Hiring Reporter’s For more Information Contact Above Number 876 225 4007 . Program producer
Home / Breaking News / ಸಿಇಟಿ ಪರೀಕ್ಷೆಯ 2020ರ ಫಲಿತಾಂಶ ಪ್ರಕಟ

ಸಿಇಟಿ ಪರೀಕ್ಷೆಯ 2020ರ ಫಲಿತಾಂಶ ಪ್ರಕಟ

Spread the love

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಿದ್ದಂತ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಶ ಇಂದು ಪ್ರಕಟಗೊಂಡಿದೆ. ಇಂತಹ ಸಿಇಟಿಯಲ್ಲಿ ಎಂಜಿನಿಯರಿಂಗ್ ನಲ್ಲಿ ಬೆಂಗಳೂರಿನ ಆರ್ ವಿ ಕಾಲೇಜಿನ ಎಂ ರಕ್ಷಿತಾ ಮೊದಲ Rank ಪಡೆದಿದ್ದಾರೆ.

ಇಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶವನ್ನು ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ಹಲವಾರು ಸವಾಲನಗಳ ನಡುವೆ ಸಿಇಟಿ ಪರೀಕ್ಷೆ ನಡೆದಿತ್ತು. ಇಂತಹ ಸವಾಲುಗಳ ನಡುವೆಯೂ ಪ್ರಕಟಗೊಂಡ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ Rank ಪಡೆದಿದ್ದಾರೆ ಎಂಬುದಾಗಿ ತಿಳಿಸಿದ್ರು.

ಇನ್ನೂ ಮುಂದುವರೆದು ಈ ಬಾರಿ 127 ಸ್ಥಳಗಳಲ್ಲಿ 497 ಕೇಂದ್ರಗಳಲ್ಲಿ, ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ 1,94,419 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. 1,75,349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1,53,470 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ Ranking ನೀಡಲಾಗಿದೆ ಎಂದು ತಿಳಿಸಿದರು.

ಕೃಷಿ ಕೋರ್ಸ್ ವ್ಯಾಸಂಗಕ್ಕಾಗಿ 1,27,626 ವಿದ್ಯಾರ್ಥಿಗಳಿಗೆ Rank ನೀಡಲಾಗಿದೆ. ಪಶುವೈದ್ಯಕೀಯ ಕೋರ್ಸ್ ವ್ಯಾಸಂಗಕ್ಕಾಗಿ 1,29,666 ವಿದ್ಯಾರ್ಥಿಗಳಿಗೆ Rank ನೀಡಲಾಗಿದೆ. ಯೋಗ ಮತ್ತು ನ್ಯಾಚುರೋಪಥಿಗೆ 1,29,611 ವಿದ್ಯಾರ್ಥಿಗಳಿಗೆ Rank ನೀಡಲಾಗಿದೆ. ಬಿ ಫಾರ್ಮ್ ಮತ್ತು ಡಿ ಫಾರ್ಮ್ ಕೋರ್ಸ್ ಗೆ 1,55,552 ವಿದ್ಯಾರ್ಥಿಗಳಿಗೆ ಕೋರ್ಸ್ ಗೆ ಸೇರಲು Rank ನೀಡಲಾಗಿದೆ. ಈ ಬಾರಿ 88,029 ವಿದ್ಯಾರ್ಥಿಗಳು, 87,320 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು ಎಂಬುದಾಗಿ ಹೇಳಿದ್ರು.

ಅಂದಹಾಗೇ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶವನ್ನು ವಿದ್ಯಾರ್ಥಿಗಳು http://www.karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!