Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕೇಂದ್ರದ ಮುಕ್ತ ವ್ಯಾಪಾರ ನೀತಿ ಖಂಡನೀಯ: ಹಿರೇಮಠ.

ಕೇಂದ್ರದ ಮುಕ್ತ ವ್ಯಾಪಾರ ನೀತಿ ಖಂಡನೀಯ: ಹಿರೇಮಠ.

 

ಹುಬ್ಬಳ್ಳಿ: ಮುಕ್ತ ವ್ಯಾಪಾರ ಒಪ್ಪಂದಗಳು ಹಾಗೂ ಭಾರತ ಪ್ರಸ್ತಾಪದಲ್ಲಿರುವ ಆರ್ ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದದಿಂದ ಕೃಷಿ ವಲಯಕ್ಕೆ ಮತ್ತು ಸಣ್ಣ ರೈತರಿಗೆ ಅಪಾಯ ತರುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕೆಂದು ಸಿಟಿಜನ್ ಫಾರ್ ಡೆಮಾಕ್ರಸಿಯ ಎಸ್.ಆರ್.ಹಿರೇಮಠ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಕೇಂದ್ರ ಸರಕಾರದ ಮುಕ್ತ ವ್ಯಾಪಾರ ಒಪ್ಪಂದವನ್ನು ಸಿಎಫ್ ಡಿ ಉಗ್ರವಾಗಿ ವಿರೋಧಿಸುವುದು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಬಗ್ಗೆ ಕೇಂದ್ರ ಸರ್ಕಾರ ಪಾರ್ಲಿಮೆಂಟ್ ನಲ್ಲಿ ಸುದೀರ್ಘ ಚರ್ಚೆ ನಡೆಸಬೇಕು. ಅಲ್ಲದೇ ಸಾಮಾನ್ಯ ಜನರಿಗೆ ಅನುಕೂಲವಾಗುವ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಮಾನವ ಅಭಿವೃದ್ಧಿ ಜೊತೆಗೆ ಪರಿಸರ ಸಂರಕ್ಷಣೆ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.
ಬೆಳೆಕೆರೆ ಬಂದರಿನಲ್ಲಿ ಅದಿರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಗಾಲಿ ಜನಾರ್ದನ ರೆಡ್ಡಿ ಅವರನ್ನು ಖುಲಾಸೆ ಮಾಡಿರುವುದು ನ್ಯಾಯಕ್ಕೆ ಅಪಚಾರ ಮಾಡಿದಂತಾಗಿದ್ದು, ಇದನ್ನು ಪ್ರಶ್ನಿಸಿ ಸಿ.ಬಿ.ಆಯ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಇದು ಇತ್ತಿಚೆಗೆ ವಿಚಾರಣೆಗೆ ಬಂದಿದ್ದು, ಆಗ ನ್ಯಾಯಾಲಯ ಸಿಬಿಐ ಪ್ರಶ್ನೆಯನ್ನು ಎತ್ತಿ ಹಿಡಿದು ಕೆಳ ಕೊರ್ಟಿನ ಆದೇಶವನ್ನು ತಿರಸ್ಕರಿಸಿ ವಿಚಾರಣೆಗೆ ಅನುವು ಮಾಡಿ ಕೊಟ್ಟಿದೆ. ಇದನ್ನು ಜನಾಂದೋಲನಗಳ ಮಹಾಮೈತ್ರಿ, ಸಮಾನ ಮನಸ್ಕ ಸಂಘಟನೆಗಳು ಸ್ವಾಗತಿಸುತ್ತವೆ ಎಂದರು.
ಡಿ.ಕೆ.ಶಿವಕುಮಾರ ಅಕ್ರಮ ಆಸ್ತಿ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದು, ಈ ವಿಚಾರದಲ್ಲಿ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಕೊಂಡಿದ್ದು ಸ್ವಾಗತಾರ್ಹ, ಅಲ್ಲದೇ ಬ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅಡಿಯಲ್ಲಿ ಅಕ್ರಮ ಆಸ್ತಿ ಮಾಡಿದ್ದರು ಎಂಬುದು ಸಾಬೀತಾಗಿದೆ. ಇದರ ಮುಂದಿನ ತನಿಖೆಯನ್ನು ಕ್ರಮಬದ್ದವಾಗಿ ಮಾಡಬೇಕೆಂದು ಆಗ್ರಹಿಸಿದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!