Breaking News
Hiring Reporter’s For more Information Contact Above Number 876 225 4007 . Program producer
Home / District / Bengaluru / ಕರುನಾ ನಿಯಮ ಗಾಳಿಗೆ ತೂರಿ ಅಂದರ್-ಬಾಹರ್ ಪೊಲೀಸರ ವಶಕ್ಕೆ

ಕರುನಾ ನಿಯಮ ಗಾಳಿಗೆ ತೂರಿ ಅಂದರ್-ಬಾಹರ್ ಪೊಲೀಸರ ವಶಕ್ಕೆ

ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದರೂ ಸಾಮಾಜಿಕ ಅಂತರವನ್ನೂ ಗಾಳಿಗೆ ತೂರಿ, ಹೋಟೆಲ್​ ಒಂದರಲ್ಲಿ ಅಂದರ್​ ಬಾಹರ್​ ಜೂಜಾಟ ಆಡುತ್ತಿದ್ದ 27 ಜನರನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಓಲ್ಡ್​ ಮದ್ರಾಸ್ ರೋಡ್​ನಲ್ಲಿರುವ ಪಾಮ್​ಟ್ರೀ ಹೋಟೆಲ್​ನ 5ನೇ ಮಹಡಿಯಲ್ಲಿ ಇಸ್ಪೀಟ್​ ಎಲೆಗಳಿಂದ ಜೂಜಾಡುತ್ತಿರುವ ಬಗ್ಗೆ ಪಡೆದ ಮಾಹಿತಿಯ ಮೇರೆಗೆ ನಿನ್ನೆ ನಗರ ಅಪರಾಧ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಂದರ್​ ಬಾಹರ್​ ಆಟದಲ್ಲಿ ತೊಡಗಿದ್ದ 27 ಜನರನ್ನು ಬಂಧಿಸಿ, ಜೂಜಿಗೆ ಇಡಲಾಗಿದ್ದ 5 ಲಕ್ಷ 4 ಸಾವಿರ ರೂಪಾಯಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಹಲಸೂರು ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

Share

About Admin BIG TV NEWS

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!