Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಡಿ.10 ರಂದು ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುಂತೆ ಪತ್ರಚಳುವಳಿ

ಡಿ.10 ರಂದು ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುಂತೆ ಪತ್ರಚಳುವಳಿ

 

ಹುಬ್ಬಳ್ಳಿ- ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಹಿನ್ನಲೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುಂತೆ ಚಳುವಳಿ ಮಾಡಲಾಗುತ್ತಿದ್ದು, ಇದರ ಮುಂದಾಳತ್ವವನ್ನು ನಟ ಶಿವರಾಜಕುಮಾರ ವಹಿಸುವಂತೆ ಆಗ್ರಹಿಸಿ ಡಿ. 10 ರಂದು ನಗರದ ಮುಖ್ಯ ಅಂಚೆ‌ ಇಲಾಖೆ ಎದುರು ಅಂಚೆ ಮೂಲಕ ಪತ್ರ ಚಳುವಳಿ ಮಾಡಲಾಗುವುದು ಎಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಕಳೆದ 33 ವರ್ಷಗಳಿಂದ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಹೋರಾಟ ಮಾಡುತ್ತಾ ಬರಲಾಗುತ್ತಿದ್ದರು. ಯಾವುದೇ ಒಂದು ಸರ್ಕಾರ ವರದಿ ಜಾರಿಗೆ ಮನಸ್ಸು ಮಾಡಲಿಲ್ಲ. ಅಲ್ಲದೇ 2017 ರಲ್ಲಿ ವರದಿಯನ್ನು ಪರಿಷ್ಕೃತ ಮಾಡಲಾಗಿದ್ದು, ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ನಂತರ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೂಡಾ ವರದಿ ಜಾರಿಗೆ ಮಾಡಲು ಮುಂದಾಗಲಿಲ್ಲ. ಪರಿಣಾಮ ಇಲ್ಲಿಯವರೆಗೂ ಕೂಡಾ ವರದಿ ಜಾರಿಯಾಗಿದೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದು ಕೂಡಲೇ ಇಗೀನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದರೂ ಮುಂದಾಗಬೇಕು ಆಗ್ರಹಿಸಿ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಮೀಸಲಾತಿ ವಿಚಾರವಾಗಿ ಆಂದ್ರಪ್ರದೇಶದಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ನಂತರ 75 ರಷ್ಟು ಮೀಸಲಾತಿ ಜಾರಿಗೊಳಿಸಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಉದ್ಭವ ಠಾಕ್ರೆ ಕೂಡಾ ಶೇ.80 ರಷ್ಟು ಮೀಸಲಾತಿ ಜಾರಿಗೆ ತರುವ ಮೂಲಕ ರಾಜ್ಯದ ಜನರ ಹಿತರಕ್ಷಣೆ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಮೀಸಲಾತಿಯನ್ನು ಈಗಿರುವ ಸರ್ಕಾರ ಜಾರಿಗೆ ಗೊಳಿಸಬೇಕು. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಹಿನ್ನಲೆಯಲ್ಲಿ ನಟ ಶಿವರಾಜ ಕುಮಾರ ನೇತೃತ್ವ ವಹಿಸಬೇಕೆಂದು ಪತ್ರ ಚಳುವಳಿ ಮಾಡಲಾಗುತ್ತಿದ್ದು, ಈ ಮೂಲಕ ಕರ್ನಾಟಕದ ನಟರಾದ ಯಶ್, ಸುದೀಪ್, ಪುನೀತ್ ರಾಜಕುಮಾರ, ದರ್ಶನ, ಉಪೇಂದ್ರ, ರವಿಚಂದ್ರನ್ ಅವರಿಗೆ ಪತ್ರ ಕಳಿಸುವ ಮೂಲಕ ಒತ್ತಾಯ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗೇಶ್, ಎಮ್.ಸಿ.ಕಾಂತರಾಜು ಇದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!