Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕೋಲಾರ

ಕೋಲಾರ

ಅಕ್ಕ-ತಂಗಿಯರನ್ನು ಮದ್ವೆಗೆ ಅಸಲಿ ಕಾರಣ

ಕೋಲಾರ,ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬರುತ್ತವೆ. ಸಿನಿಮಾದಲ್ಲಿ ಇಂಥ ಸನ್ನಿವೇಶಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲವೂ ತಂತಾನೆ ಸೃಷ್ಟಿಯಾಗಿ ಅಪರೂಪದ‌ ಮದುವೆಯೊಂದು‌ ನಡೆದು ಹೋಗಿದೆ. ಈ ಮದುವೆ ನಡೆದಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಎನ್ನಲಾಗಿದ್ದು, ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ. 1100 ಮೃತದೇಹ …

Read More »

ವರ್ತೂರ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಕೋಲಾರ ಪೋಲೀಸರು.

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕೋಲಾರದಿಂದ ಆರಂಭವಾಗಿ ಬೆಂಗಳೂರು ತಲುಪಿ ಇದೀಗ ಮತ್ತೆ ಕೋಲಾರ ಪೊಲೀಸರಿಗೆ ವರ್ಗಾವಣೆಯಾಗಿದೆ. ವರ್ತೂರು​ ಅಪಹರಣ ಪ್ರಕರಣ ಕುರಿತು ಬೆಂಗಳೂರಿನ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಬೆಂಗಳೂರಿನಿಂದ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಕೋಲಾರ ಪೊಲೀಸರು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು …

Read More »

ಗಜಪಡೆ ಅಟ್ಟಹಾಸ: ಬೆಳೆ ನಾಶ.

ಕೋಲಾರ: ಕೋಲಾರದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಕಳೆದ 15 ದಿನಗಳಿಂದ ಇಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು ದಾಳಿ ನಡೆಸಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸದ್ಯ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಬೂದಿಕೋಟೆ, ಎಳೆಸಂದ್ರ ಸುತ್ತ-ಮುತ್ತ ಬೀಡುಬಿಟ್ಟಿರುವ ಗಜಪಡೆ, ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿವೆ. ಎಳೆಸಂದ್ರದ ಗೋವಿಂದಪ್ಪ, ಬೂದಿಕೋಟೆಯ ವೆಂಕಟೇಶಪ್ಪ ಎಂಬುವರ ಹತ್ತಾರು ಎಕರೆಯಲ್ಲಿ ಬೆಳೆದ ಟೊಮೆಟೋ ಬೆಳೆ ನಾಶ ಮಾಡಿದ್ದು, ಲಕ್ಷಾಂತರ ರೂಪಾಯಿ …

Read More »

ಕ್ಯಾನ್ಸರ್ ಗೆ ಬಲಿಯಾದ ಪೋಲಿಸ್ ಶ್ವಾನ ತೇಜಸ್.

ಕೋಲಾರ: ಕೋಲಾರದ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪೊಲೀಸ್​ ಶ್ವಾನವೊಂದು ಇಂದು ಮೃತಪಟ್ಟಿದೆ. 27 ಸೆಪ್ಟಂಬರ್​ 2015ರಲ್ಲಿ ಜನಿಸಿದ್ದ ತೇಜಸ್​ ಹೆಸರಿನ ಈ ನಾಯಿ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್​ ರೋಗದಿಂದ ಬಳಲುತ್ತಿತ್ತು. ನಾಯಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದ ಪರಿಣಾಮ ಎರಡು ವರ್ಷಗಳಿಂದ ರೋಗವಿದ್ದರೂ ಉತ್ತಮ ಕೆಲಸ ಮಾಡಿ ಇಲಾಖೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತ್ತು. ರಾಜ್ಯಾದ್ಯಂತ ಹಲವೆಡೆ ಕೆಲಸ ಮಾಡಿರುವ ಈ ಶ್ವಾನ ಬೆಂಗಳೂರಿನ …

Read More »

ಪೂಜಾರಿಗೆ ಪಂಗನಾಮ ಹಾಕಿದ ಖತರ್ನಾಕ್ ಕಳ್ಳ.

ಕೋಲಾರ: ಪೂಜೆಗೆ ಬಂದ ಭಕ್ತನೊರ್ವ ವಿಶೇಷ ಪೂಜೆ ಮಾಡಿಕೊಡಿ ಎಂದು ಪೂಜಾರಿಯ ಗಮನ ಬೇರೆಡೆ ಸೆಳೆದು ಚಿನ್ನದ ಸರ ಎಗರಿಸುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಬಂಗಾರಪೇಟೆ ಪಟ್ಟಣದ ಎಲೆಮಲ್ಲಪ್ಪ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಘಟನೆ ನಡೆದಿದ್ದು, ಅರ್ಚಕ ವಿಶ್ವನಾಥ್ ಎಂಬುವವರ ಸರ ಎಗರಿಸಿದ್ದಾನೆ. ಇನ್ನೂ ದೇವಾಲಯಕ್ಕೆ ಭಕ್ತನ ಸೋಗಿನಲ್ಲಿ ಮಾಸ್ಕ್ ಧರಿಸಿಕೊಂಡು ಬಂದಿದ್ದ ವ್ಯಕ್ತಿ ನೂತನ ಅಂಗಡಿಯೊಂದನ್ನ ಆರಂಭ ಮಾಡುತ್ತಿದ್ದೇನೆ. ನನಗೆ ಅರ್ಚನೆ ಮಾಡಿಕೊಡಿ ಎಂದು ಹೇಳಿದ್ದಾನೆ. ಪೂಜೆ …

Read More »

ಗ್ರಾಮಸ್ಥರ ಮೇಲೆ ದಾಳಿ ಮಾಡಿದ ಕಪಿಸೈನ್ಯ.

ಕೋಲಾರ : ತಾಲೂಕಿನ ಹರಟಿಮಲ್ಲಂಡಹಳ್ಳಿಯಲ್ಲಿ ಕಳೆದೊಂದು ತಿಂಗಳಿಂದಲೂ ಕೋತಿಗಳ ಗುಂಪೊಂದು ಗ್ರಾಮಸ್ಥರಿಗೆ ಕಾಟ ಕೊಡುತ್ತಿವೆ. ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡುವುದಲ್ಲದೇ, ಸಿಕ್ಕ ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿವೆ. ದಿನದಿಂದ ದಿನಕ್ಕೆ ಗ್ರಾಮದಲ್ಲಿ ಕೋತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಮೇಲೆ ತಮ್ಮ ರೌದ್ರಾವತಾರ ತೋರುತ್ತಿವೆ. ಇದರಿಂದ ಬೇಸತ್ತಿರುವ ಜನರು ಕೋತಿಗಳನ್ನು ಹಿಡಿದು ಬೇರೆಡೆ ಬಿಡುವಂತೆ ಮನವಿ ಮಾಡುತ್ತಿದ್ದಾರೆ. ಮನೆಗಳಿಗೆ ನೇರವಾಗಿ ದಾಳಿ ಮಾಡುವ ಕೋತಿಗಳ ಸೈನ್ಯ ಅಡುಗೆ, ತಿಂಡಿ ತಿನಿಸುಗಳನ್ನು …

Read More »

ಗಲಭೆಯಲ್ಲಿ ಭಾಗಿಯಾದವರು ಭಯೋತ್ಪಾದಕರು : ಮುನಿಸ್ವಾಮಿ ಕಿಡಿ.

ಕೋಲಾರ: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಘಟನೆಯಲ್ಲಿ ಭಾಗಿಯಾಗಿರುವವರು ಭಯೋತ್ಪಾದಕರು ಎಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಕಿಡಿ‌ಕಾರಿದ್ದಾರೆ. ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ಕೃತ್ಯ ಘನಘೋರವಾದದ್ದು. ಇಂತಹವರು ನಮ್ಮ ಭಾರತೀಯ ಪ್ರಜೆಗಳಾಗಲು ಸಾಧ್ಯವೇ ಇಲ್ಲ. ಸೋಷಿಯಲ್ ಮೀಡಿಯಾಗಳಲ್ಲಿನ ಪೋಸ್ಟರ್​​ಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದರೊಂದಿಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಕಾನೂನು ಕೈಗೆತ್ತಿಕೊಂಡು ಉದ್ದೇಶಪೂರ್ವಕವಾಗಿ, ಪೂರ್ವನಿಯೋಜಿತವಾಗಿ ಕೃತ್ಯ ಎಸಗಿದ್ದಾರೆಂದು …

Read More »

ಸಾರ್ವಜನಿಕರಿಗೆ ರೈತರಿಂದ ಉಡುಗೊರೆ

ಕೋಲಾರ, ಮಾರ್ಚ್ 2: ಬೆಂಗಳೂರು ಸೇರಿದಂತೆ ವಿದೇಶಗಳಿಗೆ ಹೂವು, ಹಾಲು, ಹಣ್ಣು-ತರಕಾರಿಗಳನ್ನು ನೀಡುವ ಚಿನ್ನದ ನಾಡಿನ ರೈತರಿಗೆ ರಾಜ್ಯ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಕೋಲಾರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿಂದು ವಿನೂತನ ಪ್ರತಿಭಟನೆ ನಡೆಯಿತು. ರಾಜ್ಯ ಬಜೆಟ್ ‍ನಲ್ಲಿ ಕೋಲಾರದಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ವಿದರ್ಭ ಮಾದರಿಯ ವಿಶೇಷ ಪ್ಯಾಕೇಜ್‍ ಅನ್ನು ಜಿಲ್ಲೆಗೆ ಘೋಷಣೆ ಮಾಡುವಂತೆ ಒತ್ತಾಯಿಸಿ ಕೋಲಾರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ …

Read More »

ಶೀಘ್ರವೇ ವೈದ್ಯರ ಹುದ್ದೆ ಭರ್ತಿ ಮಾಡಲಾಗುವುದು: ಶ್ರೀರಾಮುಲು ಭರವಸೆ.‌

ಕೋಲಾರ: ‘ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಹಾಗೂ ಸಿಬ್ಬಂದಿಯ ಖಾಲಿ ಹುದ್ದೆಗಳನ್ನು 2 ತಿಂಗಳಲ್ಲಿ ಭರ್ತಿ ಮಾಡುತ್ತೇವೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ‘ರಾಜ್ಯ ಲೋಕಸೇವಾ ಆಯೋಗದ ಮೂಲಕ ವೈದ್ಯರ ನೇಮಕಾತಿ ಮಾಡುವುದು ಕಷ್ಟ. ಹೀಗಾಗಿ ಇನ್ನು ಮುಂದೆ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು. ‘ಕೋಲಾರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆಯಲ್ಲಿನ ವಿಶೇಷ ತಜ್ಞ ವೈದ್ಯರ ಹುದ್ದೆಗಳನ್ನು ಶೀಘ್ರವೇ ಭರ್ತಿ …

Read More »

ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿಸುದ್ದಿ.

ಕೋಲಾರ : ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 30 ಸಾವಿರ ಶಿಕ್ಷಕರ ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು ಎಂದು ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಕೆಂಬೋಡಿ, ವಡಗೂರು ಹಾಗೂ ಕಾಳಹಸ್ತಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ 30 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ …

Read More »

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ

ಕೋಲಾರ: ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 30 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಕೆಂಬೋಡಿ, ವಡಗೂರು ಹಾಗೂ ಕಾಳಹಸ್ತಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. 30 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ವರ್ಷಕ್ಕೆ 10 ಸಾವಿರದಂತೆ 3 ವರ್ಷಗಳಲ್ಲಿ …

Read More »

ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ ಶಿಕ್ಷಣ ಸಚಿವ.

ಕೋಲಾರ, ಫೆಬ್ರವರಿ 05: ಕೋಲಾರದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಕುಳಿತು ನೆಲದ ಮೇಲೆ ಕುಳಿತು ಊಟ ಮಾಡಿದರು. ಬರಪೀಡಿತ ಜಿಲ್ಲೆ ಎಂದೇ ಹೆಸರುವಾಸಿಯಾಗಿರುವ ಈ ಭಾಗದ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಕಳೆದ ಅಕ್ಟೋಬರ್ ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಸಿರಿಧಾನ್ಯಯುಕ್ತ ಬಿಸಿಯೂಟ ಕಾರ್ಯಕ್ರಮವು ಹತ್ತು ವಾರಗಳಲ್ಲಿ ನಿಂತಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದ ಸಿರಿಧಾನ್ಯಯುಕ್ತ …

Read More »

ಲಾಠಿ ಚಾರ್ಜ್: ಪತ್ರಕರ್ತನ ಮೇಲೆ ಹಲ್ಲೆ

ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಗರದಲ್ಲಿ ಶನಿವಾರ ನಡೆದ ರಾರ‍ಯಲಿಯ ಸಂದರ್ಭದಲ್ಲಿ ಕ್ಲಾಕ್‌ ಟವರ್‌ ಬಳಿ ನೂರಾರು ಮಂದಿ ಜಮಾಯಿಸಿದ ಪೋಟೋ ತೆಗೆಯಲು ತೆರಳಿದ್ದ ಪತ್ರಿಕಾ ಛಾಯಾಗ್ರಾಹಕ ಸರ್ವಜ್ಞಮೂರ್ತಿ ಎಂಬುವರ ಮೇಲೆ ಗುಂಪೊಂದು ದಾಳಿ ನಡೆಸಿದ ಪ್ರಕರಣದ ತನಿಖೆ ನಡೆಸುವುದಾಗಿ ಕೇಂದ್ರವಲಯ ಐಜಿಪಿ ಶರತ್‌ಚಂದ್ರ ಹೇಳಿದ್ದಾರೆ. ಘಟನೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಐಜಿಪಿ ಅವರು, ಸ್ಥಳದಲ್ಲಿರುವ ಸಿಸಿ ಕ್ಯಾಮರಾ ಗಮನಿಸಿ, ತನಿಖೆ ನಡೆಸಿ ಪತ್ರಿಕಾ ಛಾಯಾಗ್ರಾಹಕರ ಮೇಲೆ …

Read More »
error: Content is protected !!