Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸ್ವಾಭಿಮಾನದ ಮಂಕು ಬೂದಿ ಎರಚಿ ಸಂಸದೆಯಾದ ಸುಮಲತಾ ಅಂಬರೀಶ: ಧನಂಜಯ ಆಕ್ರೋಶ.

ಸ್ವಾಭಿಮಾನದ ಮಂಕು ಬೂದಿ ಎರಚಿ ಸಂಸದೆಯಾದ ಸುಮಲತಾ ಅಂಬರೀಶ: ಧನಂಜಯ ಆಕ್ರೋಶ.

ಮಂಡ್ಯ : ಸ್ವಾಭಿಮಾನದ ಹೆಸರಿನಲ್ಲಿ ಜಿಲ್ಲೆಯ ಜನತೆಗೆ ಮಂಕುಬೂದಿ ಎರಚಿ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿದ್ದಾರೆ ಎಂದು ಕೆ.ಆರ್.ಪೇಟೆ ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಗಂಭೀರ ನೆರೆ ಪರಿಸ್ಥಿತಿಯನ್ನು ಅವಲೋಕನ ನಡೆಸಿ ರೈತರಿಗೆ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಸುಮಲತಾ ಅಂಬರೀಶ್ ಕಾರ್ಯ ನಿರ್ವಹಿಸುತ್ತಿಲ್ಲ.
ಸಂಸದೆಯಾದ ನಂತರ ಜಿಲ್ಲೆಗೆ ಕಾಟಾಚಾರದ
ಭೇಟಿ ನೀಡಿ ನಾಪತ್ತೆಯಾಗಿರುವ ಸುಮಲತಾ ಅವರನ್ನು ಸುಮಲತಾ ಎಲ್ಲಿದ್ದೀಯಮ್ಮ ಎಂದು ಛೇಡಿಸಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮತ್ತು ಉಪವಿಭಾಗಾಧಿಕಾರಿ ಶೈಲಜಾ ವಿರುದ್ಧ ಧನಂಜಯ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಸೂಜಿಗಲ್ಲುಗುಡ್ಡದಕೆರೆ, ಸಿಂದಘಟ್ಟ ಕೆರೆ, ಹರಳಹಳ್ಳಿ ಕೆರೆ ಕೋಡಿಗಳು ಒಡೆದು 800ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಭತ್ತ, ಕಬ್ಬು, ಬಾಳೆ ಮತ್ತು ಅಡಿಕೆ ಬೆಳೆಗಳು ನಷ್ಠವಾಗಿವೆ.15ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಠ ಉಂಟಾಗಿದೆ.
ಹೊಸಹೊಳಲು, ಮತ್ತಿಘಟ್ಟ, ಹಿರಳಹಳ್ಳಿ, ಕಾಳೇಗೌಡನಕೊಪ್ಪಲು, ದೊದ್ದನಕಟ್ಟೆ, ಯಗಚಗುಪ್ಪೆ, ವಿಠಲಾಪುರ, ಹರಳಹಳ್ಳಿ, ಮರುವನಹಳ್ಳಿ,
ಬೇಲದಕೆರೆ, ಊಚನಹಳ್ಳಿ, ಮುರುಕನಹಳ್ಳಿ ಗ್ರಾಮಗಳಲ್ಲಿ ನೂರಾರು ಎಕರೆ ಕೃಷಿಭೂಮಿಯು ಕೊರಕಲು ಬಿದ್ದು ರೈತರು ಸಂಕಷ್ಠದಲ್ಲಿದ್ದಾರೆ.
ಪ್ರವಾಹ ಸಂಭವಿಸಿ ವಾರ ಕಳೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸಂಸದರಾಗಲೀ, ಜಿಲ್ಲಾಧಿಕಾರಿಗಳಾಗಲೀ ತಾಲ್ಲೂಕಿನ ರೈತರ ಕಷ್ಠಸುಖಗಳನ್ನು ಆಲಿಸಿಲ್ಲ.
ಇನ್ನೊಂದು ವಾರದೊಳಗೆ ಕೆ.ಆರ್.ಪೇಟೆಗೆ ಆಗಮಿಸಿ ನೆರೆ ಸಂತ್ರಸ್ತರ ಕಷ್ಠಸುಖಗಳನ್ನು ಆಲಿಸದಿದ್ದರೆ, ಭಾರೀ ಮಳೆಯಿಂದ ತಾಲೂಕಿನ ಗಂಜಿಗೆರೆಯಲ್ಲಿ ಮನೆಯ ಗೋಡೆಬಿದ್ದು ನಿಧನರಾದ ದಲಿತ ಯುವಕ ಮುರುಕನಹಳ್ಳಿ ಕುಮಾರ್ ಕುಟುಂಬಕ್ಕೆ ಇನ್ನೂ ಹೆಚ್ಚಿನ ಪರಿಹಾರ ಕೊಡಿಸದಿದ್ದರೆ ಸಂಸದರ ವಿರುದ್ಧ ಲೋಕಸಭಾ ಸ್ಪೀಕರ್, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ದೂರು ನೀಡುವ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರ ವಿರುದ್ಧ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಧನಂಜಯ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರಾದ ಹೊಸಹೊಳಲು ಸರಸ್ವತಮ್ಮ, ರಾಮಕೃಷ್ಣ, ತಿಮ್ಮೇಗೌಡ, ರೇವಣ್ಣ, ವೀರಪ್ಪ, ದಿನೇಶ್, ಮೋದೂರು ಶಿವಮೂರ್ತಿ, ವೀರಶೈವ ಮಹಾಸಭಾದ ತಾಲ್ಲೂಕು ಉಪಾಧ್ಯಕ್ಷ ಡಿ.ಸಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share

About Vijayalakshmi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!