Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಸ ಆರಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯರ ಬಂಧನ.‌

ಕಸ ಆರಿಸುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯರ ಬಂಧನ.‌

 

ಹುಬ್ಬಳ್ಳಿ: ಕಸ ಆರಿಸುವ ನೆಪದಲ್ಲಿ ಹಗಲು ಹೊತ್ತಿನಲ್ಲೇ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದ ಮೂವರು ಮಹಿಳೆಯರನ್ನು ಗೋಕುಲ ರಸ್ತೆ ಪೋಲಿಸರು ಮಂಗಳವಾರ ಬಂಧಿಸಿ, ಅಂದಾಜು 1.60 ಲಕ್ಷ ರೂ, ಮೌಲ್ಯದ 36 ಗ್ರಾಂ ಚಿನ್ನಾಭರಣ, 799 ಗ್ರಾಂ ಬೆಳ್ಳಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.
ಹಳೇಹುಬ್ಬಳ್ಳಿ ಅಯೋಧ್ಯಾ ನಗರದ ಬೀಬಿ ಪಿ.ಸಿಕ್ಕಲಗಾರ, ಕಾರವಾರ ರಸ್ತೆ ಶಿವಶಂಕರ ಕಾಲೋನಿಯ ರೇಣುಕಾ ಪಿ.ಕಟ್ಟಿಮನಿ, ಅಕ್ಕಮ್ಮ‌ ಕಟ್ಟಿಮನಿ ಬಂಧಿತರಾಗಿದ್ದು, ಇವರು ನ.8 ರಂದು ಗೋಕುಲ ರಸ್ತೆ ಶಕ್ತಿನಗರದ ಶಾಂತಪ್ಪ ಸಜ್ಜನ ಎಂಬುವರ ಹಿತ್ತಲ ಬಾಗಿಲಿನ ಕೀಲಿ ಮುರಿದು ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ನಗದು ಕಳವು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಗೋಕುಲ ರಸ್ತೆ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ ಎಂ‌ ಕಮ್ಮಾರ, ಎನ್.ಐ.ನೀಲಗಾರ, ಸಂಜು ಕುರಹಟ್ಟಿ, ಎಂ.ಸಿ.ಹೊನ್ನಪ್ಪನವರ, ರಾಜು ಹೊಂಕಣದವರ, ಬಸವರಾಜ ಬೆಳಗಾವಿ, ಅನಿಲ ಹುಗ್ಗಿ, ಸಂಜೀವ ಕಣಬೂರ, ರಮೇಶ ಕೋತಂಬ್ರಿ, ಮಹಿಳಾ ಸಿಬ್ಬಂದಿ ಎಸ್.ಎಲ್.ಕಸ್ತೂರಿ, ಆರ್.ಬಿ.ಗುಂಗರಗೊಪ್ಪ, ಎಸ್.ಜಿ.ಕೊಂಚಿಗೇರಿ, ಎನ್.ಎಚ್.ಹುಡೇದಕೇರಿ ಒಳಗೊಂಡ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೂವರನ್ನು ಬಂಧಿಸಿ, ಕಳುವಿನ ಅಂದಾಜು 1.60 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯರ ವಿರುದ್ಧ ವಿದ್ಯಾನಗರ, ಹಳೇಹುಬ್ಬಳ್ಳಿ ಪೋಲಿಸ ಠಾಣೆಯಲ್ಲೂ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!