Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಚಿತ್ರದುರ್ಗ / ಮಕ್ಕಳು ದೇಶದ ಆಸ್ತಿ : ದೇವರಾಜು

ಮಕ್ಕಳು ದೇಶದ ಆಸ್ತಿ : ದೇವರಾಜು

ಮಂಡ್ಯ:-  ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಬೇಕೆಂದು  ಜಿಲ್ಲಾ ಪಂಚಾಯತಿ ಸದಸ್ಯ ದೇವರಾಜು ಮನವಿ ಮಾಡಿದರು.

ತುರುಕರಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದ ಅವರು, ಮಕ್ಕಳು ಮುಂದಿನ ದೇಶದ ಪ್ರಜೆಗಳು, ಅವರು ಸದೃಢ ರಾಷ್ಟ್ರ ನಿರ್ಮಿಸುವವವರು, ಅವರಿಗೆ ಉತ್ತಮ ವಿದ್ಯೆಯನ್ನು ಕೊಟ್ಟು ಸದೃಢ ವ್ಯಕ್ತಿಗಳನ್ನಾಗಿ ಮಾಡಲು ಪಾಲಕರು ಕೈಜೋಡಿಸಬೇಕು. ಅಲ್ಲದೇ ಮಕ್ಕಳಿಗೆ ಪೌಷ್ಠಿಕಾಂಶದಿಂದ ಕೂಡಿರುವ ಸಮತೋಲನದ ಆಹಾರವನ್ನು ನೀಡಿ, ಆರೋಗ್ಯದ ಕಡೆಗೆ ವಿಶೇಷವಾಗಿ ಗಮನ ಹರಿಸುವಂತೆ ಹೇಳಿದರು.

ಭೂಮಿಪೂಜಾ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಮ್ಮ ಸಣ್ಣಲಿಂಗೇಗೌಡ, ಗ್ರಾಮದ ಮುಖಂಡರಾದ ಕುಮಾರ್, ದೇವರಾಜು, ಕಾಂತರಾಜು, ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ದಿಲ್ ಶಾದ್ ಬಿ.ನಧಾಪ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Share

About solaragoppa

Check Also

ಡಿ.ಕೆ. ಶಿವಕುಮಾರ್ ಗೆ ತಿರುಗೇಟು ಕೊಟ್ಟ ಸಚಿವ ಬಿ.ಸಿ. ಪಾಟೀಲ್

ಚಿತ್ರದುರ್ಗ: ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕೀಯ ಮಾಡುವುದು ದುರ್ದೈವದ ಸಂಗತಿ ಎಂದು ಕೃಷಿ ಸಚಿವ …

Leave a Reply

Your email address will not be published. Required fields are marked *

error: Content is protected !!