Breaking News
Hiring Reporter’s For more Information Contact Above Number 876 225 4007 . Program producer
Home / Breaking News / ತಹಶೀಲ್ದಾರ ಮತ್ತು ಸಿಬ್ಬಂದಿ ವರ್ಗದಿಂದ ಸ್ವಚ್ಚತಾ ಕಾರ್ಯ.

ತಹಶೀಲ್ದಾರ ಮತ್ತು ಸಿಬ್ಬಂದಿ ವರ್ಗದಿಂದ ಸ್ವಚ್ಚತಾ ಕಾರ್ಯ.

ಗುಂಡ್ಲುಪೇಟೆ: ತಾಲೂಕಿನ ತಹಸೀಲ್ದಾರ್ ಕಛೇರಿಯ ಆವರಣದಲ್ಲಿ ಸ್ವಚ್ಛತೆ ಅಭಿಯಾನದಡಿ ತಹಸೀಲ್ದಾರ್ ನಂಜುಂಡಯ್ಯ ಮತ್ತು ಸಿಬ್ಬಂದಿ ವರ್ಗ ಸ್ವಯಂ ಅಂಗಳಕ್ಕಿಳಿದು ಶ್ರಮಧಾನ ನಡೆಸಿದರು , ತಹಸೀಲ್ದಾರ್ ಕಛೇರಿಯ ಸುತ್ತಲೂ ಬೆಳೆದು ನಿಂತಿದ್ದ ಪಾರ್ಥೇನಿಯಂ ಗಿಡಗಳನ್ನು ತೆರವುಗೊಳಿಸಿ, ಅಲ್ಲಲ್ಲಿ ಬೀಸಾಡಿದ್ದ ಪೇಪರ್ ಪ್ಲಾಸ್ಟಿಕ್ ಬಾಟಲಿಗಳು, ಕಸಕಡ್ಡಿ ಕೊಳಕು ತ್ಯಾಜ್ಯವನ್ನು ಮೂರು ಟ್ರ್ಯಾಕ್ಟರ್ ಗಳಿಗೆ ತುಂಬಿ ಹೊರಸಾಗಿಸಿ ಕಛೇರಿಯ ಸುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಿದರು…
ತಾಲೂಕು ದಂಡಾಧಿಕಾರಿಗಳಾದ ನಂಜುಂಡಯ್ಯ ಮಾತನಾಡಿ ಮೊದಲು ನಮ್ಮ ಮನೆ, ನಾವು ಕೆಲಸ ಮಾಡುವ ಕಛೇರಿ ಒಳಗೆ ಮತ್ತು ಹೊರಗೆ, ಊರು ಶಾಲೆ ಆಸ್ಪತ್ರೆಗಳನ್ನು ನಾವುಗಳೇ ಸ್ವಚ್ಛಗೊಳಿಸಲು ಮುಂದಾಗಬೇಕು ನಂತರ ಬೇರೊಬ್ಬರಿಗೆ ಹೇಳುವುದರ ಜೊತೆಗೆ ಮಾರ್ಗದರ್ಶನ ನೀಡುವುದಕ್ಕೆ ತುಂಬಾ ಉಪಯುಕ್ತಕಾರಿಯಾಗಿರುತ್ತದೆ ಎಂದರು..
ಮಹಾತ್ಮ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಸಾಕಾರಗೊಳಿಸಲು ಪ್ರಯತ್ನಪಡಬೇಕು , ಜನರು ಸಾರ್ವಜನಿಕ ಸ್ಥಳ , ಕಛೇರಿಗಳ ಆವರಣದಲ್ಲಿ ಗಲೀಜುಮಾಡಬಾರದು , ಇತರರು ಕೊಳಕು ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು..
ಎಲ್ಲಾ ಇಲಾಖೆಯ
ಅಧಿಕಾರಿಗಳು ಹಾಗೂ ನೌಕರರು ಸ್ವಯಿಚ್ಛೆಯಿಂದ ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು…
ಈ ಸ್ವಚ್ಛತಾ ಆಂದೋಲನ ಕಾರ್ಯಕ್ಕೆ ಶಾಸಕರ ಆಪ್ತ ಸಹಾಯಕ ಮಂಜುನಾಥ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದರು…

ವರದಿ : ಮಹದೇವ ಪ್ರಸಾದ್ ಯಡಹುಂಡಿ. ಬಿಗ್ ಟಿವಿ ನ್ಯೂಸ್.

Share

About Admin BIG TV NEWS

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!