Hiring Reporter’s For more Information Contact Above Number 876 225 4007 . Program producer
Home / Breaking News / ಪ್ರಧಾನಿ ನರೇಂದ್ರ ಮೋದಿಯವರ ಇಂದಿನ `ಮನ್‌ ಕೀ ಬಾತ್‌’ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ

ಪ್ರಧಾನಿ ನರೇಂದ್ರ ಮೋದಿಯವರ ಇಂದಿನ `ಮನ್‌ ಕೀ ಬಾತ್‌’ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ

Spread the love

ನವದೆಹಲಿ : ಇಂದು ಕಾರ್ಗಿಲ್ ವಿಜಯ್ ದಿವಸ್ ಇಡೀ ದೇಶವೇ ವಿಜಯ್ ದಿವಸ್ ಸಂಭ್ರಮಿಸುತ್ತಿದೆ. ಭಾರತ ಕಾರ್ಗಿಲ್ ಯುದ್ಧ ಗೆದ್ದು ತನ್ನ ತಾಕತ್ತು ತೋರಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಕಾರ್ಗಿಲ್ ವಿಜಯ್ ದಿವಸ್ ಇಡೀ ದೇಶವೇ ವಿಜಯ್ ದಿವಸ್ ಸಂಭ್ರಮಿಸುತ್ತಿದೆ. ಭಾರತ ಕಾರ್ಗಿಲ್ ಯುದ್ಧ ಗೆದ್ದು ತನ್ನ ತಾಕತ್ತು ತೋರಿಸಿತ್ತು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ನಮನ. ನಮ್ಮ ವೀರಯೋಧರು ಪಾಕಿಸ್ತಾನವನ್ನು ಧ್ವಂಸ ಮಾಡಿದರು ಎಂದರು.

ವೀರ ಯೋಧಕ್ಕೆ ದೇಶಕ್ಕೆ ನೀಡಿದ ಎಲ್ಲಾ ತಾಯಿಂದರಿಗೆ ನಮ್ಮ ನಮನಗಳು, ಈ ಘಟನೆಗೆ ಇಡಿ ವಿಶ್ವವೇ ಸಾಕ್ಷಿಯಾಯಿತು. ಕಾರ್ಗಿಲ್ ಯುದ್ದ ಹಲವುಗಳನ್ನು ಪಾಠಗಳನ್ನು ಕಲಿಸಿದೆ.

ನಿರ್ಧಾರಗಳನ್ನು ತೆಗೆದುಕೊಳ್ಳುವ ಪಾಠವನ್ನು ಕಲಿಸಿದೆ. ದೇಶದ ಯೋಧರ ಹೋರಾಟ ಬಲಿದಾನವನ್ನು ಮರೆಯಬಾರದು. ಯೋಧರ ಮನೋಬಲ ಹೆಚ್ಚಿಸಲು ಜನರ ಬೆಂಬಲ ಅಗತ್ಯ ಎಂದರು.

ಇಡೀ ವಿಶ್ವವೇ ಕೊರನಾ ವಿರುದ್ಧ ಹೋರಾಡುತ್ತಿದೆ. ಕೊರನಾ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಇಡೀ ದೇಶ ಕೊರನಾ ವಿರುದ್ಧ ಹೋರಾಡುತ್ತಿದೆ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ, ಕೈ ತೊಳೆಯಿರಿ, ಈ ಸಂದರ್ಭದಲ್ಲಿ ಮಾಸ್ಕ್ ಎಲ್ಲರೂ ಧರಿಸುವುದು ಅನಿವಾರ್ಯ, ನಿರಂತರವಾಗಿ ಮಾಸ್ಕ್ ಧರಿಸುವುದು ಕಷ್ಟವಾಗುತ್ತೆ. ಆದರೆ ಒಂದು ಬಾರಿ ವೈದ್ಯರನ್ನು ನೆನಪಿಸಿಕೊಳ್ಳಿ, ವೈದ್ಯರು ಗಂಟೆಗಟ್ಟಲೆ ಮಾಸ್ಕ್ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.

ಸಂಕಷ್ಟದ ಸಮಯದಲ್ಲಿ ಬಡವರಿಗೆ ನೆರವಾಗಿ, ಪರಸ್ಪರ ನೆರವಾಗಿ ಕೊರೊನಾ ವಿರುದ್ಧ ಹೋರಾಡಿ . ಕೊರನಾ ವಿರುದ್ಧ ಹೋರಾಡದೆ ಬೇರೆ ದಾರಿ ಇಲ್ಲ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿಮ್ಮ ಜೀವದ ಜೊತೆ ಇನ್ನೊಬ್ಬರ ಜೀವ ಉಳಿಸಿ ಎಂದು ಮನವಿ ಮಾಡಿದರು.

ಸ್ವಾವಲಂಬಿ ಬದುಕಿಗೆ ಲಡಾಖ್ ಜನರು ಮಾದರಿ, ಸ್ವಾವಲಂಬಿ ಭಾರತ . ದೇಶದ ಜನತೆ ಸ್ವಾವಲಂಬಿ ಭಾರತ ಕಟ್ಟು ದೇಶ ಒಂದಾಬೇಕು. ದೇಶದ ಜನತೆ ಸ್ವಾವಲಂಬಿಗಳಾಗುವುದು ಅನಿವಾರ್ಯತೆ ಇದೆ. ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗಬೇಕಿದೆ. ನಮಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಬೇಕು ಎಂದು ಹೇಳಿದರು.

ಭಾರತ ವೇಗವಾಗಿ ಬಬದಲಾಗುತ್ತಿದೆ. ಅಭಿವೃದ್ಧಿಯಾಗುತ್ತಿದೆ. ದೇಶವನ್ನು ಕಟ್ಟುವಲ್ಲಿ ಯುವಕರು ಇನ್ನಷ್ಟು ತೊಡಗಿಸಕೊಳ್ಳಬೇಕು. ಭಾರತದ ಭವಿಷ್ಯ ದೇಶದ ಯುವಕರ ಕೈಯಲ್ಲಿದೆ.ಯುವಕರು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

Check Also

ಆಗಸ್ಟ್ 8 ರ ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

Spread the loveಆಗಸ್ಟ್ 8 ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!