Hiring Reporter’s For more Information Contact Above Number 876 225 4007 . Program producer
Home / Breaking News / ಸರಕು ‌ರೈಲು ಟರ್ಮಿನಲ್‌ ಆರಂಭ

ಸರಕು ‌ರೈಲು ಟರ್ಮಿನಲ್‌ ಆರಂಭ

Spread the love

ಆನೇಕಲ್ : ತಾಲ್ಲೂಕಿನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ರೈಲು ನಿಲ್ದಾಣವನ್ನು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ಕುಮಾರ್‌ ವರ್ಮಾ ಉದ್ಘಾಟಿಸಿದರು.

ರಾಜ್ಯದಲ್ಲಿ ಸ್ಥಾಪನೆಯಾಗಿರುವ ಎರಡನೇ ಖಾಸಗಿ ಸರಕು ಟರ್ಮಿನಲ್‌ ಇದಾಗಿದೆ. ಮಾರನಾಯಕನಹಳ್ಳಿಯು ಆನೇಕಲ್‌ ರೈಲು ನಿಲ್ದಾಣ ಮತ್ತು ಹೊಸೂರು ರೈಲು ನಿಲ್ದಾಣದ ನಡುವೆ ಇದೆ. ತಮಿಳುನಾಡಿನ ಗಡಿಗೆ ಹೊಂದಿಕೊಂಡಿದೆ. ಸುಮಾರು ₹ 750 ಕೋಟಿ ವೆಚ್ಚದಲ್ಲಿ 120 ಎಕರೆ ವಿಶಾಲ ಬಯಲಿನಲ್ಲಿ ನಿರ್ಮಿಸಿರುವ ಖಾಸಗಿ ಸರಕು ಟರ್ಮಿನಲ್‌ನಲ್ಲಿ ಟ್ರಕ್‌ಗಳಿಗೆ ಪಾರ್ಕಿಂಗ್‌ ವ್ಯವಸ್ಥೆ, ವಿದ್ಯುತ್‌ ಸಬ್‌ಸ್ಟೇಷನ್‌, ಅತ್ಯಾಧುನಿಕ ಉಪಕರಣಗಳ ವ್ಯವಸ್ಥೆ ಹೊಂದಿದೆ. ರೈಲು ನಿಲ್ದಾಣದಲ್ಲಿ ಸರಕು ಸಾಗಣೆ ರೈಲುಗಳು ನಿಲುಗಡೆ ಹೊಂದಲು ಅನುಕೂಲವಾಗುವಂತೆ ಕ್ರಾಸಿಂಗ್‌ ಲೈನ್‌ಗಳನ್ನು ನಿರ್ಮಿಸಲಾಗಿದೆ.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!