Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಚಿತ್ರದುರ್ಗ

ಚಿತ್ರದುರ್ಗ

ಸಾಮಾಜಿಕ ಅಂತರ ಎಲ್ಲಿದೆ ಜನಪ್ರತಿನಿಧಿಗಳೇ?

ಚಿತ್ರದುರ್ಗ: ಜನ ಸಾಮಾನ್ಯರು ಮಾಡುವ ಕಾರ್ಯಕ್ರಮಗಳಿಗೆ ಕೊರೊನಾ ನಿಯಮಗಳನ್ನು ಹೇರುವ ಸರ್ಕಾರದ ನಿಯಮಾವಳಿಗಳು ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲವೇ? ಎಂಬ ಅನುಮಾನ ಸಾಮಾನ್ಯವಾಗಿ ಕಾಡುತ್ತಿದೆ. ಹೌದು, ಇದಕ್ಕೆ ಉತ್ತಮ ಉದಾಹರಣೆ ಅಂದರೆ ಇಂದು ಚಿತ್ರದುರ್ಗದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಪತ್ರಿಕಾಗೋಷ್ಠಿ. ಪತ್ರಿಕಾಗೋಷ್ಠಿ ಮುಗಿದ ಬಳಿಕ ಜೆಡಿಎಸ್ ಪಕ್ಷದ ಕೆಲ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳುವ ವೇಳೆ ಡಿಸಿಎಂ ಲಕ್ಷ್ಮಣ ಸವದಿ, ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಹಾಗು …

Read More »

ಸಂಪುಟ ರಚನೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ: ಶ್ರೀರಾಮುಲು.

ಚಿತ್ರದುರ್ಗ: ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ, ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಇದರ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಎಲ್ಲರನ್ನು ಸಮಾಧಾನ ಪಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಶ್ರೀ ರಾಮುಲು ತಿಳಿಸಿದರು. ಚಿತ್ರದುರ್ಗದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬದಲಾವಣೆ ತೀರ್ಮಾನ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ, ಕೊರೊನಾ ಸಂದರ್ಭದಲ್ಲೂ ನಮ್ಮ ಸರ್ಕಾರ ಬ್ಯಾಲೆನ್ಸ್ ಮಾಡಿಕೊಂಡು ಸಾಗಿದೆ ಎಂದರು. …

Read More »

ಡಿ.ಕೆ. ಶಿವಕುಮಾರ್ ಗೆ ತಿರುಗೇಟು ಕೊಟ್ಟ ಸಚಿವ ಬಿ.ಸಿ. ಪಾಟೀಲ್

ಚಿತ್ರದುರ್ಗ: ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕೀಯ ಮಾಡುವುದು ದುರ್ದೈವದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ.‌ಪಾಟೀಲ್ ಹೇಳಿದರು. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದು ವರ್ಷ 2 ತಿಂಗಳ ಆಡಳಿತಾವಧಿಯಲ್ಲಿ ಅವರು ಲೂಟಿ ಹೊಡೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಧಿಕಾರದಲ್ಲಿದ್ದಾಗ ಎಲ್ಲಾ ದೋಚಿಕೊಂಡು ಹೋಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅವರು‌ ಏನೂ ಬಿಟ್ಟು ಹೋಗಿಲ್ಲ ಎಂದು ರೈತರ ಬಗ್ಗೆ …

Read More »

ಕೊರೊನಾ ಎಫೆಕ್ಟ್​ : ರೇಷ್ಮೆ ಬೆಳೆಗಾರರು ದಿಲ್ ಖುಷ್

ಚಿತ್ರದುರ್ಗ: ಚೀನಾದಲ್ಲಿ ಕೊರೊನಾ ವೈರಸ್​​​ನಿಂದಾಗಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ರೆ ಅದೇ ಕೊರೊನಾದಿಂದ ಮಾತ್ರ ಬರದ ನಾಡಿನ ರೈತರ ಬಾಳಿಗೆ ವರದಾನವಾಗಿದೆ. ಇಷ್ಟು ದಿನ ಬೆಳೆ ಬೆಳೆದು ಸರಿಯಾದ ಬೆಲೆಗೆ ಕಾಯುತ್ತಿದ್ದ ರೈತರಿಗೆ ಸದ್ಯ ಜಾಕ್ ಪಾಟ್ ಹೊಡೆದಿದೆ. ಹೌದು.. ಬರದ ನಾಡು ಚಿತ್ರದುರ್ಗದ ರೇಷ್ಮೆ ಬೆಳೆಯುವ ರೈತರು ಸದ್ಯ ಫುಲ್ ಖುಷ್ ಆಗಿದ್ದಾರೆ. ಭಾರತಕ್ಕೆ ಬರುತ್ತಿದ್ದ ರೇಷ್ಮೆ ಇದೀಗ ಸಂಪೂರ್ಣ ಬಂದ್ ಆಗಿದೆ. ಕೊರೊನಾ ಬಂದಿರುವ …

Read More »

ಚಿತ್ರದುರ್ಗದಲ್ಲಿ ಫೆ.26 ರಂದು ಉದ್ಯೋಗ ಮೇಳ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಇದೇ ತಿಂಗಳ 26 ರಂದು ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಚಿತ್ರದುರ್ಗ ಇವರ ಸಹಯೋಗದಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಆಸಕ್ತ ಯುವಕ/ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಫೆಬ್ರವರಿ 26 ರ ಬುಧವಾರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ. ಈ ಉದ್ಯೋಗ ಮೇಳದಲ್ಲಿ …

Read More »

ಚಿತ್ರದುರ್ಗ – ಶಿರಡಿಗೆ ನೂತನ ಸರ್ಕಾರಿ ಬಸ್ ಸೇವೆ ಆರಂಭ.

ಚಿತ್ರದುರ್ಗ: ಭಾರತದ ಪ್ರಮುಖ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನವು ಒಂದಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗ ವತಿಯಿಂದ ಇಂದಿನಿಂದ ಚಿತ್ರದುರ್ಗ-ಶಿರಡಿ ನಡುವೆ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸೇವೆ ಆರಂಭಿಸಿದೆ. ಚಿತ್ರದುರ್ಗದಿಂದ ಹೊರಟ ಬಸ್ ಹೊಸಪೇಟೆ, ಇಳಕಲ್ಲು, ವಿಜಯಪುರ, ಸೊಲ್ಲಾಪುರ ಹಾಗೂ ಅಹಮದನಗರ ಮಾರ್ಗವಾಗಿ ಬಸ್ ಶಿರಡಿಗೆ ತಲುಪುತ್ತದೆ. ಚಿತ್ರದುರ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಸಂಜೆ 5 ಗಂಟೆಗೆ …

Read More »

ಐತಿಹಾಸಿಕ ನಡೆಯತ್ತ ಮುರುಘಾ ಶರಣರು.

ಚಿತ್ರದುರ್ಗ(ಫೆ 07): ವೈಚಾರಿಕತೆ ಹಾದಿಯಲ್ಲಿ ಸಹಸ್ರಾರು ಅಡ್ಡಿ ಆತಂಕಗಳು ಮೆಟ್ಟಿನಿಂತಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಕಾರ್ಯಚಟುವಟಿಕೆ ಮೂಲಕ ನಾಡಿನ ಗಮನ ಸೆಳೆದಿದ್ದಾರೆ. ದಶಕದ ಹಿಂದೆ ದಲಿತ, ಹಿಂದುಳಿದ ಸಮುದಾಯದ ಪಟುಗಳನ್ನು ಗುರುತಿಸಿ ಧೀಕ್ಷೆ ನೀಡಿ ಭೂಮಿ, ಹಣ ನೀಡಿ ಮಠ ಕಟ್ಟಿಕೊಟ್ಟ ಮುರುಘಾ ಶರಣರ ನಡೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ವರ್ಷಗಳ ಕಾಲ ತೀವ್ರ ಚರ್ಚೆಗೆ ಕಾರಣವಾಗಿತ್ತು. ಜಾತಿಗೊಬ್ಬ ಸ್ವಾಮೀಜಿ ತಪ್ಪು ನಿರ್ಧಾರ ಎಂದು …

Read More »

ಮಾಜಿ ಸಚಿವ ಡಿ.ಮಂಜುನಾಥ್ ಇನ್ನಿಲ್ಲ

ಚಿತ್ರದುರ್ಗ: ಧೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಸಚಿವ  ಡಿ.ಮಂಜುನಾಥ್ ಇಂದು ಕೊನೆಯುಸಿರೆಳೆದಿದ್ದಾರೆ‌ . ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ತಟಸ್ಥರಾಗಿದ್ದ ಡಿ.ಮಂಜುನಾಥ್ ಅವರು,  ಹಿರಿಯೂರಿನ ತೋಟದ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು.‌ಅವರು ಇಂದು ಮಧ್ಯಾಹ್ನ 3:30ರ ಸುಮಾರಿಗೆ ಕೊನೆಯುಸಿರೆಳೆದರು. ಮೃತರು  ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಂಜುನಾಥ್ ಅವರ ಜೀವನ: 1928 …

Read More »

ಸಂಪುಟ ವಿಸ್ತರಣೆ ಹಿನ್ನೆಲೆ: ಬಾಂಬ್ ಸಿಡಿಸಿದ ತಿಪ್ಪಾರೆಡ್ಡಿ ಬೆಂಬಲಿಗರು.

ಚಿತ್ರದುರ್ಗ : ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ, ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಂಪುಟ ವಿಸ್ತರಣೆಗೆ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಫೆಬ್ರವರಿ 6 ಎಂಬುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧನ ಸ್ಪೋಟಿಸಿದ್ದು, ಜಾತಿ ಆಧಾರದ ಮೇಲೆ ಸಚಿವ ಸ್ಥಾನ ನೀಡೋದನ್ನು ಬಿಡಿ ಮುಖ್ಯಮಂತ್ರಿಗಳೇ.. ಹಿರಿತನದ ಆಧಾರದ ಮೇಲೆ ಕೊಡಿ ಎಂಬುದಾಗಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಬೆಂಬಲಿಗರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ …

Read More »

ಶಿಕ್ಷಕಿ ಮೇಲೆ ಜಿಪಂ ಸದಸ್ಯನಿಂದ ಅತ್ಯಾಚಾರ ಆರೋಪ

ಚಿತ್ರದುರ್ಗ: ಶಿಕ್ಷಕಿ ಮೇಲೆ ಜಿಲ್ಲಾ ಪಂಚಾಯತ್​ ಸದಸ್ಯ ಪಿ.ತಿಪ್ಪೇಸ್ವಾಮಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಸಿರಿಗೆರೆ ಕಾಂಗ್ರೆಸ್​​ ಜಿಪಂ ಸದಸ್ಯರಾಗಿರುವ ತಿಪ್ಪೇಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಪಡೆದ ಹಣ ವಾಪಸ್​ ನೀಡುವುದಾಗಿ ಕರೆಸಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಆರೋಪಿ ತಿಪ್ಪೇಸ್ವಾಮಿ ಶಿಕ್ಷಕಿಯಿಂದ 8 ಲಕ್ಷ ಸಾಲ ಹಣ ಪಡೆದಿದ್ದ. 8 ಲಕ್ಷ ಹಣದಲ್ಲಿ 4 ಲಕ್ಷ ಹಣವನ್ನು ವಾಪಸ್ ಶಿಕ್ಷಕಿಗೆ ನೀಡಿದ್ದ. ಇನ್ನು ಉಳಿದ …

Read More »

ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ: ಶ್ರೀರಾಮುಲು.‌

ಚಿತ್ರದುರ್ಗ : ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ತತ್ವ ಹಾಗೂ ಸಿದ್ದಾಂತಕ್ಕೆ ಬದ್ದವಾಗಿ ಕೆಲಸ ಮಾಡುವೆ ಎಂದು ಆರೋಗ್ಯ ಸಚಿವ  ಶ್ರೀರಾಮುಲು ಹೇಳಿದರು. ಮೊಳಕಾಲ್ಮೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಜನರು ಅಭಿಪ್ರಾಯಪಡುತ್ತಾರೆ. ಆದರೆ ನಿನ್ನೆ ನಡೆದ ಸಭೆಯಲ್ಲಿ ಈ ಕುರಿತು ಯಾವುದೇ ತೀರ್ಮಾನಗಳಾಗಿಲ್ಲ. ನಾನು ಪಕ್ಷದ ಸಿದ್ದಾಂತಗಳ ಅಡಿ ಕೆಲಸ ಮಾಡಲು ಸಿದ್ದ ಎಂದರು. ಮುಂದುವರೆದು ಮಾತನಾಡಿ,  ನೆರೆಹಾವಳಿ ಸಂತ್ರಸ್ಥರಿಗೆ  …

Read More »

ಟಿಕ್ ಟಾಕ್ ಹುಚ್ಚಿಗೆ ಡ್ಯಾಂಗೆ ಜಿಗಿದ ಯುವಕ: ವೀಡಿಯೋ ವೈರಲ್. ‌

ಚಿತ್ರದುರ್ಗ: ಟಿಕ್​ಟಾಕ್ ಗೋಜಿಗೆ ಬಿದ್ದ ಪ್ರವಾಸಿಗನೋರ್ವ ಜಿಲ್ಲೆಯ ಹಿರಿಯೂರಿನಲ್ಲಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳಿದ್ದಾಗ ನಡೆದ ಘಟನೆ ಎಂದು ಅಂದಾಜಿಸಲಾಗಿದೆ. ಜಲಾಶಯಕ್ಕೆ ಯುವಕ ತಕ್ಷಣ ಈಜಿ ದಡ ಸೇರಿದ್ದಾನೆ. ಈ ರೀತಿಯ ಘಟನೆಗಳು ಸಾಕಷ್ಟು ಭಾರಿ ಸಂಭವಿಸಿದ್ದರೂ ವಿಶ್ವೇಶ್ವರಯ್ಯ ಜಲ ನಿಗಮ ಮಾತ್ರ ಸೂಕ್ತ ಭದ್ರತೆ ಕಲ್ಪಿಸಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಲಿ ಎಂದು ಸಾರ್ವಜನಿಕ ವಲಯದಲ್ಲಿ …

Read More »

ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ. ‌

ಚಿತ್ರದುರ್ಗ: ಒಂದೇ ಕುಟುಂಬದ ಮೂವರು ಸದಸ್ಯರು ಬೆಂಕಿ‌ ಹಚ್ಚಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿತ್ರದುರ್ಗದ ಗಾರೇಹಟ್ಟಿಯಲ್ಲಿ ನಡೆದಿದೆ. ಅರುಣ್ ಕುಮಾರ್ (40), ಲತಾ(36), ಅಮೃತ (13)ಮೃತ ದುರ್ದೈವಿಗಳು. ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತಂದೆ, ತಾಯಿ ಹಾಗೂ ಮಗಳು ಇಂದು ಬೆಳಿಗ್ಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಶಂಕೆ ವ್ಯಕ್ತವಾಗಿದೆ. ಸಂಬಂಧಿಕರ ಆಕ್ರಂದನ. ಸ್ಥಳದಲ್ಲಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. Share

Read More »

ಚಿತ್ರದುರ್ಗದಲ್ಲಿ ಭುಗಿಲೆದ್ದ ಪ್ರತಿಭಟನಾಕಾರರ ಆಕ್ರೋಶ: ಸರ್ಕಾರದ ವಿರುದ್ಧ ಘೋಷಣೆಗಳ ಸುರಿಮಳೆ.

ಚಿತ್ರದುರ್ಗ: ದೇಶದದ್ಯಾಂತ ಪೌರತ್ವ ಕಾಯ್ದೆಯ ವಿರುದ್ಧ ಈಗಾಗಲೇ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜನರು ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ವಿವಿಧ ಭಾಗಗಳಿಂದ ತಂಡೋಪ ತಂಡವಾಗಿ ಆಗಮಿಸಿದ ಪ್ರತಿಭಟನಾಕಾರರು ಮೆರವಣಿಗೆ ಉದ್ದಕ್ಕೂ ಘೋಷಣೆ ಕೂಗುತ್ತ ಸಾಗಿದರು. ನಗರದ ಜಿಲ್ಲಾಧಿಕಾರಿ ಸರ್ಕಲ್ ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.   Share

Read More »
error: Content is protected !!