Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಾಂಗ್ರೇಸ್ಸಿನವರಿಗೆ ಟೀಕೆ ಮಾಡಲು ಬೇರೆ ವಿಷಯವೇ ಇಲ್ಲ: ಶೆಟ್ಟರ್ ಲೇವಡಿ.

ಕಾಂಗ್ರೇಸ್ಸಿನವರಿಗೆ ಟೀಕೆ ಮಾಡಲು ಬೇರೆ ವಿಷಯವೇ ಇಲ್ಲ: ಶೆಟ್ಟರ್ ಲೇವಡಿ.

 

ಧಾರವಾಡ:- ಕಾಂಗ್ರೆಸ್ ಆಡಿಯೋ ವಿಡಿಯೋ ಕೇವಲ ರಾಜಕಾರಣಕ್ಕೆ ಉಪಯೋಗ ಮಾಡುತ್ತಿದೆ.ಕಾಂಗ್ರೆಸ್ ಗೆ ಇವತ್ತು ಸರ್ಕಾರಕ್ಕೆ ಟೀಕೆ ಮಾಡಲು ವಿಷಯವಿಲ್ಲ ಆ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಆರೋಪ ಮಾಡುತಿದ್ದಾರೆ ಎಂದು ಸಚಿವ ಜಗದೀಶ್ ಶಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದ ಬ್ರಹ್ಮ ಯಾರು ಅಂತಾ ನಾ‌ ಕೇಳಿದ್ದೆ, ಹಿಂದೆ‌ ಮುಂದೆ ಏನು ಇಲ್ಲದ ಆಡಿಯೊ ಸುಪ್ರಿಂ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಸುಪ್ರಿಂ‌ ಕೊರ್ಟ ಅದನ್ನ ಒಪ್ಪಲು ತಯಾರಿಲ್ಲ.ರಾಷ್ಟ್ರಪತಿ ಬಳಿ ಈಗ ಅದನ್ನ ತೆಗೆದುಕೊಂಡು ಹೋಗಿ ಸುದ್ದಿ ಮಾಡುತಿದ್ದಾರೆ ಎಂದರು. ಇದು ಒಂದು ಷಡ್ಯಂತ್ರ ಹಾಗೂ ಕುತಂತ್ರ.
ಸಿದ್ಧರಾಮಯ್ಯ ಏನ್ ಬೇಕಾದನ್ನ ಮಾತನಾಡ್ತಾರೆ, ತಾಳಿಲ್ಲ ತಂತಿಲ್ಲ, ನಮ್ಮವರೇ ಆಡಿಯೋ ಲಿಕ್ ಮಾಡಿದ್ದಾರೆ ಅನ್ನೊದಕ್ಕೆ ಏನ್ ಪ್ರೂಫ್ ಇದೆ ಎಂದರು.
ಸಂಶಯದ ಭೂತದಂತೆ ಅದನ್ನು ಬಿಡುತ್ತಾರೆ, ಇಂಥವರೆ ಬಿಟ್ಟಿದ್ದಾರೆ ಎಂದು ಹೇಳಲಿ. ಯಾರು ರೆಕಾರ್ಡ ಮಾಡಿದ್ದಾರೆ ಅವರನ್ನ ರಾಷ್ಟಪತಿ ಬಳಿ ತೆಗೆದುಕೊಂಡು ಹೊರಟಿದ್ದಿರಾ ಎಂದು ಪ್ರಶ್ನಿಸಿದರು.
ನೆರೆ ಸಂತ್ರಸ್ತರಿಗೆ ಪರಿಹಾರ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು,೧೨೦೦ ಕೋಟಿ ಸಾಕಾಗಲ್ಲ, ಹೀಗಾಗಿ ಇನ್ನೂ ಪರಿಹಾರ ಹಣ ಕೇಂದ್ರಕ್ಕೆ ಕೇಳುತಿದ್ದೆವೆ, ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಕೊಟ್ಟಿದೆ ಎಂದರು.
ಅನರ್ಹ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನೆರೆ ಹಾವಳಿ ಸಂಬಂಧ ಕೆಲ ಕಾಮಗಾರಿ ಸ್ಥಗಿತ ಮಾಡಲಾಗಿತ್ತು. ಈಗ ಎಲ್ಲ‌ ಕಡೆ ಅನುದಾನ ಬಿಡುಗಡೆ ಮಾಡಲಾಗುತಿದೆ, ಯಾವುದೇ ನಾವು ಸೆಡಿನ ರಾಜಕಾರಣ ಮಾಡುತ್ತಿಲ್ಲ ಎಂದರು‌.ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಮಾಡಿದ ಅನ್ಯಾಯ ನಾವು ಮಾಡುತ್ತಿಲ್ಲ ಎಂದು ಅವರು ಹೇಳಿದರು.
ಹಿಂದೆ ಹಾಸನ ಹೊಳೆನರಸಿಪುರಕ್ಕೆ ಹಣದ ಹೊಳೆನೇ ಹರಿಸಿದ್ರು. ವರದಿ ಆಧಾರದ ಮೇಲೆ ಸಿಎಂ ಅನುದಾನ ಬಿಡುಗಡೆ ಮಾಡ್ತಾರೆ, ಆ ಪ್ರಕಾರ ಅನುದಾನ ಕೂಡಾ ಕೊಟ್ಟಿದ್ದಾರೆ.
ಶಾಸಕ‌ ರೇಣುಕಾಚಾರಿ ರಮೇಶ ಜಾರಕಿಹೋಳಿಗೆ ಡಿಸಿಎಂ‌ ಮಾಡಬೇಕು ಎಂದು ಹೇಳಿದ ವಿಚಾರ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!