Hiring Reporter’s For more Information Contact Above Number 876 225 4007 . Program producer
Home / Breaking News / ರಾಷ್ಟ್ರಮಟ್ಟದ ಜಾನಪದ ಸಮ್ಮೇಳನಕ್ಕೆ ಕ್ಷಣಗಣನೆ, ಝೂಮ್​ ಆಯಪ್​ನಲ್ಲಿ ವೀಕ್ಷಣೆ!

ರಾಷ್ಟ್ರಮಟ್ಟದ ಜಾನಪದ ಸಮ್ಮೇಳನಕ್ಕೆ ಕ್ಷಣಗಣನೆ, ಝೂಮ್​ ಆಯಪ್​ನಲ್ಲಿ ವೀಕ್ಷಣೆ!

Spread the love

ವಿಜಯಪುರ: ಕರೊನಾ ಸೋಂಕಿನ ಭೀತಿಯಿಂದಾಗಿ ಆನ್​​ಲೈನ್​ನಲ್ಲೇ ಮದುವೆ, ಆನ್​ಲೈನ್​ ಕ್ಲಾಸ್​ಗಳೂ ಬಂದಾಯ್ತು. ಇದೀಗ ಜಾನಪದ ಸಮ್ಮೇಳನವೂ ಆನ್​ಲೈನ್​ಮಯವಾಗಲಿದೆ. ಜಾನಪದ ಅಂದಾಕ್ಷಣ ಹಳ್ಳಿ ಸೊಗಡು, ಕಲಾಮೆರಗು ಮೇಳೈಸಲಿದೆ. ಗ್ರಾಮೀಣ ಕಲೆಗಳ ಮಹಾ ಸಂಗಮದಂತಿರುವ ಜಾನಪದ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಜಾಲತಾಣದ​ಲ್ಲಿ ಝೂಮ್ ಆಯಪ್​ ಮೂಲಕ ರಾಷ್ಟ್ರಮಟ್ಟದ ಪ್ರಥಮ ಜಾನಪದ ಸಮ್ಮೇಳನ ಭಾನುವಾರ(ಜು.26) ನಡೆಯಲಿದೆ.

ಕನ್ನಡ ಜಾನಪದ ಪರಿಷತ್​, ಜಾನಪದ ಯುವ ಬ್ರಿಗೇಡ್​ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದ್ದು ವಿವಿಧ ಗಣ್ಯರು ತಾವು ಇರುವಲ್ಲಿಂದಲೇ ಆನ್​ಲೈನ್​ ಮೂಲಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ರಾಷ್ಟ್ರಮಟ್ಟದ ಜಾನಪದ ಸಮ್ಮೇಳನ ಅಂಗವಾಗಿ ಗದಗದಲ್ಲಿ ಬೆಳಗ್ಗೆ 9ಕ್ಕೆ ಎಂಎಲ್​ಸಿ ಎಸ್​.ವಿ. ಸಂಕನೂರು ಅವರು ರಾಷ್ಟ್ರಧ್ವಜ, ವಿದ್ಯಾಸಂಸ್ಥೆ ಕಾರ್ಯದರ್ಶಿ ವೀರನಗೌಡ ಪಾಟೀಲ ನಾಡಧ್ವಜ, ಕಜಾಪ ಜಿಲ್ಲಾಧ್ಯಕ್ಷ ಶಾಂತಕುಮಾರ ಭಜಂತ್ರಿ ಪರಿಷತ್​ ಧ್ವಜಾರೋಹಣ ನೆರವೇರಿಸುವರು.

ಬೆಳಗ್ಗೆ 10ಕ್ಕೆ ಜಾಲತಾಣದಲ್ಲಿ ಹಲಸಂಗಿ ಗೆಳೆಯರ ಬಳಗದ ವೇದಿಕೆ ವತಿಯಿಂದ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರು ಮಂಗಳೂರಿನಲ್ಲಿ ಸಮ್ಮೇಳನ ಉದ್ಘಾಟಿಸುವರು. ವಿಜಯಪುರದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು ಕೃತಿ ಬಿಡುಗಡೆ ಮಾಡುವರು. ಕಜಾಪ ಅಧ್ಯಕ್ಷ ಡಾ. ಎಸ್​.ಬಾಲಾಜಿ ಬೆಂಗಳೂರಿನಲ್ಲಿ ಅಧ್ಯಕ್ಷತೆ ಭಾಷಣ ಮತ್ತು ರಾಯಚೂರಿನಲ್ಲಿ ಸಾನ್ನಿಧ್ಯ ವಹಿಸಿಸುವ ಇಂಗಳೇಶ್ವರ ಸಿದ್ಧಲಿಂಗ ಸ್ವಾಮೀಜಿ ಆರ್ಶೀವಚನ ನೀಡುವರು.

ವಿಜಯಪುರದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಸಿದ್ರಾಮಯ್ಯ ಪೂಜಾರಿ ಅವರಿಗೆ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಸನ್ಮಾನಿಸಲಿದ್ದಾರೆ. ವಿದ್ವಾಂಸರಾದ ಅಂಬಳಿಕೆ ಹಿರಿಯಣ್ಣ ಮತ್ತು ಸೋಮಶೇಖರ ಇಮ್ರಾಪುರ ಅವರಿಗೆ ಸನ್ಮಾನ ನಡೆಯಲಿದೆ.

ಮಧ್ಯಾಹ್ನ 1.30ರಿಂದ ಸಂಜೆ 5ರವೆಗೂ 3 ಗೋಷ್ಠಿಗಳು ನಡೆಯಲಿವೆ. ಸಂಜೆ 5.30ಕ್ಕೆ ಸಮಾರೋಪ ನಡೆಯಲಿದ್ದು, ಡಾ. ಎಸ್​. ಬಾಲಾಜಿ ಅವರ ಅಧ್ಯಕ್ಷತೆಯಲ್ಲಿ ಡಾ. ಅಪ್ಪಗೆರೆ ತಿಮ್ಮರಾಜು ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲಿ 30 ಜಾನಪದ ಕಲಾವಿದರಿಗೆ ಆಯಾ ಜಿಲ್ಲೆಯಲ್ಲಿ ಸನ್ಮಾನ ನಡೆಯಲಿದೆ.

ವಿಜಯಪುರ ಜಿಲ್ಲೆ ಇಂಡಿಯ ಕಲಾವಿದರಿಂದ ಗೊಂದಳಿ ಪದ, ಜೈನಾಪುರದ ಕಲಾವಿದರಿಂದ ಹೆಜ್ಜೆಮೇಳ, ಪ್ರಕಾಶ ಚಲವಾದಿ ಅವರ ಶಹನಾಯಿ, ಬಾಗಲಕೋಟೆಯ ಕೆರೂರಿನ ಮಹಿಳಾ ಡೊಳ್ಳು, ಚಾಮರಾಜನಗರದ ಮಹಾಕಾವ್ಯ ಗಾಯನ, ಚಿತ್ರದುರ್ಗದ ಕಲಾತಂಡಗಳಿಂದ ಜೋಗಿಪದಗಳ ಕಲಾಪ್ರದರ್ಶನ ನಡೆಯಲಿದೆ.

Check Also

ಶೂಟೌಟ್ ಸ್ಥಳದಲ್ಲಿ ಎರಡು ಬುಲೆಟ್ ಪತ್ತೆ

Spread the loveಹುಬ್ಬಳ್ಳಿ: ಶೂಟೌಟ್ ನಡೆದ ಸ್ಥಳದಲ್ಲಿ ಎರಡು ಬುಲೆಟ್ ಪತ್ತೆಯಾಗಿದೆ.ಧಾರವಾಡದ ಪ್ರೂಟ್ ಇರ್ಫಾನ್ ಎಂಬುವವರ ಮೇಲೆ ಶೂಟೌಟ್ ನಡೆಸಲಾಗಿದ್ದು,ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!