Breaking News
Hiring Reporter’s For more Information Contact Above Number 876 225 4007 . Program producer
Home / Breaking News / ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ ಪಾಲಿಕೆ ಚುನಾವಣೆ : ಕೈ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ

ದಾವಣಗೆರೆ:-  ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದ ಕಾಂಗ್ರೆಸ್. 1 ಸ್ಥಾನವಿದ್ದ ಕಲಮ ಈ ಬಾರಿ 17 ವಾರ್ಡ್‍ಗಳಲ್ಲಿ ಅರಳಿ ನಿಂತಿದೆ. ಇನ್ನೂ ಜೆಡಿಎಸ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತೀ ಹೆಚ್ಚು ಗೆದ್ದಿರುವ ಕಾಂಗ್ರೆಸ್‍ಗೆ ಒಬ್ಬರ ಸಹಾಯದಿಂದ ಅಧಿಕಾರ ಚುಕ್ಕಾಣೆ ಹಿಡಿಯುವ ಸಾಧ್ಯತೆ ಇದೆ. ಇನ್ನೂ ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿ ಕೂರಲಿದೆ. 

               ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ‘ಕೈ’ ಮೇಲೆ 17 ಸ್ಥಾನ ಗೆದ್ದ ಕಮಲ ಇನ್ನೂ ಜೆಡಿಎಸ್ 1 ಸ್ಥಾನ ಜಯ ದಾವಣಗೆರೆ ಮಹಾನಗರ ಪಾಲಿಕೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಗೆದ್ದು ಬೀಗಿದೆ. ಇನ್ನೂ ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದ ಬಿಜೆಪಿ ಈ ಬಾರಿ 17 ರಲ್ಲಿ ಗೆದ್ದು ಚೇತರಿಸಿಕೊಂಡಿದೆ. ಇನ್ನೂ ಜೆಡಿಎಸ್ 1 ಸ್ಥಾನದಲ್ಲಿ ಜಯ ಸಾಧಿಸಿದ್ದು,  ಪಕ್ಷೇತರರು 5 ರಲ್ಲಿ ಗೆದ್ದಿದ್ದಾರೆ. ಕಳೆದ 12 ರಂದು ಒಟ್ಟು 45 ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. ಜೆಡಿಎಸ್ 23, ಕಾಂಗ್ರೆಸ್ 44 ಮತ್ತು ಬೆಜೆಪಿ 45 ವಾರ್ಡ್‍ಗಳಲ್ಲಿ ಸ್ಪರ್ಧೇ ಮಾಡಿತ್ತು. ಇಂದು ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

 

ಫಲಿತಾಂಶ ವಿವರ

ಕ್ರಮ ಸಂಖ್ಯೆ ಪಕ್ಷಗಳು   ಗೆದ್ದ ಸ್ಥಾನ

      1           ಕಾಂಗ್ರೆಸ್    22

      2              ಬಿಜೆಪಿ         17

      3             ಜೆಡಿಎಸ್   01

      4              ಪಕ್ಷೇತರ   05

                ಒಟ್ಟು ವಾರ್ಡ್ 45

 

                       ಅಧಿಕಾರ ಹಿಡಿಯಲು 23 ಸ್ಥಾನ ಅವಶ್ಯಕತೆ ಇದೆ. ಇದೀಗ 22 ಸ್ಥಾನ ಗೆದ್ದಿರುವ ಕಾಂಗ್ರೆಸ್ ಗೆ 1 ಸ್ಥಾನ ಬೇಕಾಗಿದೆ. ಈ ಕಾರಣ ಪಕ್ಷೇತರರು ಮತ್ತು ಜೆಡಿಎಸ್ ಬೆಂಬಲ ಪಡೆದು ಅಧಿಕಾರ ಹಿಡಿಯು ಸಾಧ್ಯತೆ ಇದೆ. ಈಗಾಗಲೇ ಪಕ್ಷದ ಮುಖಂಡರು ಪಕ್ಷೇತರರ ಬಳಿ ಮಾತುಕತೆ ನಡೆಸಿದ್ದು ಬೆಂಬಲ ಕೋರಿದ್ದಾರೆ. ಇನ್ನೂ ಇಬ್ಬರು ಶಾಸಕರ ಮತ ಕೂಡ ಇದ್ದು, ಈ ಮೂಲಕ ಕಾಂಗ್ರೆಸ್ ಮತ್ತೆ ಅಧಿಕಾರ ಮಾಡಲಿದೆ ಎಂದು ಹೇಳುತ್ತಾರೆ ಕಾಂಗ್ರೆಸ್ ಮುಖಂಡ ಶಿವನಹಳ್ಳಿ ರಮೇಶ.

                    ಇನ್ನೂ ಬಿಜೆಪಿ ಪಕ್ಷ 17 ರಲ್ಲಿ ಗೆಲುವು ಪಡೆದಿದ್ದು ಬಹುಮತಕ್ಕೆ 6 ಸ್ಥಾನ ಬೇಕಾಗಿದೆ. 5 ಮಂದಿ ಪಕ್ಷೇತರರು ಹಾಗೂ 1 ಸ್ಥಾನ ಗೆದ್ದ ಜೆಡಿಎಸ್ ಬೆಂಬಲ ನೀಡಿದರೆ ಸಾಧ್ಯವಾಗುತ್ತದೆ. ಆದ್ರೆ, ಅಷ್ಟು ಸುಲಭವಲ್ಲ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಪಕ್ಷೇತರ ನಿಂತು ಗೆದ್ದ ಕಾರಣ ಕಾಂಗ್ರೆಸ್‍ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಈ ಕಾರಣ ಬಿಜೆಪಿ ಪಾಲಿಕೆ ಅಧಿಕಾರ ಹಿಡಿಯುವುದು ಕಷ್ಟವಾಗಿದೆ.  ಆದ್ರೂ ನಾವು ಸಂಸದರ 1 ಮತ ಹಾಗೂ ಶಾಸಕರ 1 ಮತ ಸೇರಿ 2 ಮತ ಸಿಗುತ್ತೆ ಈ ಮೂಲಕ ಅಧಿಕಾರ ಹಿಡಿಯುತ್ತೇವೆ ಎನ್ನುತ್ತಾರೆ ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್.

                     ಕಳೆದ ಬಾರಿ ಯಾವ ಸ್ಥಾನ ಗೆಲ್ಲದ ಜೆಡಿಎಸ್ ಈ ಬಾರಿ 1 ಸ್ಥಾನ ಗೆದ್ದು ಖಾತೆ ತೆರದಿದೆ. 2 ನೇ ವಾರ್ಡ್ ನೂರ್ ಜಹನ್ ಬೀ ಗೆದ್ದಿದ್ದಾರೆ. ಈ ಮೂಲಕ ಪಾಲಿಕೆಯಲ್ಲಿ ತಮ್ಮ ಅಧಿಕಾರ ಚಲಾಯಿಸಲಿದೆ. ಕಾಂಗ್ರೆಸ್ ಅಧಿಕಾರ ಮಾಡಲು ಜೆಡಿಎಸ್ ಬೆಂಬಲ ಬೇಕೇ ಬೇಕು ಎನ್ನುವಂತಾಗಿದೆ. 

             

            ಕಳೆದ ಬಾರಿ ಪಾಲಿಕೆ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಮತ್ತೊಮ್ಮೆ ಗದ್ದುಗೆ ಏರುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದರೆ ಇನ್ನೂ ಬಿಜೆಪಿ ಕೂಡ ಏನಾದರೂ ಮಾಡಿ ಅಧಿಕಾರ ಹಿಡಿಯಬೇಕೆನ್ನುತ್ತಿದೆ. ಈ ನಡುವೆ, ಜೆಡಿಎಸ್ ಪಕ್ಷ 1 ಸ್ಥಾನ ಗೆದ್ದರು ಇವರ ಬೆಂಬಲ ಅಧಿಕಾರ ಹಿಡಿಯುವ ಪಕ್ಷಕ್ಕೆ ಅತ್ಯಾವಶ್ಯಕವಾಗಿದೆ. ಇನ್ನೂ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ನಡೆಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

 

Share

About Shaikh BIG TV NEWS, Hubballi

Check Also

ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ವೈದ್ಯಕೀಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ…!

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯೊಬ್ಬರು ಡೇತ್‌ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯ ಪ್ರಾಥಮಿಕ …

Leave a Reply

Your email address will not be published. Required fields are marked *

error: Content is protected !!