Breaking News
Home / Breaking News / ಧರ್ಮೆಗೌಡರ ಕಾರು ಚಾಲಕ ಬಿಚ್ಚಿಟ್ಟ ಸತ್ಯ.

ಧರ್ಮೆಗೌಡರ ಕಾರು ಚಾಲಕ ಬಿಚ್ಚಿಟ್ಟ ಸತ್ಯ.

Spread the love

ಚಿಕ್ಕಮಗಳೂರು : ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (65) ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ಮಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾತ್ರಿ 7 ರಿಂದ 8 ಗಂಟೆ ವೇಳೆಗೆ ಅಂಗರಕ್ಷಕ ಹಾಗೂ ಬೆಂಗಾವಲು ಪಡೆಯ ಸಿಬ್ಬಂದಿಯನ್ನು ಮನೆಗೆ ಕಳಿಸಿದ್ದರು ಎಂದು ತಿಳಿದು ಬಂದಿದ್ದು, ತಮ್ಮ ಹಳೆಯ ಸ್ಯಾಂಟ್ರೋ ಕಾರಿನಲ್ಲಿ ಖಾಸಗಿ ಡೈವರ್ ಜೊತೆ ಮನೆಯಿಂದ ಕಡೂರು ತಾಲ್ಲೂಕು ಗುಣಸಾಗರ ಗ್ರಾಮಕ್ಕೆ ತೆರಳಿದ್ದರು.

ಧರ್ಮೇಗೌಡರ ಆತ್ಮಹತ್ಯೆ ಕುರಿತಂತೆ ಅವರ ಕಾರು ಚಾಲಕ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಸಂಜೆ 6.30 ರ ಸುಮಾರಿಗೆ ಧರ್ಮೇಗೌಡರು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದರು. ಕಾರಿನಲ್ಲಿ ಬರುವ ವೇಳೆ ಫೋನ್ ನಲ್ಲಿ ರೈಲಿನ ಸಮಯದ ಬಗ್ಗೆ ಕೇಳುತ್ತಿದ್ದರು.

ಸ್ಥಳಕ್ಕೆ ಬಂದ ಬಳಿಕ ಧರ್ಮೇಗೌಡರು, ನಾನು ಯಾರನ್ನೋ ಭೇಟಿಯಾಗಲು ಬಂದಿದ್ದೇನೆ, ನೀನು ಹೋಗು ಅಂದಿದ್ದಕ್ಕೆ ನಾನು ಹೊರಟು ಬಂದೆ, ಆದರೆ ಅವರು ಹೀಗೆ ಮಾಡಿಕೊಳ್ಳುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

About Admin BIG TV NEWS

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Spread the love

Leave a Reply

Your email address will not be published. Required fields are marked *

error: Content is protected !!