Breaking News
Hiring Reporter’s For more Information Contact Above Number 876 225 4007 . Program producer
Home / ವಾಣಿಜ್ಯ / ಕರ್ನಾಟಕ

ಕರ್ನಾಟಕ

ಸರ್ವಕಾಲಿಕ ದಾಖಲೆ ನಿರ್ಮಿಸಿದ ಬ್ಯಾಡಗಿ ಮೆಣಸಿನಕಾಯಿ.

ಬ್ಯಾಡಗಿ: ಒಣಮೆಣಸಿನಕಾಯಿ ನಾಡು ಎಂತಲೇ ವಿಶ್ವ ಖ್ಯಾತಿಯನ್ನು ಗಳಿಸಿರುವ ಬ್ಯಾಡಗಿ ಮರಣಸಿನಕಾಯಿ ಮಾರುಕಟ್ಟೆ ಮತ್ತೊಂದು ದಾಖಲೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೌದು… ಪ್ರಪ್ರಥಮ ಬಾರಿಗೆ ಸರ್ವಕಾಲಿಕ ದರ ದಾಖಲಿಸುವ ಮೂಲಕ ಬ್ಯಾಡಗಿ ಮೆಣಸಿನಕಾಯಿ ದಾಖಲೆ ಬರೆದಿದೆ. ಬ್ಯಾಡಗಿಯ ಪ್ರಸಿದ್ಧ ಬಿ.ಡಿ.ಪಾಟೀಲ ಆ್ಯಂಡ್ ಸನ್ಸ್ ಅವರ ಅ೦ಗಡಿಯಲ್ಲಿ ಇಂದು ಡಬ್ಬಿ ತಳಿಯು ಕ್ವಿಂಟಾಲ್ ಗೆ 45,111 ರೂ ಗೆ ಖರೀದಿ ಆಗಿದೆ. ಈ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿ …

Read More »

ಕೇರಳದಲ್ಲಿ ಸಿಎಂ ‘BSY’ ಕಾರಿಗೆ ಮುತ್ತಿಗೆ

ಕೇರಳ : ಕೇರಳಕ್ಕೆ ಭೇಟಿ ನೀಡಿದ ಸಿಎಂ ಬಿ.ಎಸ್ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಇಂದು ಕೇರಳದಲ್ಲಿ ನಡೆದಿದೆ. ಹೌದು, ಕೇರಳಕ್ಕೆ ಪ್ರವೇಶಿಸಿದ ಬಿಎಸ್ವೈಗೆ ಕಪ್ಪು ಪಟ್ಟಿ ಪ್ರದರ್ಶಿಸಿದ ಕೇರಳದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಂತರ ಸಿಎಂ ಕಾರಿಗೆ ಮುತ್ತಿಗೆ ಹಾಕಿದ್ದಾರೆ ಎನ್ನಲಾಗಿದ್ದು, ಮುತ್ತಿಗೆ ಹಾಕಿದ 8 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದ ತ್ರಿವೇಂಡ್ರನ ತಪಂನೂರ್ ನಲ್ಲಿ ಸಿಎಂ …

Read More »

ನೇತ್ರಾವತಿ ಸ್ನಾನಘಟ್ದದ ಕಿಂಡಿ ಆಣೆಕಟ್ಟು ತಡೆಗೋಡೆ ನಿರ್ಮಾಣ : ಡಿಸಿಎಂ ಅಶ್ವತ್ ನಾರಾಯಣ

ಮಂಗಳೂರು:- ಮಳೆಯಿಂದ ಕೊಚ್ಚಿ ಹೋದ  ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಆಣೆಕಟ್ಟಿಯ ತಡೆಗೋಡೆ  ನಿರ್ಮಾಣ ಪ್ರದೇಶಕ್ಕೆ ಉಪ ಮುಖ್ಯ ಮಂತ್ರಿ ಡಾ ಅಶ್ವಥ್ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜ್ಯ ಸರಕಾರದಿಂದ ಸೂಕ್ತ ಅನುದಾನದ  ಭರವಸೆ ನೀಡಿದರು . ಈ ಬಾರಿಯ ಮಳೆಗಾದಲ್ಲಿ  ಸುರಿದ ಭಾರಿ ಮಳೆ ಗೆ  ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಹಾನಿಯಾಗಿತ್ತು. ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು. ಧರ್ಮಸ್ಥಳ ಸ್ನಾನ ಘಟ್ಟ ಬಳಿಯ ಕಿಂಡಿ  ಆಣೆಕಟ್ಟು  ಮಳೆಗೆ …

Read More »

ದಾವಣಗೆರೆ ಪಾಲಿಕೆ ಮತ ಎಣಿಕೆ ಮುಕ್ತಾಯ : ಅಭಿನಂದನೆ ಸಲ್ಲಿಸಿದ ಡಿಸಿ

ದಾವಣಗೆರೆ:- ದಾವಣಗೆರೆ ಮಹಾನಗರ ಪಾಲಿಕೆ ಮತದಾನ ಮತ್ತು ಮತ ಎಣಿಕೆ ಯಾವ ಸಮಸ್ಯೆ ಇಲ್ಲದೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.              ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಂತರ ಸುದ್ದಿಗಾರೊಂದಿಗೆ ಮಾತಾಡಿದ ಅವರು, 45 ವಾರ್ಡ್‍ಗಳ ಅಧಿಕೃತ ಫಲಿತಾಂಶ ಪ್ರಕಟಿಸಿದರು, 45 ವಾಡ್‍ಗಳಿಂದ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಪಕ್ಷೇತರ 5 ರಲ್ಲಿ ಗೆಲವು ಸಾಧಿಸಿದೆ. …

Read More »

ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ:-  ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್. 1 ಸ್ಥಾನವಿದ್ದ ಕಲಮ ಈ ಬಾರಿ 17 ವಾರ್ಡ್‍ಗಳಲ್ಲಿ ಅರಳಿ ನಿಂತಿದೆ. ಇನ್ನೂ ಜೆಡಿಎಸ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಗೆದ್ದಿರುವ ಕಾಂಗ್ರೆಸ್‍ಗೆ ಒಬ್ಬರ ಸಹಾಯದಿಂದ ಅಧಿಕಾರ ಚುಕ್ಕಾಣೆ ಹಿಡಿಯುವ ಸಾಧ್ಯತೆ ಇದೆ. ಇನ್ನೂ ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿ ಕೂರಲಿದೆ.                 ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ …

Read More »

ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಅಥಣಿಯಲ್ಲಿ ಸಂಭ್ರಮಾಚರಣೆ

ಚಿಕ್ಕೋಡಿ:- ಸುಪ್ರೀಂ ತಿರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಹೇಶ ಕುಮಠಳ್ಳಿ ಬೆಂಬಲಿಗರಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ  ಸಂಭ್ರಮಾಚರಣೆ ಮಾಡಿದರು. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಕುರಿತಾದ ಅಂತಿಮ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಥಣಿಯಲ್ಲಿ ಮಹೇಶ ಕುಮಠಳ್ಳಿ ಮನೆ ಹತ್ತಿರ ಬೆಂಬಲಿಗರು ಸಿಹಿ ಹಂಚಿ , ಮಹೇಶ ಕುಮಠಳ್ಳಿ, ರಮೇಶ ಜಾರಕಿಹೋಳಿ ಪರ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದರು. Share

Read More »

ಪರಿಹಾರಕ್ಕೆ ಕಮೀಷನ್ ಬೇಡಿಕೆ: ಕ್ರಿಮಿನಲ್ ಮೊಕದ್ದಮೆ, ಜಿಲ್ಲಾಧಿಕಾರಿ ಎಚ್ಚರಿಕೆ

ಬೆಳಗಾವಿ:- ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಲು ಬಿಡುಗಡೆ ಮಾಡಲಾಗಿರುವ ಮೊದಲ ಕಂತಿನ ಹಣದಲ್ಲಿ ಕೆಲವರು ಕಮೀಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸಂತ್ರಸ್ತರ ಪರಿಹಾರ ಹಣದಲ್ಲಿ ಯಾರಾದರೂ ಕಮೀಷನ್ ಕೇಳಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಪರಿಹಾರದ ಹಣದಲ್ಲಿ ಕಮೀಷನ್ ಪಡೆಯಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಇಂತಹ ಪ್ರಕರಣ ಕಂಡುಬಂದ ತಕ್ಷಣವೇ ಮೊಕದ್ದಮೆ ದಾಖಲಿಸಬೇಕು …

Read More »

ಉಪಚುನಾವಣೆಯಲ್ಲಿ ಶಿವಸೇನಾದ ಅಭ್ಯರ್ಥಿಗಳು ಕಣಕ್ಕೆ : ಹಕಾರೆ

ಹುಬ್ಬಳ್ಳಿ:- ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಶಿವಸೇನಾದ ಅಧ್ಯಕ್ಷ ಕುಮಾರ ಹಕಾರೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ ಪಕ್ಷ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಪಕ್ಷವಾಗಿದ್ದು, ರಾಜ್ಯದಲ್ಲಿ ಮುಂದೆ ಬರುವ ಉಪಚುನಾವಣೆಯಲ್ಲಿ ಉತ್ತರ ಕರ್ನಾಟಕದ 7 ವಿಧಾನಸಭೆ ಕ್ಷೇತ್ರ, ದಕ್ಷಿಣ ಕರ್ನಾಟಕದಲ್ಲಿ 4 ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲಿದೆ. ಅಲ್ಲದೇ ಈಗಾಗಲೇ ಬೆಂಗಳೂರಿನ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ …

Read More »

ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

ಮಂಡ್ಯ:- ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರು ಸೇರಿಕೊಂಡು ಥಳಿಸಿದ ಘಟನೆ ಮಂಡ್ಯದ ಸಂತೆಕಸಲಕೆರೆ ಗ್ರಾಮದಲ್ಲಿ ನಡೆದಿದೆ. ಗಾಮನಹಳ್ಳಿ ಗ್ರಾಮದ ನಿವಾಸಿ ನಾಗರಾಜ ಥಳಿತಕ್ಕೆ ಒಳಗಾದವನಾಗಿದ್ದು, ಪದ್ಮಾ ಎಂಬುವವರು ಹೊಲದಿಂದ ಮರಳಿ ಮನೆಗೆ ಹೋಗುತ್ತಿದ್ದಾಗ ಕಳ್ಳನೊಬ್ಬ ಏಕಾಏಕಿ ಕೊರಳಿಗೆ ಕೈಹಾಕಿ ಸರವನ್ನು ಕಿತ್ತು ಪರಾರಿಯಾಗುತ್ತಿದ್ದಾಗ. ಪದ್ಮಾ ಕಿರುಚಿಕೊಂಡಿದ್ದಾರೆ ಆಗ ಅಕ್ಕಪಕ್ಕದಲ್ಲಿದ್ದವರೆಲ್ಲಾ ಸೇರಿಕೊಂಡು ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಸೆರೆಸಿಕ್ಕ ನಾಗರಾಜನನ್ನು ಗ್ರಾಮಾಂತರ ಪೋಲಿಸರಿಗೆ ಒಪ್ಪಿಸಿದ್ದಾರೆ. Share

Read More »

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಸ್ಪೋಟ್ : ಓರ್ವನಿಗೆ ಗಂಭೀರ ಗಾಯ

ಹುಬ್ಬಳ್ಳಿ:- ಅನುಮಾನಾಸ್ಪದ ಬಾಕ್ಸ್ ಇದ್ದಕ್ಕಿದಂತಯೇ ಬ್ಲಾಸ್ಟ್ ಆಗಿ ವ್ಯಕ್ತಿಯೊರ್ವನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರೇಲ್ವೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇತ ಮೂಲತಃ ಆಂದ್ರಪ್ರದೇಶದವನು ಎಂದು‌‌‌ ಪೋಲಿಸರು ತಿಳಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರಿನಲ್ಲಿ ಬಂದಿದ್ದ ಬಾಕ್ಸ್ ನ್ನು ತೆರೆದಾಗ ಈ ಘಟನೆ ನಡೆದಿದ್ದು, ಬಾಕ್ಸ್ ಸ್ಫೋಟದಿಂದ ಕೆಲಕಾಲ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ರೈಲ್ವೆ …

Read More »

ದೇವಾಲಯದ ಕಾಣಿಕೆ ಸಂಗ್ರಹ ಹಣದಲ್ಲಿ ಅವ್ಯವಹಾರ : ಗ್ರಾಮಸ್ಥರಿಂದ ಪ್ರತಿಭಟನೆ

ಮಂಡ್ಯ:- ತಾಲ್ಲೂಕಿನ ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ದವಾಗಿರುವ ಶ್ರೀ ಕ್ಷೇತ್ರ ಸಾಸಲು ಗ್ರಾಮದ ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ  ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು. ದೇವಾಲಯವನ್ನು ಅಭಿವೃದ್ದಿ ಪಡಿಸಬೇಕಾದ ಅಧಿಕಾರಿಗಳೇ ಅಕ್ರಮಗಳಿಗೆ ಬಾಗಿಯಾಗಿದ್ದಾರೆ. ಈ ಬಗ್ಗೆ ಪ್ರೆಶ್ನೆ ಮಾಡಿದ ಗ್ರಾಮದ ಯುವಕರ ಮೇಲೆ ಕೇಸು ದಾಖಲಿಸಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಾರ್ತಿಕ ಮಾಸದ ವಿಶೇಷ ಪೂಜೆಗೆ ಪ್ರತಿ ವರ್ಷ ಹಾರಾಜು ಪ್ರಕ್ರಿಯೆಯನ್ನು ದೇವಾಲಯದ ಆವರಣದಲ್ಲಿ ಮಾಡಲಾಗುವುದು. ಆದರೆ …

Read More »

ರೇಷ್ಮೆ ಗೂಡಿನಲ್ಲಿ ಪ್ರತ್ಯಕ್ಷವಾದ ಚಿರತೆ

  ಹಾವೇರಿ;- ರೇಷ್ಮೆ ಗೂಡಿನಲ್ಲಿ ಏಕಾಏಕಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ವಡೆಯರಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ಬಣಕಾರ ಎಂಬುವರಿಗೆ ಸೇರಿದ್ದ ರೇಷ್ಮೆ ಗೂಡಿನಲ್ಲಿಯೇ ಚಿರತೆ ಪ್ರತ್ಯಕ್ಷವಾಗಿದೆ. ಇನ್ನೂ ಸಿದ್ದಪ್ಪ ರೇಷ್ಮೆ ಗೂಡಿನಲ್ಲಿದ್ದ ಆಕಳ ಕರುವನ್ನು ನೋಡಲು ಹೋಗಿದ್ದ ವೇಳೆಯಲ್ಲಿ ಒಳಗೆ ಹೋಗುತ್ತಿದ್ದಂತೆ ಸಿದ್ದಪ್ಪನ ಮುಂದೆ ಜಿಗಿದು ಚಿರತೆ ಅಟ್ಟವನ್ನು ಏರಿ ಕುಳಿತಿದೆ. ತಕ್ಷಣವೇ ಆಕಳು ಕರುವನ್ನು ಹೊರಗೆ ಏಳೆದ ರೈತ ಸಿದ್ದಪ್ಪ ಬಾಗಿಲು ಹಾಕಿದ್ದಾರೆ. ಇನ್ನೂ …

Read More »
error: Content is protected !!