Hiring Reporter’s For more Information Contact Above Number 876 225 4007 . Program producer
Home / Breaking News / ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ: ಫೋಟೋ ವೈರಲ್

ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ: ಫೋಟೋ ವೈರಲ್

Spread the love

ಮುಸ್ಲಿಮರ ಪವಿತ್ರ ಕ್ಷೇತ್ರವಾಗಿರುವ ಮೆಕ್ಕಾ ಮದೀನಾದ ಹಜ್ ಯಾತ್ರೆಯೂ ಈ ಬಾರಿ‌ ಕೊರೊನಾ ಹೊಡೆತಕ್ಕೆ ಸಿಲುಕಿದ್ದು, ಕೇವಲ ಸಾವಿರ ಲೆಕ್ಕದಲ್ಲಿ ಜನರು ಆಗಮಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮೆಕ್ಕಾ ಮದೀನದ ಹಜ್ ಯಾತ್ರೆಯ ವೇಳೆ ಕಾಬಾ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸುವುದು ಮುಸ್ಲಿಂ ‌ಸಮದಾಯದಲ್ಲಿ ನಡೆದುಬಂದಿದೆ. ಪ್ರತಿವರ್ಷ ಈ ಸಮಯದಲ್ಲಿ ಕೋಟ್ಯಾಂತರ ಮಂದಿ ಹಲವು ದೇಶಗಳಿಂದ ಆಗಮಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಮಹಾಮಾರಿ ವಿಶ್ವವನ್ನು ಕಾಡುತ್ತಿರುವುದರಿಂದ, ಕೇವಲ ಒಂದು ಸಾವಿರ ಜನರಿಗೆ ಪ್ರವೇಶ ನೀಡಲಾಗಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿರುವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದೀಗ ಕೇವಲ ಒಂದು ಸಾವಿರ ಜನ ಭಕ್ತರು, ಸಾಮಾಜಿಕ‌ ಅಂತರದೊಂದಿಗೆ ದರ್ಶನ ಪಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.

ಈ ಹಿಂದೆ ಹಜ್‌ ಯಾತ್ರೆಯಲ್ಲಿ ಭಾಗವಹಿಸದ, 20-50 ವರ್ಷದೊಳಗಿನವರಿಗೆ ಆದ್ಯತೆ ನೀಡಿದ್ದು, ಆನ್ಲೈನ್ ರಿಜಿಸ್ಟರ್ ಆದ ಬಳಿಕ ಕೊರೊನಾ ಟೆಸ್ಟ್‌ ಮಾಡಿಸಿದ ಬಳಿಕವೇ ಅವಕಾಶ ನೀಡಲಾಗಿದೆ.

ಇದರೊಂದಿಗೆ ಹಜ್ ಯಾತ್ರೆಯ ಬಳಿಕ ಒಂದು ವಾರ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!