Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಕಾಂಗ್ರೆಸ್ ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ : ಹೊರಟ್ಟಿ

ಕಾಂಗ್ರೆಸ್ ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ : ಹೊರಟ್ಟಿ

ಹುಬ್ಬಳ್ಳಿ: ಕಾಂಗ್ರೆಸ್ಸಿನವರು ಸ್ವತಂತ್ರರಾಗಿದ್ದಾರೆ.
ರನ್ನಿಂಗ್ ರೇಸ್ ಯಾವಾಗ ಇರುತ್ತದೆ ಗೊತ್ತಿಲ್ಲ.
ಆದರೇ, ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡಲೆಬೇಕು
ಹಾಗೇ ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ.ಆದರೇ ಕಾಂಗ್ರೆಸ್ ಅವರದೇನ್ನು ತಪ್ಪಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನಸಭಾ ಉಪಚುನಾವಣೆ ಪೂರ್ವ ತಯಾರಿ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಒಂದು ವೇಳೆ ರನ್ನಿಂಗ್ ರೇಸ್ ಬಂದರೆ ಪ್ರಾಕ್ಟೀಸ್ ಮಾಡಿದು ಸಾರ್ಥಕವಾಗುತ್ತದೆ.
ಆದರೇ ನಮ್ಮಲ್ಲಿ ರನ್ನಿಂಗ್ ರೇಸ್ ಬೇಡವಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿರುವುದರಿಂದ ನಮಗೆ ಮರು ಚುನಾವಣೆ ಬೇಡವಾಗಿದೆ,ಆದ್ದರಿಂದ ಬಿಜೆಪಿಗೆ ಬೆಂಬಲ ಕೊಡುವುದು ಬಿಡುವುದು ನಮ್ ಹೈಕಮಾಂಡಗೆ ಬಿಟ್ಟಿದ್ದು,ಬೆಂಬಲ ಕೊಟ್ರೆ ನನ್ ಸಹಮತವಿದೆ,ಯಾವುದೇ ಸರ್ಕಾರ ಇರಲಿ ಇನ್ನು ಮೂರು ವರ್ಷ ನಡೆಯಬೇಕು ಅಷ್ಟೇ ಎಂದರು.ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಪೀಠಾಧ್ಯಕ್ಷ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಕಡೆಗೆ ಮೂರು ಸಾವಿರ ಮಠದ 11 ಜನರು ಸ್ವಾಮೀಗಳು ಹೋಗಿ ಭೇಟಿ ಆಗಿದ್ದಾರೆ,ಆದರೇ ಇದರ ಬಗ್ಗೆ ನನಗೇನೂ ಗೊತ್ತಿಲ್ಲ.
ನಮ್ಮನ್ನು ಯಾರು ಕೇಳೋಲ್ಲ ಎಂದರು,ಉನ್ನತ ಸಮಿತಿಯು ಮುಂದೆ ಯಾವುದೆ ಚರ್ಚೆ ಬಂದಿಲ್ಲ. ಸಚಿವ ಜಗದೀಶ ಶೆಟ್ಟರ್ ಇದರ ಬಗ್ಗೆ ಏನು ಚರ್ಚೆ ಮಾಡಿಲ್ಲ. ನನ್ನ ಹಾಗೂ ಸಚಿವ ಶೆಟ್ಟರ್ ಗಮನಕ್ಕೂ ಬಂದಿಲ್ಲ ಎಂದು ಅವರು ಹೇಳಿದರು.
ಇವತ್ತಿನ ವರೆಗೂ ಈ ವಿಚಾರದ ಬಗ್ಗೆ ನನಗೇ ಯಾರೂ ಕೇಳಿಲ್ಲ ಎಂದು ಹೊರಟ್ಟಿ ಸ್ಪಷ್ಟ ಪಡಿಸಿದರು.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!