Hiring Reporter’s For more Information Contact Above Number 876 225 4007 . Program producer
Home / Breaking News / ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ : ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ

ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ : ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ

Spread the love

ಕರಾಚಿ: ಉಗ್ರರನ್ನ ಪೋಷಣೆ ಮಾಡುತ್ತಿರುವ ಪಾಕಿಸ್ತಾನ ಕೊನೆಗೂ ತಲೆಮರೆಸಿಕೊಂಡಿರುವ ಉಗ್ರ ದಾವೂದ್ ಇಬ್ರಾಹಿಂ ವಿಚಾರದಲ್ಲಿ ತನ್ನ ಮುಖವಾಡನ್ನ ಕಳಚಿ ಸತ್ಯವನ್ನ ಹೇಳಿದೆ.

ಭಾರತದ ಮೋಸ್ಟ್​ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇದ್ದಾನೆ ಅಂತಾ ಸಾರಿ ಸಾರಿ ಹೇಳಿತ್ತು. ಆದರೆ ಪಾಕಿಸ್ತಾನ ಇದುವರೆಗೂ ದಾವೂದ್​ ಇಬ್ರಾಹಿಂ ತಮ್ಮ ದೇಶದಲ್ಲಿ ಇರೋದನ್ನ ಒಪ್ಪಿಕೊಂಡಿರಲಿಲ್ಲ. ಇದೀಗ ತಾನಾಗೇ ಉಗ್ರ ಪಾಕ್​​ನಲ್ಲಿ ಅಡಗಿ ಕೂತಿದ್ದಾನೆ ಅನ್ನೋದನ್ನ ತಿಳಿಸಿದೆ.

ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳ ಎಚ್ಚರಿಕೆ ನಡುವೆಯೂ ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡಿ, ಹಣಕಾಸು ಸಹಾಯವನ್ನೂ ಮಾಡುತ್ತಿರೋದು ಸಾಬೀತಾಗುತ್ತಿತ್ತು. ಇದೇ ಕಾರಣಕ್ಕೆ ಹಣಕಾಸು ಕ್ರಿಯಾ ಕಾರ್ಯಪಡೆ (ಫೈನಾನ್ಷಿಯಲ್ ಆಯಕ್ಷನ್ ಟಾಸ್ಕ್‍ ಫೋರ್ಸ್-ಎಫ್‍ಎಟಿಎಫ್) ಪಾಕಿಸ್ತಾನವನ್ನ ಗ್ರೇ ಲಿಸ್ಟ್​ಗೆ ಹಾಕಿತ್ತು.

ಅಲ್ಲದೇ ಪಾಕಿಸ್ತಾನ ಮತ್ತೆ ತನ್ನ ಚಾಳಿಯನ್ನ ಮುಂದುವರಿಸಿದ್ರೆ, ಬ್ಲ್ಯಾಕ್​ ಲಿಸ್ಟ್​ಗೆ ಹಾಕೋದಾಗಿ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ಗಾಬರಿಗೊಂಡಿರುವ ಪಾಕಿಸ್ತಾನ 88 ಉಗ್ರರ ಲಿಸ್ಟ್​ ಅನ್ನ ಬಿಡುಗಡೆ ಮಾಡಿದೆ. ಅದರಲ್ಲಿ ದಾವೂದ್​ ಇಬ್ರಾಹಿಂ ಹೆಸರು ಕೂಡ ಇದೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!