Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಇತರ ಕ್ರೀಡೆಗಳು / ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸಿಂಧು ಔಟ್.

ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸಿಂಧು ಔಟ್.

 

ಫುಝೋ : ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು ಚೀನಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದಾರೆ. ಚೀನಾ, ಕೊರಿಯಾ, ಡೆನ್ಮಾರ್ಕ್ ಓಪನ್‌ ಟೂರ್ನಿಗಳಲ್ಲಿ ಬೇಗನೆ ಹೊರಬಿದ್ದ ಸಿಂಧು ಮತ್ತೊಮ್ಮೆ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಮಂಗ​ಳ​ವಾ​ರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್‌ ತೈಪೆಯ ಪೈ ಯು ಪೊ ವಿರುದ್ಧ 13-21, 21-18, 19-21ರಲ್ಲಿ ಸಿಂಧು ಸೋಲುಂಡರು. 74 ನಿಮಿಷ ಹೋರಾಡಿದರೂ ವಿಶ್ವ ನಂ.6 ಸಿಂಧು, ತಮಗಿಂತ 36 ರಾರ‍ಯಂಕ್‌ ಕೆಳಗಿರುವ ಪೈ ಯು ಮುಂದೆ ಮಂಡಿ​ಯೂ​ರಿ​ದರು.
ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡ ಶಟ್ಲರ್‌ ಎಚ್‌.ಎಸ್‌ ಪ್ರಣಯ್‌ ಮೊದಲ ಸುತ್ತಿನಲ್ಲೇ ಹೊರಬಿದ್ದರು.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!