Hiring Reporter’s For more Information Contact Above Number 876 225 4007 . Program producer
Home / Breaking News / ದೆಹಲಿ: ಟ್ವಿಟರ್ ಕಮಾಲ್ ಯಿಂದ ವೃದ್ಧ ದಂಪತಿಗೆ ಫುಲ್ ವ್ಯಾಪಾರ

ದೆಹಲಿ: ಟ್ವಿಟರ್ ಕಮಾಲ್ ಯಿಂದ ವೃದ್ಧ ದಂಪತಿಗೆ ಫುಲ್ ವ್ಯಾಪಾರ

Spread the love

ದೆಹಲಿ: ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡ ಉದ್ದೇಶ ಒಳ್ಳೆಯದ್ದೇ ಆಗಿತ್ತಾದರೂ ನಂತರ ಅದು ಪಡೆದುಕೊಂಡ ತಿರುವು ಹಲವು ಅನಾಹುತಗಳಿಗೆ ಕಾರಣವಾಗಿದೆ. ಆದರೆ ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣಗಳು ಕಮಾಲ್ ಮಾಡಿಬಿಡ್ತವೆ. ಕಷ್ಟದಲ್ಲಿರುವವರ ಕಣ್ಣೀರು ಒರೆಸಿ ಸಾಂತ್ವನವನ್ನೂ ಹೇಳುತ್ತವೆ. ಅದಕ್ಕೊಂದು ಉದಾಹರಣೆ ಈ ಸ್ಟೋರಿ.. ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಮನಮಿಡಿಯುವ ವಿಡಿಯೋವೊಂದು ಹರಿದಾಡಿತ್ತು.

ವೃದ್ಧ ದಂಪತಿ ತಮ್ಮ ಹೋಟೆಲ್​(ಬಾಬಾ ಕ ಢಾಬಾ)ನಲ್ಲಿ ಗ್ರಾಹಕರೇ ಇಲ್ಲದುದಕ್ಕೆ ಕಣ್ಣೀರಿಟ್ಟಿತ್ತು. ಯಾರಾದರೂ ಗ್ರಾಹಕರು ಬಂದು ವ್ಯಾಪಾರವಾದರಷ್ಟೇ ನಾವು ಊಟ ಮಾಡೋಕೆ ಸಾಧ್ಯ ಎಂದು ವೃದ್ಧ ದಂಪತಿ ಕಣ್ಣೀರಿಟ್ಟಿತ್ತು. ಇದನ್ನ ವಿಡಿಯೋ ಮಾಡಿದ ವ್ಯಕ್ತಿಯೊಬ್ಬ ಅದನ್ನ ಮೈಕ್ರೋ ಬ್ಲಾಗಿಂಗ್ ವೆಬ್​ಸೈಟ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ರು.

ವಿಡಿಯೋ ಹಂಚಿಕೊಂಡ ವ್ಯಕ್ತಿ ಹೋಟೆಲ್​ನ ಅಡ್ರೆಸ್​ನ್ನೂ ಹೇಳಿ ಈ ಹೋಟೆಲ್​ಗೆ ಬಂದು ಸಹಾಯ ಮಾಡಿ ಅಂತ ಕೇಳಿಕೊಂಡಿದ್ರು. ನೋಡನೋಡುತ್ತಲೇ ಆ ಹೋಟೆಲ್​ ಮುಂದೆ ಜನಸಾಗರವೇ ಹರಿದುಬಂದಿತ್ತು. ಇದನ್ನ ಕಂಡ ವೃದ್ಧದಂಪತಿ ಖುಷಿಯಾಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಬಾಬಾ ಕ ಢಾಬಾ ಹೆಸರಿನಹ ಹ್ಯಾಷ್​ ಟ್ಯಾಗ್ ಟ್ರೆಂಡ್​ ಕೂಡ ಆಗಿದೆ. ತಮ್ಮ ಅಂಗಡಿಯೆದುರು ಸೇರಿದ ಜನಸಾಗರದಿಂದಾಗಿ ಇದೀಗ ವೃದ್ಧ ದಂಪತಿಯ ಬದುಕಿನಲ್ಲಿ ಹೊಸಬೆಳಕೇ ಬಂದಂತಾಗಿದೆ.

ಮೊದಲು ನಮ್ಮನ್ನು ಯಾರೂ ಕೇಳುವವರೇ ಇಲ್ಲ. ಇಂದು ಜನರು ನನ್ನ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ನನಗೆ ಸಹಾಯ ಮಾಡಿದ ನೀವು ಎಲ್ಲೇ ಇರಿ.. ಖುಷಿಯಿಂದ ಇರಿ.. ಇದೇ ರೀತಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರಿ. ಈಗ ನನ್ನ ಜೊತೆಗೆ ದೇಶ ಇದೆ ಎನ್ನುವಷ್ಟು ಖುಷಿಯಾಗುತ್ತಿದೆ ಎಂದು ವೃದ್ಧ ಸಂತಸ ವ್ಯಕ್ತಪಡಿಸಿದ್ದಾರೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!