Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಆಕ್ಸಿಜನ್ ಬಸ್ ಗೆ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ

ಆಕ್ಸಿಜನ್ ಬಸ್ ಗೆ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ

ಆ್ಯಂಕ‌ರ್: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ವತಿಯಿಂದ ತಯಾರಿಸಲಾದ ನೂತನ ಆಕ್ಸಿಜನ್ ಬಸ್ಸನ್ನು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಆಸ್ಪತ್ರೆಯಲ್ಲಿ ಆವರಣದಲ್ಲಿ ಉದ್ಘಾಟಿಸಿ ಚಾಲನೆ ನೀಡಿದರು.

ಈಗಾಗಲೇ ರಾಜ್ಯದ ಕೆಎಸ್ಆರ್ಟಿಸಿ,ಎನ್ ಡಬ್ಲ್ಯೂ ಕೆಎಸ್ಆರ್ಟಿಸಿ,ಎನ್ಇಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಸೇರಿದಂತೆ 9 ಲಕ್ಷ ಕಿ,ಲೋ ಮೀಟರ್ ಗಿಂತ ಹೆಚ್ಚು ಓಡಾಡಿದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಬದಲು ಕೋವಿಡ್ ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಐಸಿಯು ಆಸ್ಪತ್ರೆ ಮಾದರಿಯಲ್ಲಿ ಪರಿವರ್ತಿಸಿ ಅಗತ್ಯ ವೈದ್ಯಕೀಯ ಸಿಬ್ಬಂದಿ ನೀಡಿ ಕಾರ್ಯ ನಿರ್ವಹಿಸುವಂತೆ ಈಗಾಗಲೇ ರಾಜ್ಯದ 100 ಬಸ್ಸುಗಳನ್ನು ಇದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಅದೇ ರೀತಿಯಲ್ಲಿ ಕೊಪ್ಪಳಕ್ಕೂ ಸೌಲಭ್ಯ ಮಾಡಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕ ಆಸ್ಪತ್ರೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಬೆಡ್ ಸಿಗದೇ ಇರುವ ತುರ್ತು ಸಂದರ್ಭದಲ್ಲಿ ಈ ಬಸ್ ಸೇವೆ ನೀಡಲಿದೆ ಎಂದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!