Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಗುರುಮಠಕಲ್ ಪುರಸಭೆ ವತಿಯಿಂದ ಅಂಗಡಿಗಳ ಇಂಗ್ಲಿಷ್ ನಾಮಫಲಕ ತೆರವು ಕಾರ್ಯಾಚರಣೆ.

ಗುರುಮಠಕಲ್ ಪುರಸಭೆ ವತಿಯಿಂದ ಅಂಗಡಿಗಳ ಇಂಗ್ಲಿಷ್ ನಾಮಫಲಕ ತೆರವು ಕಾರ್ಯಾಚರಣೆ.

 

ಯಾದಗಿರಿ ; ತಾಲೂಕಿನ ಗುರುಮಠಕಲ್ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಎಲ್ಲಾ ಕಡೆ ಬುಧವಾರದಂದು ಅಂಗಡಿ, ಮುಂಗಟ್ಟು ಸಂಘ ಸಂಸ್ಥೆಗಳ ಇಂಗ್ಲೀಷ್ ನಾಮಫಲಕಗಳನ್ನು ತೆಗೆಯಿಸಿ, ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸುವಂತೆ ಪುರಸಭೆ. ಮುಖ್ಯಾಧಿಕಾರಿ ಜೀವನಕುಮಾರ ಕಟ್ಟೀಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹಿರಿಯ ಆರೋಗ್ಯ ನಿರೀಕ್ಷಕ ರಾಮುಲು ಗೌಡ್ ಮಾತನಾಡಿ ಕಳೆದ ಒಂದು ವಾರದಿಂದ ತಮ್ಮ ತಮ್ಮ ಅಂಗಡಿಗಳ ನಾಮಫಲಕಗಳನ್ನು ೬೦:೪೦ ಅನುಪಾತದಲ್ಲಿ ಕನ್ನಡ ಮತ್ತು ಇತರೆ ಭಾಷೆಯಲ್ಲಿ ನಾಮಫಲಕ ಅಳವಡಿಸಿಕೊಳ್ಳುವಂತೆ ಪ್ರಚಾರ ಮಾಡಲಾಗಿತ್ತು. ಸರಕಾರದ ಆದೇಶದ ಪ್ರಕಾರ ಪ್ರತಿಯೊಂದು ನಾಮಫಲಕವು ಕನ್ನಡದಲ್ಲಿರಬೇಕು. ಮತ್ತು ಇತರೆ ಭಾಷೆಗಳನ್ನು ಬಳಕೆ ಮಾಡುವ ಸಂದರ್ಭದಲ್ಲಿ ಆ ಭಾಷೆಯಲ್ಲಿರುವ ಹೆಸರು ಮತ್ತು ಪದಗಳು ಕನ್ನಡ ಆವೃತ್ತಿಯ ಕೆಳಗೆ ಬರಬೇಕು. ಕನ್ನಡ ಭಾಷೆ ಹೆಚ್ಚು ಎದ್ದು ಕಾಣುವಂತೆ ಇರಬೇಕು. ಹಾಗೂ ಹೆಚ್ಚಿನ ಸ್ಥಳಾವಕಾಶವನ್ನು ಕನ್ನಡಕ್ಕೆ ಕಲ್ಪಿಸಬೇಕು ಹೇಳಿದರು. ಈ ಮೂಲಕ ಗಡಿನಾಡಿನ ಈ ಭಾಗವು ಕನ್ನಡಮಯವಾಗುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ, ಹಾಗೂ ಬಸವರಾಜ, ವೆಂಕಟೇಶ್, ಪುರಸಭೆ ಸಿಬ್ಬಂದಿ ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!