Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸಿ.ಎಸ್. ಆರ್. ಸಮೀಕ್ಷೆಯಲ್ಲಿ ಚೇತನ ಬ್ಯೂಸಿನೆಸ್ ಸ್ಕೂಲ್ ಗೆ 4 ನೇ ಸ್ಥಾನ.

ಸಿ.ಎಸ್. ಆರ್. ಸಮೀಕ್ಷೆಯಲ್ಲಿ ಚೇತನ ಬ್ಯೂಸಿನೆಸ್ ಸ್ಕೂಲ್ ಗೆ 4 ನೇ ಸ್ಥಾನ.

 

ಹುಬ್ಬಳ್ಳಿ: ಕಾಂಪಿಟೇಶನ್ ಸಕ್ಸಸ್ ರೀವಿಲ್ (ಸಿ.ಎಸ್.ಆರ್) ನಡೆಸಿದ ರಾಷ್ಟ್ರಮಟ್ಟದ ಬಿ ಸ್ಕೂಲ್ ಗಳ ವಾರ್ಷಿಕ ಸಮೀಕ್ಷೆಯಲ್ಲಿ ನಗರದ ದ್ಯಾವಪ್ಪನವರ ಕೊರವಿ ಸಿದ್ನಾಳ ಎಜುಕೇಶನ್ ಸಂಸ್ಥೆಯ ಚೇತನ ಬ್ಯುಸಿನೆಸ್ ಸ್ಕೂಲ್ ಬಿ ಸ್ಕೂಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 4 ನೇ ಸ್ಥಾನ ಪಡೆದಿದೆ ಎಂದು ಡಾ.ವ್ಹಿ.ಎಂ.ಕೊರವಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೆಹಲಿ ಮೂಲದ ಜಿಎಚ್ ಆರ್ ಡಿಸಿ ಜಾಗತೀಕ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದೊಂದಿಗೆ ಪ್ರತಿ ವರ್ಷ ದೇಶದ ಬಿಸಿನೆಸ್ ಸ್ಕೂಲ್ ಗಳ ಸಮೀಕ್ಷೆಯನ್ನು ನಡೆಸುತ್ತಾರೆ. ಇದರಲ್ಲಿ ಶಿಕ್ಷಣದಲ್ಲಿ ಗುಣ್ಣಮಟ್ಟವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾದ ಪೂರ್ವ ನಿರ್ಧರಿತ ಅಂಶಗಳಾದ ಕಾಲೇಜಿನ ಬೋಧನಾ ಸೌಲಭ್ಯ, ಬೋಧಕ ಸಿಬ್ಬಂದಿ, ಪ್ರಕಟಣೆ, ಸಂಶೋಧನೆ, ಸಲಹೆ, ಪ್ರವೇಶ, ಪಠ್ಯಕ್ರಮ, ಬೋಧನಾ ಪದ್ದತಿ, ಉದ್ಯೋಗ ಭರ್ತಿ, ಸಾಮಾಜಿಕ ಹೊಣೆಗಾರಿಕೆ, ನೆಟ್ ವರ್ಕಿಂಗ್, ಉದ್ಯಮ ಕ್ಷೇತ್ರದೊಂದಿಗಿನ ಸಂಪರ್ಕ ಮೊದಲಾದ ಸಂಗತಿಗಳನ್ನು ಪರಿಗಣಿಸಿ ಬಿ ಸ್ಕೂಲ್ ಗಳ ಆಯ್ಕೆ ಮಾಡಿ ಸುಪ್ರೀಂ ಬಿಸಿನೆಸ್ ಶಾಲೆಗಳು, ಸೂಪರ್ ಎಕ್ಸ್ ಲೆನ್ಸ್ ಬಿಸಿನೆಸ್ ಶಾಲೆಗಳು, ಶ್ರೇಷ್ಠ ಬಿಸಿನೆಸ್ ಶಾಲೆಗಳು, ಅತ್ಯುತ್ತಮ ಬಿಸಿನೆಸ್ ಶಾಲೆಗಳು, ಎಕ್ಸ ಲೇನ್ಸ್ ಬಿಸಿನೆಸ್ ಶಾಲೆಗಳು, ಭರವಸೆಯ ಬಿಸಿನೆಸ್ ಶಾಲೆಗಳು ಎಂದು ಶ್ರೇಯಾಂಕ ಪ್ರಕಟ ಮಾಡಲಾಗುವುದು.‌ ಈ ಸಮೀಕ್ಷೆಯನ್ನು ನ.2018 ರ ಸಂಚಿಕೆಯಲ್ಲಿ ಪ್ರಕಟ ಮಾಡಲಾಗಿದ್ದು, ನಗರದ ಚೇತನ ಬ್ಯುಸಿನೆಸ್ ಸ್ಕೂಲ್ ಭರವಸೆಯ ಬಿ ಸ್ಕೂಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 4 ನೇ ಸ್ಥಾನ ಪಡೆದಿದೆ. ಈ ಹಿಂದೆ 12 ನೇ ಸ್ಥಾನದಲ್ಲಿತ್ತು. ಈ ಮೂಲಕ ಮಹಾವಿದ್ಯಾಲಯ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಕಾಲೇಜಿನ ಕಿರ್ತಿ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಮಾಕಾಂತ ಕುಲಕರ್ಣಿ, ವಿಶ್ವನಾಥ, ನಾಗರಾಜ ಗೌಡದ, ಮೋಹನ ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!