಯಲ್ಲಿ ಕೆ.ಆರ್.‌ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪವಾರ್.

ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯು ನಿಶ್ಚಿತವಾಗಿ ಖಾತೆ ತೆರೆಯಲಿದೆ ಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಮಾಜಿಶಾಸಕ ಮಾರುತಿರಾವ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆಯ ‌ ಶೀಳನೆರೆ ಗ್ರಾಮದಲ್ಲಿ ನಡೆದ …

Read More »

ಉಪಚುನಾವಣೆ ಫಲಿತಾಂಶ: ಕುಸಿಯುತ್ತಿರುವ ಮೋದಿ ಜನಪ್ರಿಯತೆಗೆ ಸಾಕ್ಷಿ: ಅಬ್ಬಯ್ಯ.

  ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಹರಿಯಾಣ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಹಾಗೂ ವಿವಿಧ ರಾಜ್ಯಗಳಲ್ಲಿನ ಉಪಚುನಾವಣಾ ಫಲಿತಾಂಶವು ಕುಸಿಯುತ್ತಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರತಿಕ್ರಿಯಿಸಿದ್ದಾರೆ. …

Read More »

ಸಿದ್ದು ಜವಾಬ್ದಾರಿಯುತವಾಗಿ ಮಾತನಾಡಲಿ : ಕಾರಜೋಳ

ಹುಬ್ಬಳ್ಳಿ:- ಸಿದ್ದರಾಮಯ್ಯ ಹಿರಿಯ ರಾಜಕಾರಣಿಗಳಾಗಿದ್ದು, ಅವರು ಈ ರೀತಿ ಕೀಳಾಗಿ ಮಾಡನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿಂದು ಸಿದ್ದರಾಮಯ್ಯ ವೀರಸಾವರಕರ್ ಬಗ್ಗೆ ಹೇಳಿಕೆ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ …

Read More »

ಪಾಪದ ಕೊಡ ತುಂಬಿದ ನಂತರ ಮೈತ್ರಿ ಸರ್ಕಾರ ಬಿದ್ದಿದೆ: ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡ ಮೈತ್ರಿ ಸರ್ಕಾರ ಪಾಪದ ಕೊಡ ತುಂಬಿದ ನಂತರ ಬಿದ್ದು ಹೋಗಿದೆ. ಅಕ್ಕ-ಪಕ್ಕ ಕುರುತಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಪರಸ್ಪರ ಕಿತ್ತಾಟ ನಡೆಸಿದ್ದಾರೆಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ನಗರದಲ್ಲಿ …

Read More »

ನೆರೆ ವಿಚಾರದಲ್ಲಿ ರಾಜಕೀಯ ಸಲ್ಲದು :ಸಿದ್ದರಾಮಯ್ಯ ಗೆ ಶೆಟ್ಟರ್ ತಿರುಗೇಟು.

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ನೆರೆ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿಯಾಗಿ ಕಾಮೆಂಟ್ ಮಾಡೋದು ತಪ್ಪು ಎಂದು ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ …

Read More »

ಮಹದಾಯಿಯ ಕರ್ನಾಟಕದ ಪಾಲನ್ನು ಸಮರ್ಥವಾಗಿ ಪಡೆಯಲಾಗುವುದು :ಸಚಿವ ಮಾಧುಸ್ವಾಮಿ

ಹುಬ್ಬಳ್ಳಿ: ಮಹದಾಯಿ ಸೇರಿದಂತೆ ಅಂತರ ರಾಜ್ಯ ಜಲ ವಿಚಾರವಾಗಿ ಕರ್ನಾಟಕಕ್ಕೆ ಬರಬೇಕಾದ ಪಾಲನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹದಾಯಿ ಕುರಿತು ನೋಟಿಫೀಕೇಶನ್ ಹೊರಡಿಸಲು …

Read More »

ಸರ್ಕಾರ ನಡೆಸುವುದು ತಂತಿ ಮೇಲಿನ ನಡಿಗೆ, ನೂರಕ್ಕೆ ನೂರು ಸತ್ಯ : ಹೊರಟ್ಟಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸುವುದು ತಂತಿ ಮೇಲೆ ನಡೆದಂಗೆ ಆಗುತ್ತಿದೆ ಎಂಬ ಸಿಎಂ ಬಿಎಸ್ ವೈ ಹೇಳಿಕೆ ನೂರಕ್ಕೆ ನೂರು ಸತ್ಯ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ …

Read More »

ಡಿಕೆಶಿ ಭೇಟಿಗೆ ಅವಕಾಶ ನೀಡದ ಇಡಿ ಅಧಿಕಾರಿಗಳ ಬಗ್ಗೆ ಆಕ್ರೋಶ ಹೊರಹಾಕಿದ ಶ್ರೀನಿವಾಸಗೌಡ.

ಕೋಲಾರ: ಕಳೆದ ಕೆಲವು ದಿನಗಳಿಂದ ಇಡಿ ಬಂಧನದಲ್ಲಿರುವ ಡಿಕೆ ಶಿವಕುಮಾರ ಅವರ ಭೇಟಿಗೆ ಅಷ್ಟೇ ಅಲ್ಲದೇ ನೋಡಲಿಕ್ಕೂ ಕೂಡ ಪೋಲೀಸರು ಅವಕಾಶ ಮಾಡಿಕೊಡುತ್ತಿಲ್ಲ. ಕಾನೂನು ಬದ್ಧವಾಗಿ ಏನೇನೂ ಆಗಿದೆ ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ …

Read More »

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಮುರುಳಿಧರ್ ರಾವ್ ವಿಶ್ವಾಸ.

ಮಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ 15ಕ್ಕೆ 15 ಸ್ಥಾನ ಗೆದ್ದೇ ಗೆಲ್ಲುತ್ತೆ. ರಾಜ್ಯದಲ್ಲಿ ಯಾವಾಗ ಉಪ ಚುನಾವಣೆ ನಡೆದರೂ ನಾವು ಚುನಾವಣೆಗೆ ಸಿದ್ಧರಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ್ ರಾವ್ ಗೆಲುವಿನ ವಿಶ್ವಾಸ …

Read More »

BREAKING ಕೈ ಪಕ್ಷ ಬಿಟ್ಟು ಕಮಲ ಸೇರಲು ಮುಂದಾದರಾ ಅನಿಲ ಲಾಡ್ ಈ ಪ್ರಶ್ನೆ ಬಳ್ಳಾರಿಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಬಳ್ಳಾರಿ:- ಮಾಜಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರಲು ಚಿಂತನೆ ನಡೆಸಿದ್ದಾರೆಂಬ ಗುಸು ಗಸು ಸುದ್ದಿ ಹರಡುತ್ತಿದ್ದು, ಇದಕ್ಕೆ ಪುಷ್ಟಿ ಎಂಬಂತೆ ಅನಿಲ ಲಾಡ್ ತಮ್ಮ ಕಾರ್ಯಕರ್ತರಿಗೆ ಮೆಸೇಜ್ ಕಳುಹಿಸಿ ಅಭಿಪ್ರಾಯ ಸಂಗ್ರಹಣೆಗೆ …

Read More »

ರಾಜ್ಯ / ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಪಂಚೇಂದ್ರಿಯಗಳಿಲ್ಲ : ಎಸ್.ಆರ್ ಪಾಟೀಲ ವಾಗ್ದಾಳಿ

ಬಾಗಲಕೋಟೆ:- ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರಕ್ಕೆ ಪಂಚೇಂದ್ರಿಯಗಳಿಲ್ಲ, ಪ್ರವಾಹದಲ್ಲಿ ಕೊಚ್ಚಿ ಹೋದ ರಾಜ್ಯದ ಬಹುತೇಕ ಜಿಲ್ಲೆಗಳ ಜನರ ಪರಿಸ್ಥಿತಿ ಬಗ್ಗೆ ಅರಿವಿದ್ದಾಗ್ಯೂ ಕೂಡಾ ನಿಸ್ತೇಜವಾಗಿ ವರ್ತಿಸುತ್ತಿರುವುದು ದುರಂತದ ಸಂಗತಿ ಎಂದು ಸಚಿವ ಎಸ್.ಆರ್ …

Read More »

ದುಂದು ವೆಚ್ಚದ ಕಡಿವಾಣಕ್ಕೆ ಸಿಎಂ ಸೂಚನೆ

ಬೆಂಗಳೂರು:- ರಾಜ್ಯದಲ್ಲಿ‌ ಸಂಭವಿಸಿದ ನೆರೆ ಹಾವಳಿಯಿಂದ ಆರ್ಥಿಕ ಸಂಕಷ್ಟ ತಲೆದೂರಿರುವ ಕಾರಣ ಹೆಲಿಕಾಪ್ಟರ್, ವಿಶೇಷ ವಿಮಾನ ಪ್ರಯಾಣ ಬಿಟ್ಟು ರಸ್ತೆ ಪ್ರಯಾಣ ಮಾಡುವ ನಿರ್ಧಾರದ ಮೂಲಕ‌ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಿಎಂ …

Read More »

ಬಿಜೆಪಿ ರಾಷ್ಟ್ರೀಯ ನಾಯಕರು ಅನರ್ಹರಿಗೆ ಟಿಕೆಟ್ ನೀಡಿದರೆ ಪಕ್ಷ ತೊರೆಯಲು ಸಿದ್ದ : ಬಾಂಬ್ ಸಿಡಿಸಿದ ರಾಜು ಕಾಗೆ.

ಚಿಕ್ಕೋಡಿ: ರಾಷ್ಟ್ರೀಯ ನಾಯಕರು ಅನರ್ಹರಿಗೆ ಟಿಕೇಟ್ ಕೊಡಬೇಕು ಎನ್ನುವ ವಿಚಾರದಲ್ಲಿದ್ದಾರೆ. ಒಂದು ವೇಳೆ ಹಾಗೇನಾದರೂ ನಾಯಕರು ಅನರ್ಹರಿಗೆ ಟಿಕೇಟ್ ಕೊಡಲು ನಿರ್ಧರಿಸಿದರೆ ನಾನು ಸಹ ಪಕ್ಷವನ್ನು ತ್ಯಾಗ ಮಾಡಲು ಸಿದ್ದನಿದ್ದೆನೆ ಎಂದು ಮಾಜಿ ಶಾಸಕ …

Read More »

ರಾಜ್ಯದ ಪ್ರಗತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲ: ಗುಂಡೂರಾವ್ ಕಿಡಿ.

ಹುಬ್ಬಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಫಲತೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕಿಡಿಕಾರಿದ್ದಾರೆ.ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಕೇಂದ್ರ …

Read More »

ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.

ಮಂಡ್ಯ: ಡಿ. ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವದನ್ನು ಖಂಡಿಸಿಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಐದು ದೀಪದ ವೃತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆಯನ್ನು ನಡೆಸಿದರು.ಕಾಂಗ್ರೆಸ್ ಕಾರ್ಯಕರ್ತರು ಐದು ದೀಪ ವೃತದಿಂದ ನೂರಾರು …

Read More »

ನಾರಾಯಣಗೌಡನಂತ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ಮತ್ತೊಬ್ಬನಿಲ್ಲ: ಹೆಚ್.ಟಿ.ಮಂಜು ವಾಗ್ದಾಳಿ.

ಮಂಡ್ಯ : ನಾರಾಯಣಗೌಡನಂತಹ ಉಂಡ ಮನೆಗೆ, ನಂಬಿದವರಿಗೆ ಬೆನ್ನಿಗೆ ಚೂರಿ ಹಾಕುವ, ಕೃತಜ್ಞತೆ ಇಲ್ಲದ ವ್ಯಕ್ತಿ ದೇಶದಲ್ಲೇ ಯಾರೂ ಇಲ್ಲ ಎಂದು ಜೆಡಿಎಸ್ ಮುಖಂಡ ಹಾಗೂ ಜಿ.ಪಂ.ಸದಸ್ಯ ಹೆಚ್.ಟಿ.ಮಂಜು ತೀವ್ರ ವಾಗ್ದಾಳಿ ನಡೆಸಿದರು.ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ …

Read More »

ಭ್ರಷ್ಟಾಚಾರ ಮತ್ತು ಲೂಟಿ ಮಾಡಿದರವ ಪರ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದೆ ದುರಂತ: ಜೋಶಿ

ಹುಬ್ಬಳ್ಳಿ: ಭ್ರಷ್ಟಾಚಾರ ಮತ್ತು ಲೂಟಿ ಮಾಡಿದರವ ಪರ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದೆ ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮಗಳ ಹೆಸರಲ್ಲಿ 108 …

Read More »

ಮಂಡ್ಯ ಶಾಸಕ ನಾರಾಯಣಗೌಡ ಚೆಂಗ್ಲು ಗಿರಾಕಿ: ರೇವಣ್ಣ ಗುಡುಗು.

ಮಂಡ್ಯ: ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಮುಂಬೈವಾಲಾನಿಗೆ ತಕ್ಕ ಪಾಠ ಕಲಿಸ್ತೀನಿ ಎಂದು ರಾಜ್ಯದ ಮಾಜಿಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.ಮಂಡ್ಯ ‌ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, …

Read More »

ಡಿಕೆಸಿ ವಿಚಾರದಲ್ಲಿ ದಯವಿಟ್ಟು ನನ್ನ ಪ್ರಶ್ನೆ ಕೇಳಬೇಡಿ:ಕಾರಜೋಳ

ಚಿತ್ರದುರ್ಗ:ಡಿಕೆಶಿ ವಿಚಾರದಲ್ಲಿ ದಯವಿಟ್ಟು ನನ್ನ ಪ್ರಶ್ನೆ ಕೇಳಬೇಡಿ ಡಿಕೆಶಿ ವಿಚಾರದ ಬಗ್ಗೆ ಮಾತಾಡಬೇಡಿ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದರು.ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ತನ್ನ ಕೆಲಸ ತಾನು ಮಾಡಿಕೊಂಡು ಬರುತ್ತಿದ್ದೆ.ಇಡಿ, …

Read More »

ಡಿಕೆಶಿ ಬಂಧನ : ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ :ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.ದೇಶದಲ್ಲಿ …

Read More »

ಕಾಂಗ್ರೆಸ್ ವಿರುದ್ಧ ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ: ನೆರೆ ಹಾವಳಿ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವ ಅಗತ್ಯವಿಲ್ಲ.ಈಗಾಗಲೇ ರಾಜ್ಯದ ಅತಿವೃಷ್ಟಿ ಕುರಿತು ಸಮಗ್ರ ಅಧ್ಯಯನ ರಾಜ್ಯ ಸರ್ಕಾರದಿಂದ ನಡೆದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ …

Read More »

ಪ್ರಧಾನಿ ಮೋದಿಯನ್ನ ಪಾಕ್ ಪ್ರಧಾನಿಗೆ ಹೋಲಿಸಿದ ಮಾಜಿ ಸಚಿವ ರಮಾನಾಥ್ ರೈ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು‌ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು ಎಂದು ಮಾಜಿ ಸಚಿವ ರಮಾನಾಥ್ ರೈ ತಿಳಿಸಿದರು.ನಗರದಲ್ಲಿಂದು ಕಾಂಗ್ರೆಸ್ ‌ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮೋದಿ ಮತ್ತು‌ …

Read More »

ಸಿಎಂ ರಾಜಾಹುಲಿಯಲ್ಲ ಹೆಣ್ಣು ಹುಲಿ:ಕಂದಕೂರ

ಯಾದಗಿರಿ: ಸಿಎಂ ರಾಜಾಹುಲಿಯಲ್ಲ ಹೆಣ್ಣು ಹುಲಿ ಅಂತಾ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ರು.ಯಾದಗಿರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜೆಡಿಎಸ್ …

Read More »

ಈಶ್ವರಪ್ಪ ಉದ್ದಟತನದ ಹೇಳಿಕೆ ನೀಡುವವರಲ್ಲ: ರೇಣುಕಾಚಾರ್ಯ ಸಮರ್ಥನೆ

ದಾವಣಗೆರೆ:ರಾಜಕಾರಣಿಗಳ ಹೇಳಿಕೆಗಳು ಸ್ವಲ್ಪ ವ್ಯತ್ಯಾಸವಾಗಿರಬಹುದು ಅದನ್ನ ವೈಭವಿಕರಿಸಭಾರದು.ಈಶ್ವರಪ್ಪನವರು ಹಿರಿಯರು ಉದ್ದಟತನದ ಹೇಳಿಕೆ ನೀಡುವವರಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಮೂಲಕ ಮಾತನಾಡಿದ ಅವರು, ಮಾಧ್ಯಮದವರು ಎಡವಿದ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಅವರ ಮನಸ್ಸನ್ನ ಪರಿವರ್ತನೆ …

Read More »

ಕಾಂಗ್ರೆಸ್​​ನ ಟ್ರಬಲ್​​ ಶೂಟರ್​​ ಸ್ಥಿತಿ ನೋಡಿ ಕಣ್ಣೀರಿಟ್ಟ ಕುಟುಂಬ; ಪತ್ನಿ, ಪುತ್ರಿಗೆ ಸಮಾಧಾನ ಮಾಡಲೆತ್ನಿಸಿ ಭಾವುಕರಾದ ಡಿಕೆಶಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‌ ಭೇಟಿ ಮಾಡಲು ಕುಟಂಬಸ್ಥರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ಪತ್ನಿ ಉಷಾ, ಪುತ್ರಿ ಸೇರಿದಂತೆ ಹಲವು ಕುಟುಂಬ ಸದಸ್ಯರು ಡಿಕೆಶಿ …

Read More »

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ: ಶೆಟ್ಟರ್

ಹುಬ್ಬಳ್ಳಿ: ಅನರ್ಹ ಶಾಸಕರ ವಿಚಾರಣೆ‌ ಸುರ್ಪೀಂಕೋರ್ಟ್ ನಲ್ಲಿ ಇದೆ. ಕೋರ್ಟ್ ತೀರ್ಪಿನ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.ನಗರದಲ್ಲಿಂದು ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರ ಸುಪ್ರೀಂಕೋರ್ಟ್ ನಲ್ಲಿ …

Read More »

ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಗುಂಡಾಗಳಿಗೆ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ: ಈಶ್ವರಪ್ಪ

ಹುಬ್ಬಳ್ಳಿ: ಭ್ರಷ್ಟಾಚಾರ, ಗುಂಡಾಗಳು ಹಾಗೂ ಕೊಲೆಗಡಿಕರಿಗೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ದೇಶದಲ್ಲಿತ್ತು. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಕ್ಷಣೆ ನೀಡುವದಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿ …

Read More »

ಸಿದ್ದರಾಮಯ್ಯ ಅಧಿಕಾರದ ವೇಳೆ ನಿದ್ದೆ ಮಾಡುತಿದ್ದರು: ನಳೀನಕುಮಾರ್ ಕಟೀಲು

ಹುಬ್ಬಳ್ಳಿ: ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ವೇಳೆ ನಿದ್ರೆ ಮಾಡ್ತಿದ್ದರು. ಈಗ ಎಚ್ಚರವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಲೇವಡಿ ಮಾಡಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ವೇಳೆ ನಿದ್ರೆ ಮಾಡ್ತಿದ್ದರು. ಈಗ …

Read More »

ಸಿಬಿಐ ತನಿಖೆಯಿಂದ ಯೋಗೀಶಗೌಡ ಕೊಲೆ ಪ್ರಕರಣದ ಸತ್ಯ ಹೊರಬರಲಿದೆ:ಶೆಟ್ಟರ್

ಹುಬ್ಬಳ್ಳಿ:ಯೋಗೀಶಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದು, ಸಿಬಿಐ ತನಿಖೆಯಿಂದ ಯೋಗೀಶ್‌ಗೌಡ ಕೊಲೆ ಪ್ರಕರಣದ ಸತ್ಯ ಬಯಲಿಗೆ ಬರಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯೋಗೀಶ್‌ಗೌಡರನ್ನು ಭೀಕರವಾಗಿ …

Read More »

ರಾಜಕೀಯ ಕಾರ್ಯದರ್ಶಿಯಾಗಿ ರೇಣುಕಾಚಾರ್ಯ ನೇಮಕ : ಅಭಿಮಾನಿಗಳ ಸಂಭ್ರಮಾಚರಣೆ.

ದಾವಣಗೆರೆ : ರಾಜಕೀಯ ಕಾರ್ಯದರ್ಶಿ ಯಾಗಿ ಶಾಸಕ ರೇಣುಕಾಚಾರ್ಯ ಆಯ್ಕೆಯಾದ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಇಂದು ರಾಯಣ್ಣ ಪ್ರತಿಮೆಗೆ ಹಾರ ಹಾಕಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಶಾಸಕ ಎಂಪಿ ರೇಣುಕಾಚಾರ್ಯ ಅವರು …

Read More »

17 ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಬಿಜೆಪಿ ಅಧಿಕಾರ: ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ.

ದಾವಣಗೆರೆ: 17 ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆಬಂದಿದೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.ಹೊನ್ನಾಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ದೇಶಕ್ಕೆ ಸ್ವತಂತ್ರ ಬಂದ ರೀತಿ ಅನರ್ಹ ಶಾಸಕರ ತ್ಯಾಗದಿಂದ ನಮ್ಮ …

Read More »

ಕಲ್ಲು ಹೊಡೆದವರು, ಬೆಂಕಿ ಹಚ್ಚಿದವರು ನಮ್ಮವರಲ್ಲ : ಸಿದ್ದರಾಮಯ್ಯ

ಹುಬ್ಬಳ್ಳಿ: ಕಲ್ಲು ಹೊಡೆದವರು, ಬೆಂಕಿ ಹಚ್ಚಿದವರು ನಮ್ಮ ಕಾರ್ಯಕರ್ತರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.ಡಿಕೆಶಿ ಬಂಧನದ ಬಳಿಕ ನಡೆದ ಹಿಂಸಾತ್ಮಕ ಪ್ರತಿಭಟನೆ ವಿಚಾರವಾಗಿ ನಗರದಲ್ಲಿಂದು ಮಾಧ್ಯಮ ಜೊತೆಗೆ ಮಾತನಾಡಿದ ಅವರು, ‌ಕಲ್ಲು ಹೊಡೆದವರು, …

Read More »

ಡಿಕೆಸಿ ಬಂಧನವನ್ನು ರಾಜಕೀಯ ಪ್ರೇರಿತ ಎನ್ನುವುದೇ ರಾಜಕೀಯ: ಬೊಮ್ಮಾಯಿ ಕಿಡಿ

ಹುಬ್ಬಳ್ಳಿ: ಡಿ.ಕೆ.ಶಿವಕುಮಾರ ಬಂಧನ ಪ್ರಕರಣವನ್ನು ರಾಜಕೀಯ ಪ್ರೇರಿತ ಎನ್ನುವುದೇ ರಾಜಕೀಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಬಂಧನ ಪ್ರಕರಣ.ನಮಗೆ ಖುಷಿ, ಸಂತೋಷದ ಪ್ರಶ್ನೆಯೇ ಇಲ್ಲ, …

Read More »

ಡಿಕೆಶಿ ಬಂಧನ ಹಿನ್ನೆಲೆ, ಭುಗಿಲೆದ್ದ ಅಭಿಮಾನಿಗಳ ಹಾಗು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.

ಆನೇಕಲ್: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದ ಹಿನ್ನೆಲೆ ಅಭಿಮಾನಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಯ ಕಾವು ಭುಗಿಲೆದಿದ್ದು ಅದರಂತೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಜಿಗಣಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು …

Read More »

ಡಿಕೆಶಿ ಬಂಧನ ಖಂಡಿಸಿ ಕಾರ್ಯಕರ್ತರ ವ್ಯಾಪಕ ಪ್ರತಿರೋಧ

ಬೇಗೂರು: ಕಾಂಗ್ರೆಸ್ ಮುಖಂಡ ಡಿಕೆಶಿವಕುಮಾರ್ ಬಂಧನ ಖಂಡಿಸಿ ಬುಧವಾರ ಬೊಮ್ಮನಹಳ್ಳಿ ವಿವಿದೆಡೆ ಕಾಂಗ್ರೆಸ್ ಕಾರ್ಯಕರ್ತರು ಟೈರ್ ಗಳಿಗೆ ಬೆಂಕಿಹಾಕಿ, ರಸ್ತೆತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಚರ್ಚ್ ನಿಲ್ದಾಣದಿಂದ ಬೇಗೂರುವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು …

Read More »

ಸೆಪ್ಟೆಂಬರ್ 13 ರವರೆಗೆ ED ಕಸ್ಟಡಿಗೆ ಡಿ.ಕೆ ಶಿವಕುಮಾರ್..!

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಇಡಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ನೀಡಿದೆ. ನಿನ್ನೆ ಶಿವಕುಮಾರ್ ಅವರನ್ನ ಬಂಧಿಸಿದ್ದ ಜಾರಿ ನಿರ್ದೇಶನಾಲಯ ಇಂದು ದೆಹಲಿಯಲ್ಲಿರುವ ರೋಸ್​ ಅವೆನ್ಯೂ ಪಿಎಂಎಲ್‌ಎ ಕೋರ್ಟ್​ಗೆ ಹಾಜರುಪಡಿಸಿತ್ತು. …

Read More »

ಮಾಜಿ ಪವರ್‌ ಮಿನಿಸ್ಟರ್‌ ಡಿಕೆಶಿ ಬಂಧನ ಖಂಡಿಸಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ

ಹುಬ್ಬಳ್ಳಿ: ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಬಂಧನ ಖಂಡಿಸಿ ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲೂ ಮಾಜಿ ಪವರ್‌ಫುಲ್‌ ಮಿನಿಸ್ಟರ್‌ ಬಂಧನ ಖಂಡಿಸಿ ಡಿಕೆಶಿ ಅಭಿಮಾನಿಗಳು ಮತ್ತು …

Read More »

ಡಿಕೆಶಿ ಬಂಧನ‌ ಖಂಡಿಸಿ ಟಯರ್ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಹುಬ್ಬಳ್ಳಿ:ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಬಂಧಿಸಿದ ಇ.ಡಿ ಅಧಿಕಾರಿಗಳ ಕ್ರಮ ಖಂಡಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ಹಾಗೂ ಪ್ರದಾನಿ ನರೇಂದ್ರ …

Read More »

ಡಿ.ಕೆ.ಶಿವಕುಮಾರ ಬಂಧನ ಹಿನ್ನೆಲೆ, ಭುಗಿಲೆದ್ದ ಅಭಿಮಾನಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು:ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದ ಹಿನ್ನೆಲೆ ಅಭಿಮಾನಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಯ ಕಾವು ಭುಗಿಲೆದಿದ್ದು ಅದರಂತೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಜಿಗಣಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ …

Read More »

ಡಿಕೆಶಿ ಬಂಧನದಿಂದ ಕೈ ಪಕ್ಷ ಸಂಘಟನೆಗೆ ಹೊಡೆತ..?

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನದಿಂದ ರಾಜ್ಯದಲ್ಲಿ ಕಾಂಗ್ರೆಸ್​​ ಪಕ್ಷ ಸಂಘಟನೆಗೆ ತೀವ್ರ ಹೊಡೆತ ಬಿದ್ದಂತಾಗಿದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ.ಈಗಾಗಲೇ ದೇಶದೆಲ್ಲೆಡೆ ನೆಲೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ಕಾಂಗ್ರೆಸ್​​ ಪಕ್ಷಕ್ಕೆ ಕರ್ನಾಟಕದ ಮಟ್ಟಿಗೆ …

Read More »

ಧೀಮಂತ ನಾಯಕ ಅರುಣ್ ಜೇಟ್ಲಿ ಇನ್ನಿಲ್ಲ

ಬಿಜೆಪಿ ಹಿರಿಯ ನಾಯಕ ಹಾಗೂ ಅಜಾತ ಶತ್ರು ಅರುಣ್ ಜೇಟ್ಲಿ(66) ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿರಿಯ ನಾಯಕ ಇಂದು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ. …

Read More »

ಶಕ್ತಿ ಮೀರಿ ಪ್ರಾದೇಶಿಕ ಪಕ್ಷ ಉಳಿಸಲು ಪ್ರಯತ್ನಿಸುತ್ತೇನೆ

ಹಾಸನ: ನನ್ನ ಹಿಂದೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಶಕ್ತಿ ಮೀರಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಉಳಿಸಲು ಪ್ರಯತ್ನಿಸುತ್ತೇನೆ. ಪ್ರತಿನಿತ್ಯ ನಾನು ದೆಹಲಿಗೆ ಹೋಗಲು ಆಗುತ್ತಿಲ್ಲ, ರಾಷ್ಟ್ರ ರಾಜಕಾರಣ ಮಾತನಾಡಲು ಬೇರೆ ನಾಯಕರು ಕರೆದರು ಸಹ ನಾನು …

Read More »

ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ

ನವದೆಹಲಿ:ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರು ಅನರ್ಹ ಶಾಸಕರನ್ನು ಲೇವಡಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 40 ವರ್ಷ ಕಟ್ಟಿ ಬೆಳಸಿದ …

Read More »

ರಾಜೀನಾಮೆ ನೀಡಿದ್ದ 8 ಅತೃಪ್ತ ಶಾಸಕರು ಯು ಟರ್ನ್.?

ಬೆಂಗಳೂರು: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಪಕ್ಷಾಂತರ ನಿಷೇಧ ಮಸೂದೆ ಉಲ್ಲಂಘಿಸಿದ ಕಾರಣ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ.ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಟಳ್ಳಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿದ್ದ ಕೆಪಿಜೆಪಿ ಶಾಸಕ ಆರ್. …

Read More »

ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ: ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ವೆಂದೇಮಾತರಂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಕಾರ್ಯಕರ್ತರು ಇಂದು ಚಿತ್ರದುರ್ಗದ ಬಾಜಪಾ ಕಛೇರಿ ಮುಂದೆ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.ಕಳೆದ 5 …

Read More »

ಬಿಜೆಪಿಗೆ ಒಂದು ವಾರದೊಳಗೆ ಬಹುಮತ ಸಾಬೀತಿಗೆ ರಾಜ್ಯಪಾಲ ವಜೂಬಾಯಿ ವಾಲಾ ಸೂಚನೆ

ಬೆಂಗಳೂರು: ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಜೂಬಾಯಿ ವಾಲಾ ಸೂಚನೆ ನೀಡಿದ್ದಾರೆ. 2018ರಲ್ಲಿ ಯಡಿಯೂರಪ್ಪ ಸರಕಾರ ರಚನೆಗೆ ಹಕ್ಕು …

Read More »

ಇಂದೇ ಪ್ರಮಾಣವಚನ ಸ್ವೀಕರಿಸಲಿರುವ ಬಿಎಸ್ ವೈ

ಬೆಂಗಳೂರು:ಬಿಎಸ್​​ ಯಡಿಯೂರಪ್ಪ ಇಂದು ನಾಲ್ಕನೇ ಬಾರಿಗೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 6 ಗಂಟೆಗೆ ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿದೆ. ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಲಿದ್ದಾರೆ.ಇಂದು ಬೆಳಗ್ಗೆ …

Read More »

ಸರ್ಕಾರ ರಚನೆಯ ತವಕದಲ್ಲಿರುವ ಬಿಜೆಪಿಗೆ ಎದುರಾಗಿದೆಯಾ ಬಿಗ್ ಶಾಕ್..!?

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ ನಾಯಕರಿಗೆ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.ದೆಹಲಿ ಕಡೆಗೆ ಮುಖ ಮಾಡಿರುವ ರಾಜ್ಯ ಬಿಜೆಪಿ ನಾಯಕರು ವರಿಷ್ಠರ ಸೂಚನೆಗಾಗಿ ಕಾಯುತ್ತಿದ್ದಾರೆ. ಆದರೆ, …

Read More »

ಹಠಮಾರಿತನದಿಂದ ಗೆದ್ದು ಸೋಲನ್ನು ಅನುಭವಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡೂ ದಶಕಗಳಿಂದ ಬೇರುಮಟ್ಟದಲ್ಲಿ ಕಾಂಗ್ರೆಸ್ ಬೆಳೆಸಿ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೇವಲ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ …

Read More »

ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್ ನಿರ್ಧಾರ

ಬೆಂಗಳೂರು:ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ವಾತಾವರಣ ಕಂಡುಬಂದಿದೆ. ಮಧ್ಯಂತರ ಚುನಾವಣೆ ಎದುರಾದರೂ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!