Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸ್ವಾಮಿ ವಿವೇಕಾನಂದರ ಪುತ್ಥಳಿ ಮೇಲೆ ಅವಹೇಳನಕಾರಿ ಬರಹ: ಎಬಿವಿಪಿ ಯಿಂದ ಪ್ರತಿಭಟನೆ.‌

ಸ್ವಾಮಿ ವಿವೇಕಾನಂದರ ಪುತ್ಥಳಿ ಮೇಲೆ ಅವಹೇಳನಕಾರಿ ಬರಹ: ಎಬಿವಿಪಿ ಯಿಂದ ಪ್ರತಿಭಟನೆ.‌

 

ಹುಬ್ಬಳ್ಳಿ: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿರುವ (ಜೆಎನ್ ಯು) ಸ್ವಾಮಿ ವಿವೇಕಾನಂದರ ಪುತ್ಥಳಿಯ ಮುಂದೆ ಆಕ್ಷೇಪಾರ್ಹ ಪದಗಳನ್ನು ಬರೆದಿರುವುದನ್ನು ಖಂಡಿಸಿ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ ಎಂಬ ಸ್ವಾಮಿ ವಿವೇಕಾನಂದರ ಮಾತು ದೆಹಲಿಯ ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ಸುಳ್ಳಾಗಿದ್ದು, ಸದಾ ಒಂದಿಲ್ಲಾ ಒಂದು ವಿವಾದಗಳಿಗೆ ಸುದ್ದಿಯಾಗುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತೊಂದು ವಿವಾದಕ್ಕೆ ಸಾಕ್ಷಿಯಾಗಿದೆ. ವಿವಿಧ ಆಡಳಿತ ಕಚೇರಿಯ ಬಳಿಯಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಧಕ್ಕೆ ಉಂಟಾಗಿದ್ದು, ಅಲ್ಲದೇ ಪ್ರತಿಮೆಯ ಮೇಲೆ ಎಬಿವಿಪಿ ಹಾಗೂ ಸಂಘಪರಿವಾರದ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬರೆಯಲಾಗಿದೆ ಇದು ಖಂಡನೀಯವಾಗಿದ್ದು, ಕೂಡಲೇ ದುಷ್ಕ್ರತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕೆಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು. ನಂತರ ತಹಶಿಲ್ದಾರರ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗಂಗಾಧರ ಹಂಜಗಿ, ರಮೇಶ ಲೋಂಡೆ, ತೇಜಶ್ ಗೋಕಾಕ್, ಮಲ್ಲಿಕಾರ್ಜುನ ರಾಯಪ್ಪಗೌಡರ ಸೇರಿದಂತೆ ಮುಂತಾದ ಕಾಲೇಜು ವಿದ್ಯಾರ್ಥಿಗಳ ಉಪಸ್ಥಿತರಿದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!