Hiring Reporter’s For more Information Contact Above Number 876 225 4007 . Program producer
Home / Breaking News / ಹಿಂಡಲಗಾ ಜೈಲಿಗೆ ಡಿಸಿಐಬಿ ದಾಳಿ.

ಹಿಂಡಲಗಾ ಜೈಲಿಗೆ ಡಿಸಿಐಬಿ ದಾಳಿ.

Spread the love

ಬೆಳಗಾವಿ: ಹಿಂಡಲಗಾ ಜೈಲಿನ ಮೇಲೆ ಜಿಲ್ಲಾ ಅಪರಾಧ ತನಿಖಾ ದಳ (ಡಿಸಿಐಬಿ) ಸಿಬ್ಬಂದಿ ದಿಢೀರ್ ದಾಳಿ ನಡೆಸಿದ್ದಾರೆ.

ಪೊಲೀಸರ ದಿಢೀರ್ ದಾಳಿಯಿಂದ ಜೈಲಿನ ಕೈದಿಗಳು ಗಲಿಬಿಲಿಗೊಂಡಿದ್ದಾರೆ. ರಾಮದುರ್ಗ ಡಿವೈಎಸ್ಪಿ ಎಸ್.ಎ. ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಡಿಸಿಐಬಿ ಸಿಪಿಐ ಲಿಂಗನಗೌಡ ಪಾಟೀಲ್ ಸೇರಿ ಇತರ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಕೊಲೆ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಗೋಕಾಕ್‌ನಲ್ಲಿ ಟೈಗರ್ ಗ್ಯಾಂಗ್ ಸದಸ್ಯರನ್ನು ಬಂಧಿಸಿ ಜೈಲಿನಲ್ಲಿರಸಲಾಗಿದೆ. ಇವರು, ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಗ್ಯಾಂಗ್ ಆಪರೇಟ್ ಮಾಡುತ್ತಿದ್ದಾರೆ. ಅಲ್ಲದೆ, ಉದ್ಯಮಿಗಳಿಗೆ ಹಣಕ್ಕಾಗಿ ಧಮ್ಕಿ, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಸಂಘಟಿತ ಅಪರಾಧದಲ್ಲಿ ತೊಡಗಿದ್ದ ಟೈಗರ್ ಗ್ಯಾಂಗ್‌ನ 9 ಸದಸ್ಯರ ವಿರುದ್ಧ ಪೊಲೀಸರು ಕೋಕಾ ಕೇಸ್‌ ದಾಖಲಿಸಿದ್ದಾರೆ‌. ದಾಳಿ ವೇಳೆ ಎರಡು ಮೊಬೈಲ್ ಸಿಕ್ಕಿರುವುದಾಗಿ ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!