Breaking News
Hiring Reporter’s For more Information Contact Above Number 876 225 4007 . Program producer
Home / Breaking News / ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ‘ಶುಭ ಸುದ್ದಿ’

ಬೆಂಗಳೂರು: ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಇಲ್ಲಿದೆ. ರಾಜ್ಯ ಅರಣ್ಯ ಇಲಾಖೆ ವತಿಯಿಂದ 11 ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ 339 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, 339 ಹುದ್ದೆಗಳಲ್ಲಿ 12 ಬ್ಯಾಕ್ ಲಾಗ್ ಹುದ್ದೆಗಳಾಗಿವೆ. ಮಾರ್ಚ್ 16 ರಿಂದ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ಹೆಚ್ಚಿನ ಮಾಹಿತಿಗೆ https://forestrecruitment.files.wordpress.com …

Read More »

ಸೇನಾ ನೇಮಕಾತಿಗೆ ಯುವಕರ ನಿರುತ್ಸಾಹ.

ಉಡುಪಿ: ಶಿಕ್ಷಣದಲ್ಲಿ ದೇಶದಲ್ಲೇ ಮುಂಚೂಣಿಯ ಜಿಲ್ಲೆಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಯುವಕರು ಭಾರತೀಯ ಸೇನೆ ಆಯ್ಕೆಯಾಗಿ ಸೇವೆ ಸಲ್ಲಿಸಲು ತೀವ್ರ ನಿರುತ್ಸಾಹ ತೋರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎ. 4ರಿಂದ 14ವರೆಗೆ ಭಾರತೀಯ ಸೇನೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅದರ ಅಂಗವಾಗಿ ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿಗಳ ಸಲ್ಲಿಕೆಯಾಗುತ್ತಿದೆ. ಇಲ್ಲಿಯವರೆಗೆ ರಾಜ್ಯದ 11 ಜಿಲ್ಲೆಗಳಿಂದ 15,000 ಅರ್ಜಿ ಸಲ್ಲಿಕೆಯಾಗಿದೆ. ಬಾಗಲಕೋಟೆ, ಧಾರವಾಡ, ದಾವಣಗೆರೆ, ಗದಗ, ಹಾವೇರಿ ಜಿಲ್ಲೆಗಳಿಂದ ಸಮಾರು ಶೇ. 80ರಷ್ಟು ಅರ್ಜಿಗಳು …

Read More »

ಜಾರ್ಜ್ ಫರ್ನಾಂಡೀಸ್ ಚಿತಾಭಸ್ಮ ಸ್ಮಾರಕ ಅನಾವರಣ.

ಮಂಗಳೂರು: ಮಾಜಿ ಕೇಂದ್ರ ಸಚಿವ, ಪದ್ಮವಿಭೂಷಣ ಪುರಸ್ಕೃತ ದಿವಂಗತ ಜಾರ್ಜ್ ಫರ್ನಾಂಡೀಸ್ ಅವರ ಸ್ಮಾರಕವನ್ನು ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ದಾನ ಅವರು ಭಾನುವಾರದಂದು ಅನಾವರಣಗೊಳಿಸಿದರು. ಮಂಗಳೂರಿನ ಬಿಜೈ ಚರ್ಚ್ ನಲ್ಲಿ ನಿರ್ಮಿಸಲಾದ ಈ ಚಿತಾಭಸ್ಮ ಸ್ಮಾರಕ ಅನಾವರಣಗೊಳಿಸಿ ಮಾತನಾಡಿದ ಬಿಷಪ್ ಅವರು ಜಾರ್ಜ್ ಫರ್ನಾಂಡೀಸ್ ಅವರ ಕಾರ್ಯ ಶ್ಲಾಘಿಸಿದರು. ದೆಹಲಿಯಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಅಂತ್ಯಕ್ರಿಯೆ ನಡೆದಿದ್ದು ದೆಹಲಿಯಿಂದ ಚಿತಾಭಸ್ಮ ಮಂಗಳೂರಿಗೆ ತರಲಾಗಿತ್ತು. ಇದೀಗ ಬಿಜೈ ಚರ್ಚ್ ನಲ್ಲಿ ಚಿತಾಭಸ್ಮಕ್ಕೆ …

Read More »

ನದಿಗೆ ಹಾರಿ ತಂದೆ – ಮಗ ಆತ್ಮಹತ್ಯೆ.

ಮಂಗಳೂರು : ಮಗುವಿನ ಜೊತೆಗೆ ತಂದೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ನೇತ್ರಾವತಿ ನದಿ ಸೇತುವೆ ಬಳಿ ನಡೆದಿದೆ. ಗೋಪಾಲಕೃಷ್ಣ ರೈ (45) ಮತ್ತು ಮಗ ನಮೀಶ್ ರೈ (6) ಆತ್ಮಹತ್ಯೆಗೆ ಶರಣಾಗಿದ್ದಾರೆ . ಇವರು ಮೂಲತಃ ಬಂಟ್ವಾಳ ಬಾಳ್ತಿಲ ನಿವಾಸಿಗಳೆಂದು ಹೇಳಲಾಗಿದೆ. ಇಂದು ಬೆಳಗಿನ ಜಾವ ಗೋಪಾಲಕೃಷ್ಣ ರೈ ಅವರ ಕಾರು ಉಳ್ಳಾಲ ನೇತ್ರಾವತಿ ನದಿ ಸೇತುವೆ ಬಳಿ ಪತ್ತೆಯಾಗಿದ್ದು, ಮಹಾರಾಷ್ಟ್ರ …

Read More »

ಬಂಡೆಗೆ ಡಿಕ್ಕಿ ಹೊಡೆದ ಬಸ್: 7 ಜನರ ದುರ್ಮರಣ.

ಉಡುಪಿ: ಟೂರಿಸ್ಟ್ ಬಸ್ ರಸ್ತೆ ಪಕ್ಕದ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ 7 ಜನ ಪ್ರಯಾಣಿಕರು ‌ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಬಳಿ ಸಂಭವಿಸಿದೆ.‌ ಒಟ್ಟು 35 ಪ್ರಯಾಣಿಕರು ಸಂಚರಿಸುತ್ತಿದ್ದ ಮೈಸೂರು ಜಿಲ್ಲೆಯ ಟೂರಿಸ್ಟ್ ಬಸ್ ಇದಾಗಿದ್ದು, ಮೈಸೂರು- ಮಂಗಳೂರು ತೆರಳುವಾಗ ದುರ್ಘಟನೆ ನಡೆದಿದೆ. Share

Read More »

ಕಾಲೇಜು ಬಸ್​ನಲ್ಲಿ ನೇತಾಡಿದ ವಿದ್ಯಾರ್ಥಿ

ಮಂಗಳೂರು: ಕಾಲೇಜು ಬಸ್​ನ ಹಿಂಭಾಗದಲ್ಲಿ ವಿದ್ಯಾರ್ಥಿಯೊಬ್ಬ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿwಡಿಯೋ ಇದೀಗ ಫುಲ್ ವೈರಲ್ ಆಗಿದೆ. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಾಹನವೊಂದರಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬ ಕಾಲೇಜು ವಾಹನದ ಹಿಂಭಾಗದಲ್ಲಿ ವಾಹನ ಚಲಿಸುತ್ತಿದ್ದ ವೇಳೆ ನೇತಾಡಿಕೊಂಡು ಹೋಗಿದ್ದಾನೆ. ಇದರ ವಿಡಿಯೋವನ್ನು ಹಿಂಬದಿಯಲ್ಲಿ ಬರುತ್ತಿದ್ದ ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. Share

Read More »

ವಿಜಯಪುರ- ಮಂಗಳೂರು: ಸ್ಪೆಷಲ್ ರೈಲು ಸೇವೆ ಆರಂಭ.

ಮಂಗಳೂರು(ಫೆ.07): ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವಿನ ಡೈಲಿ ತತ್ಕಾಲ್ ಸ್ಪೆಷಲ್ ಸೇವೆಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 07327 ವಿಜಯಪುರ- ಮಂಗಳೂರು ಜಂಕ್ಷನ್ ಡೈಲಿ ತತ್ಕಾಲ್ ಸ್ಪೆಷಲ್ ಸೇವೆ ಫೆ.11ರಿಂದ ಮಾರ್ಚ್ 31ರ ವರೆಗೆ ವಿಜಯಪುರದಿಂದ ರಾತ್ರಿ 6 ಗಂಟೆಗೆ ಹೊರಡಲಿದೆ. ಮಂಗಳೂರು ಜಂಕ್ಷನ್‌ಗೆ ಮರುದಿನ ಮಧ್ಯಾಹ್ನ 12.40ಕ್ಕೆ ತಲುಪುತ್ತದೆ. ಮರುದಿನ ರೈಲು ಸಂಖ್ಯೆ 07327 ಮಂಗಳೂರು ಜಂಕ್ಷನ್- ವಿಜಯಪುರ ಡೈಲಿ ತತ್ಕಾಲ್ ಸ್ಪೆಷಲ್ ಸೇವೆ ಮಂಗಳೂರು ಜಂಕ್ಷನ್‌ನಿಂದ ಸಂಜೆ 4.30ಕ್ಕೆ …

Read More »

ನಾನೂ ಕೂಡ ಸರ್ಕಾರಿ ಕಾಲೇಜು ವಿದ್ಯಾರ್ಥಿ.

ಮಂಗಳೂರು: ‘ನಾನೂ ಸರ್ಕಾರಿ ಕಾಲೇಜು ವಿದ್ಯಾರ್ಥಿ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೆಮ್ಮೆಯಿಂದ ಶಾಲು ಹೆಗಲೇರಿಸಿಕೊಂಡು ಹೇಳಿದರು. ನಗರದ ವಿಶ್ವವಿದ್ಯಾಲಯ ಕಾಲೇಜು 150ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ನಾನು ಬೆಂಗಳೂರಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ. ಶ್ರೇಷ್ಠ ಗೋವುಗಳು ಬರುವುದೇ ದೊಡ್ಡಿಯಿಂದ, ಖಾಸಗಿ ಮಾತ್ರವೇ ಶ್ರೇಷ್ಠ ಎಂಬ ಭ್ರಮೆ ಬಿಡಿ’ ಎಂದು ಸರ್ಕಾರಿ ಶಾಲಾ-ಕಾಲೇಜುಗಳನ್ನು ಹೀಯಾಳಿಸುವವರಿಗೆ ತಣ್ಣನೆ ತಿರುಗೇಟು ನೀಡಿದರು. ‘ಅಧ್ಯಯನಗಳು ಪದೋನ್ನತಿ, ಫಲಿತಾಂಶಕ್ಕೆ ಸೀಮಿತವಾಗಬಾರದು. ಬೌದ್ಧಿಕ …

Read More »

ಶ್ರೀಕೃಷ್ಣನ ದರ್ಶನದ ಮಾರ್ಗ ಬದಲಾವಣೆ.

ಉಡುಪಿ, ಫೆ.6: ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಹೋಗಲು ಭಕ್ತರು ಪ್ರಯಾಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಇದ್ದ ಅತಿ ಸುಲಭ ಭಕ್ತರ ದರ್ಶನ ಮಾರ್ಗವನ್ನು ತಡೆ ಹಿಡಿಯಲಾಗಿದ್ದು, ಈ ಬಗ್ಗೆ ಯಾತ್ರಾರ್ಥಿಗಳು, ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಕ್ತರು ರಾಜಾಂಗಣ ಸಮೀಪದಿಂದ ಬಂದು, ಎತ್ತರದಲ್ಲಿರುವ ಭೋಜನ ಶಾಲೆ ಮೇಲೆ ಸುತ್ತು ಬಳಸಿ, ಪ್ರವೇಶ ಪಡೆದು, ಮುಂದೆ ಸಿಗುವ ಕೆಲವೊಂದು ಓಣಿ ಮಾರ್ಗದಿಂದ ಹಾದು ಹೋಗಿ, ಸುರಂಗದಂತಿರುವ ಸಂಧಿ ಮಾರ್ಗದಲ್ಲಿ ಇಳಿದು, …

Read More »

ರಸ್ತೆ ಮಧ್ಯದಲ್ಲೇ ಕೈ ಕೈ ಮಿಲಾಯಿಸಿದ ಬಸ್ ಚಾಲಕರು.

ಮಂಗಳೂರು, ಫೆ.5: ಬಸ್ ಚಾಲಕರಿಬ್ಬರು ಬಸನ್ನು ರಸ್ತೆ ಮಧ್ಯೆ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಬೆಂದೂರ್ ವೆಲ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಗಳ ಮಧ್ಯೆ ಟೈಮಿಂಗ್ ವಿಚಾರದಲ್ಲಿ ವಿಚಾರದಲ್ಲಿ ಈ ಹೊಡೆದಾಟ ನಡೆದಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ನಗರದ ಬೆಂದೂರ್ ವೆಲ್ ಆಯಗ್ನೆಸ್ ಕಾಲೇಜಿನ ಎದುರಿನ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಇಬ್ಬರು ಚಾಲಕರು ಹೊಡೆದಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ …

Read More »

ಮಂಗಳೂರಿಗೆ ಬಂತು ಲಕ್ಸುರಿ ಹಡಗು; ಕೊರೊನಾ ಶಂಕೆ.

ಮಂಗಳೂರು, ಫೆಬ್ರವರಿ 05: ನವಮಂಗಳೂರು ಬಂದರಿಗೆ ಆಗಮಿಸಿದ 12 ನೇ ಲಕ್ಸುರಿ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ ಆಗಮಿಸಿದೆ. ಕೊರೊನಾ ವೈರಸ್‌ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ಇರುವ ಹಿನ್ನೆಲೆಯಲ್ಲಿ ಬಂದರಿಗೆ ಮಂಗಳವಾರ ಮುಂಬಯಿಂದ ಆಗಮಿಸಿದ ಪ್ರವಾಸಿ ಹಡಗಿನ ಯಾತ್ರಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಇದಕ್ಕಾಗಿ ವಿಶೇಷ ತಪಾಸಣಾ ಘಟಕ ತೆರೆಯಲಾಗಿತ್ತು. ಕ್ರೂಸ್ ಟರ್ಮಿನಲ್‌ ಒಳಗೆ ಪ್ರವೇಶಿಸುವ ಸಂದರ್ಭ ಪ್ರವಾಸಿಗರನ್ನು ಸ್ಕ್ಯಾನಿಂಗ್‌ ಮಾಡಲಾಯಿತು. ಪ್ರವಾಸಿಗರು ಆಗಮಿಸುವ ಸಂದರ್ಭದಲ್ಲಿ ಸಾಮಾನ್ಯ …

Read More »

ಮತದಾರರ ಪಟ್ಟಿ ಕುರಿತು ಮಹತ್ವದ ಸೂಚನೆ. ‌

ಉಡುಪಿ: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಬ್ಬನೇ ಮತದಾರನ ಹೆಸರು ಎರಡು ಕಡೆಗಳಲ್ಲಿ ನೊಂದಾಯಿತವಾಗಿದ್ದರೆ, ಆತ ವಾಸವಿ ಲ್ಲದ ಕ್ಷೇತ್ರದ ಮತದಾರರ ಪಟ್ಟಿಯ ಹೆಸರನ್ನು ರದ್ದುಪಡಿಸುವಂತೆ ಭೂಮಾಪನದ ಆಯುಕ್ತ, ಪದನಿಮಿತ್ತ ನಿರ್ದೇಶಕರು ಭೂಮಿ ಹಾಗೂ ಯುಪಿಓಆರ್ ಮತ್ತು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ಸೂಚಿಸಿದ್ದಾರೆ. ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಮತದಾರರ ಪಟ್ಟಿಯ ಸೇರ್ಪಡೆ, ತಿದ್ದುಪಡಿ, ರದ್ದುಗೊಳಿಸುವಿಕೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ …

Read More »

ತುಳು ಭಾಷೆಯ ಸಂವಿಧಾನ ಪೀಠಿಕೆ ಬಿಡುಗಡೆ.

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿ, ಜೈ ತುಳುನಾಡ್ ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್‌ಗಳ ಸಹಯೋಗದಲ್ಲಿ ಇತ್ತೀಚೆಗೆ ನಗರದ ತುಳುಭವನದಲ್ಲಿ ತುಳು ಭಾಷೆ ೆ ಮತ್ತು ತುಳು ಲಿಪಿಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ತುಳು ಲಿಪಿಯ ಸಂವಿಧಾನದ ಪೀಠಿಕೆ ಬಿಡುಗಡೆ ಗೊಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಮಾತನಾಡಿ, ತುಳು ಭಾಷೆಯಲ್ಲಿ ಸಂವಿಧಾನದ …

Read More »

ಮಲ್ಪೆ ಬೀಚ್‌ ಉತ್ಸವಕ್ಕೆ ಸಾಕ್ಷಿಯಾದ ಜನಸಾಗರ.

ಮಲ್ಪೆ: ಇಲ್ಲಿನ ನೀಲ ಕಡಲ ತೀರದ ಮರಳಿನಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ವಿವಿಧ ಪಂದ್ಯಾಟಗಳು, ಶ್ವಾನ ಪ್ರದರ್ಶನ, ಗಾಳಿಪಟ ಹಾರಾಟ, ಘಮ ಘಮಿಸುತ್ತಿದ್ದ ಆಹಾರ ಮಳಿಗೆಗಳು. ಇವುಗಳೆಲ್ಲವುದರ ಮಧ್ಯೆ ಉತ್ಸಾಹಕ್ಕೆ ಮಿತಿಯೇ ಇಲ್ಲದಂತೆ ಓಡಾಡುವ ದೊಡ್ಡ ಸಂಖ್ಯೆಯ ಜನರು. ಇದೆಲ್ಲ ಕಂಡದ್ದು ರವಿವಾರ ನಡೆದ ಬೀಚ್‌ ಉತ್ಸವದಲ್ಲಿ. ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಪಶುಪಾಲನ ಇಲಾಖೆ, ಕರಾವಳಿ …

Read More »

ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಅರೆಸ್ಟ್

ಮಂಗಳೂರು :  ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿ ಐಜಿಪಿ ಕಚೇರಿಗೆ ಆಗಮಿಸಿದ ಆದಿತ್ಯ ರಾವ್ ತಪ್ಪೊಪ್ಪಿಕೊಂಡಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದ ಆದಿತ್ಯ ರಾವ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಾನೇ ಮಂಗಳೂರಿನಲ್ಲಿ ಬಾಂಬ್ ಇಟ್ಟಿರುವುದಾಗಿ ಆದಿತ್ಯರಾವ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಮಂಗಳೂರಿನಲ್ಲಿ ಬಾಂಬ್ ಇಟ್ಟಿರುವುದು ಆದಿತ್ಯರಾವ್ ಎಂಬ ಮಾಹಿತಿ …

Read More »
error: Content is protected !!