Breaking News
Hiring Reporter’s For more Information Contact Above Number 876 225 4007 . Program producer
Home / Breaking News / ನೆರೆ ಪೀಡಿತ ಹೊಸಹೊಳಲು ದೊಡ್ಡಕೆರೆ ಬಯಲಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಭೇಟಿ.

ನೆರೆ ಪೀಡಿತ ಹೊಸಹೊಳಲು ದೊಡ್ಡಕೆರೆ ಬಯಲಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಭೇಟಿ.

ಮಂಡ್ಯ: ಸಂತ್ರಸ್ತರಿಗೆ ಬೆಳೆ ಪರಿಹಾರ ಸೇರಿದಂತೆ ಪ್ರಾಕೃತಿಕ ವಿಕೋಪ ನಿಧಿಯ ಅಡಿಯಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಭರವಸೆ ನೀಡಿದರು.
ಸಂತ್ರಸ್ತರ ನೋವಿಗೆ ಸ್ಪಂದಿಸಿ ಪರಿಹಾರ ದೊರಕಿಸಿಕೊಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಎನ್.ಡಿ.ಆರ್.ಎಫ್ ಪ್ರಾಕೃತಿಕ ವಿಕೋಪ ನಿಧಿಯಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆಬಿದ್ದು ನಿಧನರಾದ ದಲಿತ ಮುಖಂಡ ಕುಮಾರ್ ಅವರ ತಾಯಿ ನರಸಮ್ಮ ಅವರಿಗೆ 5ಲಕ್ಷರೂಗಳ ಪರಿಹಾರ ಧನದ ಚೆಕ್ ವಿತರಿಸಲಾಗಿದೆ.
ತಾಲೂಕು ಆಡಳಿತವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ.
ಈಗಾಗಲೇ ಬೆಳೆನಷ್ಠ ಮತ್ತು ಕೃಷಿ ಭೂಮಿಯು ಕೊರಕಲು ಬಿದ್ದು ಹಾಳಾಗಿರುವುದನ್ನು ಕೃಷಿ, ತೋಟಗಾರಿಕೆ
ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ನಷ್ಠದ ಅಂದಾಜು ಮಾಡಿದ್ದಾರೆ ಎಂದು ಪತ್ರಕರ್ತರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ಶಿವಮೂರ್ತಿ, ಪುರಸಭೆಯ ಸದಸ್ಯರಾದ ಹೆಚ್.ಡಿ.ಅಶೋಕ್, ಹೆಚ್.ಎನ್.ಪ್ರವೀಣ್, ಪ್ರಕಾಶ್, ಕೃಷ್ಣೇಗೌಡ, ಗೋವಿಂದೇಗೌಡನಕೊಪ್ಪಲು ನಾಗರಾಜೇಗೌಡ,
ರಾಜಶ್ವನಿರೀಕ್ಷಕಿ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಮತ್ತು ನೆರೆ ಸಂತ್ರಸ್ತ ಗ್ರಾಮಗಳ ರೈತರು ಉಪಸ್ಥಿತರಿದ್ದರು.

Share

About Bora nayak BIG TV NEWS, Mandya

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!